logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Street Food: ಚಳಿಗಾಲದಲ್ಲಿ ಉತ್ತರ ಭಾರತದ ಈ ರಸ್ತೆಬದಿ ತಿಂಡಿ ಸವಿಯೋದನ್ನು ಮಿಸ್‌ ಮಾಡಲೇಬೇಡಿ

Street Food: ಚಳಿಗಾಲದಲ್ಲಿ ಉತ್ತರ ಭಾರತದ ಈ ರಸ್ತೆಬದಿ ತಿಂಡಿ ಸವಿಯೋದನ್ನು ಮಿಸ್‌ ಮಾಡಲೇಬೇಡಿ

Dec 22, 2023 04:40 PM IST

ಚಳಿಗಾಲ ಶುರುವಾಗಿದೆ, ಈ ಸಮಯಲ್ಲಿ ಎಲ್ಲರೂ ಏನಾದರೂ ಕುರುಕಲು, ಸ್ಫೈಸಿ ತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಸಂಜೆ ಆಗುತ್ತಿದ್ದಂತೆ ಎಲ್ಲರೂ ಸ್ನೇಹಿತರೊಡನೆ ಬೀದಿಬದಿ ಬಂಡಿಗಳಲ್ಲಿ ತಮ್ಮಿಷ್ಟದ ತಿಂಡಿ ಸವಿಯಲು ಬಯಸುತ್ತಾರೆ.

ಚಳಿಗಾಲ ಶುರುವಾಗಿದೆ, ಈ ಸಮಯಲ್ಲಿ ಎಲ್ಲರೂ ಏನಾದರೂ ಕುರುಕಲು, ಸ್ಫೈಸಿ ತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಸಂಜೆ ಆಗುತ್ತಿದ್ದಂತೆ ಎಲ್ಲರೂ ಸ್ನೇಹಿತರೊಡನೆ ಬೀದಿಬದಿ ಬಂಡಿಗಳಲ್ಲಿ ತಮ್ಮಿಷ್ಟದ ತಿಂಡಿ ಸವಿಯಲು ಬಯಸುತ್ತಾರೆ.
ದಕ್ಷಿಣ ಭಾರತದ ತಿಂಡಿಗಳಲ್ಲಿ ಮಸಾಲೆಪುರಿ, ಪಾನಿಪುರಿ,ಗೋಬಿ ಮಂಚೂರಿಯನ್‌, ಚುರುಮುರಿ, ಇಡ್ಲಿ, ದೋಸೆ ಹೀಗೆ ಸಂಜೆ ವಿವಿಧ ಸ್ನಾಕ್ಸ್‌ ದೊರೆಯುತ್ತದೆ. ಆದ್ರೆ ನಿಮಗೆ ಉತ್ತರ ಭಾರತದ ಚಾಟ್ಸ್‌, ಸ್ನಾಕ್ಸ್‌ ಬಗ್ಗೆ ಗೊತ್ತಾ? ಇಲ್ಲಾಂದ್ರೆ ಪರಿಚಯ ಮಾಡಿಕೊಡ್ತೀವಿ ನೋಡಿ. 
(1 / 8)
ದಕ್ಷಿಣ ಭಾರತದ ತಿಂಡಿಗಳಲ್ಲಿ ಮಸಾಲೆಪುರಿ, ಪಾನಿಪುರಿ,ಗೋಬಿ ಮಂಚೂರಿಯನ್‌, ಚುರುಮುರಿ, ಇಡ್ಲಿ, ದೋಸೆ ಹೀಗೆ ಸಂಜೆ ವಿವಿಧ ಸ್ನಾಕ್ಸ್‌ ದೊರೆಯುತ್ತದೆ. ಆದ್ರೆ ನಿಮಗೆ ಉತ್ತರ ಭಾರತದ ಚಾಟ್ಸ್‌, ಸ್ನಾಕ್ಸ್‌ ಬಗ್ಗೆ ಗೊತ್ತಾ? ಇಲ್ಲಾಂದ್ರೆ ಪರಿಚಯ ಮಾಡಿಕೊಡ್ತೀವಿ ನೋಡಿ. 
ಶಕರ್ಕಂಡ್ ಕಿ ಚಾಟ್;‌ ಉತ್ತರ ಭಾರತದಲ್ಲಿ ಇದು ಬಹಳ ಫೇಮಸ್.‌  ಸಿಹಿ ಗೆಣಸಿನಿಂದ ತಯಾರಿಸಲಾಗುವ ಈ ಚಾಟ್‌, ಉತ್ತರ ಭಾರತದಲ್ಲಿ ಅದರಲ್ಲೂ ಚಳಿಗಾಲದಲ್ಲಿ ಹೆಚ್ಚು ಫೇಮಸ್.‌ ಇದು ಆರೋಗ್ಯಕರ ಮತ್ತು ರುಚಿಕರವಾದ ತಿಂಡಿ. ಸಿಹಿ ಗೆಣಸನ್ನು ಹುರಿದು, ಬೇಯಿಸುವ ಮೂಲಕ ಈ ಚಾಟ್ಸ್‌ ತಯಾರಿಸಲಾಗುತ್ತದೆ. ನಂತರ ಇದನ್ನು ಪುದೀನಾ ಅಥವಾ ಕಟ್ಟಾ ಮಿಟ್ಟಾ ಚಟ್ನಿಯೊಂದಿಗೆ ಸರ್ವ್‌ ಮಾಡಲಾಗುತ್ತದೆ.   
(2 / 8)
ಶಕರ್ಕಂಡ್ ಕಿ ಚಾಟ್;‌ ಉತ್ತರ ಭಾರತದಲ್ಲಿ ಇದು ಬಹಳ ಫೇಮಸ್.‌  ಸಿಹಿ ಗೆಣಸಿನಿಂದ ತಯಾರಿಸಲಾಗುವ ಈ ಚಾಟ್‌, ಉತ್ತರ ಭಾರತದಲ್ಲಿ ಅದರಲ್ಲೂ ಚಳಿಗಾಲದಲ್ಲಿ ಹೆಚ್ಚು ಫೇಮಸ್.‌ ಇದು ಆರೋಗ್ಯಕರ ಮತ್ತು ರುಚಿಕರವಾದ ತಿಂಡಿ. ಸಿಹಿ ಗೆಣಸನ್ನು ಹುರಿದು, ಬೇಯಿಸುವ ಮೂಲಕ ಈ ಚಾಟ್ಸ್‌ ತಯಾರಿಸಲಾಗುತ್ತದೆ. ನಂತರ ಇದನ್ನು ಪುದೀನಾ ಅಥವಾ ಕಟ್ಟಾ ಮಿಟ್ಟಾ ಚಟ್ನಿಯೊಂದಿಗೆ ಸರ್ವ್‌ ಮಾಡಲಾಗುತ್ತದೆ.   (Pinterest)
ಕ್ಯಾರೆಟ್‌ ಹಲ್ವಾ: ಖಾರ ತಿಂದ ನಂತರ ಸ್ವಲ್ಪವಾದರೂ ಸಿಹಿ ಸೇವಿಸದಿದ್ದರೆ ಹೇಗೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಉತ್ತರ ಭಾರತದಲ್ಲೂ ಕ್ಯಾರೆಟ್‌ ಹಲ್ವಾ ಬಹಳ ಫೇಮಸ್‌. ಬಹುತೇಕ ತಿಂಡಿಬೀದಿಗಳಲ್ಲಿ ಇದು ದೊರೆಯುತ್ತದೆ. ಕ್ಯಾರೆಟ್‌, ಹಾಲು, ಡ್ರೈ ಫ್ರೂಟ್‌ಗಳಿಂದ ತಯಾರಿಸುವ ಈ ಸಿಹಿತಿಂಡಿ ಸಿಹಿಪ್ರಿಯರ ಮೋಸ್ಟ್‌ ಫೇವರೆಟ್.‌  
(3 / 8)
ಕ್ಯಾರೆಟ್‌ ಹಲ್ವಾ: ಖಾರ ತಿಂದ ನಂತರ ಸ್ವಲ್ಪವಾದರೂ ಸಿಹಿ ಸೇವಿಸದಿದ್ದರೆ ಹೇಗೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಉತ್ತರ ಭಾರತದಲ್ಲೂ ಕ್ಯಾರೆಟ್‌ ಹಲ್ವಾ ಬಹಳ ಫೇಮಸ್‌. ಬಹುತೇಕ ತಿಂಡಿಬೀದಿಗಳಲ್ಲಿ ಇದು ದೊರೆಯುತ್ತದೆ. ಕ್ಯಾರೆಟ್‌, ಹಾಲು, ಡ್ರೈ ಫ್ರೂಟ್‌ಗಳಿಂದ ತಯಾರಿಸುವ ಈ ಸಿಹಿತಿಂಡಿ ಸಿಹಿಪ್ರಿಯರ ಮೋಸ್ಟ್‌ ಫೇವರೆಟ್.‌  (Instagram/@ethannhakim)
ತುಕ್ಪಾ: ಇದು ಟಿಬೆಟಿಯನ್ ಖಾದ್ಯ. ಇದನ್ನು ತಯಾರಿಸಲು ಕಡಿಮೆ ಇಂಗ್ರೀಡಿಯಂಟ್ಸ್‌ ಸಾಕು. ಅಲ್ಲದೆ ತಯಾರಿಸುವ ಸಮಯ ಕೂಡಾ ಕಡಿಮೆ. ವಲಸಿಗ ಟಿಬೆಟಿಯನ್ನರ ಮೂಲಕ ಭಾರತಕ್ಕೆ ಪರಿಚಯಿಸಲ್ಪಟ್ಟ ತುಕ್ಪಾ ಈಗ ಉಪ ಖಂಡದಾದ್ಯಂತ ಜನಪ್ರಿಯವಾಗಿದೆ. ಉತ್ತರ ಭಾರತದ ಜನರು ಇದನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. 
(4 / 8)
ತುಕ್ಪಾ: ಇದು ಟಿಬೆಟಿಯನ್ ಖಾದ್ಯ. ಇದನ್ನು ತಯಾರಿಸಲು ಕಡಿಮೆ ಇಂಗ್ರೀಡಿಯಂಟ್ಸ್‌ ಸಾಕು. ಅಲ್ಲದೆ ತಯಾರಿಸುವ ಸಮಯ ಕೂಡಾ ಕಡಿಮೆ. ವಲಸಿಗ ಟಿಬೆಟಿಯನ್ನರ ಮೂಲಕ ಭಾರತಕ್ಕೆ ಪರಿಚಯಿಸಲ್ಪಟ್ಟ ತುಕ್ಪಾ ಈಗ ಉಪ ಖಂಡದಾದ್ಯಂತ ಜನಪ್ರಿಯವಾಗಿದೆ. ಉತ್ತರ ಭಾರತದ ಜನರು ಇದನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. (File Photo)
ದೌಲತ್ ಕಿ ಚಾತ್: ಇದು ದೆಹಲಿಯಲ್ಲಿ ಬಹಳ ಫೇಮಸ್‌,  ಈ ಸಾಂಪ್ರದಾಯಿಕ ಸಿಹಿತಿಂಡಿಯನ್ನು ಹಾಲಿನ ಕೆನೆಯಿಂದ ಮಾಡಲಾಗುತ್ತದೆ. ದೆಹಲಿಯ ಶ್ರೀಮಂತ ಪಾಕಶಾಲೆಯ ಪರಂಪರೆಯ ಪ್ರತಿಬಿಂಬವಾಗಿದೆ. ದೆಹಲಿಯ ಬೀದಿಗಳಲ್ಲಿ ಮಾರಾಟ ಮಾಡುವವರು ಸಾಲು ಸಾಲು  ಸ್ಟಾಲ್‌ ತೆರೆಯುತ್ತಾರೆ. ಹಳೆಯ ದೆಹಲಿಯ ಚಾಂದಿನಿ ಚೌಕ್ ಮತ್ತು ಕಿನಾರಿ ಬಜಾರ್‌ನ ಕಿರಿದಾದ ಲೇನ್‌ಗಳಲ್ಲಿ ನೀವು ಇದನ್ನು ಸವಿಯಬಹುದು. 
(5 / 8)
ದೌಲತ್ ಕಿ ಚಾತ್: ಇದು ದೆಹಲಿಯಲ್ಲಿ ಬಹಳ ಫೇಮಸ್‌,  ಈ ಸಾಂಪ್ರದಾಯಿಕ ಸಿಹಿತಿಂಡಿಯನ್ನು ಹಾಲಿನ ಕೆನೆಯಿಂದ ಮಾಡಲಾಗುತ್ತದೆ. ದೆಹಲಿಯ ಶ್ರೀಮಂತ ಪಾಕಶಾಲೆಯ ಪರಂಪರೆಯ ಪ್ರತಿಬಿಂಬವಾಗಿದೆ. ದೆಹಲಿಯ ಬೀದಿಗಳಲ್ಲಿ ಮಾರಾಟ ಮಾಡುವವರು ಸಾಲು ಸಾಲು  ಸ್ಟಾಲ್‌ ತೆರೆಯುತ್ತಾರೆ. ಹಳೆಯ ದೆಹಲಿಯ ಚಾಂದಿನಿ ಚೌಕ್ ಮತ್ತು ಕಿನಾರಿ ಬಜಾರ್‌ನ ಕಿರಿದಾದ ಲೇನ್‌ಗಳಲ್ಲಿ ನೀವು ಇದನ್ನು ಸವಿಯಬಹುದು. (HT Photo)
ಹಬ್ಶಿ ಹಲ್ವಾ: ಇದು ಉತ್ತರ ಭಾರತ ಮತ್ತು ಪಾಕಿಸ್ತಾನದಲ್ಲಿ ಬಹಳ ಫೇಮಸ್.‌ ಇದನ್ನು ಸೋಹನ್ ಹಲ್ವಾ ಅಥವಾ ಶಾಹಿ ಹಲ್ವಾ ಎಂದೂ ಕರೆಯುತ್ತಾರೆ. ಈ ಹೆಸರಾಂತ ಸಿಹಿತಿಂಡಿ ಹಾಲು, ಸಕ್ಕರೆ, ಮೊಳಕೆಯೊಡೆದ ಗೋಧಿ, ತುಪ್ಪ, ಪರಿಮಳಯುಕ್ತ ಫ್ಲೇವರ್‌ ಮತ್ತು ಬಾದಾಮಿಯನ್ನು ಬಳಸಿ ತಯಾರಿಸಲಾಗುತ್ತದೆ. ಭಾರತದಲ್ಲಿ ಇದನ್ನು ಮೊಘಲರು ಮೊದಲ ಬಾರಿಗೆ ಪರಿಚಯಿಸಿದರು.  ಉತ್ತರ ಭಾರತದ ಜನರು ಮಾತ್ರವಲ್ಲದೆ ಪಾಕಿಸ್ತಾನದ ವಿವಿಧ ಪ್ರದೇಶಗಳಲ್ಲಿ ಈ ಸಿಹಿ ಫೇಮಸ್.‌  
(6 / 8)
ಹಬ್ಶಿ ಹಲ್ವಾ: ಇದು ಉತ್ತರ ಭಾರತ ಮತ್ತು ಪಾಕಿಸ್ತಾನದಲ್ಲಿ ಬಹಳ ಫೇಮಸ್.‌ ಇದನ್ನು ಸೋಹನ್ ಹಲ್ವಾ ಅಥವಾ ಶಾಹಿ ಹಲ್ವಾ ಎಂದೂ ಕರೆಯುತ್ತಾರೆ. ಈ ಹೆಸರಾಂತ ಸಿಹಿತಿಂಡಿ ಹಾಲು, ಸಕ್ಕರೆ, ಮೊಳಕೆಯೊಡೆದ ಗೋಧಿ, ತುಪ್ಪ, ಪರಿಮಳಯುಕ್ತ ಫ್ಲೇವರ್‌ ಮತ್ತು ಬಾದಾಮಿಯನ್ನು ಬಳಸಿ ತಯಾರಿಸಲಾಗುತ್ತದೆ. ಭಾರತದಲ್ಲಿ ಇದನ್ನು ಮೊಘಲರು ಮೊದಲ ಬಾರಿಗೆ ಪರಿಚಯಿಸಿದರು.  ಉತ್ತರ ಭಾರತದ ಜನರು ಮಾತ್ರವಲ್ಲದೆ ಪಾಕಿಸ್ತಾನದ ವಿವಿಧ ಪ್ರದೇಶಗಳಲ್ಲಿ ಈ ಸಿಹಿ ಫೇಮಸ್.‌  (Pinterest)
ಪಾಯಾ ಸೂಪ್: ಇದು ಉತ್ತರ ಭಾರತದ ಸಾಂಪ್ರದಾಯಿಕ ಫೇಮಸ್‌ ಸೂಪ್.‌  ಭಾರತದಲ್ಲಿ ಮಾತ್ರವಲ್ಲದೆ ಅನೇಕ ದಕ್ಷಿಣ ಏಷ್ಯಾ ದೇಶಗಳಲ್ಲಿಯೂ ಇದನ್ನು ಸವಿಯುತ್ತಾರೆ. ಈ ಬೆಚ್ಚಗಿನ, ರುಚಿಯಾದ ಸ್ಟ್ಯೂ ಅನ್ನು ಮೇಕೆ, ಎಮ್ಮೆ ಅಥವಾ ಕುರಿಗಳಿಂದ ತಯಾರಿಸಲಾಗುತ್ತದೆ. ಚಳಿಗಾಲದಲ್ಲಿ ಇದು ಬಹಳ ಪೌಷ್ಠಕ ಆಹಾರವಾಗಿದೆ. 
(7 / 8)
ಪಾಯಾ ಸೂಪ್: ಇದು ಉತ್ತರ ಭಾರತದ ಸಾಂಪ್ರದಾಯಿಕ ಫೇಮಸ್‌ ಸೂಪ್.‌  ಭಾರತದಲ್ಲಿ ಮಾತ್ರವಲ್ಲದೆ ಅನೇಕ ದಕ್ಷಿಣ ಏಷ್ಯಾ ದೇಶಗಳಲ್ಲಿಯೂ ಇದನ್ನು ಸವಿಯುತ್ತಾರೆ. ಈ ಬೆಚ್ಚಗಿನ, ರುಚಿಯಾದ ಸ್ಟ್ಯೂ ಅನ್ನು ಮೇಕೆ, ಎಮ್ಮೆ ಅಥವಾ ಕುರಿಗಳಿಂದ ತಯಾರಿಸಲಾಗುತ್ತದೆ. ಚಳಿಗಾಲದಲ್ಲಿ ಇದು ಬಹಳ ಪೌಷ್ಠಕ ಆಹಾರವಾಗಿದೆ. (Pintrerest)
ಉಂಧಿಯು: ಇದು ಗುಜರಾತ್‌ನ ಸಾಂಪ್ರದಾಯಿಕ ತಿಂಡಿ. ಇದನ್ನು ವಿವಿಧ ತರಕಾರಿಗಳಿಂದ ತಯಾರಿಸಲಾಗುತ್ತದೆ. ಗುಜರಾತಿನ ಉಂಧು ಎಂಬ ಪದದಿಂದ ಈ ಹೆಸರು ಬಂದಿದೆ. ಮಟ್ಲು ಎಂಬ ಮಣ್ಣಿ ಪಾತ್ರೆಯಲ್ಲಿ ಇದನ್ನು ಬೇಯಿಸಲಾಗುತ್ತದೆ. 
(8 / 8)
ಉಂಧಿಯು: ಇದು ಗುಜರಾತ್‌ನ ಸಾಂಪ್ರದಾಯಿಕ ತಿಂಡಿ. ಇದನ್ನು ವಿವಿಧ ತರಕಾರಿಗಳಿಂದ ತಯಾರಿಸಲಾಗುತ್ತದೆ. ಗುಜರಾತಿನ ಉಂಧು ಎಂಬ ಪದದಿಂದ ಈ ಹೆಸರು ಬಂದಿದೆ. ಮಟ್ಲು ಎಂಬ ಮಣ್ಣಿ ಪಾತ್ರೆಯಲ್ಲಿ ಇದನ್ನು ಬೇಯಿಸಲಾಗುತ್ತದೆ. (Pinterest)

    ಹಂಚಿಕೊಳ್ಳಲು ಲೇಖನಗಳು