logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರೋಹಿತ್, ಕೊಹ್ಲಿ, ಶಮಿ ಅಲ್ಲವೇ ಅಲ್ಲ; ಈತ ಭಾರತ ತಂಡದ ದೊಡ್ಡ ಗೇಮ್ ಚೇಂಜರ್ ಎಂದ ಗಂಭೀರ್

ರೋಹಿತ್, ಕೊಹ್ಲಿ, ಶಮಿ ಅಲ್ಲವೇ ಅಲ್ಲ; ಈತ ಭಾರತ ತಂಡದ ದೊಡ್ಡ ಗೇಮ್ ಚೇಂಜರ್ ಎಂದ ಗಂಭೀರ್

Nov 17, 2023 05:37 PM IST

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ದೊಡ್ಡ ಗೇಮ್ ಚೇಂಜರ್ ಯಾರು ಎಂಬುದನ್ನು ಗೌತಮ್ ಗಂಭೀರ್ ಹೆಸರಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮೊಹಮ್ಮದ್ ಶಮಿ ಹೆಸರನ್ನು ನಿರ್ಲಕ್ಷಿಸಿದ್ದಾರೆ.

  • ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ದೊಡ್ಡ ಗೇಮ್ ಚೇಂಜರ್ ಯಾರು ಎಂಬುದನ್ನು ಗೌತಮ್ ಗಂಭೀರ್ ಹೆಸರಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮೊಹಮ್ಮದ್ ಶಮಿ ಹೆಸರನ್ನು ನಿರ್ಲಕ್ಷಿಸಿದ್ದಾರೆ.
ಪ್ರಸಕ್ತ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್​ ಅವರನ್ನು ದೊಡ್ಡ ಗೇಮ್ ಚೇಂಜರ್ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
(1 / 11)
ಪ್ರಸಕ್ತ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್​ ಅವರನ್ನು ದೊಡ್ಡ ಗೇಮ್ ಚೇಂಜರ್ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.(Seshadri Sukumar)
ಟೂರ್ನಿಯಲ್ಲಿ ಭಾರತ ನೀಡಿರುವ ಪ್ರದರ್ಶನ ಗಮನಿಸಿದರೆ ಗೇಮ್ ಚೇಂಜರ್ ಆಯ್ಕೆ ಸುಲಭವಲ್ಲ. ಆದರೆ, ಗಂಭೀರ್​​ ಮಾತ್ರ ಅಯ್ಯರ್​ಗೆ ವೋಟು ಹಾಕಿದ್ದಾರೆ.
(2 / 11)
ಟೂರ್ನಿಯಲ್ಲಿ ಭಾರತ ನೀಡಿರುವ ಪ್ರದರ್ಶನ ಗಮನಿಸಿದರೆ ಗೇಮ್ ಚೇಂಜರ್ ಆಯ್ಕೆ ಸುಲಭವಲ್ಲ. ಆದರೆ, ಗಂಭೀರ್​​ ಮಾತ್ರ ಅಯ್ಯರ್​ಗೆ ವೋಟು ಹಾಕಿದ್ದಾರೆ.(ANI)
ಆ ಮೂಲಕ ರೋಹಿತ್ ಶರ್ಮಾ (550 ರನ್), ವಿರಾಟ್ ಕೊಹ್ಲಿ (711 ರನ್) ಹಾಗೂ ಮೊಹಮ್ಮದ್ ಶಮಿ (23 ವಿಕೆಟ್) ಅವರ ಹೆಸರನ್ನು ನಿರ್ಲಕ್ಷಿಸಿದ್ದಾರೆ.
(3 / 11)
ಆ ಮೂಲಕ ರೋಹಿತ್ ಶರ್ಮಾ (550 ರನ್), ವಿರಾಟ್ ಕೊಹ್ಲಿ (711 ರನ್) ಹಾಗೂ ಮೊಹಮ್ಮದ್ ಶಮಿ (23 ವಿಕೆಟ್) ಅವರ ಹೆಸರನ್ನು ನಿರ್ಲಕ್ಷಿಸಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್​​ನಲ್ಲಿ ಮಾತನಾಡಿರುವ ಗಂಭೀರ್, ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್​​ನಲ್ಲಿ 70 ಎಸೆತಗಳಲ್ಲೇ 105 ರನ್ ಗಳಿಸಿದ ಅಯ್ಯರ್ ಗೇಮ್ ಚೇಂಜರ್ ಎಂದಿದ್ದಾರೆ.
(4 / 11)
ಸ್ಟಾರ್ ಸ್ಪೋರ್ಟ್ಸ್​​ನಲ್ಲಿ ಮಾತನಾಡಿರುವ ಗಂಭೀರ್, ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್​​ನಲ್ಲಿ 70 ಎಸೆತಗಳಲ್ಲೇ 105 ರನ್ ಗಳಿಸಿದ ಅಯ್ಯರ್ ಗೇಮ್ ಚೇಂಜರ್ ಎಂದಿದ್ದಾರೆ.(PTI)
ಆಸ್ಟ್ರೇಲಿಯಾ ಎದುರಿನ ಫೈನಲ್ ಪಂದ್ಯದಲ್ಲೂ ಭಾರತ ಟ್ರೋಫಿ ಗೆಲ್ಲಲು ಶ್ರೇಯಸ್ ಅಯ್ಯರ್ ನಿರ್ಣಾಯಕ ಪಾತ್ರವಹಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
(5 / 11)
ಆಸ್ಟ್ರೇಲಿಯಾ ಎದುರಿನ ಫೈನಲ್ ಪಂದ್ಯದಲ್ಲೂ ಭಾರತ ಟ್ರೋಫಿ ಗೆಲ್ಲಲು ಶ್ರೇಯಸ್ ಅಯ್ಯರ್ ನಿರ್ಣಾಯಕ ಪಾತ್ರವಹಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.(PTI)
ಫೈನಲ್ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ಆ್ಯಡಂ ಜಂಪಾ ಬೌಲಿಂಗ್ ಅನ್ನು ಶ್ರೇಯಸ್ ಅಯ್ಯರ್ ದಿಟ್ಟವಾಗಿ ಎದುರಿಸಲಿದ್ದಾರೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
(6 / 11)
ಫೈನಲ್ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ಆ್ಯಡಂ ಜಂಪಾ ಬೌಲಿಂಗ್ ಅನ್ನು ಶ್ರೇಯಸ್ ಅಯ್ಯರ್ ದಿಟ್ಟವಾಗಿ ಎದುರಿಸಲಿದ್ದಾರೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.(ANI)
ಗಾಯದ ಸಮಸ್ಯೆಯಿಂದ ಅಯ್ಯರ್​ ತಮ್ಮ ಸ್ಥಾನಕ್ಕಾಗಿ ಹೋರಾಟ ನಡೆಸಿದ್ದರು. ಆದರೀಗ ಅವರ ಸುಭದ್ರವಾಗಿದೆ. ಸೆಮಿಫೈನಲ್​ನಲ್ಲಿ 67 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದು, ಅತ್ಯುತ್ತಮ ಇನಿಂಗ್ಸ್ ಆಗಿದೆ ಎಂದರು.
(7 / 11)
ಗಾಯದ ಸಮಸ್ಯೆಯಿಂದ ಅಯ್ಯರ್​ ತಮ್ಮ ಸ್ಥಾನಕ್ಕಾಗಿ ಹೋರಾಟ ನಡೆಸಿದ್ದರು. ಆದರೀಗ ಅವರ ಸುಭದ್ರವಾಗಿದೆ. ಸೆಮಿಫೈನಲ್​ನಲ್ಲಿ 67 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದು, ಅತ್ಯುತ್ತಮ ಇನಿಂಗ್ಸ್ ಆಗಿದೆ ಎಂದರು.(ANI)
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಅಯ್ಯರ್ ಆಡಿದ 10 ಪಂದ್ಯಗಳಲ್ಲಿ 113 ಸ್ಟ್ರೆಕ್​ರೇಟ್​ನಲ್ಲಿ 526 ರನ್ ಕಲೆ ಹಾಕಿದ್ದಾರೆ. ಕಳೆದ 4 ಪಂದ್ಯಗಳಿಂದ ರನ್ ಹೊಳೆ ಹರಿಸಿರುವ ಅಯ್ಯರ್, ಕ್ರಮವಾಗಿ 82, 77, 128* ಹಾಗೂ 105 ರನ್ ಸಿಡಿಸಿದ್ದಾರೆ.
(8 / 11)
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಅಯ್ಯರ್ ಆಡಿದ 10 ಪಂದ್ಯಗಳಲ್ಲಿ 113 ಸ್ಟ್ರೆಕ್​ರೇಟ್​ನಲ್ಲಿ 526 ರನ್ ಕಲೆ ಹಾಕಿದ್ದಾರೆ. ಕಳೆದ 4 ಪಂದ್ಯಗಳಿಂದ ರನ್ ಹೊಳೆ ಹರಿಸಿರುವ ಅಯ್ಯರ್, ಕ್ರಮವಾಗಿ 82, 77, 128* ಹಾಗೂ 105 ರನ್ ಸಿಡಿಸಿದ್ದಾರೆ.(ANI)
ವಿಶ್ವಕಪ್ ಇತಿಹಾಸದಲ್ಲಿ 4ನೇ ಕ್ರಮಾಂಕದಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ಈ ಕ್ರಮಾಂಕದಲ್ಲಿ 500 ರನ್​​ಗಳ ಗಡಿ ದಾಟಿದ ಮೊದಲ ಆಟಗಾರ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.
(9 / 11)
ವಿಶ್ವಕಪ್ ಇತಿಹಾಸದಲ್ಲಿ 4ನೇ ಕ್ರಮಾಂಕದಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ಈ ಕ್ರಮಾಂಕದಲ್ಲಿ 500 ರನ್​​ಗಳ ಗಡಿ ದಾಟಿದ ಮೊದಲ ಆಟಗಾರ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.(ANI)
ವಿಶ್ವಕಪ್​​ನಲ್ಲಿ ಸತತ ಎರಡು ಸಿಡಿಸಿದ ಅಯ್ಯರ್, ಭಾರತದ ರೋಹಿತ್​ ಶರ್ಮಾ ದಾಖಲೆಯನ್ನು ಸರಿಗಟ್ಟಿದ್ದಾರೆ. ರೋಹಿತ್ 2019ರ ವಿಶ್ವಕಪ್​ನಲ್ಲಿ ಸತತ 2 ಶತಕ ಸಿಡಿಸಿದ್ದರು.
(10 / 11)
ವಿಶ್ವಕಪ್​​ನಲ್ಲಿ ಸತತ ಎರಡು ಸಿಡಿಸಿದ ಅಯ್ಯರ್, ಭಾರತದ ರೋಹಿತ್​ ಶರ್ಮಾ ದಾಖಲೆಯನ್ನು ಸರಿಗಟ್ಟಿದ್ದಾರೆ. ರೋಹಿತ್ 2019ರ ವಿಶ್ವಕಪ್​ನಲ್ಲಿ ಸತತ 2 ಶತಕ ಸಿಡಿಸಿದ್ದರು.(PTI)
ನವೆಂಬರ್ 19ರ ಭಾನುವಾರ ಅಹ್ಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಣಸಾಟ ನಡೆಸಲಿವೆ.
(11 / 11)
ನವೆಂಬರ್ 19ರ ಭಾನುವಾರ ಅಹ್ಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಣಸಾಟ ನಡೆಸಲಿವೆ.(ANI)

    ಹಂಚಿಕೊಳ್ಳಲು ಲೇಖನಗಳು