logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ondu Ghanteya Kathe Ott: ಒಂದು ಗಂಟೆಯ ಕಥೆ ಸಿನಿಮಾ ಒಟಿಟಿ ಬಿಡುಗಡೆ ವಿವರ; ಆ ಅಂಗ ನಾಪತ್ತೆಯಾಗಿ ಬ್ರೇಕಿಂಗ್‌ ನ್ಯೂಸ್‌ ಆದ ಯುವಕನ ವ್ಯಥೆ

Ondu Ghanteya Kathe OTT: ಒಂದು ಗಂಟೆಯ ಕಥೆ ಸಿನಿಮಾ ಒಟಿಟಿ ಬಿಡುಗಡೆ ವಿವರ; ಆ ಅಂಗ ನಾಪತ್ತೆಯಾಗಿ ಬ್ರೇಕಿಂಗ್‌ ನ್ಯೂಸ್‌ ಆದ ಯುವಕನ ವ್ಯಥೆ

Jul 03, 2024 02:03 PM IST

Ondu Ghanteya Kathe OTT: ಒಂದು ಗಂಟೆಯ ಕಥೆ ಎಂಬ ನೈಜ ಘಟನೆ ಆಧರಿತ ಕಾಮಿಡಿ ಸಿನಿಮಾ ಒಟಿಟಿಯಲ್ಲಿ ಈ ವಾರ ಬಿಡುಗಡೆಯಾಗುತ್ತಿದೆ. ರಾಜ್‌ ಬಿ ಶೆಟ್ಟಿ ನಟನೆಯ ಒಂದು ಮೊಟ್ಟೆಯ ಕಥೆಗಿಂತ ಭಿನ್ನವಾದ, ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ತನ್ನ ಬಾಯ್‌ಫ್ರೆಂಡ್‌ನ ಮರ್ಮಾಂಗ ಕತ್ತರಿಸಿದ ನೈಜ ಘಟನೆಯನ್ನು ಸ್ಪೂರ್ತಿಯಾಗಿಟ್ಟುಕೊಂಡು ಈ ಸಿನಿಮಾ ತೆರೆಗೆ ತರಲಾಗಿತ್ತು.

  • Ondu Ghanteya Kathe OTT: ಒಂದು ಗಂಟೆಯ ಕಥೆ ಎಂಬ ನೈಜ ಘಟನೆ ಆಧರಿತ ಕಾಮಿಡಿ ಸಿನಿಮಾ ಒಟಿಟಿಯಲ್ಲಿ ಈ ವಾರ ಬಿಡುಗಡೆಯಾಗುತ್ತಿದೆ. ರಾಜ್‌ ಬಿ ಶೆಟ್ಟಿ ನಟನೆಯ ಒಂದು ಮೊಟ್ಟೆಯ ಕಥೆಗಿಂತ ಭಿನ್ನವಾದ, ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ತನ್ನ ಬಾಯ್‌ಫ್ರೆಂಡ್‌ನ ಮರ್ಮಾಂಗ ಕತ್ತರಿಸಿದ ನೈಜ ಘಟನೆಯನ್ನು ಸ್ಪೂರ್ತಿಯಾಗಿಟ್ಟುಕೊಂಡು ಈ ಸಿನಿಮಾ ತೆರೆಗೆ ತರಲಾಗಿತ್ತು.
Ondu Ghanteya Kathe OTT: ರಾಜ್‌ ಬಿ ಶೆಟ್ಟಿ ನಟನೆಯ ಒಂದು ಮೊಟ್ಟೆಯ ಕಥೆ ಬಹುತೇಕರಿಗೆ ನೆನಪಲ್ಲಿ ಇರಬಹುದು. ಒಂದು ಗಂಟೆಯ ಕಥೆ ಎಂಬ ಸಿನಿಮಾ ಯಾವಾಗ ಬಿಡುಗಡೆಯಾಯ್ತು ಎಂದು ನೀವು ಯೋಚಿಸಬಹುದು. ಇದು 2021ರಲ್ಲಿ ಬಿಡುಗಡೆಯಾದ ಸಿನಿಮಾ. ಡಬಲ್‌ ಮೀನಿಂಗ್‌ ಹೆಚ್ಚಿರುವ ಒಂದು ಕನ್ನಡ "ಎ" ಸಿನಿಮಾ. ನೈಜ ಘಟನೆ ಆಧರಿತ ಎಂಬ ಟ್ಯಾಗ್‌ಲೈನ್‌ ಹೊಂದಿರುವ ಈ ಸಿನಿಮಾದಲ್ಲಿ ಹಾಸ್ಯವೂ ಇದೆ. ಸಂದೇಶವೂ ಇದೆ.
(1 / 8)

ಬೆಂಗಳೂರು ಮೂಲದ ಮಹಿಳೆಯೊಬ್ಬರು ತನ್ನ ಬಾಯ್‌ಫ್ರೆಂಡ್‌ನ ಮರ್ಮಾಂಗವನ್ನೇ ಕತ್ತರಿಸಿದ ನೈಜ ಘಟನೆ ನಡೆದಿತ್ತು. ತನ್ನನ್ನು ಮದುವೆಯಾಗುವುದಾಗಿ ಹೇಳಿ ಬೇರೊಬ್ಬಳನ್ನು ಮದುವೆಯಾಗಲು ಹೊರಟ ಆತನಿಗೆ ಈ ಶಿಕ್ಷೆ ನೀಡಿದ್ದಳು. ಇದೇ ಕಥೆಯನ್ನು ಸಿನಿಮ್ಯಾಟಿಕ್‌ ಆಂಗಲ್‌ನಿಂದ ನಿರ್ದೇಶಕ   ದ್ವಾರ್ಕಿ ರಾಘವ್‌  ಬೇರೆ ರೀತಿಯ ಸಿನಿಮಾ ಮಾಡಿದ್ದರು.
(2 / 8)

ನಿರ್ದೇಶಕ ರಾಘವ್‌ ಅವರು ಕಾಮಿಡಿ ಆಂಗಲ್‌ನಿಂದ ಈ ಸಿನಿಮಾ ಮಾಡಿದ್ದರು. ನಟ ಅಜಯ್‌ ರಾಜ್‌  ಪ್ಲೇಬಾಯ್‌ ರಾಹುಲ್‌ ಪಾತ್ರದಲ್ಲಿ ನಟಿಸಿದ್ದಾರೆ. ಮೂರು ವರ್ಷಗಳ ಹಿಂದೆ ಈ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾ ಅಡಲ್ಟ್‌ ಜೋಕ್ಸ್‌ ಸಿನಿಮಾ ಎಂಬ ವಿಮರ್ಶೆ ಪಡೆದಿತ್ತು. "ಸಾಮಾನು ಕಳೆದುಕೊಂಡವನ ಕಥೆ" ಎಂದೇ ಟೀಕೆಗೆ ಒಳಗಾಯ್ತು.
(3 / 8)

ಕೊನೆಗೂ ಈ ಸಿನಿಮಾ ಒಟಿಟಿಗೆ ಆಗಮಿಸಿದೆ. ನಮ್ಮ ಫ್ಲಿಕ್ಸ್‌ ಒಟಿಟಿಯಲ್ಲಿ ಇದೇ ಜುಲೈ 5ರಿಂದ ಒಂದು ಗಂಟೆಯ ಕಥೆ ಸ್ಟ್ರೀಮಿಂಗ್‌ ಆಗಲಿದೆ. ಈ ಸಿನಿಮಾದಲ್ಲಿ ಕಾಮಿಡಿ ಸೀನ್‌ಗಳೂ ಸಾಕಷ್ಟಿವೆ. ಜತೆಗೆ, ಡಬಲ್‌ ಮೀನಿಂಗ್‌ ಡೈಲಾಗ್‌ಗಳೂ ಇವೆ. ಸಿನಿಮಾದ ಕೊನೆಗೆ ಹತ್ತು ನಿಮಿಷ ಒಳ್ಳೆಯ ಸಂದೇಶವೂ ಇದೆ.
(4 / 8)

ಹುಡುಗಿಯರನ್ನು ಯಾವ ರೀತಿ ಬೇಕಾದರೂ ಯಾಮಾರಿಸಬಹುದು ಎಂದುಕೊಳ್ಳುವವರಿಗೆ ನಿರ್ದೇಶಕರು ಈ ಸಿನಿಮಾದ ಮೂಲಕ ಸಂದೇಶ ನೀಡಿದ್ದಾರೆ. 
(5 / 8)

ಯುವಕನೊಬ್ಬನ ಮರ್ಮಾಂಗ ಕಳೆದುಹೋಗಿದೆ ಎಂಬ ಸುದ್ದಿ ಈ 5ಜಿ ಯುಗದಲ್ಲಿ ಮಾಧ್ಯಮಗಳಿಗೆ, ಸೋಷಿಯಲ್‌ ಮೀಡಿಯಾಕ್ಕೆ ಗೊತ್ತಾದರೆ ಏನಾಗಲಿದೆ ಎಂಬ ವಿವರವೂ ಇದೆ. ಆ ಅಂಗ ಕಳೆದು ಹೋದ ಸುದ್ದಿ ದೊಡ್ಡ ಬ್ರೇಕಿಂಗ್‌ ಸುದ್ದಿ ಆಗುತ್ತದೆ. ಟಿವಿ ಜ್ಯೋತಿಷಿಗಳೂ ಈ ಕುರಿತು ಟಿವಿಯಲ್ಲಿ ಡಿಬೇಟ್‌ ಮಾಡುತ್ತಾರೆ.
(6 / 8)

ಪ್ರಕಾಶ್‌ ತುಮಿನಾಡು ಸೇರಿದಂತೆ ಕೆಲವು ನಟರ ಹಾಸ್ಯವೂ ಈ ಸಿನಿಮಾದಲ್ಲಿ ಇಷ್ಟವಾಗಬಹುದು. ಸಿನಿಮಾದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ನಾನ್‌ ವೆಜ್‌ ಜೋಕ್ಸ್‌ಗಳಿವೆ. ಚಿತ್ರದ ನಡುವೆ ಕಥೆ ಹುಡುಕಲು ಹೋಗಬಾರದು. 
(7 / 8)

 ಒಟಿಟಿಗೆ ಆಗಮಿಸುವ ಕಾರಣ ಈ ಸಿನಿಮಾವನ್ನು ಮನೆಯಲ್ಲಿ ಅಥವಾ ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ ಎಲ್ಲಿ ಬೇಕಾದರೂ ನೋಡಬಹುದು. ಒಂದು ಎಚ್ಚರಿಕೆ, ಮಕ್ಕಳು, ಹಿರಿಯರ ಜತೆ ನೋಡುವಂತಹ ಸಿನಿಮಾ ಇದಲ್ಲ.  
(8 / 8)

    ಹಂಚಿಕೊಳ್ಳಲು ಲೇಖನಗಳು