logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pm Modi Egypt Tour: ಪ್ರಧಾನಿ ಮೋದಿಯವರ ಈಜಿಪ್ಟ್‌ ಪ್ರವಾಸದ ಆಯ್ದ ಫೋಟೋಸ್‌ ಮತ್ತು ಚಿತ್ರ ಕಥನ

PM Modi Egypt Tour: ಪ್ರಧಾನಿ ಮೋದಿಯವರ ಈಜಿಪ್ಟ್‌ ಪ್ರವಾಸದ ಆಯ್ದ ಫೋಟೋಸ್‌ ಮತ್ತು ಚಿತ್ರ ಕಥನ

Jan 09, 2024 08:06 PM IST

PM Modi Egypt Tour: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಈಜಿಪ್ಟ್‌ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸಾಗಿದ್ದಾರೆ. 26 ವರ್ಷಗಳ ನಂತರ ಭಾರತೀಯ ಪ್ರಧಾನಿಯ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿತ್ತು. ಪ್ರಧಾನಿ ಮೋದಿ ಅವರಿಗೆ ಆ ದೇಶದ ಅತ್ಯುನ್ನತ ರಾಜ್ಯ ಗೌರವವನ್ನು ನೀಡಿ ಗೌರವಸಿಲಾಗಿದೆ.

ಕೈರೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶನಿವಾರ  ಈಜಿಪ್ಟ್ ಪ್ರಧಾನಿ ಮೊಸ್ತಫಾ ಮಡ್ಬೌಲಿ ಅವರು 'ವಿಶೇಷ ಗೌರವ'ದೊಂದಿಗೆ ಬರಮಾಡಿಕೊಂಡರು. ಇದು ಮಧ್ಯಪ್ರಾಚ್ಯ ರಾಷ್ಟ್ರಕ್ಕೆ ಭಾರತೀಯ ಪ್ರಧಾನಿಯ ಮೊದಲ ಅಧಿಕೃತ ಭೇಟಿಯಾಗಿದೆ. ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ಈ ವರ್ಷದ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಧಾನಿ ಮೋದಿಯವರು ಈ ಆಹ್ವಾನ ನೀಡಿದ್ದರು. 
(1 / 9)
ಕೈರೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶನಿವಾರ  ಈಜಿಪ್ಟ್ ಪ್ರಧಾನಿ ಮೊಸ್ತಫಾ ಮಡ್ಬೌಲಿ ಅವರು 'ವಿಶೇಷ ಗೌರವ'ದೊಂದಿಗೆ ಬರಮಾಡಿಕೊಂಡರು. ಇದು ಮಧ್ಯಪ್ರಾಚ್ಯ ರಾಷ್ಟ್ರಕ್ಕೆ ಭಾರತೀಯ ಪ್ರಧಾನಿಯ ಮೊದಲ ಅಧಿಕೃತ ಭೇಟಿಯಾಗಿದೆ. ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ಈ ವರ್ಷದ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಧಾನಿ ಮೋದಿಯವರು ಈ ಆಹ್ವಾನ ನೀಡಿದ್ದರು. (Twitter/PMO)
ಕೈರೋದ ಅಲ್-ಹಕೀಮ್ ಮಸೀದಿಗೆ ಭಾನುವಾರ ಭೇಟಿ ನೀಡಿದ ಸಂದರ್ಭದಲ್ಲಿ ಬೋಹ್ರಾ ಸಮುದಾಯದ ಸದಸ್ಯರು ಪ್ರಧಾನಿ ಅವರನ್ನು ಭೇಟಿ ಮಾಡಿದರು. ಶತಮಾನಗಳಷ್ಟು ಹಳೆಯದಾದ ಮಸೀದಿಯನ್ನು ಮರುಸ್ಥಾಪಿಸುವಲ್ಲಿ ಈ ಭಾರತೀಯ ಸಮುದಾಯವು ಮಹತ್ವದ ಪಾತ್ರವನ್ನು ವಹಿಸಿದೆ.
(2 / 9)
ಕೈರೋದ ಅಲ್-ಹಕೀಮ್ ಮಸೀದಿಗೆ ಭಾನುವಾರ ಭೇಟಿ ನೀಡಿದ ಸಂದರ್ಭದಲ್ಲಿ ಬೋಹ್ರಾ ಸಮುದಾಯದ ಸದಸ್ಯರು ಪ್ರಧಾನಿ ಅವರನ್ನು ಭೇಟಿ ಮಾಡಿದರು. ಶತಮಾನಗಳಷ್ಟು ಹಳೆಯದಾದ ಮಸೀದಿಯನ್ನು ಮರುಸ್ಥಾಪಿಸುವಲ್ಲಿ ಈ ಭಾರತೀಯ ಸಮುದಾಯವು ಮಹತ್ವದ ಪಾತ್ರವನ್ನು ವಹಿಸಿದೆ.(Twitter/@PMO)
ಪ್ರಧಾನಿ ಮೋದಿ ಅವರಿಗೆ ಈಜಿಪ್ಟ್‌ನ ಅತ್ಯುನ್ನತ ಸರ್ಕಾರಿ ಗೌರವ 'ಆರ್ಡರ್ ಆಫ್ ದಿ ನೈಲ್' ನೀಡಲಾಯಿತು. ಈ ಗೌರವ ಸ್ವೀಕರಿಸಿದ 13ನೇ ಗಣ್ಯರಾದರು ಪ್ರಧಾನಿ ಮೋದಿ. ಕಳೆದ ಒಂಬತ್ತು ವರ್ಷಗಳಲ್ಲಿ, ಪಿಎಂ ಮೋದಿ ಅವರು ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಲೋಗೊಹು, ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ ಮತ್ತು ರಿಪಬ್ಲಿಕ್ ಆಫ್ ಪಲಾವ್ ನೀಡುವ ಎಬಾಕಲ್ ಪ್ರಶಸ್ತಿ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.
(3 / 9)

ಪ್ರಧಾನಿ ಮೋದಿ ಶನಿವಾರ ಈಜಿಪ್ಟ್‌ನ ಇಬ್ಬರು ಯೋಗ ಪಟುಗಳು ಮತ್ತು ಬೋಧಕರನ್ನು ಭೇಟಿ ಮಾಡಿದರು. "ನಾಡಾ ಅಡೆಲ್ ಮತ್ತು ರೀಮ್ ಜಬಕ್ ಅವರು ಈಜಿಪ್ಟ್‌ನಾದ್ಯಂತ ಯೋಗವನ್ನು ಜನಪ್ರಿಯಗೊಳಿಸಲು ಶ್ಲಾಘನೀಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕೈರೋದಲ್ಲಿ ಅವರೊಂದಿಗೆ ಅದ್ಭುತ ಸಂಭಾಷಣೆ ನಡೆಸಿದ್ದಾರೆ" ಎಂದು ಮೋದಿ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
(4 / 9)

ಭಾರತದ ಬೊಹ್ರಾ ಸಮುದಾಯದ ಸಹಾಯದಿಂದ ಇತ್ತೀಚೆಗೆ ಕೈರೋದಲ್ಲಿ ಪುನಃಸ್ಥಾಪಿಸಲಾದ  1,000 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಅಲ್-ಹಕೀಮ್  ಮಸೀದಿಗೆ ಮೋದಿ ಭೇಟಿ ನೀಡಿದರು. 1012 ರಲ್ಲಿ ನಿರ್ಮಿಸಲಾದ ಮಸೀದಿಯ ಗೋಡೆಗಳು ಮತ್ತು ದ್ವಾರಗಳ ಮೇಲೆ ಸಂಕೀರ್ಣವಾಗಿ ಕೆತ್ತಲಾದ ಶಾಸನಗಳನ್ನು ಅವರು ಶ್ಲಾಘಿಸಿದರು.
(5 / 9)
ಭಾರತದ ಬೊಹ್ರಾ ಸಮುದಾಯದ ಸಹಾಯದಿಂದ ಇತ್ತೀಚೆಗೆ ಕೈರೋದಲ್ಲಿ ಪುನಃಸ್ಥಾಪಿಸಲಾದ  1,000 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಅಲ್-ಹಕೀಮ್  ಮಸೀದಿಗೆ ಮೋದಿ ಭೇಟಿ ನೀಡಿದರು. 1012 ರಲ್ಲಿ ನಿರ್ಮಿಸಲಾದ ಮಸೀದಿಯ ಗೋಡೆಗಳು ಮತ್ತು ದ್ವಾರಗಳ ಮೇಲೆ ಸಂಕೀರ್ಣವಾಗಿ ಕೆತ್ತಲಾದ ಶಾಸನಗಳನ್ನು ಅವರು ಶ್ಲಾಘಿಸಿದರು.(Twitter/PMO)
ಕೈರೋದ ಹೆಲಿಯೊ ಪೊಲಿಸ್ ಯುದ್ಧ ಸ್ಮಾರಕಕ್ಕೂ ಭೇಟಿ ನೀಡಿದ ಮೋದಿ, ಮೊದಲ ಮಹಾಯುದ್ಧದ ವೇಳೆ ತ್ಯಾಗ ಬಲಿದಾನ ಮಾಡಿದ ಭಾರತೀಯ ಯೋಧರಿಗೆ ಗೌರವ ಸಲ್ಲಿಸಿದರು.
(6 / 9)
ಕೈರೋದ ಹೆಲಿಯೊ ಪೊಲಿಸ್ ಯುದ್ಧ ಸ್ಮಾರಕಕ್ಕೂ ಭೇಟಿ ನೀಡಿದ ಮೋದಿ, ಮೊದಲ ಮಹಾಯುದ್ಧದ ವೇಳೆ ತ್ಯಾಗ ಬಲಿದಾನ ಮಾಡಿದ ಭಾರತೀಯ ಯೋಧರಿಗೆ ಗೌರವ ಸಲ್ಲಿಸಿದರು.(Twitter/PMO)
ಪ್ರಧಾನಿ ನರೇಂದ್ರ ಮೋದಿ ಅವರು ಈಜಿಪ್ಟ್‌ಗೆ ತಮ್ಮ ರಾಜ್ಯ ಭೇಟಿಯ ಸಂದರ್ಭದಲ್ಲಿ ಕಾರ್ಯತಂತ್ರದ ಮಾತುಕತೆಗಳ ಭಾಗವಾಗಿ ಶನಿವಾರ ಕೈರೋದಲ್ಲಿ ತಮ್ಮ ಸಹವರ್ತಿ ಮೊಸ್ತಫಾ ಮಡ್‌ಬೌಲಿ ಅವರೊಂದಿಗೆ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದರು.
(7 / 9)
ಪ್ರಧಾನಿ ನರೇಂದ್ರ ಮೋದಿ ಅವರು ಈಜಿಪ್ಟ್‌ಗೆ ತಮ್ಮ ರಾಜ್ಯ ಭೇಟಿಯ ಸಂದರ್ಭದಲ್ಲಿ ಕಾರ್ಯತಂತ್ರದ ಮಾತುಕತೆಗಳ ಭಾಗವಾಗಿ ಶನಿವಾರ ಕೈರೋದಲ್ಲಿ ತಮ್ಮ ಸಹವರ್ತಿ ಮೊಸ್ತಫಾ ಮಡ್‌ಬೌಲಿ ಅವರೊಂದಿಗೆ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದರು.(Twitter/PMO)
ತಮ್ಮ ಪ್ರವಾಸದ ಎರಡನೇ ದಿನ ಈಜಿಪ್ಟ್‌ನ ಪಿರಮಿಡ್‌ನಲ್ಲಿ ಪ್ರಧಾನಿ ಮೋದಿ, ಅವರ ಸಹವರ್ತಿ ಮೊಸ್ತಫಾ ಮಡ್‌ಬೌಲಿ ಅವರೊಂದಿಗೆ ಕಾಣಿಸಿದ್ದು ಹೀಗೆ.
(8 / 9)
ತಮ್ಮ ಪ್ರವಾಸದ ಎರಡನೇ ದಿನ ಈಜಿಪ್ಟ್‌ನ ಪಿರಮಿಡ್‌ನಲ್ಲಿ ಪ್ರಧಾನಿ ಮೋದಿ, ಅವರ ಸಹವರ್ತಿ ಮೊಸ್ತಫಾ ಮಡ್‌ಬೌಲಿ ಅವರೊಂದಿಗೆ ಕಾಣಿಸಿದ್ದು ಹೀಗೆ.(Twitter/PMO)
ಮಧ್ಯಪ್ರಾಚ್ಯ ರಾಷ್ಟ್ರವಾದ ಈಜಿಪ್ಟ್‌ಗೆ 'ಐತಿಹಾಸಿಕ' ಎರಡು ದಿನಗಳ ಅಧಿಕೃತ ಭೇಟಿಯನ್ನು ಮುಗಿಸಿದ ನಂತರ ಪ್ರಧಾನಿ ಮೋದಿ ಭಾನುವಾರ ನವದೆಹಲಿಗೆ ಪ್ರಯಾಣ ಬೆಳೆಸಿದರು.
(9 / 9)
ಮಧ್ಯಪ್ರಾಚ್ಯ ರಾಷ್ಟ್ರವಾದ ಈಜಿಪ್ಟ್‌ಗೆ 'ಐತಿಹಾಸಿಕ' ಎರಡು ದಿನಗಳ ಅಧಿಕೃತ ಭೇಟಿಯನ್ನು ಮುಗಿಸಿದ ನಂತರ ಪ್ರಧಾನಿ ಮೋದಿ ಭಾನುವಾರ ನವದೆಹಲಿಗೆ ಪ್ರಯಾಣ ಬೆಳೆಸಿದರು.(Twitter/PMO)

    ಹಂಚಿಕೊಳ್ಳಲು ಲೇಖನಗಳು