logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pregnancy Diet Chart: ಗರ್ಭಿಣಿಯರ ಚಳಿಗಾಲದ ಆಹಾರ ಹೇಗಿರಬೇಕು? ಈ ಚಾರ್ಟ್‌ ಗಮನಿಸಿ

Pregnancy diet chart: ಗರ್ಭಿಣಿಯರ ಚಳಿಗಾಲದ ಆಹಾರ ಹೇಗಿರಬೇಕು? ಈ ಚಾರ್ಟ್‌ ಗಮನಿಸಿ

Jan 13, 2023 12:25 PM IST

Pregnancy diet chart for winter: ಗರ್ಭಾವಸ್ಥೆಯಲ್ಲಿನ ಆಹಾರಕ್ರಮವು ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಗರ್ಭಿಣಿಯರು ಋತುಮಾನಕ್ಕೆ ತಕ್ಕ ಆಹಾರವನ್ನು ಸೇವಿಸಬೇಕು. ಗರ್ಭಿಣಿಯರ ಚಳಿಗಾಲದ ಆಹಾರದ ಚಾರ್ಟ್ ಅನ್ನು ಇಲ್ಲಿ ನೋಡೋಣ.

  • Pregnancy diet chart for winter: ಗರ್ಭಾವಸ್ಥೆಯಲ್ಲಿನ ಆಹಾರಕ್ರಮವು ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಗರ್ಭಿಣಿಯರು ಋತುಮಾನಕ್ಕೆ ತಕ್ಕ ಆಹಾರವನ್ನು ಸೇವಿಸಬೇಕು. ಗರ್ಭಿಣಿಯರ ಚಳಿಗಾಲದ ಆಹಾರದ ಚಾರ್ಟ್ ಅನ್ನು ಇಲ್ಲಿ ನೋಡೋಣ.
ತಾಯ್ತನವು ಪ್ರತಿ ಮಹಿಳೆಯ ಜೀವನದಲ್ಲಿ ಒಂದು ಪ್ರಮುಖ ಕ್ಷಣವಾಗಿದೆ. ಗರ್ಭಾವಸ್ಥೆಯಲ್ಲಿ, ಮಹಿಳೆಯರು ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಿಗೆ ಒಳಗಾಗುತ್ತಾರೆ. ಆದ್ದರಿಂದ ಈ ಕೆಲವು ತಿಂಗಳುಗಳಲ್ಲಿ ಆರೋಗ್ಯವಾಗಿರುವುದು ಬಹಳ ಮುಖ್ಯ. ಆರೋಗ್ಯವಂತರಾಗಿರಲು ದಿನನಿತ್ಯ ಸೇವಿಸುವ ಆಹಾರದ ಬಗ್ಗೆ ಸೂಕ್ತ ಗಮನ ನೀಡಬೇಕು.
(1 / 6)
ತಾಯ್ತನವು ಪ್ರತಿ ಮಹಿಳೆಯ ಜೀವನದಲ್ಲಿ ಒಂದು ಪ್ರಮುಖ ಕ್ಷಣವಾಗಿದೆ. ಗರ್ಭಾವಸ್ಥೆಯಲ್ಲಿ, ಮಹಿಳೆಯರು ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಿಗೆ ಒಳಗಾಗುತ್ತಾರೆ. ಆದ್ದರಿಂದ ಈ ಕೆಲವು ತಿಂಗಳುಗಳಲ್ಲಿ ಆರೋಗ್ಯವಾಗಿರುವುದು ಬಹಳ ಮುಖ್ಯ. ಆರೋಗ್ಯವಂತರಾಗಿರಲು ದಿನನಿತ್ಯ ಸೇವಿಸುವ ಆಹಾರದ ಬಗ್ಗೆ ಸೂಕ್ತ ಗಮನ ನೀಡಬೇಕು.(Freepik)
ಮೊಟ್ಟೆ: ಮೊಟ್ಟೆ ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಇದು ದೇಹಕ್ಕೆ ಕೋಲಿನ್, ಲುಟೀನ್, ಡಿ ವಿಟಮಿನ್, ಬಿ12 ವಿಟಮಿನ್, ರೈಬೋಫ್ಲಾವಿನ್, ಫೋಲೇಟ್‌ನಂತಹ ಪೋಷಕಾಂಶಗಳನ್ನು ಒದಗಿಸುತ್ತದೆ. ಮೊಟ್ಟೆಗಳು ಮೂಳೆಗಳನ್ನು ಬಲಪಡಿಸಲು ಸಹ ಸಹಾಯ ಮಾಡುತ್ತದೆ. ಮಗುವಿನ ಮೂಳೆಗಳು ಮತ್ತು ಸ್ನಾಯುಗಳ ಬೆಳವಣಿಗೆಯಲ್ಲೂ ಇದು ಪಾತ್ರವನ್ನು ವಹಿಸುತ್ತದೆ.
(2 / 6)
ಮೊಟ್ಟೆ: ಮೊಟ್ಟೆ ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಇದು ದೇಹಕ್ಕೆ ಕೋಲಿನ್, ಲುಟೀನ್, ಡಿ ವಿಟಮಿನ್, ಬಿ12 ವಿಟಮಿನ್, ರೈಬೋಫ್ಲಾವಿನ್, ಫೋಲೇಟ್‌ನಂತಹ ಪೋಷಕಾಂಶಗಳನ್ನು ಒದಗಿಸುತ್ತದೆ. ಮೊಟ್ಟೆಗಳು ಮೂಳೆಗಳನ್ನು ಬಲಪಡಿಸಲು ಸಹ ಸಹಾಯ ಮಾಡುತ್ತದೆ. ಮಗುವಿನ ಮೂಳೆಗಳು ಮತ್ತು ಸ್ನಾಯುಗಳ ಬೆಳವಣಿಗೆಯಲ್ಲೂ ಇದು ಪಾತ್ರವನ್ನು ವಹಿಸುತ್ತದೆ.(Freepik)
ನಟ್ಸ್ : ಗರ್ಭಿಣಿಯರು ಚಳಿಗಾಲದಲ್ಲಿ ಬಾದಾಮಿ, ವಾಲ್ ನಟ್, ಗೋಡಂಬಿ, ಖರ್ಜೂರ ತಿನ್ನುವುದು ಒಳ್ಳೆಯದು. ಈ ಬೀಜಗಳು ಫೈಬರ್, ವಿಟಮಿನ್, ಫೋಲೇಟ್, ಪೊಟ್ಯಾಸಿಯಮ್ ಮತ್ತು ಕಬ್ಬಿಣವನ್ನು ಹೊಂದಿರುತ್ತವೆ. ಈ ಆಹಾರವು ಮೂಳೆಗಳು ಮತ್ತು ಹಲ್ಲುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ಸಿಹಿಯಾದ ಒಣ ಹಣ್ಣುಗಳನ್ನು ತಿನ್ನಬಾರದು. ಅವು ಸಂಸ್ಕರಿಸಿದ ಸಕ್ಕರೆ ಮತ್ತು ಉಪ್ಪನ್ನು ಹೊಂದಿರುತ್ತವೆ.
(3 / 6)
ನಟ್ಸ್ : ಗರ್ಭಿಣಿಯರು ಚಳಿಗಾಲದಲ್ಲಿ ಬಾದಾಮಿ, ವಾಲ್ ನಟ್, ಗೋಡಂಬಿ, ಖರ್ಜೂರ ತಿನ್ನುವುದು ಒಳ್ಳೆಯದು. ಈ ಬೀಜಗಳು ಫೈಬರ್, ವಿಟಮಿನ್, ಫೋಲೇಟ್, ಪೊಟ್ಯಾಸಿಯಮ್ ಮತ್ತು ಕಬ್ಬಿಣವನ್ನು ಹೊಂದಿರುತ್ತವೆ. ಈ ಆಹಾರವು ಮೂಳೆಗಳು ಮತ್ತು ಹಲ್ಲುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ಸಿಹಿಯಾದ ಒಣ ಹಣ್ಣುಗಳನ್ನು ತಿನ್ನಬಾರದು. ಅವು ಸಂಸ್ಕರಿಸಿದ ಸಕ್ಕರೆ ಮತ್ತು ಉಪ್ಪನ್ನು ಹೊಂದಿರುತ್ತವೆ.(Freepik)
ಹಸಿರು ಎಲೆಗಳ ತರಕಾರಿಗಳು: ಚಳಿಗಾಲದಲ್ಲಿ ತರಕಾರಿಗಳು ಮಾರುಕಟ್ಟೆಯಲ್ಲಿ ಹೇರಳವಾಗಿರುತ್ತವೆ. ವಿಶೇಷವಾಗಿ ಪಾಲಕ್‌ ಮತ್ತು ಮೆಂತ್ಯೆ ಸೊಪ್ಪು ಗರ್ಭಾವಸ್ಥೆಯಲ್ಲಿ ದೇಹಕ್ಕೆ ಒಳ್ಳೆಯದು. ಹಸಿರು ಎಲೆಗಳ ತರಕಾರಿಗಳಲ್ಲಿ ಫೈಬರ್, ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಎ, ಕ್ಯಾಲ್ಸಿಯಂ, ಕಬ್ಬಿಣ, ಫೋಲೇಟ್, ಪೊಟ್ಯಾಸಿಯಮ್ ಇರುತ್ತವೆ. ಅಲ್ಲದೆ, ಇದರಲ್ಲಿರುವ ಫೋಲಿಕ್ ಆಮ್ಲವು ಮೆದುಳು ಮತ್ತು ಬೆನ್ನುಮೂಳೆಯನ್ನು ಬಲಪಡಿಸುತ್ತದೆ.
(4 / 6)
ಹಸಿರು ಎಲೆಗಳ ತರಕಾರಿಗಳು: ಚಳಿಗಾಲದಲ್ಲಿ ತರಕಾರಿಗಳು ಮಾರುಕಟ್ಟೆಯಲ್ಲಿ ಹೇರಳವಾಗಿರುತ್ತವೆ. ವಿಶೇಷವಾಗಿ ಪಾಲಕ್‌ ಮತ್ತು ಮೆಂತ್ಯೆ ಸೊಪ್ಪು ಗರ್ಭಾವಸ್ಥೆಯಲ್ಲಿ ದೇಹಕ್ಕೆ ಒಳ್ಳೆಯದು. ಹಸಿರು ಎಲೆಗಳ ತರಕಾರಿಗಳಲ್ಲಿ ಫೈಬರ್, ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಎ, ಕ್ಯಾಲ್ಸಿಯಂ, ಕಬ್ಬಿಣ, ಫೋಲೇಟ್, ಪೊಟ್ಯಾಸಿಯಮ್ ಇರುತ್ತವೆ. ಅಲ್ಲದೆ, ಇದರಲ್ಲಿರುವ ಫೋಲಿಕ್ ಆಮ್ಲವು ಮೆದುಳು ಮತ್ತು ಬೆನ್ನುಮೂಳೆಯನ್ನು ಬಲಪಡಿಸುತ್ತದೆ.(Freepik)
ಬೇಳೆಕಾಳು: ಧಾನ್ಯಗಳು, ಬಟಾಣಿ ಮತ್ತು ಕಡಲೆಕಾಯಿ ಪ್ರೋಟೀನ್, ಫೈಬರ್, ಖನಿಜ, ಕಬ್ಬಿಣ ಮತ್ತು ಫೈಟೊಕೆಮಿಕಲ್‌ಗಳಲ್ಲಿ ಸಮೃದ್ಧವಾಗಿವೆ. ತಜ್ಞರ ಪ್ರಕಾರ, ಗರ್ಭಾವಸ್ಥೆಯಲ್ಲಿ ಬೇಳೆಕಾಳುಗಳ ನಿಯಮಿತ ಸೇವನೆಯು ಎದೆ ಹಾಲಿನ ಗುಣಮಟ್ಟವನ್ನು ಸುಧಾರಿಸುತ್ತದೆ. ದೇಹವು ಹೆಚ್ಚು ರಕ್ತವನ್ನು ಉತ್ಪಾದಿಸುತ್ತದೆ.
(5 / 6)
ಬೇಳೆಕಾಳು: ಧಾನ್ಯಗಳು, ಬಟಾಣಿ ಮತ್ತು ಕಡಲೆಕಾಯಿ ಪ್ರೋಟೀನ್, ಫೈಬರ್, ಖನಿಜ, ಕಬ್ಬಿಣ ಮತ್ತು ಫೈಟೊಕೆಮಿಕಲ್‌ಗಳಲ್ಲಿ ಸಮೃದ್ಧವಾಗಿವೆ. ತಜ್ಞರ ಪ್ರಕಾರ, ಗರ್ಭಾವಸ್ಥೆಯಲ್ಲಿ ಬೇಳೆಕಾಳುಗಳ ನಿಯಮಿತ ಸೇವನೆಯು ಎದೆ ಹಾಲಿನ ಗುಣಮಟ್ಟವನ್ನು ಸುಧಾರಿಸುತ್ತದೆ. ದೇಹವು ಹೆಚ್ಚು ರಕ್ತವನ್ನು ಉತ್ಪಾದಿಸುತ್ತದೆ.(Freepik)
ಮೀನು: ಸಮುದ್ರದ ಕೆಲ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಜೊತೆಗೆ, ಇದು ಪ್ರತಿರಕ್ಷಣಾ ಕೋಶಗಳನ್ನು ಹೆಚ್ಚಿಸುತ್ತದೆ. ಈ ರೀತಿಯ ಮೀನುಗಳಲ್ಲಿ ಸತು, ಸೆಲೆನಿಯಮ್ ಮತ್ತು ವಿಟಮಿನ್ ಡಿ ಕೂಡ ಇರುತ್ತದೆ. ಗರ್ಭಾವಸ್ಥೆಯಲ್ಲಿ ಮೀನು ತಿನ್ನುವುದು ಮಗುವಿನ ಮೆದುಳಿನ ಬೆಳವಣಿಗೆಯನ್ನು ಸುಧಾರಿಸುತ್ತದೆ.
(6 / 6)
ಮೀನು: ಸಮುದ್ರದ ಕೆಲ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಜೊತೆಗೆ, ಇದು ಪ್ರತಿರಕ್ಷಣಾ ಕೋಶಗಳನ್ನು ಹೆಚ್ಚಿಸುತ್ತದೆ. ಈ ರೀತಿಯ ಮೀನುಗಳಲ್ಲಿ ಸತು, ಸೆಲೆನಿಯಮ್ ಮತ್ತು ವಿಟಮಿನ್ ಡಿ ಕೂಡ ಇರುತ್ತದೆ. ಗರ್ಭಾವಸ್ಥೆಯಲ್ಲಿ ಮೀನು ತಿನ್ನುವುದು ಮಗುವಿನ ಮೆದುಳಿನ ಬೆಳವಣಿಗೆಯನ್ನು ಸುಧಾರಿಸುತ್ತದೆ.(Freepik)

    ಹಂಚಿಕೊಳ್ಳಲು ಲೇಖನಗಳು