logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pm Modi Wishes Rishi Sunak: ರಿಷಿ ಆಂಗ್ಲರ ಪಾಲಿಗೆ ಋಷಿಯಾಗಲಿ: ಮೋದಿ ಸೇರಿದಂತೆ ಜಾಗತಿಕ ಗಣ್ಯರಿಂದ ಬ್ರಿಟನ್‌ ಪ್ರಧಾನಿಗೆ ಅಭಿನಂದನೆ

PM Modi Wishes Rishi Sunak: ರಿಷಿ ಆಂಗ್ಲರ ಪಾಲಿಗೆ ಋಷಿಯಾಗಲಿ: ಮೋದಿ ಸೇರಿದಂತೆ ಜಾಗತಿಕ ಗಣ್ಯರಿಂದ ಬ್ರಿಟನ್‌ ಪ್ರಧಾನಿಗೆ ಅಭಿನಂದನೆ

Oct 25, 2022 06:35 PM IST

ನವದೆಹಲಿ: ಭಾರತೀಯ ಮೂಲದ ರಿಷಿ ಸುನಕ್‌ ಬ್ರಿಟನ್‌ನ ನೂತನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವುದು, ಇಡೀ ವಿಶ್ವವನ್ನು ದಿಗ್ಭ್ರಮೆಗೊಳಿಸಿದೆ. ಸಪ್ತಸಾಗರದಾಚೆಗೂ ಭಾರತೀಯರು ತಮ್ಮ ಪ್ರಭಾವ ಬೀರುತ್ತಿರುವುದನ್ನು ಕಂಡು, ಜಗತ್ತು ಅಚ್ಚರಿಕೊಂಡಿದೆ. ರಿಷಿ ಸುನಕ್‌ ಅವರಿಗೆ ವಿಶ್ವದಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ, ನೂತನ ಬ್ರಿಟನ್‌ ಪ್ರಧಾನಿ ಅವರನ್ನು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.

  • ನವದೆಹಲಿ: ಭಾರತೀಯ ಮೂಲದ ರಿಷಿ ಸುನಕ್‌ ಬ್ರಿಟನ್‌ನ ನೂತನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವುದು, ಇಡೀ ವಿಶ್ವವನ್ನು ದಿಗ್ಭ್ರಮೆಗೊಳಿಸಿದೆ. ಸಪ್ತಸಾಗರದಾಚೆಗೂ ಭಾರತೀಯರು ತಮ್ಮ ಪ್ರಭಾವ ಬೀರುತ್ತಿರುವುದನ್ನು ಕಂಡು, ಜಗತ್ತು ಅಚ್ಚರಿಕೊಂಡಿದೆ. ರಿಷಿ ಸುನಕ್‌ ಅವರಿಗೆ ವಿಶ್ವದಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ, ನೂತನ ಬ್ರಿಟನ್‌ ಪ್ರಧಾನಿ ಅವರನ್ನು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.
ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, "ಬ್ರಿಟನ್‌ ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡ ರಿಷಿ ಸುನಕ್‌ ಅವರಿಗೆ  ಹೃತ್ಪೂರ್ವಕ ಅಭಿನಂದನೆಗಳು. ಜಾಗತಿಕ ಸಮಸ್ಯೆಗಳ ಕುರಿತು ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ. ಅಲ್ಲದೇ ಭಾರತ-ಬ್ರಿಟನ್‌ ನಡುವಿನ ಮಾರ್ಗಸೂಚಿ 2030 ಅನ್ನು ಕಾರ್ಯಗತಗೊಳಿಸಲು ಉತ್ಸುಕನಾಗಿದ್ದೇನೆ. ನಾವು ನಮ್ಮ ಐತಿಹಾಸಿಕ ಸಂಬಂಧಗಳನ್ನು ಆಧುನಿಕ ಪಾಲುದಾರಿಕೆಯಾಗಿ ಪರಿವರ್ತಿಸುವ ಮೂಲಕ, ಭವಿಷ್ಯದತ್ತ ಹೆಜ್ಜೆ ಹಾಕಲಿದ್ದೇವೆ ಎಂಬ ವಿಶ್ವಾಸವಿದೆ. ಬ್ರಿಟನ್‌ ಭಾರತೀಯ ಜನರ 'ಜೀವಂತ ಸೇತುವೆ'ಯಾಗಿರುವ ರಿಷಿ ಸುನಕ್‌ ಅವರಿಗೆ  ದೀಪಾವಳಿಯ ವಿಶೇಷ ಶುಭಾಶಯಗಳು.." ಎಂದು ಹೇಳಿದ್ದಾರೆ.
(1 / 5)
ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, "ಬ್ರಿಟನ್‌ ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡ ರಿಷಿ ಸುನಕ್‌ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಜಾಗತಿಕ ಸಮಸ್ಯೆಗಳ ಕುರಿತು ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ. ಅಲ್ಲದೇ ಭಾರತ-ಬ್ರಿಟನ್‌ ನಡುವಿನ ಮಾರ್ಗಸೂಚಿ 2030 ಅನ್ನು ಕಾರ್ಯಗತಗೊಳಿಸಲು ಉತ್ಸುಕನಾಗಿದ್ದೇನೆ. ನಾವು ನಮ್ಮ ಐತಿಹಾಸಿಕ ಸಂಬಂಧಗಳನ್ನು ಆಧುನಿಕ ಪಾಲುದಾರಿಕೆಯಾಗಿ ಪರಿವರ್ತಿಸುವ ಮೂಲಕ, ಭವಿಷ್ಯದತ್ತ ಹೆಜ್ಜೆ ಹಾಕಲಿದ್ದೇವೆ ಎಂಬ ವಿಶ್ವಾಸವಿದೆ. ಬ್ರಿಟನ್‌ ಭಾರತೀಯ ಜನರ 'ಜೀವಂತ ಸೇತುವೆ'ಯಾಗಿರುವ ರಿಷಿ ಸುನಕ್‌ ಅವರಿಗೆ ದೀಪಾವಳಿಯ ವಿಶೇಷ ಶುಭಾಶಯಗಳು.." ಎಂದು ಹೇಳಿದ್ದಾರೆ.(ANI)
ಭಾರತ-ಬ್ರಿಟನ್‌ ನಡುವಿನ ರಾಜತಾಂತ್ರಿ ಸಂಬಂಧ ಐತಿಹಾಸಿಕ ಘಟ್ಟ ತಲುಪಿರುವ ಈ ಶುಭ ಸಂದರ್ಭದಲ್ಲಿ, ಭಾರತೀಯ ಮೂಲದ ರಿಷಿ ಸುನಕ್‌ ಬ್ರಿಟನ್‌ ಪ್ರಧಾನಿಯಾಗಿರುವುದು ಸಂತಸ ತಂದಿದೆ. ರಿಷಿ ಸುನಕ್‌ ಆಡಳಿತಾವಧಿಯಲ್ಲಿ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ಸಾಮರಿಕ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿ ಎಂದು ಹಾರೈಸುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.
(2 / 5)
ಭಾರತ-ಬ್ರಿಟನ್‌ ನಡುವಿನ ರಾಜತಾಂತ್ರಿ ಸಂಬಂಧ ಐತಿಹಾಸಿಕ ಘಟ್ಟ ತಲುಪಿರುವ ಈ ಶುಭ ಸಂದರ್ಭದಲ್ಲಿ, ಭಾರತೀಯ ಮೂಲದ ರಿಷಿ ಸುನಕ್‌ ಬ್ರಿಟನ್‌ ಪ್ರಧಾನಿಯಾಗಿರುವುದು ಸಂತಸ ತಂದಿದೆ. ರಿಷಿ ಸುನಕ್‌ ಆಡಳಿತಾವಧಿಯಲ್ಲಿ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ಸಾಮರಿಕ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿ ಎಂದು ಹಾರೈಸುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. (AFP)
ಅದೇ ರೀತಿ ಬ್ರಿಟನ್‌ ನೂತನ ಪ್ರಧಾನಿ ರಿಷಿ ಸುನಕ್‌ ಅವರಿಗೆ ಅಭಿನಂದನೆ ತಿಳಿಸಿರುವ ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್‌ ಷರೀಫ್‌, ರಿಷಿ ಸುನಕ್‌ ಆಡಳಿತಾವಧಿಯಲ್ಲಿ ಪಾಕಿಸ್ತಾನ ಹಾಗೂ ಬ್ರಿಟನ್‌ನ ಪಾಲುದಾರಿಕೆ ಇನ್ನಷ್ಟು ಗಟ್ಟಿಗೊಳ್ಳುವ ಭರವಸೆ ಇದೆ ಎಂದು ಹೇಳಿದ್ದಾರೆ.
(3 / 5)
ಅದೇ ರೀತಿ ಬ್ರಿಟನ್‌ ನೂತನ ಪ್ರಧಾನಿ ರಿಷಿ ಸುನಕ್‌ ಅವರಿಗೆ ಅಭಿನಂದನೆ ತಿಳಿಸಿರುವ ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್‌ ಷರೀಫ್‌, ರಿಷಿ ಸುನಕ್‌ ಆಡಳಿತಾವಧಿಯಲ್ಲಿ ಪಾಕಿಸ್ತಾನ ಹಾಗೂ ಬ್ರಿಟನ್‌ನ ಪಾಲುದಾರಿಕೆ ಇನ್ನಷ್ಟು ಗಟ್ಟಿಗೊಳ್ಳುವ ಭರವಸೆ ಇದೆ ಎಂದು ಹೇಳಿದ್ದಾರೆ.(HT_PRINT)
ಹಾಗೆಯೇ ಬ್ರಿಟನ್‌ ನೂತನ ಪ್ರಧಾನಿ ರಿಷಿ ಸುನಕ್‌ ಅವರಿಗೆ ಶುಭಾಶಯ ತಿಳಿಸಿರುವ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬ್ರಿಟನ್‌ನ ಉನ್ನತ ಪದವಿಗೇರಿರುವ ಭಾರತೀಯ ಮೂಲದ ರಿಷಿ ಸುನಕ್‌ ಯಶಸ್ವಿಯಾಗಿ ಕಾರ್ಯಭಾರ ಮಾಡಲಿ ಎಂದು ಹಾರೈಸಿದ್ದಾರೆ.
(4 / 5)
ಹಾಗೆಯೇ ಬ್ರಿಟನ್‌ ನೂತನ ಪ್ರಧಾನಿ ರಿಷಿ ಸುನಕ್‌ ಅವರಿಗೆ ಶುಭಾಶಯ ತಿಳಿಸಿರುವ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬ್ರಿಟನ್‌ನ ಉನ್ನತ ಪದವಿಗೇರಿರುವ ಭಾರತೀಯ ಮೂಲದ ರಿಷಿ ಸುನಕ್‌ ಯಶಸ್ವಿಯಾಗಿ ಕಾರ್ಯಭಾರ ಮಾಡಲಿ ಎಂದು ಹಾರೈಸಿದ್ದಾರೆ.(PTI)
ಅದೇ ರೀತಿ ವಿಶ್ವದ ಹಲವು ನಾಯಕರು ಬ್ರಿಟನ್‌ ನೂತನ ಪ್ರಧಾನಿ ರಿಷಿ ಸುನಕ್‌ ಅವರನ್ನು ಅಭಿನಂದಿಸಿದ್ದು, ಜಾಗತಿಕ ವಿಷಯಗಳಿಗೆ ಸಂಬಂಧಿಸಿದಂತೆ ರಿಷಿ ಸುನಕ್‌ ಅವರೊಂದಿಗೆ ಕೆಲಸ ಮಾಡಲು ಉತ್ಸಕರಾಗಿರುವುದಾಗಿ ಹೇಳಿದ್ದಾರೆ.
(5 / 5)
ಅದೇ ರೀತಿ ವಿಶ್ವದ ಹಲವು ನಾಯಕರು ಬ್ರಿಟನ್‌ ನೂತನ ಪ್ರಧಾನಿ ರಿಷಿ ಸುನಕ್‌ ಅವರನ್ನು ಅಭಿನಂದಿಸಿದ್ದು, ಜಾಗತಿಕ ವಿಷಯಗಳಿಗೆ ಸಂಬಂಧಿಸಿದಂತೆ ರಿಷಿ ಸುನಕ್‌ ಅವರೊಂದಿಗೆ ಕೆಲಸ ಮಾಡಲು ಉತ್ಸಕರಾಗಿರುವುದಾಗಿ ಹೇಳಿದ್ದಾರೆ.(AP)

    ಹಂಚಿಕೊಳ್ಳಲು ಲೇಖನಗಳು