logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rainy Season: ಮಳೆರಾಯನ ಆಗಮನದ ಖುಷಿಯ ನಡುವೆ ಈ ವಿಷಯದ ಬಗ್ಗೆ ಮೈ ಮರೆಯಬೇಡಿ; ನಿರ್ಲಕ್ಷ್ಯ ಸಲ್ಲ, ಇರಲಿ ಸಾಕಷ್ಟು ಮುಂಜಾಗ್ರತೆ

Rainy Season: ಮಳೆರಾಯನ ಆಗಮನದ ಖುಷಿಯ ನಡುವೆ ಈ ವಿಷಯದ ಬಗ್ಗೆ ಮೈ ಮರೆಯಬೇಡಿ; ನಿರ್ಲಕ್ಷ್ಯ ಸಲ್ಲ, ಇರಲಿ ಸಾಕಷ್ಟು ಮುಂಜಾಗ್ರತೆ

Jan 09, 2024 08:11 PM IST

Rainy Season: ಮುಂಗಾರು ಪ್ರಾರಂಭವಾಗಿದೆ. ಕೆಲವೊಂದು ಕಡೆ ಮಳೆ ಕೊರತೆಯಾದರೆ, ಇನ್ನೂ ಕೆಲವೆಡೆ ಸಾಕಷ್ಟು ಮಳೆಯಾಗುತ್ತಿದೆ. ಆದರೆ ವರುಣನ ಆಗಮನದ ಖುಷಿಯ ನಡುವೆ ಈ ತಪ್ಪುಗಳನ್ನು ಖಂಡಿತ ಮಾಡದಿರಿ. ಮಳೆಗಾಲದಲ್ಲಿ ವಿದ್ಯುತ್‌ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಸಂಗತಿಗಳು ಹೀಗಿವೆ ನೋಡಿ. 

  • Rainy Season: ಮುಂಗಾರು ಪ್ರಾರಂಭವಾಗಿದೆ. ಕೆಲವೊಂದು ಕಡೆ ಮಳೆ ಕೊರತೆಯಾದರೆ, ಇನ್ನೂ ಕೆಲವೆಡೆ ಸಾಕಷ್ಟು ಮಳೆಯಾಗುತ್ತಿದೆ. ಆದರೆ ವರುಣನ ಆಗಮನದ ಖುಷಿಯ ನಡುವೆ ಈ ತಪ್ಪುಗಳನ್ನು ಖಂಡಿತ ಮಾಡದಿರಿ. ಮಳೆಗಾಲದಲ್ಲಿ ವಿದ್ಯುತ್‌ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಸಂಗತಿಗಳು ಹೀಗಿವೆ ನೋಡಿ. 
ಮಳೆಗಾಲದಲ್ಲಿ ವಿದ್ಯುತ್ ಪ್ರವಹಿಸುವ ಅಪಾಯ ಹೆಚ್ಚಿರುತ್ತದೆ. ಆ ಕಾರಣಕ್ಕೆ ವಿದ್ಯುತ್‌ ತಂತಿಗಳ ಮೇಲೆ ಅಥವಾ ತಂತಿಯ ಸಮೀಪ ಒದ್ದೆ ಬಟ್ಟೆಗಳನ್ನು ಒಣಗಿಸಬೇಡಿ. 
(1 / 8)
ಮಳೆಗಾಲದಲ್ಲಿ ವಿದ್ಯುತ್ ಪ್ರವಹಿಸುವ ಅಪಾಯ ಹೆಚ್ಚಿರುತ್ತದೆ. ಆ ಕಾರಣಕ್ಕೆ ವಿದ್ಯುತ್‌ ತಂತಿಗಳ ಮೇಲೆ ಅಥವಾ ತಂತಿಯ ಸಮೀಪ ಒದ್ದೆ ಬಟ್ಟೆಗಳನ್ನು ಒಣಗಿಸಬೇಡಿ. (Gettyimages)
ಸ್ನಾನಗೃಹಗಳು, ಶೌಚಾಲಯಗಳು ಹಾಗೂ ಇತರೆಡೆ ಒದ್ದೆ ಕೈಗಳಿಂದ ಸ್ವಿಚ್‌ಗಳನ್ನು ಮುಟ್ಟಬೇಡಿ. ಮನೆ ಮತ್ತು ಶೌಚಾಲಯಗಳನ್ನು ಸಾಧ್ಯವಾದಷ್ಟು ತೇವಾಂಶದಿಂದ ಮುಕ್ತವಾಗಿಡಲು ಕಾಳಜಿ ವಹಿಸಬೇಕು. ಸ್ವಿಚ್‌ ಬೋರ್ಡ್‌ಗಳ ಮೇಲೆ ನೀರು ಸೋರದಂತೆ ನೋಡಿಕೊಳ್ಳಿ. 
(2 / 8)
ಸ್ನಾನಗೃಹಗಳು, ಶೌಚಾಲಯಗಳು ಹಾಗೂ ಇತರೆಡೆ ಒದ್ದೆ ಕೈಗಳಿಂದ ಸ್ವಿಚ್‌ಗಳನ್ನು ಮುಟ್ಟಬೇಡಿ. ಮನೆ ಮತ್ತು ಶೌಚಾಲಯಗಳನ್ನು ಸಾಧ್ಯವಾದಷ್ಟು ತೇವಾಂಶದಿಂದ ಮುಕ್ತವಾಗಿಡಲು ಕಾಳಜಿ ವಹಿಸಬೇಕು. ಸ್ವಿಚ್‌ ಬೋರ್ಡ್‌ಗಳ ಮೇಲೆ ನೀರು ಸೋರದಂತೆ ನೋಡಿಕೊಳ್ಳಿ. (Gettyimages)
ದನ, ಕರುವಿನಂತಹ ಸಾಕುಪ್ರಾಣಿಗಳನ್ನು ವಿದ್ಯುತ್ ಕಂಬ ಅಥವಾ ತಂತಿಗಳಿಗೆ ಕಟ್ಟಬೇಡಿ
(3 / 8)
ದನ, ಕರುವಿನಂತಹ ಸಾಕುಪ್ರಾಣಿಗಳನ್ನು ವಿದ್ಯುತ್ ಕಂಬ ಅಥವಾ ತಂತಿಗಳಿಗೆ ಕಟ್ಟಬೇಡಿ(Gettyimages)
ಮಂಟಪಗಳು ಮತ್ತು ಜಾಹೀರಾತು ಫಲಕಗಳನ್ನು ನಿರ್ಮಿಸಲು ವಿದ್ಯುತ್ ಕಂಬಗಳನ್ನು ಬಳಸಬೇಡಿ. 
(4 / 8)
ಮಂಟಪಗಳು ಮತ್ತು ಜಾಹೀರಾತು ಫಲಕಗಳನ್ನು ನಿರ್ಮಿಸಲು ವಿದ್ಯುತ್ ಕಂಬಗಳನ್ನು ಬಳಸಬೇಡಿ. (Gettyimages)
ಟ್ರಾನ್ಸ್‌ಫಾರ್ಮರ್‌ಗಳು, ವಿದ್ಯುತ್ ಬಾಕ್ಸ್‌ಗಳು ಮತ್ತು ಕಂಬಗಳ ಹತ್ತಿರ ಹೋಗಬೇಡಿ ಅಥವಾ ಸ್ಪರ್ಶಿಸಬೇಡಿ.  
(5 / 8)
ಟ್ರಾನ್ಸ್‌ಫಾರ್ಮರ್‌ಗಳು, ವಿದ್ಯುತ್ ಬಾಕ್ಸ್‌ಗಳು ಮತ್ತು ಕಂಬಗಳ ಹತ್ತಿರ ಹೋಗಬೇಡಿ ಅಥವಾ ಸ್ಪರ್ಶಿಸಬೇಡಿ.  (Gettyimages)
ಸಿಡಿಲು ಮತ್ತು ಗುಡುಗುಗಳ ಸಮಯದಲ್ಲಿ ವಿದ್ಯುತ್ ಉಪಕರಣಗಳು ಮತ್ತು ಸೆಲ್ ಫೋನ್‌ಗಳನ್ನು ಬಳಸಬೇಡಿ.
(6 / 8)
ಸಿಡಿಲು ಮತ್ತು ಗುಡುಗುಗಳ ಸಮಯದಲ್ಲಿ ವಿದ್ಯುತ್ ಉಪಕರಣಗಳು ಮತ್ತು ಸೆಲ್ ಫೋನ್‌ಗಳನ್ನು ಬಳಸಬೇಡಿ.(Gettyimages)
ಗುಡುಗು ಮತ್ತು ಮಿಂಚಿನ ಸಮಯದಲ್ಲಿ ತೆರೆದ ಕಿಟಕಿಗಳು ಅಥವಾ ಬಾಗಿಲುಗಳ ಬಳಿ ನಿಲ್ಲಬೇಡಿ.
(7 / 8)
ಗುಡುಗು ಮತ್ತು ಮಿಂಚಿನ ಸಮಯದಲ್ಲಿ ತೆರೆದ ಕಿಟಕಿಗಳು ಅಥವಾ ಬಾಗಿಲುಗಳ ಬಳಿ ನಿಲ್ಲಬೇಡಿ.(Gettyimages)
ಶಾರ್ಟ್ ಸರ್ಕ್ಯೂಟ್ ಅಥವಾ ಬೆಂಕಿಯ ಸಂದರ್ಭದಲ್ಲಿ, ತಕ್ಷಣ ವಿದ್ಯುತ್ ಸರಬರಾಜನ್ನು ಆಫ್ ಮಾಡಿ. 
(8 / 8)
ಶಾರ್ಟ್ ಸರ್ಕ್ಯೂಟ್ ಅಥವಾ ಬೆಂಕಿಯ ಸಂದರ್ಭದಲ್ಲಿ, ತಕ್ಷಣ ವಿದ್ಯುತ್ ಸರಬರಾಜನ್ನು ಆಫ್ ಮಾಡಿ. (Gettyimages)

    ಹಂಚಿಕೊಳ್ಳಲು ಲೇಖನಗಳು