logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆರ್​ಸಿಬಿ ಹೆಸರು ಬದಲಾಯ್ತಷ್ಟೆ, ಹಣೆಬರಹವಲ್ಲ; ಫಾಫ್ ಪಡೆಯನ್ನು ಕ್ರೂರವಾಗಿ ಟೀಕಿಸಿದ ಭಾರತದ ಮಾಜಿ ಕ್ರಿಕೆಟಿಗ

ಆರ್​ಸಿಬಿ ಹೆಸರು ಬದಲಾಯ್ತಷ್ಟೆ, ಹಣೆಬರಹವಲ್ಲ; ಫಾಫ್ ಪಡೆಯನ್ನು ಕ್ರೂರವಾಗಿ ಟೀಕಿಸಿದ ಭಾರತದ ಮಾಜಿ ಕ್ರಿಕೆಟಿಗ

Apr 08, 2024 08:03 AM IST

Aakash chopra on RCB Lost: ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ  ಅವರು ಆರ್​​ಸಿಬಿ ತಂಡವನ್ನು ಟೀಕಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರು ಬದಲಾದರೂ ಹಣೆಬರಹ ಬದಲಾಗಲಿಲ್ಲ ಎಂದು ಹೇಳಿದ್ದಾರೆ.

  • Aakash chopra on RCB Lost: ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ  ಅವರು ಆರ್​​ಸಿಬಿ ತಂಡವನ್ನು ಟೀಕಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರು ಬದಲಾದರೂ ಹಣೆಬರಹ ಬದಲಾಗಲಿಲ್ಲ ಎಂದು ಹೇಳಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲನುಭವಿಸಿದ ಟೀಕೆಗಳು ಸಂಖ್ಯೆ ಹೆಚ್ಚಾಗುತ್ತಿದೆ. ಅಭಿಮಾನಿಗಳ ಜೊತೆಗೆ ಮಾಜಿ ಕ್ರಿಕೆಟರ್​​ಗಳು, ಕ್ರಿಕೆಟ್​ ಎಕ್ಸ್​ಫರ್ಟ್​​ಗಳು ಆರ್​​ಸಿಬಿ ಮ್ಯಾನೇಜ್​ಮೆಂಟ್​ ವಿರುದ್ಧ ಕಿಡಿಕಾರಿದ್ದಾರೆ.
(1 / 9)

ಅದರ ಸಾಲಿಗೆ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಕಾಶ್ ಚೋಪ್ರಾ ಕೂಡ ಸೇರಿದ್ದಾರೆ. ಟೀಕಿಸುವುದರ ಜೊತೆಗೆ ಆರ್​ಸಿಬಿ ಕುರಿತು ಕ್ರೂರ ಹೇಳಿಕೆಯೊಂದನ್ನು ನೀಡಿದ್ದಾರೆ. ಆರ್​​ಸಿಬಿಗೆ ಹೆಸರು ಬದಲಾದರೂ ಹಣೆಬರಹ ಬದಲಾಗಲಿಲ್ಲ ಎಂದು ಹೇಳಿದ್ದಾರೆ.
(2 / 9)
ಅದರ ಸಾಲಿಗೆ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಕಾಶ್ ಚೋಪ್ರಾ ಕೂಡ ಸೇರಿದ್ದಾರೆ. ಟೀಕಿಸುವುದರ ಜೊತೆಗೆ ಆರ್​ಸಿಬಿ ಕುರಿತು ಕ್ರೂರ ಹೇಳಿಕೆಯೊಂದನ್ನು ನೀಡಿದ್ದಾರೆ. ಆರ್​​ಸಿಬಿಗೆ ಹೆಸರು ಬದಲಾದರೂ ಹಣೆಬರಹ ಬದಲಾಗಲಿಲ್ಲ ಎಂದು ಹೇಳಿದ್ದಾರೆ.
ಆರ್​ಆರ್​ ವಿರುದ್ಧ ಆರ್​ಸಿಬಿ ಮೊದಲು ಬ್ಯಾಟಿಂಗ್ ನಡೆಸಿತು. ವಿರಾಟ್ ಕೊಹ್ಲಿ 72 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸರ್​ ಸಹಿತ 113 ರನ್ ಗಳಿಸಿದರು. ಪರಿಣಾಮ ಆರ್​​ಸಿಬಿ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು.
(3 / 9)
ಆರ್​ಆರ್​ ವಿರುದ್ಧ ಆರ್​ಸಿಬಿ ಮೊದಲು ಬ್ಯಾಟಿಂಗ್ ನಡೆಸಿತು. ವಿರಾಟ್ ಕೊಹ್ಲಿ 72 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸರ್​ ಸಹಿತ 113 ರನ್ ಗಳಿಸಿದರು. ಪರಿಣಾಮ ಆರ್​​ಸಿಬಿ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು.(AP)
ಈ ಗುರಿ ಹಿಂಬಾಲಿಸಿದ ರಾಜಸ್ಥಾನ್ ಸುಲಭ ಜಯ ಸಾಧಿಸಿತು. ಜೋಸ್ ಬಟ್ಲರ್​ ಅವರ ಅದ್ಭುತ ಶತಕ (100) ಮತ್ತು ಸಂಜು ಸ್ಯಾಮ್ಸನ್​ ಅವರ ಆಕರ್ಷಕ (69) ಅರ್ಧಶತಕದ ಸಹಾಯದಿಂದ 19.1 ಓವರ್​​ಗಳಲ್ಲೇ ಗೆಲುವಿನ ನಗೆ ಬೀರಿತು. ಈ ಜೈಪುರದಲ್ಲಿ ನಡೆಯಿತು.
(4 / 9)
ಈ ಗುರಿ ಹಿಂಬಾಲಿಸಿದ ರಾಜಸ್ಥಾನ್ ಸುಲಭ ಜಯ ಸಾಧಿಸಿತು. ಜೋಸ್ ಬಟ್ಲರ್​ ಅವರ ಅದ್ಭುತ ಶತಕ (100) ಮತ್ತು ಸಂಜು ಸ್ಯಾಮ್ಸನ್​ ಅವರ ಆಕರ್ಷಕ (69) ಅರ್ಧಶತಕದ ಸಹಾಯದಿಂದ 19.1 ಓವರ್​​ಗಳಲ್ಲೇ ಗೆಲುವಿನ ನಗೆ ಬೀರಿತು. ಈ ಜೈಪುರದಲ್ಲಿ ನಡೆಯಿತು.(AP)
ಆರ್​ಸಿಬಿ ಸೋಲಿನ ಬಳಿಕ ಚೋಪ್ರಾ, ತಂಡದ ಪ್ರದರ್ಶನವನ್ನು ಟೀಕಿಸಿದ್ದಾರೆ. ಟೂರ್ನಿಯು ರೋಚಕತೆಯಿಂದ ಸಾಗುತ್ತಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಬೆಂಗಳೂರು ತಂಡದಲ್ಲಿ ಅದು ಕಾಣುತ್ತಿಲ್ಲ. ಅಲ್ಲಿ ಹೋರಾಟವೇ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.
(5 / 9)
ಆರ್​ಸಿಬಿ ಸೋಲಿನ ಬಳಿಕ ಚೋಪ್ರಾ, ತಂಡದ ಪ್ರದರ್ಶನವನ್ನು ಟೀಕಿಸಿದ್ದಾರೆ. ಟೂರ್ನಿಯು ರೋಚಕತೆಯಿಂದ ಸಾಗುತ್ತಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಬೆಂಗಳೂರು ತಂಡದಲ್ಲಿ ಅದು ಕಾಣುತ್ತಿಲ್ಲ. ಅಲ್ಲಿ ಹೋರಾಟವೇ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.(ANI)
ಕೊಹ್ಲಿ ರನ್ ಗಳಿಸಬೇಕೆಂದು ನಾವು ಬಯಸುತ್ತಿದ್ದೇವೆ, ಅದಕ್ಕೆ ತಕ್ಕಂತೆ ಅವರು ಆಡುತ್ತಿದ್ದಾರೆ. ಆದರೆ ಉಳಿದವರು ವಿಫಲರಾಗುತ್ತಿದ್ದಾರೆ. ಹಾಗಾಗಿ ಎಷ್ಟೇ ಸ್ಕೋರ್ ಮಾಡಿದರೂ ಅದು ಸಾಕಾಗುತ್ತಿಲ್ಲ ಎಂದು ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ.
(6 / 9)
ಕೊಹ್ಲಿ ರನ್ ಗಳಿಸಬೇಕೆಂದು ನಾವು ಬಯಸುತ್ತಿದ್ದೇವೆ, ಅದಕ್ಕೆ ತಕ್ಕಂತೆ ಅವರು ಆಡುತ್ತಿದ್ದಾರೆ. ಆದರೆ ಉಳಿದವರು ವಿಫಲರಾಗುತ್ತಿದ್ದಾರೆ. ಹಾಗಾಗಿ ಎಷ್ಟೇ ಸ್ಕೋರ್ ಮಾಡಿದರೂ ಅದು ಸಾಕಾಗುತ್ತಿಲ್ಲ ಎಂದು ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ.(ANI)
ಆರ್​​ಸಿಬಿ ತಂಡಕ್ಕೆ ಏನಾಗುತ್ತಿದೆ. ಆಡಿರುವ 5ರಲ್ಲಿ 4 ಸೋಲು, 1 ಗೆಲುವು ಸಾಧಿಸಿದ್ದಾರೆ. ಅವರ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಆರ್​ಸಿಬಿ ತನ್ನ ಹೆಸರನ್ನು ಬದಲಿಸಿಕೊಂಡಿದ್ದಾರೆ. ಆದರೆ ತಂಡದ ಹಣೆಬರಹ ಮಾತ್ರ ಬದಲಾಗಿಲ್ಲ ಎಂದು ಭಾರತದ ಮಾಜಿ ಓಪನರ್ ಹೇಳಿದ್ದಾರೆ. 
(7 / 9)
ಆರ್​​ಸಿಬಿ ತಂಡಕ್ಕೆ ಏನಾಗುತ್ತಿದೆ. ಆಡಿರುವ 5ರಲ್ಲಿ 4 ಸೋಲು, 1 ಗೆಲುವು ಸಾಧಿಸಿದ್ದಾರೆ. ಅವರ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಆರ್​ಸಿಬಿ ತನ್ನ ಹೆಸರನ್ನು ಬದಲಿಸಿಕೊಂಡಿದ್ದಾರೆ. ಆದರೆ ತಂಡದ ಹಣೆಬರಹ ಮಾತ್ರ ಬದಲಾಗಿಲ್ಲ ಎಂದು ಭಾರತದ ಮಾಜಿ ಓಪನರ್ ಹೇಳಿದ್ದಾರೆ. (AFP)
ಕೊಹ್ಲಿ ನಿಧಾನವಾಗಿ ಬ್ಯಾಟ್ ಬೀಸಿದರು ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಸಮಸ್ಯೆ ಅದಲ್ಲ. ಮತ್ತೊಂದು ಯಾರೂ ಆಡುತ್ತಿಲ್ಲ. ಎಷ್ಟು ಸಲ ಒಬ್ಬರೇ ಆಡಬೇಕಾಗುತ್ತದೆ. ಉಳಿದವರು ಕ್ರೀಸ್​ಗೆ ಬಂದು ವಾಪಸ್ ಹೋಗಬೇಕೇ ಎಂದು ಆಕಾಶ್ ಚೋಪ್ರಾ ಪ್ರಶ್ನಿಸಿದ್ದಾರೆ.
(8 / 9)

ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
(9 / 9)
ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

    ಹಂಚಿಕೊಳ್ಳಲು ಲೇಖನಗಳು