logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rcb Playoff Scenario: ಆರ್​​ಸಿಬಿ 6ರಲ್ಲಿ 5 ಸೋತರೂ ಪ್ಲೇಆಫ್ ಪ್ರವೇಶಿಸಲು ಇನ್ನೂ ಇದೆ ಅವಕಾಶ; ಹೀಗಿದೆ ​ಲೆಕ್ಕಾಚಾರ

RCB Playoff Scenario: ಆರ್​​ಸಿಬಿ 6ರಲ್ಲಿ 5 ಸೋತರೂ ಪ್ಲೇಆಫ್ ಪ್ರವೇಶಿಸಲು ಇನ್ನೂ ಇದೆ ಅವಕಾಶ; ಹೀಗಿದೆ ​ಲೆಕ್ಕಾಚಾರ

Apr 12, 2024 07:27 PM IST

RCB Playoff Scenario: 17ನೇ ಆವೃತ್ತಿಯ ಐಪಿಎಲ್​ನ 26ನೇ ಪಂದ್ಯದಲ್ಲಿ 6ರಲ್ಲಿ 5 ಪಂದ್ಯ ಸೋತರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇಆಫ್ ಪ್ರವೇಶಿಸಲು ಇನ್ನೂ ಅವಕಾಶ ಇದೆ. ಪ್ಲೇಆಫ್ ಲೆಕ್ಕಾಚಾರ ಹೇಗಿದೆ ಎಂಬುದನ್ನು ಈ ಮುಂದೆ ನೋಡೋಣ.

  • RCB Playoff Scenario: 17ನೇ ಆವೃತ್ತಿಯ ಐಪಿಎಲ್​ನ 26ನೇ ಪಂದ್ಯದಲ್ಲಿ 6ರಲ್ಲಿ 5 ಪಂದ್ಯ ಸೋತರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇಆಫ್ ಪ್ರವೇಶಿಸಲು ಇನ್ನೂ ಅವಕಾಶ ಇದೆ. ಪ್ಲೇಆಫ್ ಲೆಕ್ಕಾಚಾರ ಹೇಗಿದೆ ಎಂಬುದನ್ನು ಈ ಮುಂದೆ ನೋಡೋಣ.
ಮುಂಬೈ ಇಂಡಿಯನ್ಸ್ ವಿರುದ್ಧ ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್​ಸಿಬಿ ಪ್ರವೇಶಿಸಲು ಹರಸಾಹಸ ಪಡಬೇಕಾಗಿದೆ.
(1 / 9)
ಮುಂಬೈ ಇಂಡಿಯನ್ಸ್ ವಿರುದ್ಧ ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್​ಸಿಬಿ ಪ್ರವೇಶಿಸಲು ಹರಸಾಹಸ ಪಡಬೇಕಾಗಿದೆ.
ಆರ್​ಸಿಬಿ ಪ್ರಸ್ತುತ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 5ರಲ್ಲಿ ಸೋತು ಒಂದರಲ್ಲಿ ಮಾತ್ರ ಜಯಿಸಿದೆ. ಎರಡು ಅಂಕ ಸಂಪಾದಿಸಿರುವ ಆರ್​ಸಿಬಿ, 9ನೇ ಸ್ಥಾನದಲ್ಲಿದೆ. ಹಾಗಾಗಿ ಬೆಂಗಳೂರು ಪ್ಲೇಆಫ್ ಪ್ರವೇಶಿಸುವುದು ಬಹುತೇಕ ಕಷ್ಟ ಎಂದು ಹೇಳಲಾಗುತ್ತಿದೆ.
(2 / 9)
ಆರ್​ಸಿಬಿ ಪ್ರಸ್ತುತ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 5ರಲ್ಲಿ ಸೋತು ಒಂದರಲ್ಲಿ ಮಾತ್ರ ಜಯಿಸಿದೆ. ಎರಡು ಅಂಕ ಸಂಪಾದಿಸಿರುವ ಆರ್​ಸಿಬಿ, 9ನೇ ಸ್ಥಾನದಲ್ಲಿದೆ. ಹಾಗಾಗಿ ಬೆಂಗಳೂರು ಪ್ಲೇಆಫ್ ಪ್ರವೇಶಿಸುವುದು ಬಹುತೇಕ ಕಷ್ಟ ಎಂದು ಹೇಳಲಾಗುತ್ತಿದೆ.(ANI)
ಹಾಗಾದರೆ ಆರ್​ಸಿಬಿ ಅಗ್ರ 4ರಲ್ಲಿ ಸ್ಥಾನ ಪಡೆಯಲು ಮುಂದೇನು ಮಾಡಬೇಕು? ಪ್ಲೇಆಫ್​ಗೆ ಅರ್ಹತೆ ಪಡೆಯಲು ಅವಕಾಶ ಎಷ್ಟಿದೆ? ಇಲ್ಲಿದೆ ನೋಡಿ ವಿವರ.
(3 / 9)
ಹಾಗಾದರೆ ಆರ್​ಸಿಬಿ ಅಗ್ರ 4ರಲ್ಲಿ ಸ್ಥಾನ ಪಡೆಯಲು ಮುಂದೇನು ಮಾಡಬೇಕು? ಪ್ಲೇಆಫ್​ಗೆ ಅರ್ಹತೆ ಪಡೆಯಲು ಅವಕಾಶ ಎಷ್ಟಿದೆ? ಇಲ್ಲಿದೆ ನೋಡಿ ವಿವರ.(ANI)
ಲೀಗ್​ ಹಂತದಲ್ಲಿ 14 ಪಂದ್ಯಗಳನ್ನಾಡುವ ಆರ್​​ಸಿಬಿ, ಉಳಿದ 8ರಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಆದರೆ ಲೆಕ್ಕಾಚಾರ ನೋಡಿದರೆ, ರಾಯಲ್ ಚಾಲೆಂಜರ್ಸ್ ಪ್ಲೇ ಆಫ್ ಕನಸು ಇನ್ನು ಜೀವಂತವಾಗಿರುವುದು ವಿಶೇಷ.
(4 / 9)
ಲೀಗ್​ ಹಂತದಲ್ಲಿ 14 ಪಂದ್ಯಗಳನ್ನಾಡುವ ಆರ್​​ಸಿಬಿ, ಉಳಿದ 8ರಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಆದರೆ ಲೆಕ್ಕಾಚಾರ ನೋಡಿದರೆ, ರಾಯಲ್ ಚಾಲೆಂಜರ್ಸ್ ಪ್ಲೇ ಆಫ್ ಕನಸು ಇನ್ನು ಜೀವಂತವಾಗಿರುವುದು ವಿಶೇಷ.(PTI)
ಫಾಫ್ ಡು ಪ್ಲೆಸಿಸ್ ಪಡೆ ಪ್ಲೇ ಆಫ್ ಪ್ರವೇಶಿಸಬೇಕೆಂದರೆ ತನ್ನ ಮುಂದಿನ 8 ಪಂದ್ಯಗಳಲ್ಲಿ 7ರಲ್ಲಿ ಜಯಿಸಲೇಬೇಕು. ಆಗ ಮಾತ್ರ 16 ಅಂಕ ಸಂಪಾದಿಸಿ ಅಗ್ರ 4ರಲ್ಲಿ ಸ್ಥಾನ ಪಡೆಯಲಿದೆ. ಈಗಾಗಲೇ ಒಂದು ಪಂದ್ಯದಲ್ಲಿ ಗೆದ್ದಿರುವ ಬೆಂಗಳೂರು, ಉಳಿದ 8ರಲ್ಲಿ 7 ಗೆದ್ದರೆ, 8 ಜಯದೊಂದಿಗೆ 16 ಅಂಕ ಪಡೆಯಲಿದೆ.
(5 / 9)
ಫಾಫ್ ಡು ಪ್ಲೆಸಿಸ್ ಪಡೆ ಪ್ಲೇ ಆಫ್ ಪ್ರವೇಶಿಸಬೇಕೆಂದರೆ ತನ್ನ ಮುಂದಿನ 8 ಪಂದ್ಯಗಳಲ್ಲಿ 7ರಲ್ಲಿ ಜಯಿಸಲೇಬೇಕು. ಆಗ ಮಾತ್ರ 16 ಅಂಕ ಸಂಪಾದಿಸಿ ಅಗ್ರ 4ರಲ್ಲಿ ಸ್ಥಾನ ಪಡೆಯಲಿದೆ. ಈಗಾಗಲೇ ಒಂದು ಪಂದ್ಯದಲ್ಲಿ ಗೆದ್ದಿರುವ ಬೆಂಗಳೂರು, ಉಳಿದ 8ರಲ್ಲಿ 7 ಗೆದ್ದರೆ, 8 ಜಯದೊಂದಿಗೆ 16 ಅಂಕ ಪಡೆಯಲಿದೆ.(ANI)
ಒಂದು ವೇಳೆ 8 ಪಂದ್ಯಗಳನ್ನು ಸತತವಾಗಿ ಗೆದ್ದರೆ, ಒಟ್ಟು 18 ಅಂಕಗಳೊಂದಿಗೆ ಸುಲಭವಾಗಿ ಪ್ಲೇಆಫ್ ಪ್ರವೇಶಿಸಲಿದೆ. ಆದರೆ ಒಂದು ಪಂದ್ಯ ಸೋತರೂ 16 ಅಂಕಗಳೊಂದಿಗೆ ಪ್ಲೇ ಆಫ್​ಗೆ ಲಗ್ಗೆ ಇಡುವ ಅವಕಾಶ ಇದೆ. ಆದರೆ, ನೆಟ್​ ರನ್​ ರೇಟ್​ ಉತ್ತಮವಾಗಿಟ್ಟುಕೊಳ್ಳಬೇಕು.
(6 / 9)
ಒಂದು ವೇಳೆ 8 ಪಂದ್ಯಗಳನ್ನು ಸತತವಾಗಿ ಗೆದ್ದರೆ, ಒಟ್ಟು 18 ಅಂಕಗಳೊಂದಿಗೆ ಸುಲಭವಾಗಿ ಪ್ಲೇಆಫ್ ಪ್ರವೇಶಿಸಲಿದೆ. ಆದರೆ ಒಂದು ಪಂದ್ಯ ಸೋತರೂ 16 ಅಂಕಗಳೊಂದಿಗೆ ಪ್ಲೇ ಆಫ್​ಗೆ ಲಗ್ಗೆ ಇಡುವ ಅವಕಾಶ ಇದೆ. ಆದರೆ, ನೆಟ್​ ರನ್​ ರೇಟ್​ ಉತ್ತಮವಾಗಿಟ್ಟುಕೊಳ್ಳಬೇಕು.(PTI)
ಉಳಿದ 8ರಲ್ಲಿ ಎರಡು ಪಂದ್ಯ ಸೋತರೆ, ಪ್ಲೇಆಫ್ ಹಾದಿ ಮತ್ತಷ್ಟು ದುರ್ಗಮವಾಗಲಿದೆ. ಆದರೂ ಒಂದು ಅವಕಾಶ ಇರಲಿದೆ. 14 ಅಂಕ ಪಡೆದರೂ ಉಳಿದ ಪಂದ್ಯಗಳ ಫಲಿತಾಂಶ ಆರ್​​ಸಿಬಿ, ಮೇಲೆ ಪರಿಣಾಮ ಬೀರುತ್ತದೆ. ತಂಡದ ನೆಟ್ ರನ್​ರೇಟ್​ ಬಹಳ ಮುಖ್ಯ ಪಾತ್ರವಹಿಸುತ್ತದೆ.
(7 / 9)
ಉಳಿದ 8ರಲ್ಲಿ ಎರಡು ಪಂದ್ಯ ಸೋತರೆ, ಪ್ಲೇಆಫ್ ಹಾದಿ ಮತ್ತಷ್ಟು ದುರ್ಗಮವಾಗಲಿದೆ. ಆದರೂ ಒಂದು ಅವಕಾಶ ಇರಲಿದೆ. 14 ಅಂಕ ಪಡೆದರೂ ಉಳಿದ ಪಂದ್ಯಗಳ ಫಲಿತಾಂಶ ಆರ್​​ಸಿಬಿ, ಮೇಲೆ ಪರಿಣಾಮ ಬೀರುತ್ತದೆ. ತಂಡದ ನೆಟ್ ರನ್​ರೇಟ್​ ಬಹಳ ಮುಖ್ಯ ಪಾತ್ರವಹಿಸುತ್ತದೆ.(PTI)
2022 ಮತ್ತು 2023ರಲ್ಲಿ 16 ಅಂಕ ಪಡೆದಿದ್ದ ತಂಡಗಳೇ ಪ್ಲೇ ಆಫ್ ಪ್ರವೇಶಿಸಿದ್ದವು. 2022ರಲ್ಲಿ ಆರ್​ಸಿಬಿ ಕೂಡ ಅಷ್ಟೇ ಅಂಕ ಪಡೆದು ನಾಲ್ಕು ತಂಡಗಳಲ್ಲಿ ಅವಕಾಶ ಪಡೆದಿತ್ತು. 2023ರಲ್ಲಿ ಮುಂಬೈ ಕೂಡ 16 ಅಂಕ ಪಡೆದು ಪ್ಲೇ ಆಫ್ ಆಡಿತ್ತು.
(8 / 9)
2022 ಮತ್ತು 2023ರಲ್ಲಿ 16 ಅಂಕ ಪಡೆದಿದ್ದ ತಂಡಗಳೇ ಪ್ಲೇ ಆಫ್ ಪ್ರವೇಶಿಸಿದ್ದವು. 2022ರಲ್ಲಿ ಆರ್​ಸಿಬಿ ಕೂಡ ಅಷ್ಟೇ ಅಂಕ ಪಡೆದು ನಾಲ್ಕು ತಂಡಗಳಲ್ಲಿ ಅವಕಾಶ ಪಡೆದಿತ್ತು. 2023ರಲ್ಲಿ ಮುಂಬೈ ಕೂಡ 16 ಅಂಕ ಪಡೆದು ಪ್ಲೇ ಆಫ್ ಆಡಿತ್ತು.(AFP)
ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
(9 / 9)
ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

    ಹಂಚಿಕೊಳ್ಳಲು ಲೇಖನಗಳು