logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಿಸಿ ಅನ್ನದ ಜತೆಗೆ ಹೊಸ ಟೇಸ್ಟ್‌ ಬಯಸಿದರೆ, ಅಗಸೆ ಬೀಜದ ಚಟ್ನಿ ಟ್ರೈ ಮಾಡಿ; ಇದು ನಿಮ್ಮ ಆರೋಗ್ಯಕ್ಕೂ ಬೆಸ್ಟ್‌ ಫುಡ್‌

ಬಿಸಿ ಅನ್ನದ ಜತೆಗೆ ಹೊಸ ಟೇಸ್ಟ್‌ ಬಯಸಿದರೆ, ಅಗಸೆ ಬೀಜದ ಚಟ್ನಿ ಟ್ರೈ ಮಾಡಿ; ಇದು ನಿಮ್ಮ ಆರೋಗ್ಯಕ್ಕೂ ಬೆಸ್ಟ್‌ ಫುಡ್‌

Oct 28, 2023 08:00 AM IST

Flax Seed Chutney Powder: ಉತ್ತರ ಕರ್ನಾಟಕ ಭಾಗದಲ್ಲಿ ತರಹೇವಾರಿ ಚಟ್ನಿ ಪುಡಿಗಳೇ ಹೈಲೈಟ್. ಬಿಸಿ ಬಿಸಿ ಅನ್ನಕ್ಕೂ ಸೈ, ಖಡಕ್‌ ರೊಟ್ಟಿಗೂ ಈ ಚಟ್ನಿಗಳು ರುಚಿ ಹೆಚ್ಚಿಸುತ್ತವೆ. ಆ ಪೈಕಿ ನಾವಿಲ್ಲಿ ಅಗಸೆ ಬೀಜದ ಚಟ್ನಿ ಮಾಡುವ ಬಗೆಯನ್ನು ತಿಳಿಯೋಣ.

  • Flax Seed Chutney Powder: ಉತ್ತರ ಕರ್ನಾಟಕ ಭಾಗದಲ್ಲಿ ತರಹೇವಾರಿ ಚಟ್ನಿ ಪುಡಿಗಳೇ ಹೈಲೈಟ್. ಬಿಸಿ ಬಿಸಿ ಅನ್ನಕ್ಕೂ ಸೈ, ಖಡಕ್‌ ರೊಟ್ಟಿಗೂ ಈ ಚಟ್ನಿಗಳು ರುಚಿ ಹೆಚ್ಚಿಸುತ್ತವೆ. ಆ ಪೈಕಿ ನಾವಿಲ್ಲಿ ಅಗಸೆ ಬೀಜದ ಚಟ್ನಿ ಮಾಡುವ ಬಗೆಯನ್ನು ತಿಳಿಯೋಣ.
ಮೊದಲಿಗೆ ಅಗಸೆ ಬೀಜದ ಚಟ್ನಿ ಪುಡಿಗೆ ಯಾವೆಲ್ಲ ಪದಾರ್ಥಗಳು ಬೇಕು ಎಂಬುದನ್ನು ನೋಡೋಣ. ಅಗಸಿ ಬೀಜ, ಬೆಳ್ಳುಳ್ಳಿ, ಕರಿಬೇವು, ಜೀರಿಗೆ, ಉಪ್ಪು, ಕಾರದ ಪುಡಿ, ಕೋತಂಬರಿ, ಬೆಲ್ಲ ಈ ಪದಾರ್ಥಗಳನ್ನು ಸಿದ್ಧಪಡಿಸಿಕೊಳ್ಳಿ. 
(1 / 7)

ನಿಮಗೆ ಚಟ್ನಿಯ ಪ್ರಮಾಣ ಎಷ್ಟು ಎಂಬುದನ್ನು ಮೊದಲು ತಿಳಿದುಕೊಳ್ಳಿ. ಅದಕ್ಕೆ ತಕ್ಕಂತೆ ಅಗಸೆ ಬೀಜವನ್ನು ಬಳಸಿಕೊಳ್ಳಿ. 
(2 / 7)

ಕಾಲು ಕೆಜಿ ಅಗಸೆ ಬೀಜವನ್ನು ಮೊದಲಿಗೆ ಒಂದು ಬಾಣಲೆಗೆ ಹಾಕಿ ಚೆನ್ನಾಗಿ ಫ್ರೈ ಮಾಡಿ. ಸ್ವಲ್ಪ ಬಿಸಿ ಆಗುವವರೆಗೂ, ಚಟ್‌ ಪಟ್‌  ಸದ್ದು ಬರೋವರೆಗೂ ಹುರಿದುಕೊಳ್ಳಿ. 
(3 / 7)

ಅದಾದ ಬಳಿಕ ಹಾಗೆ ಹುರಿದ ಅಗಸೆ ಕಾಳುಗಳನ್ನು ಮೊದಲಿಗೆ ಮಿಕ್ಸರ್‌ನಲ್ಲಿ ಚೆನ್ನಾಗಿ ಹುಡಿ ಹುಡಿ ಹದದಲ್ಲಿ ಪುಡಿ ಮಾಡಿಕೊಳ್ಳಿ. 
(4 / 7)

ಬಳಿಕ ಅದೇ ಕಾಲು ಕೆಜಿ ಅಗಸೆ ಪುಡಿಗೆ 50 ಗ್ರಾಂ ಖಾರದ ಪುಡಿ ಬೇಕು. ನೇರವಾಗಿ ಖಾರದ ಪುಡಿ ಬಳಸಬಹುದು. ಅಥವಾ ಕೆಂಪು ಮೆಣಸಿನಕಾಯಿ ಹುರಿದು ಅದನ್ನೂ ಬಳಸಬಹುದು. (ನಿಮಗೆ ಖಾರದ ಅವಶ್ಯಕತೆ ಎಷ್ಟಿದೆಯೋ ಅಷ್ಟು ಬಳಸಿಕೊಳ್ಳಿ)
(5 / 7)

ಅಗಸೆ ಬೀಜದ ಪುಡಿಗೆ, 50 ಗ್ರಾಂ ಖಾರ ಹಾಕಿ. ಅದಾದ ಬಳಿಕ 15ರಿಂದ 20 ಬೆಳ್ಳುಳ್ಳಿ ಎಸಳು, ಒಂದಷ್ಟು ಕರಿಬೇವು, ಎರಡು ಟೇಬಲ್‌ ಸ್ಪೂನ್‌ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ಕೋತಂಬರಿ, ರುಚಿಗೆ ತಕ್ಕಷ್ಟು ಬೆಲ್ಲ ಹಾಕಿ ಮಿಕ್ಸರ್‌ ಮಾಡಿ. 
(6 / 7)

ಹೀಗೆ ಚೆನ್ನಾಗಿ ಪುಡಿಯಾದ ಅಗಸೆ ಚಟ್ನಿಯನ್ನು ಒಂದು ತಿಂಗಳ ವರೆಗೂ ಬಳಕೆ ಮಾಡಬಹುದು. ಬಿಸಿ ಬಿಸಿ ಅನ್ನ, ತುಪ್ಪದ ಜತೆಗೂ ಬಳಸಬಹುದು. ದೋಸೆ, ಇಡ್ಲಿ, ಜೋಳದ ರೊಟ್ಟಿ, ಚಪಾತಿ ಒಟ್ಟಿನಲ್ಲಿ ಎಲ್ಲದಕ್ಕೂ ಇದು ರುಚಿಕಟ್ಟು. ಆರೋಗ್ಯಕ್ಕೂ ಇದು ಒಳ್ಳೆಯದು. 
(7 / 7)

    ಹಂಚಿಕೊಳ್ಳಲು ಲೇಖನಗಳು