logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಾಮಾಯಣದಲ್ಲಿ ಉಲ್ಲೇಖವಾಗಿರುವ ಪ್ರಮುಖ ಊರುಗಳು ಇಂದು ಹೀಗಿವೆ, ಇಲ್ಲಿಗೆ ಭೇಟಿ ನೀಡಿದ್ರೆ ಏನೆಲ್ಲಾ ನೋಡಬಹುದು? ಫೋಟೊಸ್‌

ರಾಮಾಯಣದಲ್ಲಿ ಉಲ್ಲೇಖವಾಗಿರುವ ಪ್ರಮುಖ ಊರುಗಳು ಇಂದು ಹೀಗಿವೆ, ಇಲ್ಲಿಗೆ ಭೇಟಿ ನೀಡಿದ್ರೆ ಏನೆಲ್ಲಾ ನೋಡಬಹುದು? ಫೋಟೊಸ್‌

Dec 30, 2023 03:05 PM IST

ರಾಮಯಣ ಮಹಾಕಾವ್ಯದಲ್ಲಿ ಉಲ್ಲೇಖವಾಗಿರುವ ಪ್ರಮುಖ ಊರುಗಳು ಇಂದು ಹೇಗಿವೆ, ಇಲ್ಲಿಗೆ ಭೇಟಿ ನೀಡಿದರೆ ಏನೆಲ್ಲಾ ನೋಡಬಹುದು, ರಾಮಾಯಣಕ್ಕೆ ಸಂಬಂಧಿಸಿದ ಊರುಗಳು ಭಾರತ ಮಾತ್ರವಲ್ಲದೇ ಯಾವೆಲ್ಲಾ ದೇಶಗಳಲ್ಲಿವೆ ಎಂಬುದರ ಚಿತ್ರ ಸಹಿತ ವಿವರ ಇಲ್ಲಿದೆ. 

  • ರಾಮಯಣ ಮಹಾಕಾವ್ಯದಲ್ಲಿ ಉಲ್ಲೇಖವಾಗಿರುವ ಪ್ರಮುಖ ಊರುಗಳು ಇಂದು ಹೇಗಿವೆ, ಇಲ್ಲಿಗೆ ಭೇಟಿ ನೀಡಿದರೆ ಏನೆಲ್ಲಾ ನೋಡಬಹುದು, ರಾಮಾಯಣಕ್ಕೆ ಸಂಬಂಧಿಸಿದ ಊರುಗಳು ಭಾರತ ಮಾತ್ರವಲ್ಲದೇ ಯಾವೆಲ್ಲಾ ದೇಶಗಳಲ್ಲಿವೆ ಎಂಬುದರ ಚಿತ್ರ ಸಹಿತ ವಿವರ ಇಲ್ಲಿದೆ. 
ಭಾರತದ ಮಹಾಕಾವ್ಯಗಳಲ್ಲಿ ರಾಮಾಯಣವು ಒಂದು. ರಾಮಯಣಕ್ಕೆ ಹಿಂದೂ ಧರ್ಮದಲ್ಲಿ ಬಹಳ ಮಹತ್ವವಿದೆ. ಇದು ಖಂಡಿತ ಒಂದು ಗ್ರಂಥವಲ್ಲ. ಭಗವಾನ್‌ ಶ್ರೀರಾಮನ ಬದುಕಿನ ಚರಿತೆ. ಸಂಪೂರ್ಣ ರಾಮಾಯಣದಲ್ಲಿ ರಾಮ, ಸೀತೆ ಹಾಗೂ ಲಕ್ಷಣ ಮುಖ್ಯಪಾತ್ರಧಾರಿಗಳು. ರಾಮ ಸೀತಾ ಲಕ್ಷಣರಿಗೆ ಹಿಂದೂ ಧರ್ಮದಲ್ಲಿ ದೇವರ ಸ್ಥಾನ ನೀಡಲಾಗಿದೆ. ಶ್ರೀ ರಾಮ ಬದುಕಿನ ಚರಿತೆಯು ಭಾರತದ ಉದ್ದಗಲಕ್ಕೂ ಹರಡಿದೆ. 
(1 / 12)
ಭಾರತದ ಮಹಾಕಾವ್ಯಗಳಲ್ಲಿ ರಾಮಾಯಣವು ಒಂದು. ರಾಮಯಣಕ್ಕೆ ಹಿಂದೂ ಧರ್ಮದಲ್ಲಿ ಬಹಳ ಮಹತ್ವವಿದೆ. ಇದು ಖಂಡಿತ ಒಂದು ಗ್ರಂಥವಲ್ಲ. ಭಗವಾನ್‌ ಶ್ರೀರಾಮನ ಬದುಕಿನ ಚರಿತೆ. ಸಂಪೂರ್ಣ ರಾಮಾಯಣದಲ್ಲಿ ರಾಮ, ಸೀತೆ ಹಾಗೂ ಲಕ್ಷಣ ಮುಖ್ಯಪಾತ್ರಧಾರಿಗಳು. ರಾಮ ಸೀತಾ ಲಕ್ಷಣರಿಗೆ ಹಿಂದೂ ಧರ್ಮದಲ್ಲಿ ದೇವರ ಸ್ಥಾನ ನೀಡಲಾಗಿದೆ. ಶ್ರೀ ರಾಮ ಬದುಕಿನ ಚರಿತೆಯು ಭಾರತದ ಉದ್ದಗಲಕ್ಕೂ ಹರಡಿದೆ. 
ಅಯೋಧ್ಯೆ ಶ್ರೀರಾಮ ಹುಟ್ಟಿದ ಸ್ಥಳ. ಈಗ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಹೊತ್ತಿನಲ್ಲಿ ರಾಮಾಯಣದಲ್ಲಿ ಉಲ್ಲೇಖವಾಗಿರುವ ಭಾರತದ ಕೆಲವು ಪ್ರದೇಶಗಳು ಈಗ ಹೀಗಿವೆ, ಅಲ್ಲಿಗೆ ಭೇಟಿ ನೀಡಿದರೆ ನಾವು ಏನೆಲ್ಲಾ ನೋಡಬಹುದು ಎಂಬುದರ ಸಚಿತ್ರ ವರದಿ ಇಲ್ಲಿದೆ
(2 / 12)
ಅಯೋಧ್ಯೆ ಶ್ರೀರಾಮ ಹುಟ್ಟಿದ ಸ್ಥಳ. ಈಗ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಹೊತ್ತಿನಲ್ಲಿ ರಾಮಾಯಣದಲ್ಲಿ ಉಲ್ಲೇಖವಾಗಿರುವ ಭಾರತದ ಕೆಲವು ಪ್ರದೇಶಗಳು ಈಗ ಹೀಗಿವೆ, ಅಲ್ಲಿಗೆ ಭೇಟಿ ನೀಡಿದರೆ ನಾವು ಏನೆಲ್ಲಾ ನೋಡಬಹುದು ಎಂಬುದರ ಸಚಿತ್ರ ವರದಿ ಇಲ್ಲಿದೆ(HT File Photo )
ಅಯೋಧ್ಯೆ: ಉತ್ತರಪ್ರದೇಶದಲ್ಲಿರುವ ಅಯೋಧ್ಯೆ ರಾಮನ ಜನ್ಮಸ್ಥಳ. ಇದು ನಗರವು ಸರಯೂ ನದಿಯ ದಡದಲ್ಲಿದೆ. ರಾಮನ ತಂದೆ ದಶರಥ ಮಹಾರಾಜ ಆಳಿದ ಕೋಸಲ ಸಾಮ್ರಾಜ್ಯದ ರಾಜಧಾನಿ ಅಯೋಧ್ಯೆ ಎಂದು ಹೇಳಲಾಗುತ್ತದೆ. ಹಲವು ವರ್ಷಗಳಿಂದ ಅಯೋಧ್ಯೆ ವಿಚಾರದಲ್ಲಿ ಸಾಕಷ್ಟು ವಿವಾದಗಳು ನಡೆದಿದ್ದವು. ಇದೀಗ ಇಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಅಯೋಧ್ಯೆಗೆ ಭೇಟಿ ನೀಡಿದವರು ಸೀತಾ ಕಿ ರಸೋಯಿ, ಕನಕ ಭವನ, ನಾಗೇಶ್ವರ ನಾಥ ದೇವಸ್ಥಾನ, ರಾಮ್‌ಕೋಟ್‌, ಹನುಮಾನ್‌ ಗರ್ಹಿ, ದಶರಥ ಮಹಲ್‌ ಮತ್ತು ಸರಯು ನದಿ ಘಾಟ್‌ ಪ್ರದೇಶಗಳನ್ನು ನೋಡಬಹುದಾಗಿದೆ. 
(3 / 12)
ಅಯೋಧ್ಯೆ: ಉತ್ತರಪ್ರದೇಶದಲ್ಲಿರುವ ಅಯೋಧ್ಯೆ ರಾಮನ ಜನ್ಮಸ್ಥಳ. ಇದು ನಗರವು ಸರಯೂ ನದಿಯ ದಡದಲ್ಲಿದೆ. ರಾಮನ ತಂದೆ ದಶರಥ ಮಹಾರಾಜ ಆಳಿದ ಕೋಸಲ ಸಾಮ್ರಾಜ್ಯದ ರಾಜಧಾನಿ ಅಯೋಧ್ಯೆ ಎಂದು ಹೇಳಲಾಗುತ್ತದೆ. ಹಲವು ವರ್ಷಗಳಿಂದ ಅಯೋಧ್ಯೆ ವಿಚಾರದಲ್ಲಿ ಸಾಕಷ್ಟು ವಿವಾದಗಳು ನಡೆದಿದ್ದವು. ಇದೀಗ ಇಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಅಯೋಧ್ಯೆಗೆ ಭೇಟಿ ನೀಡಿದವರು ಸೀತಾ ಕಿ ರಸೋಯಿ, ಕನಕ ಭವನ, ನಾಗೇಶ್ವರ ನಾಥ ದೇವಸ್ಥಾನ, ರಾಮ್‌ಕೋಟ್‌, ಹನುಮಾನ್‌ ಗರ್ಹಿ, ದಶರಥ ಮಹಲ್‌ ಮತ್ತು ಸರಯು ನದಿ ಘಾಟ್‌ ಪ್ರದೇಶಗಳನ್ನು ನೋಡಬಹುದಾಗಿದೆ. 
ಪ್ರಯಾಗರಾಜ್‌, ಉತ್ತರಪ್ರದೇಶ: ಪ್ರಯಾಗರಾಜ್‌ (ಈ ಹಿಂದೆ ಅಲಹಾಬಾದ್‌ ಎಂದು ಕರೆಯಲಾಗುತ್ತಿತ್ತು) ನಲ್ಲಿ ಭಾರತದ ಮೂರು ಪವಿತ್ರ ನದಿಗಳು ಸಂಗಮವಾಗುತ್ತವೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಇಲ್ಲಿ ಸಂಧಿಸುತ್ತವೆ. ದಂತಕಥೆಯ ಪ್ರಕಾರ ರಾಮ, ಸೀತೆ ಹಾಗೂ ಲಕ್ಷಣ ತಮ್ಮ 14 ವನವಾಸವನ್ನು ಪೂರೈಸಲು ಚಿತ್ರಕೂಟಕ್ಕೆ ತೆರಳುವ ಮೊದಲು ಸಮಯ ಕಳೆಯುವ ಸ್ಥಳವಾಗಿದೆ, 
(4 / 12)
ಪ್ರಯಾಗರಾಜ್‌, ಉತ್ತರಪ್ರದೇಶ: ಪ್ರಯಾಗರಾಜ್‌ (ಈ ಹಿಂದೆ ಅಲಹಾಬಾದ್‌ ಎಂದು ಕರೆಯಲಾಗುತ್ತಿತ್ತು) ನಲ್ಲಿ ಭಾರತದ ಮೂರು ಪವಿತ್ರ ನದಿಗಳು ಸಂಗಮವಾಗುತ್ತವೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಇಲ್ಲಿ ಸಂಧಿಸುತ್ತವೆ. ದಂತಕಥೆಯ ಪ್ರಕಾರ ರಾಮ, ಸೀತೆ ಹಾಗೂ ಲಕ್ಷಣ ತಮ್ಮ 14 ವನವಾಸವನ್ನು ಪೂರೈಸಲು ಚಿತ್ರಕೂಟಕ್ಕೆ ತೆರಳುವ ಮೊದಲು ಸಮಯ ಕಳೆಯುವ ಸ್ಥಳವಾಗಿದೆ, (Travel News)
ಜನಕಪುರ, ನೇಪಾಳ: ಜನಕಪುರವು ಸೀತೆಯ ಜನ್ಮಸ್ಥಳ. ಸದ್ಯ ಈ ಜಾಗ ನೇಪಾಳದ ರಾಜಧಾನಿಯಾದ ಕಠ್ಮಂಡುವಿನಿಂದ 90 ಕಿಲೋಮೀಟರ್‌ ದೂರದಲ್ಲಿದೆ. ಸೀತೆಯು ಮಿಥಿಲಾ ಸಾಮ್ರಾಜ್ಯದ ರಾಜ ಜನಕನ ಮಗಳು. ಜನಕ ಮಹಾರಾಜನಿಗೆ ಸೀತೆಯು ಹೊಲದಲ್ಲಿ ಸಿಕ್ಕಿರುತ್ತಾಳೆ ಎಂದು ಪುರಾಣ ಕಾವ್ಯಗಳು ಹೇಳುತ್ತವೆ. ಆ ಕಾರಣಕ್ಕೆ ಅವಳನ್ನು ಜಾನಕಿ ಎಂದು ಕರೆಯಲಾಗುತ್ತದೆ. ಅಲ್ಲದೆ, ಶ್ರೀರಾಮನು ಸ್ವಯಂವರದಲ್ಲಿ ಸೀತೆಯನ್ನು ವರಿಸಿದ ಜಾಗ ಜನಕಪುರ. ಈ ನಗರವು ಜಾನಕಿ ಮಾತಾ ಮಂದಿರದ ನೆಲೆಯಾಗಿ ಪ್ರಸಿದ್ಧಿ ಪಡೆದಿದೆ. 
(5 / 12)
ಜನಕಪುರ, ನೇಪಾಳ: ಜನಕಪುರವು ಸೀತೆಯ ಜನ್ಮಸ್ಥಳ. ಸದ್ಯ ಈ ಜಾಗ ನೇಪಾಳದ ರಾಜಧಾನಿಯಾದ ಕಠ್ಮಂಡುವಿನಿಂದ 90 ಕಿಲೋಮೀಟರ್‌ ದೂರದಲ್ಲಿದೆ. ಸೀತೆಯು ಮಿಥಿಲಾ ಸಾಮ್ರಾಜ್ಯದ ರಾಜ ಜನಕನ ಮಗಳು. ಜನಕ ಮಹಾರಾಜನಿಗೆ ಸೀತೆಯು ಹೊಲದಲ್ಲಿ ಸಿಕ್ಕಿರುತ್ತಾಳೆ ಎಂದು ಪುರಾಣ ಕಾವ್ಯಗಳು ಹೇಳುತ್ತವೆ. ಆ ಕಾರಣಕ್ಕೆ ಅವಳನ್ನು ಜಾನಕಿ ಎಂದು ಕರೆಯಲಾಗುತ್ತದೆ. ಅಲ್ಲದೆ, ಶ್ರೀರಾಮನು ಸ್ವಯಂವರದಲ್ಲಿ ಸೀತೆಯನ್ನು ವರಿಸಿದ ಜಾಗ ಜನಕಪುರ. ಈ ನಗರವು ಜಾನಕಿ ಮಾತಾ ಮಂದಿರದ ನೆಲೆಯಾಗಿ ಪ್ರಸಿದ್ಧಿ ಪಡೆದಿದೆ. (HT File Photo )
ಚಿತ್ರಕೂಟ, ಮಧ್ಯಪ್ರದೇಶ: ಚಿತ್ರಕೂಟವು ಮಧ್ಯಪ್ರದೇಶದಲ್ಲಿದೆ. ವನವಾಸದ ಸಮಯದಲ್ಲಿ ರಾಮ, ಸೀತಾ ಹಾಗೂ ಲಕ್ಷಣರು ಇಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಅಲ್ಲದೆ ಭರತನು ರಾಮನಲ್ಲಿಗೆ ಬಂದು ರಾಜ್ಯಕ್ಕೆ ಮರಳುವಂತೆ ವಿನಂತಿಸಿದ್ದು, ರಾಮನ ಬಳಿ ಚಪ್ಪಲಿಯನ್ನು ಬಿಚ್ಚಿಕೊಡು ಅದನ್ನು ಸಿಂಹಾಸನದಲ್ಲಿ ಇರಿಸುತ್ತೇನೆ ಎಂದು ಹೇಳಿದ್ದು ಎಲ್ಲವೂ ಈ ಜಾಗದಲ್ಲಿಯೇ. ಇಲ್ಲಿಗೆ ಹೋದರೆ ರಾಮಘಾಟ್‌, ಹನುಮಾನ್‌ ಧಾರಾ, ಜಾನಕಿಕುಂಡ್‌ಗಳನ್ನು ನೋಡಬಹುದು. 
(6 / 12)
ಚಿತ್ರಕೂಟ, ಮಧ್ಯಪ್ರದೇಶ: ಚಿತ್ರಕೂಟವು ಮಧ್ಯಪ್ರದೇಶದಲ್ಲಿದೆ. ವನವಾಸದ ಸಮಯದಲ್ಲಿ ರಾಮ, ಸೀತಾ ಹಾಗೂ ಲಕ್ಷಣರು ಇಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಅಲ್ಲದೆ ಭರತನು ರಾಮನಲ್ಲಿಗೆ ಬಂದು ರಾಜ್ಯಕ್ಕೆ ಮರಳುವಂತೆ ವಿನಂತಿಸಿದ್ದು, ರಾಮನ ಬಳಿ ಚಪ್ಪಲಿಯನ್ನು ಬಿಚ್ಚಿಕೊಡು ಅದನ್ನು ಸಿಂಹಾಸನದಲ್ಲಿ ಇರಿಸುತ್ತೇನೆ ಎಂದು ಹೇಳಿದ್ದು ಎಲ್ಲವೂ ಈ ಜಾಗದಲ್ಲಿಯೇ. ಇಲ್ಲಿಗೆ ಹೋದರೆ ರಾಮಘಾಟ್‌, ಹನುಮಾನ್‌ ಧಾರಾ, ಜಾನಕಿಕುಂಡ್‌ಗಳನ್ನು ನೋಡಬಹುದು. (HT File Photo )
ದಂಡಕಾರಣ್ಯ, ಛತ್ತೀಸ್‌ಗಢ : ದಂಡಕಾರಣ್ಯವು ಛತ್ತೀಸ್‌ಗಢದ ಪ್ರಸಿದ್ಧ ಐತಿಹಾಸಿಕ ತಾಣವಾಗಿದೆ. ಈ ಜಾಗವು ಬಹಳಷ್ಟು ಜನರಿಗೆ ಪರಿಚಿತವಾಗಿಲ್ಲ. ದಂಡಕ ಎಂದರೆ ಶಿಕ್ಷೆ ಹಾಗೂ ಅರಣ್ಯ ಎಂದರೆ ಶಿಕ್ಷೆಯ ವನ ಎಂಬ ಅರ್ಥವಾಗಿದೆ. ರಾಮಾಯಣದ ಪ್ರಕಾರ ದಂಡಕಾರಣ್ಯವು ದಂಡಕ ಎಂಬ ರಾಕ್ಷಸನು ವಾಸಿಸುತ್ತಿದ್ದ ಸ್ಥಳವಾಗಿದೆ. 
(7 / 12)
ದಂಡಕಾರಣ್ಯ, ಛತ್ತೀಸ್‌ಗಢ : ದಂಡಕಾರಣ್ಯವು ಛತ್ತೀಸ್‌ಗಢದ ಪ್ರಸಿದ್ಧ ಐತಿಹಾಸಿಕ ತಾಣವಾಗಿದೆ. ಈ ಜಾಗವು ಬಹಳಷ್ಟು ಜನರಿಗೆ ಪರಿಚಿತವಾಗಿಲ್ಲ. ದಂಡಕ ಎಂದರೆ ಶಿಕ್ಷೆ ಹಾಗೂ ಅರಣ್ಯ ಎಂದರೆ ಶಿಕ್ಷೆಯ ವನ ಎಂಬ ಅರ್ಥವಾಗಿದೆ. ರಾಮಾಯಣದ ಪ್ರಕಾರ ದಂಡಕಾರಣ್ಯವು ದಂಡಕ ಎಂಬ ರಾಕ್ಷಸನು ವಾಸಿಸುತ್ತಿದ್ದ ಸ್ಥಳವಾಗಿದೆ. (Quora)
ಪಂಚವಟಿ, ಮಹಾರಾಷ್ಟ್ರ: ಪಂಚವಟಿಯನ್ನು ಈಗ ನಾಸಿಕ್‌ ಎಂದು ಕರೆಯಲಾಗುತ್ತದೆ. ಇದು ಮಹಾರಾಷ್ಟ್ರದಲ್ಲಿದೆ. ರಾಮ, ಸೀತೆ ಮತ್ತು ಲಕ್ಷ್ಮಣರ ಜೀವನವನ್ನು ಬದಲಾಯಿಸುವಲ್ಲಿ ಈ ಸ್ಥಳವು ನಿರ್ಣಾಯಕ ಪಾತ್ರವನ್ನು ವಹಿಸಿದೆ, ಏಕೆಂದರೆ ಕುಖ್ಯಾತ ಶೂರ್ಪಣಖಿ ಘಟನೆ ನಡೆದಿದ್ದು, ಇಲ್ಲಿಯೇ ಎಂದು ಹೇಳಲಾಗುತ್ತದೆ. 
(8 / 12)
ಪಂಚವಟಿ, ಮಹಾರಾಷ್ಟ್ರ: ಪಂಚವಟಿಯನ್ನು ಈಗ ನಾಸಿಕ್‌ ಎಂದು ಕರೆಯಲಾಗುತ್ತದೆ. ಇದು ಮಹಾರಾಷ್ಟ್ರದಲ್ಲಿದೆ. ರಾಮ, ಸೀತೆ ಮತ್ತು ಲಕ್ಷ್ಮಣರ ಜೀವನವನ್ನು ಬದಲಾಯಿಸುವಲ್ಲಿ ಈ ಸ್ಥಳವು ನಿರ್ಣಾಯಕ ಪಾತ್ರವನ್ನು ವಹಿಸಿದೆ, ಏಕೆಂದರೆ ಕುಖ್ಯಾತ ಶೂರ್ಪಣಖಿ ಘಟನೆ ನಡೆದಿದ್ದು, ಇಲ್ಲಿಯೇ ಎಂದು ಹೇಳಲಾಗುತ್ತದೆ. (Times Now )
ಅಶೋಕವನ, ಶ್ರೀಲಂಕಾ: ಶೀಲಂಕಾದಲ್ಲಿರುವ ಅಶೋಕ ವಾಟಿಕಾವನ್ನು ಸೀತೆಯನ್ನು ಅಪಹರಿಸಿ ಇರಿಸಿದ ಜಾಗ. ಈ ಜಾಗಕ್ಕೆ ರಾಮಾಯಣದಲ್ಲಿ ಉಲ್ಲೇಖವಾಗಿರುವ ಎಲ್ಲಾ ಜಾಗಕ್ಕಿಂತ ಹೆಚ್ಚು ಜನರು ಭೇಟಿ ನೀಡಿದ್ದಾರೆ. 
(9 / 12)
ಅಶೋಕವನ, ಶ್ರೀಲಂಕಾ: ಶೀಲಂಕಾದಲ್ಲಿರುವ ಅಶೋಕ ವಾಟಿಕಾವನ್ನು ಸೀತೆಯನ್ನು ಅಪಹರಿಸಿ ಇರಿಸಿದ ಜಾಗ. ಈ ಜಾಗಕ್ಕೆ ರಾಮಾಯಣದಲ್ಲಿ ಉಲ್ಲೇಖವಾಗಿರುವ ಎಲ್ಲಾ ಜಾಗಕ್ಕಿಂತ ಹೆಚ್ಚು ಜನರು ಭೇಟಿ ನೀಡಿದ್ದಾರೆ. (Hindu Janajagruti Samiti )
ಲೇಪಾಕ್ಷಿ, ಆಂಧ್ರಪ್ರದೇಶ: ಲೇಪಾಕ್ಷಿಯು  ರಾಮಾಯಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಸಿದ್ಧ ತಾಣವಾಗಿದೆ. ಈ ಜಾಗದಲ್ಲಿ ಜಟಾಯು ರಾವಣನಿಂದ ಸೀತೆಯನ್ನು ರಕ್ಷಿಸಲು ಹೋರಾಟ ಮಾಡುತ್ತಾನೆ. ಆದರೆ ಈ ಯುದ್ಧದಲ್ಲಿ ರಾವಣನು ಜಟಾಯುವನ್ನು ಸಾಯಿಸುತ್ತಾನೆ. ಇಲ್ಲಿ ಸುಂದರ ಲೇಪಾಕ್ಷಿ ದೇವಾಲಯ ಹಾಗೂ ಏಕಶಿಲಾ ನಂದಿ ವಿಗ್ರಹವನ್ನು ನೋಡಬಹುದಾಗಿದೆ. 
(10 / 12)
ಲೇಪಾಕ್ಷಿ, ಆಂಧ್ರಪ್ರದೇಶ: ಲೇಪಾಕ್ಷಿಯು  ರಾಮಾಯಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಸಿದ್ಧ ತಾಣವಾಗಿದೆ. ಈ ಜಾಗದಲ್ಲಿ ಜಟಾಯು ರಾವಣನಿಂದ ಸೀತೆಯನ್ನು ರಕ್ಷಿಸಲು ಹೋರಾಟ ಮಾಡುತ್ತಾನೆ. ಆದರೆ ಈ ಯುದ್ಧದಲ್ಲಿ ರಾವಣನು ಜಟಾಯುವನ್ನು ಸಾಯಿಸುತ್ತಾನೆ. ಇಲ್ಲಿ ಸುಂದರ ಲೇಪಾಕ್ಷಿ ದೇವಾಲಯ ಹಾಗೂ ಏಕಶಿಲಾ ನಂದಿ ವಿಗ್ರಹವನ್ನು ನೋಡಬಹುದಾಗಿದೆ. (Newsbharati)
ರಾಮೇಶ್ವರಂ ತಮಿಳುನಾಡು: ರಾಮಾಯಣದಲ್ಲಿ ತಮಿಳುನಾಡಿನ ರಾಮೇಶ್ವರಂಗೂ ಬಹಳ ಪ್ರಮುಖ್ಯವಿದೆ. ಇದು ರಾಮನ ವಾನರ ಸೈನ್ಯವು ಲಂಕೆಯನ್ನು ತಲುಪಲು ರಾಮ ಸೇತುವೆಯನ್ನು ನಿರ್ಮಿಸಿದ ಸ್ಥಳವಾಗಿದೆ. ಈ ಸ್ಥಳದಲ್ಲಿ ರಾಮನು ತನ್ನ ಲಂಕಾ ಪ್ರಯಾಣಕ್ಕೂ ಆರಂಭದಲ್ಲಿ ಶಿವನನ್ನು ಪ್ರಾರ್ಥಿಸುತ್ತಾನೆ, ಅಲ್ಲದೆ ಯುದ್ಧದಿಂದ ಹಿಂದಿರುಗಿ ಬಂದ ನಂತರ ತನ್ನ ಎಲ್ಲಾ ಪಾಪಗಳನ್ನು ತೊಡೆದು ಹಾಕಲು ಆ ಸ್ಥಳದಲ್ಲಿ ಶಿವಲಿಂಗವನ್ನು ಸ್ಥಾಪಿಸುತ್ತಾನೆ. ಇಂದು ಪಂಬನ್ ದ್ವೀಪದಲ್ಲಿರುವ ರಾಮೇಶ್ವರಂ ತನ್ನ ಸುಂದರವಾದ ರಾಮನಾಥಸ್ವಾಮಿ ದೇವಾಲಯ, ರಾಮೇಶ್ವರಂ ದೇವಾಲಯ ಮತ್ತು ಪಂಬನ್ ಸೇತುವೆಗೆ ಹೆಸರುವಾಸಿಯಾಗಿದೆ.
(11 / 12)
ರಾಮೇಶ್ವರಂ ತಮಿಳುನಾಡು: ರಾಮಾಯಣದಲ್ಲಿ ತಮಿಳುನಾಡಿನ ರಾಮೇಶ್ವರಂಗೂ ಬಹಳ ಪ್ರಮುಖ್ಯವಿದೆ. ಇದು ರಾಮನ ವಾನರ ಸೈನ್ಯವು ಲಂಕೆಯನ್ನು ತಲುಪಲು ರಾಮ ಸೇತುವೆಯನ್ನು ನಿರ್ಮಿಸಿದ ಸ್ಥಳವಾಗಿದೆ. ಈ ಸ್ಥಳದಲ್ಲಿ ರಾಮನು ತನ್ನ ಲಂಕಾ ಪ್ರಯಾಣಕ್ಕೂ ಆರಂಭದಲ್ಲಿ ಶಿವನನ್ನು ಪ್ರಾರ್ಥಿಸುತ್ತಾನೆ, ಅಲ್ಲದೆ ಯುದ್ಧದಿಂದ ಹಿಂದಿರುಗಿ ಬಂದ ನಂತರ ತನ್ನ ಎಲ್ಲಾ ಪಾಪಗಳನ್ನು ತೊಡೆದು ಹಾಕಲು ಆ ಸ್ಥಳದಲ್ಲಿ ಶಿವಲಿಂಗವನ್ನು ಸ್ಥಾಪಿಸುತ್ತಾನೆ. ಇಂದು ಪಂಬನ್ ದ್ವೀಪದಲ್ಲಿರುವ ರಾಮೇಶ್ವರಂ ತನ್ನ ಸುಂದರವಾದ ರಾಮನಾಥಸ್ವಾಮಿ ದೇವಾಲಯ, ರಾಮೇಶ್ವರಂ ದೇವಾಲಯ ಮತ್ತು ಪಂಬನ್ ಸೇತುವೆಗೆ ಹೆಸರುವಾಸಿಯಾಗಿದೆ.(HT File Photo )
ತಲೈಮನ್ನಾರ್‌, ಶ್ರೀಲಂಕಾ: ಶ್ರೀಲಂಕಾದ ತಲೈಮನ್ನಾರ್ ತಮಿಳುನಾಡಿನ ರಾಮಸೇತುವನ್ನು ಲಂಕಾಕ್ಕೆ ಸಂಪರ್ಕಿಸುವ ತಾಣವಾಗಿದೆ.ಈ ಗ್ರಾಮವು ಯುದ್ಧ ಪ್ರಾರಂಭವಾಗುವ ಮೊದಲು ಶ್ರೀಲಂಕಾದಲ್ಲಿ ರಾಮ ಮತ್ತು ಅವನ ಸೈನ್ಯದ ಮೊದಲ ನಿಲ್ದಾಣವಾಗಿತ್ತು. ಅಲ್ಲದೆ ಇದು ರಾಮನು ರಾವಣನನ್ನು ಕೊಂದ ಸ್ಥಳವಾಗಿದೆ. ಇಂದು ಈ ಸ್ಥಳವು ಸುಂದರವಾದ ಮನ್ನಾರ್ ದ್ವೀಪ ಮತ್ತು ಕೋಟೆ ಮತ್ತು ಆಡಮ್ಸ್ ಸೇತುವೆಗೆ ಹೆಸರುವಾಸಿಯಾಗಿದೆ.
(12 / 12)
ತಲೈಮನ್ನಾರ್‌, ಶ್ರೀಲಂಕಾ: ಶ್ರೀಲಂಕಾದ ತಲೈಮನ್ನಾರ್ ತಮಿಳುನಾಡಿನ ರಾಮಸೇತುವನ್ನು ಲಂಕಾಕ್ಕೆ ಸಂಪರ್ಕಿಸುವ ತಾಣವಾಗಿದೆ.ಈ ಗ್ರಾಮವು ಯುದ್ಧ ಪ್ರಾರಂಭವಾಗುವ ಮೊದಲು ಶ್ರೀಲಂಕಾದಲ್ಲಿ ರಾಮ ಮತ್ತು ಅವನ ಸೈನ್ಯದ ಮೊದಲ ನಿಲ್ದಾಣವಾಗಿತ್ತು. ಅಲ್ಲದೆ ಇದು ರಾಮನು ರಾವಣನನ್ನು ಕೊಂದ ಸ್ಥಳವಾಗಿದೆ. ಇಂದು ಈ ಸ್ಥಳವು ಸುಂದರವಾದ ಮನ್ನಾರ್ ದ್ವೀಪ ಮತ್ತು ಕೋಟೆ ಮತ್ತು ಆಡಮ್ಸ್ ಸೇತುವೆಗೆ ಹೆಸರುವಾಸಿಯಾಗಿದೆ.

    ಹಂಚಿಕೊಳ್ಳಲು ಲೇಖನಗಳು