logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ayodhya Ram Temple: ಅಯೋಧ್ಯೆಯ ಸುತ್ತ 50 ಕಿಮೀ ಹರಡಿತು 108 ಅಡಿ ಉದ್ದದ ಅಗರಬತ್ತಿಯ ಪರಿಮಳ; ಊದುಬತ್ತಿ ಹಚ್ಚಿದ ಕ್ಷಣಗಳಿವು..

Ayodhya Ram Temple: ಅಯೋಧ್ಯೆಯ ಸುತ್ತ 50 ಕಿಮೀ ಹರಡಿತು 108 ಅಡಿ ಉದ್ದದ ಅಗರಬತ್ತಿಯ ಪರಿಮಳ; ಊದುಬತ್ತಿ ಹಚ್ಚಿದ ಕ್ಷಣಗಳಿವು..

Jan 17, 2024 06:32 AM IST

Ayodhya Ram Temple: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮಲಲಾನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನಗಳು ಮಂಗಳವಾರ (ಜ.16) ಶುರುವಾದವು. ಇದರ ಬೆನ್ನಿಗೆ ಗುಜರಾತ್‌ನ ವಡೋದರಾದಿಂದ ಅಯೋಧ್ಯೆಗೆ ತಲುಪಿದ 108 ಅಡಿ ಉದ್ದದ ಅಗರಬತ್ತಿ (108-foot-long incense stick) ಯನ್ನು ಉರಿಸಲಾಯಿತು.

Ayodhya Ram Temple: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮಲಲಾನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನಗಳು ಮಂಗಳವಾರ (ಜ.16) ಶುರುವಾದವು. ಇದರ ಬೆನ್ನಿಗೆ ಗುಜರಾತ್‌ನ ವಡೋದರಾದಿಂದ ಅಯೋಧ್ಯೆಗೆ ತಲುಪಿದ 108 ಅಡಿ ಉದ್ದದ ಅಗರಬತ್ತಿ (108-foot-long incense stick) ಯನ್ನು ಉರಿಸಲಾಯಿತು.
ಅಯೋಧ್ಯೆಯಲ್ಲಿ ಮಂಗಳವಾರ (ಜ.16) ರಾಮಲಲಾ (ಬಾಲರಾಮ) ಪ್ರಾಣ ಪ್ರತಿಷ್ಠೆಯ ಪೂರ್ವಭಾವಿಯಾಗಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮ ಶುರುವಾಯಿತು. ಇದೇ ವೇಳೆ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಹಾಂತ ನೃತ್ಯ ಗೋಪಾಲ ದಾಸ್ ಅವರು 108 ಅಡಿ  ಉದ್ದದ ಅಗರಬತ್ತಿಯನ್ನು ಹೊತ್ತಿಸಿದರು. 
(1 / 6)
ಅಯೋಧ್ಯೆಯಲ್ಲಿ ಮಂಗಳವಾರ (ಜ.16) ರಾಮಲಲಾ (ಬಾಲರಾಮ) ಪ್ರಾಣ ಪ್ರತಿಷ್ಠೆಯ ಪೂರ್ವಭಾವಿಯಾಗಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮ ಶುರುವಾಯಿತು. ಇದೇ ವೇಳೆ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಹಾಂತ ನೃತ್ಯ ಗೋಪಾಲ ದಾಸ್ ಅವರು 108 ಅಡಿ  ಉದ್ದದ ಅಗರಬತ್ತಿಯನ್ನು ಹೊತ್ತಿಸಿದರು. (PTI)
ಗುಜರಾತ್‌ನ ವಡೋದರಾದಿಂದ ಬಂದ 108 ಅಡಿ ಉದ್ದದ ಅಗರಬತ್ತಿ ಹಚ್ಚುವಾಗ ಜೈ ಶ್ರೀರಾಮ್ ಘೋಷಣೆ ಮುಗಿಲುಮುಟ್ಟಿತು. ಈ ಅಗರ ಬತ್ತಿಯ ಸುವಾಸನೆ 50 ಕಿ.ಮೀ. ವ್ಯಾಪ್ತಿಗೆ ಪಸರಿಸಲಿದೆ ಎಂದು ಸ್ಥಳೀಯರು ಹೇಳಿದ್ದಾಗಿ ವರದಿಯಾಗಿದೆ. 
(2 / 6)
ಗುಜರಾತ್‌ನ ವಡೋದರಾದಿಂದ ಬಂದ 108 ಅಡಿ ಉದ್ದದ ಅಗರಬತ್ತಿ ಹಚ್ಚುವಾಗ ಜೈ ಶ್ರೀರಾಮ್ ಘೋಷಣೆ ಮುಗಿಲುಮುಟ್ಟಿತು. ಈ ಅಗರ ಬತ್ತಿಯ ಸುವಾಸನೆ 50 ಕಿ.ಮೀ. ವ್ಯಾಪ್ತಿಗೆ ಪಸರಿಸಲಿದೆ ಎಂದು ಸ್ಥಳೀಯರು ಹೇಳಿದ್ದಾಗಿ ವರದಿಯಾಗಿದೆ. (PTI)
ವಡೋದರಾದಿಂದ ತರಲಾದ 108 ಅಡಿ ಉದ್ದದ ಅಗರಬತ್ತಿ ಮೂರೂವರೆ ಅಡಿ ಅಗಲ ಇದೆ. 3,610 ಕಿಲೋ ತೂಕವೂ ಇದ್ದು, ಅಯೋಧ್ಯೆಯ ಬೀದಿಯಲ್ಲಿ ಜನಾಕರ್ಷಣೆಯ ಕೇಂದ್ರ ಬಿಂದುವಾಗಿ ಗೋಚರಿಸಿದೆ. 
(3 / 6)
ವಡೋದರಾದಿಂದ ತರಲಾದ 108 ಅಡಿ ಉದ್ದದ ಅಗರಬತ್ತಿ ಮೂರೂವರೆ ಅಡಿ ಅಗಲ ಇದೆ. 3,610 ಕಿಲೋ ತೂಕವೂ ಇದ್ದು, ಅಯೋಧ್ಯೆಯ ಬೀದಿಯಲ್ಲಿ ಜನಾಕರ್ಷಣೆಯ ಕೇಂದ್ರ ಬಿಂದುವಾಗಿ ಗೋಚರಿಸಿದೆ. (PTI)
ಹಸುವಿನ ಸಗಣಿ, ತುಪ್ಪ, ಸುಗಂಧ ಸಾರ, ಹೂವಿನ ಸಾರ ಮತ್ತು ಗಿಡಮೂಲಿಕೆಗಳನ್ನು ಅಗರಬತ್ತಿಯನ್ನು ತಯಾರಿಸಲು ಬಳಸಲಾಗಿದೆ. ಇದನ್ನು ಒಮ್ಮೆ ಬೆಳಗಿಸಿದರೆ ಸುಮಾರು ಒಂದೂವರೆ ತಿಂಗಳು ಉರಿಯುತ್ತಿರುತ್ತದೆ.
(4 / 6)
ಹಸುವಿನ ಸಗಣಿ, ತುಪ್ಪ, ಸುಗಂಧ ಸಾರ, ಹೂವಿನ ಸಾರ ಮತ್ತು ಗಿಡಮೂಲಿಕೆಗಳನ್ನು ಅಗರಬತ್ತಿಯನ್ನು ತಯಾರಿಸಲು ಬಳಸಲಾಗಿದೆ. ಇದನ್ನು ಒಮ್ಮೆ ಬೆಳಗಿಸಿದರೆ ಸುಮಾರು ಒಂದೂವರೆ ತಿಂಗಳು ಉರಿಯುತ್ತಿರುತ್ತದೆ.(PTI)
ರಾಮ ಮಂದಿರದಲ್ಲಿ ರಾಮಲಲಾನ ಪ್ರಾಣ ಪ್ರತಿಷ್ಠೆಗೆ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನಗಳು ಮಂಗಳವಾರ (ಜ.16) ಶುರುವಾಗಿದ್ದು, 22ರಂದು ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಅಗರಬತ್ತಿ ಅದಾಗಿ ಮತ್ತೂ 5 ವಾರ ಉರಿಯುವ ನಿರೀಕ್ಷೆ ಇದೆ.
(5 / 6)
ರಾಮ ಮಂದಿರದಲ್ಲಿ ರಾಮಲಲಾನ ಪ್ರಾಣ ಪ್ರತಿಷ್ಠೆಗೆ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನಗಳು ಮಂಗಳವಾರ (ಜ.16) ಶುರುವಾಗಿದ್ದು, 22ರಂದು ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಅಗರಬತ್ತಿ ಅದಾಗಿ ಮತ್ತೂ 5 ವಾರ ಉರಿಯುವ ನಿರೀಕ್ಷೆ ಇದೆ.(PTI)
108 ಅಡಿ ಉದ್ದದ ಅಗರ ಬತ್ತಿ ಜತೆಗೆ ಹನುಮಂತ ವೇಷಧಾರಿ ಮತ್ತು ಸಾಧು ನಿಂತು ಫೋಟೋಗೆ ಪೋಸ್ ಕೊಟ್ಟರು.
(6 / 6)
108 ಅಡಿ ಉದ್ದದ ಅಗರ ಬತ್ತಿ ಜತೆಗೆ ಹನುಮಂತ ವೇಷಧಾರಿ ಮತ್ತು ಸಾಧು ನಿಂತು ಫೋಟೋಗೆ ಪೋಸ್ ಕೊಟ್ಟರು.(PTI)

    ಹಂಚಿಕೊಳ್ಳಲು ಲೇಖನಗಳು