logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Garuda Puranam: ಗರುಡ ಪುರಾಣ ಹೇಳುತ್ತದೆ ಈ ಅಭ್ಯಾಸಗಳಿಂದಾಗಿ ಬಡತನ ಬರುವುದೆಂದು..

Garuda Puranam: ಗರುಡ ಪುರಾಣ ಹೇಳುತ್ತದೆ ಈ ಅಭ್ಯಾಸಗಳಿಂದಾಗಿ ಬಡತನ ಬರುವುದೆಂದು..

Oct 05, 2023 05:55 AM IST

ಜೀವನದಲ್ಲಿ ಬಡತನಕ್ಕೆ ಕಾರಣವಾಗುವ ಅಭ್ಯಾಸಗಳ ಕುರಿತು ಗರುಡ ಪುರಾಣ ಕೆಲವು ವಿವರ ನೀಡುತ್ತದೆ. ಅಂಥಹ ಅಭ್ಯಾಸಗಳು ಯಾವುವುದು ಎಂಬುದನ್ನು ಮಾಹಿತಿಗಾಗಿ ತಿಳಿಯೋಣ.

  • ಜೀವನದಲ್ಲಿ ಬಡತನಕ್ಕೆ ಕಾರಣವಾಗುವ ಅಭ್ಯಾಸಗಳ ಕುರಿತು ಗರುಡ ಪುರಾಣ ಕೆಲವು ವಿವರ ನೀಡುತ್ತದೆ. ಅಂಥಹ ಅಭ್ಯಾಸಗಳು ಯಾವುವುದು ಎಂಬುದನ್ನು ಮಾಹಿತಿಗಾಗಿ ತಿಳಿಯೋಣ.
ಜನರು ತಮ್ಮ ದೈನಂದಿನ ಜೀವನದಲ್ಲಿ ಸುಧಾರಿಸಬೇಕಾದ ಅನೇಕ ವಿಷಯಗಳ ಕುರಿತು ಗರುಡ ಪುರಾಣವು ಬೆಳಕು ಚೆಲ್ಲುತ್ತದೆ. ಗರುಡ ಪುರಾಣದಲ್ಲಿ, ಜೀವನದಲ್ಲಿ ಬಡತನಕ್ಕೆ ಕಾರಣವಾಗುವ 5 ಅಭ್ಯಾಸಗಳನ್ನು ಭಗವಾನ್ ವಿಷ್ಣುವು ವಿವರಿಸುತ್ತಾನೆ. ಹಣಕಾಸು ಸ್ಥಿತಿಗತಿ ಸುಧಾರಿಸಲು ಯಾವ ಅಭ್ಯಾಸಗಳನ್ನು ತಪ್ಪಿಸಬೇಕು ಎಂಬ ವಿವರ ಹೀಗಿದೆ
(1 / 5)

ಬೆಳಗ್ಗೆ ತಡವಾಗಿ ಏಳುವುದು: ಗರುಡ ಪುರಾಣದ ಪ್ರಕಾರ ರಾತ್ರಿ ತಡವಾಗಿ ನಿದ್ದೆ ಮಾಡಿ ಬೆಳಗ್ಗೆ ತಡವಾಗಿ ಎದ್ದರೆ ಅದು ತಪ್ಪು. ಅಂತಹ ಜನರು ತುಂಬಾ ಸೋಮಾರಿ ಸ್ವಭಾವದವರು. ಇದರಿಂದ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಸೋಮಾರಿತನವು ಸರಿಯಾದ ಸಮಯ ಮತ್ತು ಅವಕಾಶದ ನಷ್ಟಕ್ಕೆ ಕಾರಣವಾಗುತ್ತದೆ. ಒಬ್ಬ ವ್ಯಕ್ತಿಯು ಜೀವನದಲ್ಲಿ ಸುಧಾರಿಸಲು ಬಯಸಿದರೆ, ಅಂಥವರು ಮೊದಲು ತಡವಾಗಿ ಮಲಗುವ ಮತ್ತು ತಡವಾಗಿ ಏಳುವ ಅಭ್ಯಾಸವನ್ನು ಮುರಿಯಬೇಕು.
(2 / 5)

ದುರಾಸೆಯ ನಡವಳಿಕೆ ಬಿಡಬೇಕು: ದುರಾಶೆಯು ಜೀವನದಲ್ಲಿ ವೈಫಲ್ಯಕ್ಕೆ ಕಾರಣವಾಗಬಹುದು. ಗರುಡ ಪುರಾಣದ ಪ್ರಕಾರ, ಯಾವಾಗಲೂ ಇತರರ ಸಂಪತ್ತಿನ ಮೇಲೆ ಕಣ್ಣಿಡುವ ವ್ಯಕ್ತಿಯ ಬಳಿ ಸಂಪತ್ತು ಎಂದಿಗೂ ಸ್ಥಿರವಾಗಿರುವುದಿಲ್ಲ. ಅಂತಹ ವ್ಯಕ್ತಿಯು ತನ್ನಲ್ಲಿರುವದನ್ನು ಆನಂದಿಸಲು ಸಾಧ್ಯವಾಗುವುದಿಲ್ಲ.
(3 / 5)

ಕೆಟ್ಟ ಆಲೋಚನೆ ಮಾಡಬಾರದು: ಗರುಡ ಪುರಾಣದ ಪ್ರಕಾರ ಪರರ ಕೆಲಸವನ್ನು ಕೀಳಾಗಿ ಕಾಣುವ, ಪರರ ಬದುಕನ್ನು ಹಾಳು ಮಾಡುವ ಮನಸ್ಥಿತಿ ಇರುವಂಥವರಿಗೆ ಧನಲಕ್ಷ್ಮಿಯ ಅನುಗ್ರಹ ಇರುವುದಿಲ್ಲ.
(4 / 5)

ಸ್ವಚ್ಛ, ನಿರ್ಮಲ ಶರೀರ, ಮನಸ್ಸು: ದಿನನಿತ್ಯ ಸ್ನಾನ ಮಾಡದ ಮತ್ತು ಶುಚಿಯಾಗಿ ಇರದವರ ಮನೆಗೆ ಲಕ್ಷ್ಮಿ ಪ್ರವೇಶ ಮಾಡುವುದಿಲ್ಲ ಎಂದು ಗರುಡ ಪುರಾಣ ಹೇಳುತ್ತದೆ. ಈ ವ್ಯಕ್ತಿಯು ಬಯಸಿದರೂ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಈ ಅಭ್ಯಾಸವನ್ನು ಬದಲಾಯಿಸಿಕೊಳ್ಳುವುದು ಉತ್ತಮ.
(5 / 5)

    ಹಂಚಿಕೊಳ್ಳಲು ಲೇಖನಗಳು