logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Republic Day Speech: ಪುಟಾಣಿ ಶಾಲಾ ಮಕ್ಕಳಿಗಾಗಿ ಇಲ್ಲಿದೆ ಗಣರಾಜ್ಯೋತ್ಸವದ ಬಗ್ಗೆ ಚಿಕ್ಕ ಭಾಷಣ

Republic Day Speech: ಪುಟಾಣಿ ಶಾಲಾ ಮಕ್ಕಳಿಗಾಗಿ ಇಲ್ಲಿದೆ ಗಣರಾಜ್ಯೋತ್ಸವದ ಬಗ್ಗೆ ಚಿಕ್ಕ ಭಾಷಣ

Jan 18, 2024 04:53 PM IST

Republic Day Speech in Kannada: 75ನೇ ಗಣರಾಜ್ಯೋತ್ಸವ ಆಚರಣೆಯ ಅಂಗವಾಗಿ ಶಾಲೆಯಲ್ಲಿ ಪುಟಾಣಿ ಮಕ್ಕಳು ಭಾಷಣ ಮಾಡಬೇಕು ಅಂದುಕೊಂಡಿದ್ದರೆ ಇಲ್ಲಿದೆ ನೋಡಿ ಪುಟ್ಟ ಭಾಷಣ.. 

  • Republic Day Speech in Kannada: 75ನೇ ಗಣರಾಜ್ಯೋತ್ಸವ ಆಚರಣೆಯ ಅಂಗವಾಗಿ ಶಾಲೆಯಲ್ಲಿ ಪುಟಾಣಿ ಮಕ್ಕಳು ಭಾಷಣ ಮಾಡಬೇಕು ಅಂದುಕೊಂಡಿದ್ದರೆ ಇಲ್ಲಿದೆ ನೋಡಿ ಪುಟ್ಟ ಭಾಷಣ.. 
ವೇದಿಕೆ ಮೇಲಿರುವ ಗಣ್ಯರೇ, ನನ್ನ ನೆಚ್ಚಿನ ಶಿಕ್ಷಕರೇ ಹಾಗೂ ಸಹಪಾಠಿಗಳೇ...ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.  (ನಿಮ್ಮ ಭಾಷಣ ಹೀಗೆ ಆರಂಭವಾಗಲಿ) 
(1 / 8)

ಇಂದು ನಾವು 75ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿದ್ದೇವೆ. ಈ ವಿಶೇಷ ದಿನದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ ಬನ್ನಿ ಸ್ನೇಹಿತರೆ. 1947ರ ಆಗಸ್ಟ್‌ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಆನಂತರ 1950ರ ಜನವರಿ 26 ರಂದು ಭಾರತ ಸಂವಿಧಾನವನ್ನು ಜಾರಿಗೆ ತರಲಾಯಿತು. ಅಂದಿನಿಂದ ಪ್ರತಿವರ್ಷ ಜನವರಿ 26 ರಂದು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಿಕೊಂಡು ಬರಲಾಗಿದೆ. 
(2 / 8)

ಬ್ರಿಟೀಷ್‌ರ ವಸಾಹತುಶಾಹಿ ಸರ್ಕಾರದ ಕಾಯಿದೆಗಳನ್ನು (1935) ಬದಲಾಯಿಸಿ ನಮ್ಮದೇ ಲಿಖಿತ ಸಂವಿಧಾನವನ್ನು ಜಾರಿಗೆ ತಂದ ದಿನ ಇದಾಗಿದೆ. ಭಾರತವು ವಿಶ್ವದಲ್ಲೇ ಅತಿದೊಡ್ಡ ಲಿಖಿತ ಸಂವಿಧಾನ ಹೊಂದಿದ ದೇಶ. ಭಾರತದ ಮೂಲ ಸಂವಿಧಾನವನ್ನು ಕೈಬರಹದಲ್ಲಿ ಬರೆಯಲಾಗಿದೆ. ಸರ್ಕಾರ ಮಾಡುವ ಪ್ರತಿಯೊಂದು ಕಾನೂನೂ ಸಂವಿಧಾನಕ್ಕೆ ಅನುಗುಣವಾಗಿರಬೇಕು. 
(3 / 8)

ಭಾರತದ ಸಂವಿಧಾನ ರಚನೆಗಾಗಿ ಸ್ಥಾಪಿಸಲಾದ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ ಆರ್‌ ಅಂಬೇಡ್ಕರ್‌ ಅವರನ್ನು ಭಾರತ ಸಂವಿಧಾನದ ಪಿತಾಮಹ ಎಂದೇ ಕರೆಯುತ್ತೇವೆ. ಏಕೆಂದರೆ, ದೇಶಕ್ಕೆ ವ್ಯವಸ್ಥಿತ ಹಾಗೂ ಅರ್ಥಪೂರ್ಣ ಸಂವಿಧಾನವನ್ನು ರಚಿಸಿ ಜಾರಿಗೆ ತರುವಲ್ಲಿ ಇವರ ಶ್ರಮ ಅಪಾರ. ಡಾ.ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದರು. 
(4 / 8)

2024 ರ ಗಣರಾಜ್ಯೋತ್ಸವದ ಘೋಷವಾಕ್ಯ ‘ಭಾರತ-ಪ್ರಜಾಪ್ರಭುತ್ವದ ತಾಯಿ’ ಮತ್ತು ‘ವಿಕಸಿತ್‌ ಭಾರತ’ಎಂಬುದಾಗಿದೆ. ವಿಕಸಿತ್‌ ಭಾರತ ಎಂದರೆ ಅಭಿವೃದ್ಧಿ ಹೊಂದಿದ ಭಾರತ ಎಂದರ್ಥ.  
(5 / 8)

ಭಾರತ ಸ್ವಾತಂತ್ರ್ಯ ಪಡೆದ ದಿನದಂದು, ದೇಶದ ಪ್ರಧಾನಮಂತ್ರಿಯು ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡುತ್ತಾರೆ. ಆದರೆ, ಗಣಾರಾಜ್ಯೋತ್ಸವದಂದು, ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿ ದೆಹಲಿಯ ರಾಜಪಥದಲ್ಲಿ ಧ್ವಜಾರೋಹಣ ನೆರವೇರಿಸುತ್ತಾರೆ. 
(6 / 8)

ಈ ದಿನ ಅಲ್ಲಿ ಭಾರತೀಯ ಸೇನೆಯ ಶಕ್ತಿ ಪ್ರದರ್ಶನ, ಸಶಸ್ತ್ರ ಪಡೆಗಳ ಹಾಗೂ ಎನ್​ಸಿಸಿ​-ಎನ್​ಎಸ್​ಎಸ್ ಕೆಡೆಟ್​​ಗಳ ಪಥಸಂಚಲನ, ವಿವಿಧ ರಾಜ್ಯಗಳಿಗೆ ಸಂಬಂಧಿಸಿದ ಸ್ತಬ್ದಚಿತ್ರ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಇತರ ಕಾರ್ಯಕ್ರಮಗಳು ಇರುತ್ತದೆ. 
(7 / 8)

ಭಾರತ ಪ್ರತಿವರ್ಷ ಗಣರಾಜ್ಯೋತ್ಸದ ಸಂಭ್ರಮಾಚರಣೆಗೆ ವಿಶೇಷ ಅತಿಥಿಯನ್ನು ಆಹ್ವಾನಿಸುತ್ತದೆ. ಈ ವರ್ಷ ಇದರಲ್ಲಿ ಪಾಲ್ಗೊಳ್ಳಲು ಫ್ರಾನ್ಸ್‌ ದೇಶದ ಅಧ್ಯಕ್ಷ ಎಮ್ಮಾನ್ಯುಲ್‌ ಮ್ಯಾಕ್ರನ್‌ ಅವರನ್ನು ಆಹ್ವಾನಿಸಲಾಗಿದೆ. ಇಷ್ಟು ಹೇಳುತ್ತ ನನ್ನ ಪುಟ್ಟ ಭಾಷಣ ಮುಗಿಸುತ್ತೇನೆ. ಜೈ ಹಿಂದ್​ ಜೈ ಭಾರತ್ ಮಾತೆ.. 
(8 / 8)

    ಹಂಚಿಕೊಳ್ಳಲು ಲೇಖನಗಳು