logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಡಬ್ಲ್ಯುಟಿಸಿಯಲ್ಲಿ ಅಧಿಕ ರನ್; ಕಳಪೆ ಪ್ರದರ್ಶನದ ನಡುವೆಯೂ ವಿರಾಟ್ ಕೊಹ್ಲಿ ದಾಖಲೆ ಮುರಿದ ರೋಹಿತ್ ಶರ್ಮಾ

ಡಬ್ಲ್ಯುಟಿಸಿಯಲ್ಲಿ ಅಧಿಕ ರನ್; ಕಳಪೆ ಪ್ರದರ್ಶನದ ನಡುವೆಯೂ ವಿರಾಟ್ ಕೊಹ್ಲಿ ದಾಖಲೆ ಮುರಿದ ರೋಹಿತ್ ಶರ್ಮಾ

Feb 05, 2024 06:00 AM IST

Rohit Sharma Record: ಇಂಗ್ಲೆಂಡ್​ ವಿರುದ್ಧದ ಎರಡೂ ಟೆಸ್ಟ್​ ಪಂದ್ಯಗಳಲ್ಲೂ ನಾಯಕ ರೋಹಿತ್​ ಶರ್ಮಾ ಕಳಪೆ ಪ್ರದರ್ಶನ ತೋರಿದ್ದಾರೆ. ಇದರ ನಡುವೆಯೂ ವಿರಾಟ್ ಕೊಹ್ಲಿ ಅವರ ದಾಖಲೆಯೊಂದನ್ನು ಹಿಂದಿಕ್ಕಿದ್ದಾರೆ.

  • Rohit Sharma Record: ಇಂಗ್ಲೆಂಡ್​ ವಿರುದ್ಧದ ಎರಡೂ ಟೆಸ್ಟ್​ ಪಂದ್ಯಗಳಲ್ಲೂ ನಾಯಕ ರೋಹಿತ್​ ಶರ್ಮಾ ಕಳಪೆ ಪ್ರದರ್ಶನ ತೋರಿದ್ದಾರೆ. ಇದರ ನಡುವೆಯೂ ವಿರಾಟ್ ಕೊಹ್ಲಿ ಅವರ ದಾಖಲೆಯೊಂದನ್ನು ಹಿಂದಿಕ್ಕಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಕಳಪೆ ಪ್ರದರ್ಶನ ತೋರಿದ್ದಾರೆ. ಸತತ ಎರಡು ಟೆಸ್ಟ್‌ಗಳಲ್ಲಿ ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಕ್ರಮವಾಗಿ 24 ಮತ್ತು 39 ರನ್, ಎರಡನೇ ಟೆಸ್ಟ್‌ನಲ್ಲಿ ಕ್ರಮವಾಗಿ 14 ಮತ್ತು 13 ರನ್​ ಕಲೆ ಹಾಕಿದರು.
(1 / 5)

ರೋಹಿತ್ ಪ್ರದರ್ಶನ ಹೊರತಾಗಿಯೂ ಆದರೆ, ವಿರಾಟ್ ಕೊಹ್ಲಿ ಅವರ ದಾಖಲೆಯೊಂದನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಹಿಟ್​​ಮ್ಯಾನ್ ಪಾತ್ರರಾದರು.
(2 / 5)

ಎರಡನೇ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ರೋಹಿತ್, 13 ರನ್ ಈಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ರನ್ ಸಂಖ್ಯೆಯನ್ನು 2,242ಕ್ಕೆ ಏರಿಸಿದೆ. 29 ಟೆಸ್ಟ್​​ಗಳಲ್ಲಿ 7 ಶತಕ, 6 ಅರ್ಧಶತಕ ಕೂಡ ಗಳಿಸಿದ್ದು, ಸರಾಸರಿ 48.73 ಇದೆ. ಆ ಮೂಲಕ ಡಬ್ಲ್ಯುಟಿಸಿ ಟೂರ್ನಿಯಲ್ಲಿ ಭಾರತದ ಪರ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿದ್ದಾರೆ.
(3 / 5)

ಅಗ್ರಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. 36 ಟೆಸ್ಟ್​​ಗಳಲ್ಲಿ 2235 ರನ್ ಗಳಿಸಿದ್ದಾರೆ. 4 ಶತಕ, 10 ಅರ್ಧಶತಕ ಸಿಡಿಸಿದ್ದು,  ಕೇವಲ 39.21ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. 
(4 / 5)

ಈ ಪಟ್ಟಿಯಲ್ಲಿ ಜೋ ರೂಟ್ ಅಗ್ರಸ್ಥಾನದಲ್ಲಿದ್ದಾರೆ. ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 4,023 ರನ್ ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಮಾರ್ನಸ್ ಲಬುಶೇನ್ ಇದ್ದು, 3,805 ರನ್ ಗಳಿಸಿದ್ದಾರೆ. ಸ್ಟೀವ್ ಸ್ಮಿತ್ (3,435), ಬೆನ್ ಸ್ಟೋಕ್ಸ್ (2,833), ಬಾಬರ್ ಅಜಮ್ (2,661), ಉಸ್ಮಾನ್ ಖವಾಜಾ (2,598), ಟ್ರಾವಿಸ್ ಹೆಡ್ (2,441), ಡೇವಿಡ್ ವಾರ್ನರ್ (2423) ಕ್ರಮವಾಗಿ 3 ರಿಂದ 8ನೇ ಸ್ಥಾನದವರೆಗೂ ಇದ್ದಾರೆ. ರೋಹಿತ್​, ಕೊಹ್ಲಿ 9, 10ನೇ ಸ್ಥಾನದಲ್ಲಿದ್ದಾರೆ.
(5 / 5)

    ಹಂಚಿಕೊಳ್ಳಲು ಲೇಖನಗಳು