logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಟ ದರ್ಶನ್‌ ಜೈಲಿಂದ ಎಷ್ಟು ಬೇಗ ಹೊರಗಡೆ ಬರ್ತಾರೋ ಅಷ್ಟು ಒಳ್ಳೆಯದು; ಅಯೋಗ್ಯ, ಮದಗಜ ನಿರ್ದೇಶಕರ ಅಭಿಮತ

ನಟ ದರ್ಶನ್‌ ಜೈಲಿಂದ ಎಷ್ಟು ಬೇಗ ಹೊರಗಡೆ ಬರ್ತಾರೋ ಅಷ್ಟು ಒಳ್ಳೆಯದು; ಅಯೋಗ್ಯ, ಮದಗಜ ನಿರ್ದೇಶಕರ ಅಭಿಮತ

Jul 16, 2024 01:24 PM IST

Kannada Actor Darshan: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌ ಕುರಿತು ಮದಗಜ, ಅಯೋಗ್ಯ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಮಹೇಶ್‌ ಕುಮಾರ ಮಾತನಾಡಿದ್ದಾರೆ. ನಟ ದರ್ಶನ ಜೈಲಿಂದ ಬೇಗ ಹೊರಗೆ ಬಂದಷ್ಟು ಒಳ್ಳೆಯದು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

  • Kannada Actor Darshan: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌ ಕುರಿತು ಮದಗಜ, ಅಯೋಗ್ಯ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಮಹೇಶ್‌ ಕುಮಾರ ಮಾತನಾಡಿದ್ದಾರೆ. ನಟ ದರ್ಶನ ಜೈಲಿಂದ ಬೇಗ ಹೊರಗೆ ಬಂದಷ್ಟು ಒಳ್ಳೆಯದು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
Actor Darshan: "ದರ್ಶನ್‌ ಜೈಲಲ್ಲಿದ್ರೂ ಹೊರಗಿದ್ರೂ ಅವರ ಹವಾ ನಡೆಯುತ್ತದೆ. ಕನ್ನಡ ಸಿನಿಮಾ ಉದ್ಯಮದ ಮೇರುನಟ ಅವರು. ಅವರು ಇಂಡಸ್ಟ್ರಿಗೆ ಒಂದು ತೂಕ. ಅವರು ಎಷ್ಟು ಬೇಗ ಆಚೆ ಬರ್ತಾರೋ ಇಂಡಸ್ಟ್ರಿಗೆ ಒಳ್ಳೆಯದಾಗುತ್ತದೆ. ಒಳ್ಳೆಯ ಬೆಳವಣಿಗೆಗಳು ಆಗುತ್ತವೆ. ಒಳ್ಳೊಳ್ಳೆಯ ಸಿನಿಮಾಗಳು ಬರುತ್ತೆ" ಎಂದು ನಿರ್ದೇಶಕ ಮಹೇಶ್‌ ಹೇಳಿದ್ದಾರೆ.
(1 / 6)

"ದರ್ಶನ್‌ ಸಿನಿಮಾಗಳನ್ನು ಮಾಡಿದ್ರೆ . ನೂರಾರು ಕೋಟಿ ರೂಪಾಯಿ ಟರ್ನೊವರ್‌ ನಮ್ಮ ಇಂಡಸ್ಟ್ರಿಯಲ್ಲಿ ನಡೆಯುತ್ತದೆ. ಅವರು ಕನ್ನಡ ಸಿನಿಮಾ ಬಿಟ್ಟು ಬೇರೆ ಸಿನಿಮಾ ಮಾಡೋಲ್ಲ. ಎಷ್ಟೋ ಕನ್ನಡ ಟೆಕ್ನಿಷಿಯನ್‌ಗಳಿಗೆ ಅವರು ಅವಕಾಶ ನೀಡುತ್ತಾರೆ" ಎಂದು ಮಹೇಶ್‌ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)
(2 / 6)

"ನಾನೊಬ್ಬ ಇಂಡಸ್ಟ್ರಿಯವನ್ನಾಗಿ, ನಿರ್ದೇಶಕನಾಗಿ ನಿಜವಾದ ಅಪರಾಧಿಗೆ ಶಿಕ್ಷೆಯಾಗಲಿ, ನಾನು ದೇವರಲ್ಲಿ ಕೇಳೋದಿಷ್ಟೇ, ದರ್ಶನ್‌ ಸರ್‌ ನಿರಾಪರಾಧಿಯಾಗಿ ಹೊರಗೆ ಬರಲಿ" ಎಂದು ಅವರು ಹೇಳಿದ್ದಾರೆ.  (ಸಾಂದರ್ಭಿಕ ಚಿತ್ರ)
(3 / 6)

"ದರ್ಶನ್‌ ಸರ್‌ ಆರೋಪಿಯಷ್ಟೇ, ಅಪರಾಧಿಯಲ್ಲ. ದರ್ಶನ್‌ ಸರ್‌ ಜೈಲಲ್ಲಿ ಇದ್ದಾರೆ. ಅಲ್ಲಿ ಏನು ನಡೆದಿದೆ ಎಂದು ನನಗೂ ಗೊತ್ತಿಲ್ಲ ನಿಮಗೂ ಗೊತ್ತಿಲ್ಲ. ಹಲವು ವರ್ಷಗಳ ಕಾಲ ಕಾನೂನು ಓದಿ ವಕೀಲರಾಗಿದ್ದಾರೆ, ಜಡ್ಜ್‌ಗಳಾಗಿದ್ದಾರೆ. ಅವರು ತೀರ್ಮಾನ ಕೈಗೊಳ್ಳುತ್ತಾರೆ. ದರ್ಶನ್‌ ಅಪರಾಧಿ ಎಂದು ಹೇಳಲು ನನಗೂ ನಿಮಗೂ ಯಾವುದೇ ಹಕ್ಕು ಇಲ್ಲ. ಅದು ನ್ಯಾಯಾಲಯದಲ್ಲಿ ಮಾತ್ರ ನಿರ್ಧಾರವಾಗುವಂತಹದ್ದು" ಎಂದು ಮಹೇಶ್‌ ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.(ಸಾಂದರ್ಭಿಕ ಚಿತ್ರ)
(4 / 6)

"ಬಾಸ್‌ ಜತೆ (ನಟ ದರ್ಶನ್‌ ) ಕಾಟೇರ ಸಿನಿಮಾದಿಂದ ನನ್ನ ಒಡನಾಟವಲ್ಲ. ಸುಮಾರು ಹತ್ತು ಹನ್ನೆರಡು ವರ್ಷಗಳಿಂದ ದರ್ಶನ್‌ ಸರ್‌ನ ಬಲ್ಲೆ.  ರಾಬರ್ಟ್‌ ಸಿನಿಮಾದಿಂದ ನಾನೂ ದರ್ಶನ್‌ ಹತ್ತಿರವಾಗಿದ್ದೇನೆ. ಕಾಟೇರದಿಂದ ಇನ್ನೂ ಹತ್ತಿರವಾಗ್ತಿವಿ. ಒಂದು ಒಳ್ಳೆಯ ಒಡನಾಟ. ನಿರ್ದೇಶಕರೇ ಅಂತ ಗೌರವ ಕೊಟ್ಟು ಮಾತನಾಡಿಸುವಂತಹ ವ್ಯಕ್ತಿತ್ವ ಅವರದ್ದು. ಯಾರೇ ನಿರ್ದೇಶಕರು ಇದ್ದರೂ ಅವರು ಹೆಸರಿಡಿದು ಕರೆಯೊಲ್ಲ. ನಿರ್ದೇಶಕರೇ ಎಂದು ಕರೆಯುತ್ತಾರೆ" ಎಂದು ನಿರ್ದೇಶಕ ಮಹೇಶ್‌ ಕುಮಾರ್‌ ದರ್ಶನ್‌ ಬಗ್ಗೆ ತಿಳಿಸಿದ್ದಾರೆ. 
(5 / 6)

ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್‌ ಮತ್ತು ಇತರೆ ಆರೋಪಿಗಳು ನ್ಯಾಯಾಂಗ ಬಂಧನಲ್ಲಿದ್ದಾರೆ. ಪೊಲೀಸರು ಇನ್ನೂ ಚಾರ್ಜ್‌ ಶೀಟ್‌ ಸಲ್ಲಿಕೆ ಮಾಡದೆ ಇರುವುದರಿಂದ ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ಇತ್ತೀಚೆಗೆ ವಿಸ್ತರಿಸಿತ್ತು. 
(6 / 6)

    ಹಂಚಿಕೊಳ್ಳಲು ಲೇಖನಗಳು