logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶುಭ್ಮನ್‌ ಗಿಲ್‌ ಗುಜರಾತ್‌ ಟೈಟಾನ್ಸ್‌ ನೂತನ ನಾಯಕ

ಶುಭ್ಮನ್‌ ಗಿಲ್‌ ಗುಜರಾತ್‌ ಟೈಟಾನ್ಸ್‌ ನೂತನ ನಾಯಕ

Nov 27, 2023 04:33 PM IST

Shubman Gill: ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಐಪಿಎಲ್ 2024ರ ಸೀಸನ್‌ಗೆ‌ ನೂತನ ನಾಯಕನನ್ನು ಘೋಷಿಸಿದೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯುವ ಆಟರಂಭಿಕ ಆಟಗಾರ ಶುಭ್ಮನ್ ಗಿಲ್ ಮುಂದಿನ ಆವೃತ್ತಿಯಲ್ಲಿ ಮಾಜಿ ಚಾಂಪಿಯನ್‌ ತಂಡವನ್ನು ಮುನ್ನಡೆಸಲಿದ್ದಾರೆ.

  • Shubman Gill: ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಐಪಿಎಲ್ 2024ರ ಸೀಸನ್‌ಗೆ‌ ನೂತನ ನಾಯಕನನ್ನು ಘೋಷಿಸಿದೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯುವ ಆಟರಂಭಿಕ ಆಟಗಾರ ಶುಭ್ಮನ್ ಗಿಲ್ ಮುಂದಿನ ಆವೃತ್ತಿಯಲ್ಲಿ ಮಾಜಿ ಚಾಂಪಿಯನ್‌ ತಂಡವನ್ನು ಮುನ್ನಡೆಸಲಿದ್ದಾರೆ.
ಟೀಮ್ ಇಂಡಿಯಾದ ಯುವ ಬ್ಯಾಟರ್ ಶುಭ್ಮನ್ ಗಿಲ್ ಐಪಿಎಲ್ 2024ರ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ವಹಿಸಲಿದ್ದಾರೆ. ಇದನ್ನು ಫ್ರಾಂಚೈಸಿ ಅಧಿಕೃತವಾಗಿ ಪ್ರಕಟಿಸಿದೆ.
(1 / 6)
ಟೀಮ್ ಇಂಡಿಯಾದ ಯುವ ಬ್ಯಾಟರ್ ಶುಭ್ಮನ್ ಗಿಲ್ ಐಪಿಎಲ್ 2024ರ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ವಹಿಸಲಿದ್ದಾರೆ. ಇದನ್ನು ಫ್ರಾಂಚೈಸಿ ಅಧಿಕೃತವಾಗಿ ಪ್ರಕಟಿಸಿದೆ.
2022 ಮತ್ತು 2023ರ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಮತ್ತೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಟ್ರೇಡಿಂಗ್‌ ಆಗಿದ್ದಾರೆ. ಹೀಗಾಗಿ ನೂತನ ನಾಯಕನ ಘೋಷಣೆ ಮಾಡಲಾಗಿದೆ.
(2 / 6)
2022 ಮತ್ತು 2023ರ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಮತ್ತೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಟ್ರೇಡಿಂಗ್‌ ಆಗಿದ್ದಾರೆ. ಹೀಗಾಗಿ ನೂತನ ನಾಯಕನ ಘೋಷಣೆ ಮಾಡಲಾಗಿದೆ.(PTI)
ಶುಭ್ಮನ್ ಗಿಲ್ 2018ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. 2022ರ ಋತುವಿಗಾಗಿ ನಡೆದ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಅವರನ್ನು 7 ಕೋಟಿ ರೂಪಾಯಿಗೆ ಖರೀದಿಸಿತ್ತು.
(3 / 6)
ಶುಭ್ಮನ್ ಗಿಲ್ 2018ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. 2022ರ ಋತುವಿಗಾಗಿ ನಡೆದ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಅವರನ್ನು 7 ಕೋಟಿ ರೂಪಾಯಿಗೆ ಖರೀದಿಸಿತ್ತು.(PTI)
2022ರ ಐಪಿಎಲ್ ಆವೃತ್ತಿಯಲ್ಲಿ ಶುಭ್ಮನ್ ಗಿಲ್ ಗುಜರಾತ್ ಪರ 483 ರನ್ ಗಳಿಸಿದ್ದರು. ಫೈನಲ್ ಪಂದ್ಯದಲ್ಲಿ ಅಜೇಯ 45 ರನ್ ಗಳಿಸಿದರು.‌ ಅಲ್ಲದೆ ಗುಜರಾತ್ ತಂಡವು ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ವರ್ಷ ಐಪಿಎಲ್ 2023ರಲ್ಲಿ ಗಿಲ್ ಅಮೋಘ ಫಾರ್ಮ್‌ ಪ್ರದರ್ಶಿಸಿದ್ದರು. 17 ಇನ್ನಿಂಗ್ಸ್‌ಗಳಲ್ಲಿ 890 ರನ್ ಗಳಿಸಿದ್ದರು.
(4 / 6)
2022ರ ಐಪಿಎಲ್ ಆವೃತ್ತಿಯಲ್ಲಿ ಶುಭ್ಮನ್ ಗಿಲ್ ಗುಜರಾತ್ ಪರ 483 ರನ್ ಗಳಿಸಿದ್ದರು. ಫೈನಲ್ ಪಂದ್ಯದಲ್ಲಿ ಅಜೇಯ 45 ರನ್ ಗಳಿಸಿದರು.‌ ಅಲ್ಲದೆ ಗುಜರಾತ್ ತಂಡವು ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ವರ್ಷ ಐಪಿಎಲ್ 2023ರಲ್ಲಿ ಗಿಲ್ ಅಮೋಘ ಫಾರ್ಮ್‌ ಪ್ರದರ್ಶಿಸಿದ್ದರು. 17 ಇನ್ನಿಂಗ್ಸ್‌ಗಳಲ್ಲಿ 890 ರನ್ ಗಳಿಸಿದ್ದರು.(PTI)
ಅತ್ತ ಐಪಿಎಲ್ 2022ರಲ್ಲಿ ಹಾರ್ದಿಕ್ ನಾಯಕತ್ವದಲ್ಲಿ ಪ್ರಶಸ್ತಿ ಗೆದ್ದ ಗುಜರಾತ್, 2023ರಲ್ಲಿ ಫೈನಲ್ ತಲುಪಿ ರನ್ನರ್‌ ಅಪ್‌ ಆಗಿತ್ತು. ಹಾರ್ದಿಕ್ ಈಗ ತಮ್ಮ ಹಳೆಯ ತಂಡ ಮುಂಬೈಗೆ ಮರಳಿದ್ದಾರೆ. ಹೀಗಾಗಿ ಶುಭ್ಮನ್ ಗಿಲ್ ಅವರನ್ನು ನಾಯಕನನ್ನಾಗಿ ಗುಜರಾತ್‌ ಘೋಷಿಸಿದೆ.
(5 / 6)
ಅತ್ತ ಐಪಿಎಲ್ 2022ರಲ್ಲಿ ಹಾರ್ದಿಕ್ ನಾಯಕತ್ವದಲ್ಲಿ ಪ್ರಶಸ್ತಿ ಗೆದ್ದ ಗುಜರಾತ್, 2023ರಲ್ಲಿ ಫೈನಲ್ ತಲುಪಿ ರನ್ನರ್‌ ಅಪ್‌ ಆಗಿತ್ತು. ಹಾರ್ದಿಕ್ ಈಗ ತಮ್ಮ ಹಳೆಯ ತಂಡ ಮುಂಬೈಗೆ ಮರಳಿದ್ದಾರೆ. ಹೀಗಾಗಿ ಶುಭ್ಮನ್ ಗಿಲ್ ಅವರನ್ನು ನಾಯಕನನ್ನಾಗಿ ಗುಜರಾತ್‌ ಘೋಷಿಸಿದೆ.(PTI)
ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ಸಿಕ್ಕಿರುವುದು ಸಂತಸ ತಂದಿದೆ ಎಂದು ಗಿಲ್ ಹೇಳಿದ್ದಾರೆ. ಉತ್ತಮ ತಂಡವನ್ನು ಮುನ್ನಡೆಸಲು ಅವಕಾಶ ನೀಡಿದ ಜಿಟಿ ಫ್ರಾಂಚೈಸಿಗೆ ಕೃತಜ್ಞತೆ ಎಂದು ಅವರು ಹೇಳಿದ್ದಾರೆ.
(6 / 6)
ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ಸಿಕ್ಕಿರುವುದು ಸಂತಸ ತಂದಿದೆ ಎಂದು ಗಿಲ್ ಹೇಳಿದ್ದಾರೆ. ಉತ್ತಮ ತಂಡವನ್ನು ಮುನ್ನಡೆಸಲು ಅವಕಾಶ ನೀಡಿದ ಜಿಟಿ ಫ್ರಾಂಚೈಸಿಗೆ ಕೃತಜ್ಞತೆ ಎಂದು ಅವರು ಹೇಳಿದ್ದಾರೆ.(AFP)

    ಹಂಚಿಕೊಳ್ಳಲು ಲೇಖನಗಳು