logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಫ್ರಿಡ್ಜ್‌ನಲ್ಲಿರುವ ಐಸ್‌ಕ್ಯೂಬ್‌ ಏಕೆ ವೇಸ್ಟ್‌ ಮಾಡ್ತೀರ; ಅದ್ರಿಂದ್ಲೇ ನಿಮ್ಮ ಚರ್ಮದ ಸೌಂದರ್ಯ ಹೆಚ್ಚಿಸಿಕೊಳ್ಳಿ

ಫ್ರಿಡ್ಜ್‌ನಲ್ಲಿರುವ ಐಸ್‌ಕ್ಯೂಬ್‌ ಏಕೆ ವೇಸ್ಟ್‌ ಮಾಡ್ತೀರ; ಅದ್ರಿಂದ್ಲೇ ನಿಮ್ಮ ಚರ್ಮದ ಸೌಂದರ್ಯ ಹೆಚ್ಚಿಸಿಕೊಳ್ಳಿ

Dec 22, 2023 04:53 PM IST

 ನಮ್ಮ ಚರ್ಮವನ್ನು ಅಂದಗೊಳಿಸಲು ಅನೇಕ ದಾರಿಗಳಿವೆ. ಅವುಗಳನ್ನು ಸೂಕ್ತ ರೀತಿಯಲ್ಲಿ, ಸರಿಯಾದ ಸಮಯದಲ್ಲಿ ಬಳಸಿಕೊಂಡರೆ ಚರ್ಮ ಸದಾ ತಾಜಾತನದಿಂದ, ಹೊಳಪಿನಿಂದ ಕೂಡಿರುತ್ತದೆ. 

 ನಮ್ಮ ಚರ್ಮವನ್ನು ಅಂದಗೊಳಿಸಲು ಅನೇಕ ದಾರಿಗಳಿವೆ. ಅವುಗಳನ್ನು ಸೂಕ್ತ ರೀತಿಯಲ್ಲಿ, ಸರಿಯಾದ ಸಮಯದಲ್ಲಿ ಬಳಸಿಕೊಂಡರೆ ಚರ್ಮ ಸದಾ ತಾಜಾತನದಿಂದ, ಹೊಳಪಿನಿಂದ ಕೂಡಿರುತ್ತದೆ. 
ಐಸ್‌ ವಾಟರ್‌ ಚಿಕಿತ್ಸೆಯು ಹೊಸ ಪರಿಕಲ್ಪನೆಯಲ್ಲ, ಇದನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. ಆದರೆ ಕೆಲವರಿಗೆ ಇದರ ಪರಿಚಯವಿಲ್ಲ ಅಷ್ಟೇ. ಐಸ್‌ ವಾಟರ್‌ ಚಿಕಿತ್ಸೆಯು ನಿಮ್ಮ ಚರ್ಮವನ್ನು ಘನೀಕರಿಸುವ ತಾಪಮಾನಕ್ಕೆ ಸಂಕ್ಷಿಪ್ತವಾಗಿ ಒಡ್ಡುವುದನ್ನು ಒಳಗೊಂಡಿರುತ್ತದೆ, ಇದು ಅನೇಕ ಪ್ರಯೋಜನಗಳನ್ನು ನೀಡುತ್ತದೆ. 
(1 / 6)
ಐಸ್‌ ವಾಟರ್‌ ಚಿಕಿತ್ಸೆಯು ಹೊಸ ಪರಿಕಲ್ಪನೆಯಲ್ಲ, ಇದನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. ಆದರೆ ಕೆಲವರಿಗೆ ಇದರ ಪರಿಚಯವಿಲ್ಲ ಅಷ್ಟೇ. ಐಸ್‌ ವಾಟರ್‌ ಚಿಕಿತ್ಸೆಯು ನಿಮ್ಮ ಚರ್ಮವನ್ನು ಘನೀಕರಿಸುವ ತಾಪಮಾನಕ್ಕೆ ಸಂಕ್ಷಿಪ್ತವಾಗಿ ಒಡ್ಡುವುದನ್ನು ಒಳಗೊಂಡಿರುತ್ತದೆ, ಇದು ಅನೇಕ ಪ್ರಯೋಜನಗಳನ್ನು ನೀಡುತ್ತದೆ. (Photo by Twitter/summahhluvin)
ಐಸ್ ಫೇಶಿಯಲ್‌ ಮಾಡುವುದರಿಂದ ಓಪನ್‌ ಪೋರ್ಸ್‌ ಬಿಗಿಯಾಗುತ್ತದೆ.  ಐಸ್ ನೀರಿನ ತಣ್ಣನೆಯ ಉಷ್ಣತೆಯು ನಿಮ್ಮ ಚರ್ಮದ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ. ಇದರಿಂದ ಓಪನ್‌ ಪೋರ್ಸ್‌ ಸಮಸ್ಯೆ ಕಡಿಮೆ ಆಗುತ್ತದೆ. ಪರಿಣಾಮವಾಗಿ ನಿಮ್ಮ ಚರ್ಮವು ಮೃದುವಾಗುತ್ತದೆ. ಜೊತೆಗೆ ಐಸ್‌ ನೀರು  ಮುಖಕ್ಕೆ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದರಿಂದ ನಿಮ್ಮ ಚರ್ಮಕ್ಕೆ ಹೊಳಪು ಬರುತ್ತದೆ. ಮೊಡವೆಗಳು ಕಡಿಮೆ ಆಗುತ್ತದೆ.  
(2 / 6)
ಐಸ್ ಫೇಶಿಯಲ್‌ ಮಾಡುವುದರಿಂದ ಓಪನ್‌ ಪೋರ್ಸ್‌ ಬಿಗಿಯಾಗುತ್ತದೆ.  ಐಸ್ ನೀರಿನ ತಣ್ಣನೆಯ ಉಷ್ಣತೆಯು ನಿಮ್ಮ ಚರ್ಮದ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ. ಇದರಿಂದ ಓಪನ್‌ ಪೋರ್ಸ್‌ ಸಮಸ್ಯೆ ಕಡಿಮೆ ಆಗುತ್ತದೆ. ಪರಿಣಾಮವಾಗಿ ನಿಮ್ಮ ಚರ್ಮವು ಮೃದುವಾಗುತ್ತದೆ. ಜೊತೆಗೆ ಐಸ್‌ ನೀರು  ಮುಖಕ್ಕೆ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದರಿಂದ ನಿಮ್ಮ ಚರ್ಮಕ್ಕೆ ಹೊಳಪು ಬರುತ್ತದೆ. ಮೊಡವೆಗಳು ಕಡಿಮೆ ಆಗುತ್ತದೆ.  (Unsplash)
ಐಸ್ ವಾಟರ್‌ನಿಂದ ಸಾಕಷ್ಟು ಪ್ರಯೋಜನಗಳಿದ್ದರೂ ಅದನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು.  ಹೆಚ್ಚು ಶೀತಕ್ಕೆ ಒಡ್ಡಿಕೊಳ್ಳುವುದರಿಂದ ಚರ್ಮಕ್ಕೆ ಹಾನಿಯಾಗಬಹುದು. ಮಂಜುಗಡ್ಡೆಯಿಂದ ಚರ್ಮಕ್ಕೆ ಹಾನಿ ಆಗುವುದನ್ನು ತಡೆಯಲು ಬಟ್ಟೆ ಅಥವಾ ಪ್ಲಾಸ್ಟಿಕ್ ಚೀಲದಿಂದ ಕವರ್‌ ಮಾಡಿ. ಒಮ್ಮೆಲೆ ಮುಖವನ್ನು ಐಸ್‌ ನೀರಿಗೆ ಒಡ್ಡಬೇಡಿ. 
(3 / 6)
ಐಸ್ ವಾಟರ್‌ನಿಂದ ಸಾಕಷ್ಟು ಪ್ರಯೋಜನಗಳಿದ್ದರೂ ಅದನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು.  ಹೆಚ್ಚು ಶೀತಕ್ಕೆ ಒಡ್ಡಿಕೊಳ್ಳುವುದರಿಂದ ಚರ್ಮಕ್ಕೆ ಹಾನಿಯಾಗಬಹುದು. ಮಂಜುಗಡ್ಡೆಯಿಂದ ಚರ್ಮಕ್ಕೆ ಹಾನಿ ಆಗುವುದನ್ನು ತಡೆಯಲು ಬಟ್ಟೆ ಅಥವಾ ಪ್ಲಾಸ್ಟಿಕ್ ಚೀಲದಿಂದ ಕವರ್‌ ಮಾಡಿ. ಒಮ್ಮೆಲೆ ಮುಖವನ್ನು ಐಸ್‌ ನೀರಿಗೆ ಒಡ್ಡಬೇಡಿ. (Instagram/@s.h.o.pee)
ಐಸ್‌ ವಾಟರ್‌ ಫೇಶಿಯಲ್‌ ಮಾಡುವ ಮುನ್ನ ಒಮ್ಮೆ ಚರ್ಮರೋಗ ತಜ್ಞರು ಅಥವಾ ಆರೋಗ್ಯ ತಜ್ಞರೊಂದಿಗೆ ಮಾತನಾಡಿ. ನೀವು ನಿಮ್ಮ ಚರ್ಮದ ವಿಧ ಯಾವುದು ಎಂಬುದನ್ನು ತಿಳಿದುಕೊಳ್ಳಬೇಕಿರುವುದು ಬಹಳ ಮುಖ್ಯ. ಏಕೆಂದರೆ ಸೂಷ್ಮ ಚರ್ಮದವರಿಗೆ ಮಂಜುಗಡ್ಡೆಯಿಂದ ಸಮಸ್ಯೆ ಆಗಬಹುದು. 
(4 / 6)
ಐಸ್‌ ವಾಟರ್‌ ಫೇಶಿಯಲ್‌ ಮಾಡುವ ಮುನ್ನ ಒಮ್ಮೆ ಚರ್ಮರೋಗ ತಜ್ಞರು ಅಥವಾ ಆರೋಗ್ಯ ತಜ್ಞರೊಂದಿಗೆ ಮಾತನಾಡಿ. ನೀವು ನಿಮ್ಮ ಚರ್ಮದ ವಿಧ ಯಾವುದು ಎಂಬುದನ್ನು ತಿಳಿದುಕೊಳ್ಳಬೇಕಿರುವುದು ಬಹಳ ಮುಖ್ಯ. ಏಕೆಂದರೆ ಸೂಷ್ಮ ಚರ್ಮದವರಿಗೆ ಮಂಜುಗಡ್ಡೆಯಿಂದ ಸಮಸ್ಯೆ ಆಗಬಹುದು. (Unsplash)
ಸಾದಾ ಮಂಜುಗಡ್ಡೆಯನ್ನು ಬಳಸುವ ಬದಲಿಗೆ ನೀರಿನೊಂದಿಗೆ ಪುದೀನಾ ರಸ, ನಿಂಬೆ, ಅಲೊವೆರಾ ಆಥವಾ ನಿಮ್ಮ ಚರ್ಮಕ್ಕೆ ಹೊಂದುವ ವಸ್ತುಗಳನ್ನು ಸೇರಿಸಿ, ನಂತರ ಐಸ್‌ ಕ್ಯೂಬ್‌ನಿಂದ ಮಸಾಜ್‌ ಮಾಡಿ. 
(5 / 6)
ಸಾದಾ ಮಂಜುಗಡ್ಡೆಯನ್ನು ಬಳಸುವ ಬದಲಿಗೆ ನೀರಿನೊಂದಿಗೆ ಪುದೀನಾ ರಸ, ನಿಂಬೆ, ಅಲೊವೆರಾ ಆಥವಾ ನಿಮ್ಮ ಚರ್ಮಕ್ಕೆ ಹೊಂದುವ ವಸ್ತುಗಳನ್ನು ಸೇರಿಸಿ, ನಂತರ ಐಸ್‌ ಕ್ಯೂಬ್‌ನಿಂದ ಮಸಾಜ್‌ ಮಾಡಿ. (File Photo)
ಗ್ರೀನ್‌ ಟೀ ಮಾಡಿ ಅದು ತಣ್ಣಗಾದ ನಂತರ ಐಸ್‌ ಟ್ರೇಯಲ್ಲಿ ಇಟ್ಟು ಅದನ್ನು ನಿಮ್ಮ ಮುಖದ ಮೇಲೆ ಮಸಾಜ್‌ ಮಾಡಿದರೆ ನಿಮ್ಮ ಚರ್ಮಕ್ಕೆ ಹೊಳಪು ನೀಡುತ್ತದೆ. 
(6 / 6)
ಗ್ರೀನ್‌ ಟೀ ಮಾಡಿ ಅದು ತಣ್ಣಗಾದ ನಂತರ ಐಸ್‌ ಟ್ರೇಯಲ್ಲಿ ಇಟ್ಟು ಅದನ್ನು ನಿಮ್ಮ ಮುಖದ ಮೇಲೆ ಮಸಾಜ್‌ ಮಾಡಿದರೆ ನಿಮ್ಮ ಚರ್ಮಕ್ಕೆ ಹೊಳಪು ನೀಡುತ್ತದೆ. 

    ಹಂಚಿಕೊಳ್ಳಲು ಲೇಖನಗಳು