logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Maha Shivaratri 2024: ಮಹಾಶಿವರಾತ್ರಿ ಸಂದರ್ಭ ಉತ್ತರ ಭಾರತದಲ್ಲಿನ ಪ್ರಸಿದ್ಧ ಶಿವಾಲಯಗಳ ಬಗ್ಗೆ ತಿಳಿಯಿರಿ

Maha Shivaratri 2024: ಮಹಾಶಿವರಾತ್ರಿ ಸಂದರ್ಭ ಉತ್ತರ ಭಾರತದಲ್ಲಿನ ಪ್ರಸಿದ್ಧ ಶಿವಾಲಯಗಳ ಬಗ್ಗೆ ತಿಳಿಯಿರಿ

Feb 26, 2024 09:44 AM IST

ಮಹಾಶಿವರಾತ್ರಿ ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಶಿವನನ್ನು ಆರಾಧಿಸುವ ಈ ದಿನವನ್ನು ಬಹಳ ಭಕ್ತಿ, ಭಾವದಿಂದ ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್‌ 8ಕ್ಕೆ ಮಹಾಶಿವರಾತ್ರಿ ಇದೆ. ಈ ಸಂದರ್ಭ ಉತ್ತರ ಭಾರತದ ಪ್ರಮುಖ ಶಿವನ ದೇಗುಲಗಳ ಬಗ್ಗೆ ತಿಳಿಯಿರಿ.

  • ಮಹಾಶಿವರಾತ್ರಿ ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಶಿವನನ್ನು ಆರಾಧಿಸುವ ಈ ದಿನವನ್ನು ಬಹಳ ಭಕ್ತಿ, ಭಾವದಿಂದ ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್‌ 8ಕ್ಕೆ ಮಹಾಶಿವರಾತ್ರಿ ಇದೆ. ಈ ಸಂದರ್ಭ ಉತ್ತರ ಭಾರತದ ಪ್ರಮುಖ ಶಿವನ ದೇಗುಲಗಳ ಬಗ್ಗೆ ತಿಳಿಯಿರಿ.
ಶಿವರಾತ್ರಿ ಸಮಯದಲ್ಲಿ ಶಿವನ ದೇಗುಲಗಳಿಗೆ ಭೇಟಿ ನೀಡಿ ಶಿವನ ದರ್ಶನ ಪಡೆದರೆ ಪುಣ್ಯಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಹಿಂದೂಗಳದ್ದು. ಭಾರತದಲ್ಲಿ ಹಲವು ಪ್ರಸಿದ್ಧ ಶಿವಾಲಯಗಳಿವೆ. ಈ ಮಹಾಶಿವರಾತ್ರಿ ಸಂದರ್ಭ ಉತ್ತರ ಭಾರತದ ಪ್ರಸಿದ್ಧ ಶಿವನ ದೇಗುಲ ಬಗ್ಗೆ ಇಲ್ಲಿದೆ ಮಾಹಿತಿ. 
(1 / 9)

ಕೇದಾರನಾಥ ಸ್ವಾಮಿ ದೇವಾಲಯ: ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ಕೇದಾರನಾಥ ಸ್ವಾಮಿ ದೇವಾಲಯವೂ ಒಂದು. ಇದು ಉತ್ತರಾಖಂಡ ರಾಜ್ಯದಲ್ಲಿದೆ. ಪ್ರತಿ ವರ್ಷ ಈ ದೇವಾಲಯಕ್ಕೆ ಲಕ್ಷಾಂತರ ಮಂದಿ ಶಿವಭಕ್ತರು ಭೇಟಿ ನೀಡುತ್ತಾರೆ. 
(2 / 9)

ಕಾಶಿ ವಿಶ್ವನಾಥ ದೇವಾಲಯ: ಉತ್ತರ ಭಾರತದ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಕಾಶಿ ವಿಶ್ವನಾಥ ದೇವಾಲಯವು ಒಂದು. ವಾರಾಣಸಿಯಲ್ಲಿರುವ ಈ ದೇಗುಲಕ್ಕೆ ಭಾರತದಾದ್ಯಂತ ಶಿವಭಕ್ತರು ಭೇಟಿ ನೀಡುತ್ತಾರೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಇದೂ ಒಂದು. 
(3 / 9)

ಮಹಾಕಾಳೇಶ್ವರ ಜ್ಯೋತಿರ್ಲಿಂಗ ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇಗುಲವು 12 ಜ್ಯೋತಿರ್ಲಿಂಗಗಳಲ್ಲಿ ಒಂದು. ರುದ್ರಸಾಗರ ಸರೋವರ ತಟದಲ್ಲಿದೆ ಈ ಪವಿತ್ರ ದೇಗುಲ. 
(4 / 9)

ಮಂಕಮೇಶ್ವರ ದೇವಾಲಯ: ಈ ದೇವಾಲಯವು ಪ್ರಯಾಗ್‌ರಾಜ್‌ನ ಯಮುನಾ ನದಿಯ ದಡದಲ್ಲಿದೆ. ಮಹಶಿವರಾತ್ರಿ ಸಮಯದಲ್ಲಿ ಭಕ್ತರ ದಂಡು ಇಲ್ಲಿ ಸೇರಿರುತ್ತದೆ. 
(5 / 9)

ಗಢಮುಕ್ತೇಶ್ವರ: ಇದು ಉತ್ತರಪ್ರದೇಶದಲ್ಲಿರುವ ಪ್ರಸಿದ್ಧ ಶಿವನ ದೇವಾಲಯ. ಮಹಾಭಾರತ ಕಾಲದಲ್ಲಿನ ದೇವಾಲಯವಿದು ಎಂದು ಹೇಳಲಾಗುತ್ತದೆ. ಶಿವರಾತ್ರಿ ಸಮಯದಲ್ಲಿ ಸಹಸ್ರಾರು ಶಿವ ಭಕ್ತರು ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. 
(6 / 9)

ಲೋಧೇಶ್ವರ ಮಹಾದೇವ ದೇವಸ್ಥಾನ: ಈ ದೇವಾಲಯವು ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಮಹದೇವ ಎಂಬ ಹಳ್ಳಿಯಲ್ಲಿದೆ. ಈ ದೇವಾಲಯದಲ್ಲಿ ಪೂಜಿಸಲ್ಪಡುವ ಶಿವಲಿಂಗವು ಭಾರತದಾದ್ಯಂತ ಇರುವ ಶಕ್ತಿ ಪೀಠಗಳಲ್ಲಿ ಪೂಜಿಸುವ 52 ಶಿವಲಿಂಗಗಳಲ್ಲಿ ಅಪರೂಪದ್ದಾಗಿದೆ. 
(7 / 9)

ಗೋಲ ಗೋಕರ್ಣನಾಥ ದೇವಾಲಯ: ಇದು ಕೂಡ ಉತ್ತರ ಪ್ರದೇಶದಲ್ಲಿರುವ ಪ್ರಸಿದ್ಧ ಶಿವನ ದೇವಾಲಯಗಳಲ್ಲಿ ಒಂದಾಗಿದೆ. ಇದನ್ನು ಚೋಟಿ ಕಾಶಿ ಎಂದೂ ಕರೆಯುತ್ತಾರೆ.
(8 / 9)

ಧರ್ಮ, ಅಧ್ಯಾತ್ಮ, ಹಬ್ಬ, ಗ್ರಹಗತಿ, ಜ್ಯೋತಿಷ್ಯ, ಭವಿಷ್ಯ ಈ ಎಲ್ಲ ವಿಚಾರಗಳೂ ಒಂದೇ ಕಡೆ ಸಿಗಲು ನೀವೂ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ರಾಶಿಭವಿಷ್ಯ ಪುಟಕ್ಕೆ ಭೇಟಿ ನೀಡಬೇಕು. 
(9 / 9)

    ಹಂಚಿಕೊಳ್ಳಲು ಲೇಖನಗಳು