logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಾರ್ಚ್‌ ತಿಂಗಳಲ್ಲಿ ಬರುವ ಹಬ್ಬಗಳಿವು: ಶಿವರಾತ್ರಿ ಸೇರಿದಂತೆ ಯಾವೆಲ್ಲ ಹಬ್ಬಗಳಿವೆ? ಇಲ್ಲಿದೆ ವಿವರ

ಮಾರ್ಚ್‌ ತಿಂಗಳಲ್ಲಿ ಬರುವ ಹಬ್ಬಗಳಿವು: ಶಿವರಾತ್ರಿ ಸೇರಿದಂತೆ ಯಾವೆಲ್ಲ ಹಬ್ಬಗಳಿವೆ? ಇಲ್ಲಿದೆ ವಿವರ

Feb 10, 2024 09:53 AM IST

Festivals in March: ವಿಭಿನ್ನ ಸಂಸ್ಕೃತಿಗಳ ನಾಡಾಗಿರುವ ಭಾರತದ ವಿವಿಧ ಭಾಗಗಳಲ್ಲಿ ವಿಭಿನ್ನ ಹಬ್ಬಗಳನ್ನು ಆಚರಿಸಲಾಗುತ್ತದೆ. ಮಾರ್ಚ್‌ನಲ್ಲಿ ಯಾವ ರಾಜ್ಯದಲ್ಲಿ ಯಾವ ಹಬ್ಬ ಅದ್ಧೂರಿಯಾಗಿ ಆಚರಿಸುತ್ತಾರೆ ಅನ್ನೋದನ್ನ ತಿಳಿಯಿರಿ.

Festivals in March: ವಿಭಿನ್ನ ಸಂಸ್ಕೃತಿಗಳ ನಾಡಾಗಿರುವ ಭಾರತದ ವಿವಿಧ ಭಾಗಗಳಲ್ಲಿ ವಿಭಿನ್ನ ಹಬ್ಬಗಳನ್ನು ಆಚರಿಸಲಾಗುತ್ತದೆ. ಮಾರ್ಚ್‌ನಲ್ಲಿ ಯಾವ ರಾಜ್ಯದಲ್ಲಿ ಯಾವ ಹಬ್ಬ ಅದ್ಧೂರಿಯಾಗಿ ಆಚರಿಸುತ್ತಾರೆ ಅನ್ನೋದನ್ನ ತಿಳಿಯಿರಿ.
ಮಾರ್ಚ್‌ ತಿಂಗಳಲ್ಲಿ ವಿವಿಧ ರಾಜ್ಯಗಳಲ್ಲಿ ವಿವಿಧ ಹಬ್ಬಗಳನ್ನು ಆಚರಿಸುತ್ತಾರೆ. ವಸಂತೋತ್ಸವ, ಸುಗ್ಗಿ, ಹೋಲಿ ಸೇರಿದಂತೆ ಯಾವೆಲ್ಲಾ ಹಬ್ಬಗಳನ್ನು ಭಾರತೀಯ ಆಚರಿಸುತ್ತಾರೆ ಅನ್ನೋದರ ವಿವರ ಇಲ್ಲಿದೆ.
(1 / 7)
ಮಾರ್ಚ್‌ ತಿಂಗಳಲ್ಲಿ ವಿವಿಧ ರಾಜ್ಯಗಳಲ್ಲಿ ವಿವಿಧ ಹಬ್ಬಗಳನ್ನು ಆಚರಿಸುತ್ತಾರೆ. ವಸಂತೋತ್ಸವ, ಸುಗ್ಗಿ, ಹೋಲಿ ಸೇರಿದಂತೆ ಯಾವೆಲ್ಲಾ ಹಬ್ಬಗಳನ್ನು ಭಾರತೀಯ ಆಚರಿಸುತ್ತಾರೆ ಅನ್ನೋದರ ವಿವರ ಇಲ್ಲಿದೆ.(Unsplash)
Holi: ದೇಶದಲ್ಲಿ ಅದ್ಧೂರಿಯಾಗಿ ಆಚರಿಸುವ ಹಬ್ಬಗಳಲ್ಲಿ ಹೋಳಿ ಕೂಡ ಒಂದು. ಉತ್ತರ ಪ್ರದೇಶದ ಮಥುರಾ ಮತ್ತು ಬೃಂದಾವನದಲ್ಲಿ ನಡೆಯುವ ಹೋಳಿ ಹಬ್ಬವನ್ನು ನೋಡಲೇಬೇಕು. ಇಲ್ಲಿ 1 ವಾರ ಕಾಲ ಹೋಳಿ ಆಚರಿಸಲಾಗುತ್ತದೆ. ಮಾರ್ಚ್ 25 ರಂದು ಪ್ರತಿ ವರ್ಷ ಹೋಳಿ ಮಾಡುತ್ತಾರೆ.
(2 / 7)
Holi: ದೇಶದಲ್ಲಿ ಅದ್ಧೂರಿಯಾಗಿ ಆಚರಿಸುವ ಹಬ್ಬಗಳಲ್ಲಿ ಹೋಳಿ ಕೂಡ ಒಂದು. ಉತ್ತರ ಪ್ರದೇಶದ ಮಥುರಾ ಮತ್ತು ಬೃಂದಾವನದಲ್ಲಿ ನಡೆಯುವ ಹೋಳಿ ಹಬ್ಬವನ್ನು ನೋಡಲೇಬೇಕು. ಇಲ್ಲಿ 1 ವಾರ ಕಾಲ ಹೋಳಿ ಆಚರಿಸಲಾಗುತ್ತದೆ. ಮಾರ್ಚ್ 25 ರಂದು ಪ್ರತಿ ವರ್ಷ ಹೋಳಿ ಮಾಡುತ್ತಾರೆ.(Unsplash)
Chapchar Kut: ಚಪ್ಚರ್ ಕುಟ್ ವಸಂತೋತ್ಸವವನ್ನು ಪ್ರಮುಖವಾಗಿ ಮಿಜೋರಾಂನಲ್ಲಿ ಆಚರಿಸುಲಾಗುತ್ತದೆ. ಇದು ಕೃಷಿಗಾಗಿ ಕಾಡುಗಳನ್ನು ತೆರವುಗೊಳಿಸುವುದನ್ನು ಸೂಚಿಸುತ್ತದೆ. ಸಾಂಪ್ರದಾಯಿಕ ನೃತ್ಯಗಳು, ಸಂಗೀತ ಮತ್ತು ಹಬ್ಬಗಳೊಂದಿಗೆ ಆಚರಿಸಲಾಗುತ್ತದೆ.ಚಪ್ಟರ್ ಕುಟ್ ಅವನ್ನು ಮಾರ್ಚ್ 1 ರಂದು ಮಿಜೋರಾಂನಲ್ಲಿ ಆಚರಿಸಲಾಗುತ್ತದೆ. ಅಂದು ಈ ರಾಜ್ಯದಲ್ಲಿ ಸಾರ್ವಜನಿಕ ರಜೆ ಇರುತ್ತದೆ. 
(3 / 7)
Chapchar Kut: ಚಪ್ಚರ್ ಕುಟ್ ವಸಂತೋತ್ಸವವನ್ನು ಪ್ರಮುಖವಾಗಿ ಮಿಜೋರಾಂನಲ್ಲಿ ಆಚರಿಸುಲಾಗುತ್ತದೆ. ಇದು ಕೃಷಿಗಾಗಿ ಕಾಡುಗಳನ್ನು ತೆರವುಗೊಳಿಸುವುದನ್ನು ಸೂಚಿಸುತ್ತದೆ. ಸಾಂಪ್ರದಾಯಿಕ ನೃತ್ಯಗಳು, ಸಂಗೀತ ಮತ್ತು ಹಬ್ಬಗಳೊಂದಿಗೆ ಆಚರಿಸಲಾಗುತ್ತದೆ.ಚಪ್ಟರ್ ಕುಟ್ ಅವನ್ನು ಮಾರ್ಚ್ 1 ರಂದು ಮಿಜೋರಾಂನಲ್ಲಿ ಆಚರಿಸಲಾಗುತ್ತದೆ. ಅಂದು ಈ ರಾಜ್ಯದಲ್ಲಿ ಸಾರ್ವಜನಿಕ ರಜೆ ಇರುತ್ತದೆ. (HT File Photo)
Yaosang: ಮಣಿಪುರದಲ್ಲಿ ಈ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದು ಮೂಲ ಹೋಳಿ ಹಬ್ಬದ ಮಣಿಪುರಿ ಆವೃತ್ತಿಯಾಗಿದೆ. ಈ ದಿನ ನೃತ್ಯವನ್ನು ಮಾಡುತ್ತಾರೆ. ಪರಸ್ಪರ ಬಣ್ಣಗಳನ್ನು ಎಸೆಯುವ ಮೂಲಕ ಮೆರವಣಿಗೆಯಲ್ಲಿ ಸಾಗುತ್ತಾರೆ. ಈ ವರ್ಷ ಯೋಸಾಂಗ್ ಹಬ್ಬವನ್ನು ಮಾರ್ಚ್ 25 ಮತ್ತು 26 ರಂದು ಆಚರಿಸಲಾಗುತ್ತದೆ
(4 / 7)
Yaosang: ಮಣಿಪುರದಲ್ಲಿ ಈ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದು ಮೂಲ ಹೋಳಿ ಹಬ್ಬದ ಮಣಿಪುರಿ ಆವೃತ್ತಿಯಾಗಿದೆ. ಈ ದಿನ ನೃತ್ಯವನ್ನು ಮಾಡುತ್ತಾರೆ. ಪರಸ್ಪರ ಬಣ್ಣಗಳನ್ನು ಎಸೆಯುವ ಮೂಲಕ ಮೆರವಣಿಗೆಯಲ್ಲಿ ಸಾಗುತ್ತಾರೆ. ಈ ವರ್ಷ ಯೋಸಾಂಗ್ ಹಬ್ಬವನ್ನು ಮಾರ್ಚ್ 25 ಮತ್ತು 26 ರಂದು ಆಚರಿಸಲಾಗುತ್ತದೆ(Wikimedia Commons (File Photo))
Gangaur: ಗಂಗೌರ್ ಹಬ್ಬವನ್ನು ರಾಜಸ್ಥಾನ, ಗುಜರಾತ್ ಹಾಗೂ ಮಧ್ಯಪ್ರದೇಶದ ಭಾಗಗಳಲ್ಲಿ ಆಚರಿಸಲಾಗುವ ಸಾಂಪ್ರದಾಯಿಕ ಹಬ್ಬವಾಗಿದೆ. ಇದು ಗೌರಿ ದೇವಿಗೆ (ಪಾರ್ವತಿಯ ಅವತಾರ) ಸಮರ್ಪಿತವಾದ ಹಬ್ಬವಾಗಿದೆ. ಈ ದಿನ ಪಾರ್ವತಿ ದೇವಿ ಮೆರವಣಿಗೆ, ಹಾಡು, ಪ್ರಾರ್ಥನೆಗಳೊಂದಿಗೆ ಪೂಜಿಸಲಾಗುತ್ತದೆ. ಗಂಗೌರ್ ಹಬ್ಬವನ್ನು 18 ದಿನಗಳ ಕಾಲ ಆಚರಿಸುತ್ತಾರೆ. 
(5 / 7)
Gangaur: ಗಂಗೌರ್ ಹಬ್ಬವನ್ನು ರಾಜಸ್ಥಾನ, ಗುಜರಾತ್ ಹಾಗೂ ಮಧ್ಯಪ್ರದೇಶದ ಭಾಗಗಳಲ್ಲಿ ಆಚರಿಸಲಾಗುವ ಸಾಂಪ್ರದಾಯಿಕ ಹಬ್ಬವಾಗಿದೆ. ಇದು ಗೌರಿ ದೇವಿಗೆ (ಪಾರ್ವತಿಯ ಅವತಾರ) ಸಮರ್ಪಿತವಾದ ಹಬ್ಬವಾಗಿದೆ. ಈ ದಿನ ಪಾರ್ವತಿ ದೇವಿ ಮೆರವಣಿಗೆ, ಹಾಡು, ಪ್ರಾರ್ಥನೆಗಳೊಂದಿಗೆ ಪೂಜಿಸಲಾಗುತ್ತದೆ. ಗಂಗೌರ್ ಹಬ್ಬವನ್ನು 18 ದಿನಗಳ ಕಾಲ ಆಚರಿಸುತ್ತಾರೆ. (HT Photo/Arun Mondhe)
Panguni Uthiram: ತಮಿಳುನಾಡಿನಲ್ಲಿ ಪಂಗುನಿ ಉತಿರಂ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದಲ್ಲದೆ, ಪ್ರಪಂಚದಾದ್ಯಂತ ತಮಿಳರು ಈ ಹಬ್ಬವನ್ನು ಮರೆಯದೆ ಸಂಭ್ರಮಿಸುತ್ತಾರೆ. ಇದು ತಮಿಳು ತಿಂಗಳ (ಮಾರ್ಚ್-ಏಪ್ರಿಲ್) ಪಂಗುನಿನಲ್ಲಿ ಬರುತ್ತದೆ. ಇದು ಶಿವ ಮತ್ತು ಪಾರ್ವತಿ ದೇವಿಯ ವಿವಾಹದ ಆಚರಣೆಯಾಗಿದೆ. ಈ ವರ್ಷ ಮಾರ್ಚ್ 24 ರಂದು ಆಚರಿಸಲಾಗುತ್ತದೆ.
(6 / 7)
Panguni Uthiram: ತಮಿಳುನಾಡಿನಲ್ಲಿ ಪಂಗುನಿ ಉತಿರಂ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದಲ್ಲದೆ, ಪ್ರಪಂಚದಾದ್ಯಂತ ತಮಿಳರು ಈ ಹಬ್ಬವನ್ನು ಮರೆಯದೆ ಸಂಭ್ರಮಿಸುತ್ತಾರೆ. ಇದು ತಮಿಳು ತಿಂಗಳ (ಮಾರ್ಚ್-ಏಪ್ರಿಲ್) ಪಂಗುನಿನಲ್ಲಿ ಬರುತ್ತದೆ. ಇದು ಶಿವ ಮತ್ತು ಪಾರ್ವತಿ ದೇವಿಯ ವಿವಾಹದ ಆಚರಣೆಯಾಗಿದೆ. ಈ ವರ್ಷ ಮಾರ್ಚ್ 24 ರಂದು ಆಚರಿಸಲಾಗುತ್ತದೆ.(AP)
Maha Shivaratri: ಮಹಾ ಶಿವರಾತ್ರಿಯ ದಿನ ಉತ್ತರ ಪ್ರದೇಶದ ವಾರಣಾಸಿಗೆ ಭೇಟಿ ಕೊಡಿ. ವಾರಣಾಸಿ ಹಿಂದೂ ಧರ್ಮದ ಅತ್ಯಂತ ಪವಿತ್ರ ನಗರಗಳಲ್ಲಿ ಒಂದಾಗಿದೆ. ಇಲ್ಲಿನ ಪರಮಶಿವನನ್ನು ಕಾಶಿ ವಿಶ್ವೇಶ್ವರ ಎಂದು ಕರೆಯುತ್ತಾರೆ. ಶಿವರಾತ್ರಿಯಂದು ವಾರಣಾಸಿ ನಗರ ಅಧ್ಯಾತ್ಮಿಕ ಉತ್ಸಾಹದಿಂದ ಜೀವಂತವಾಗಿರುತ್ತದೆ. ಪ್ರಾರ್ಥನೆಗಳು, ಆಚರಣೆಗಳಿಗಾಗಿ ಭಕ್ತರು ಗಂಗಾನದಿಯ ದಡದಲ್ಲಿ ಸೇರುತ್ತಾರೆ. ಮಾರ್ಚ್ 8 ರಂದು ಮಹಾ ಶಿವರಾತ್ರಿಯವನ್ನು ಆಚರಿಸಲಾಗುತ್ತದೆ.
(7 / 7)
Maha Shivaratri: ಮಹಾ ಶಿವರಾತ್ರಿಯ ದಿನ ಉತ್ತರ ಪ್ರದೇಶದ ವಾರಣಾಸಿಗೆ ಭೇಟಿ ಕೊಡಿ. ವಾರಣಾಸಿ ಹಿಂದೂ ಧರ್ಮದ ಅತ್ಯಂತ ಪವಿತ್ರ ನಗರಗಳಲ್ಲಿ ಒಂದಾಗಿದೆ. ಇಲ್ಲಿನ ಪರಮಶಿವನನ್ನು ಕಾಶಿ ವಿಶ್ವೇಶ್ವರ ಎಂದು ಕರೆಯುತ್ತಾರೆ. ಶಿವರಾತ್ರಿಯಂದು ವಾರಣಾಸಿ ನಗರ ಅಧ್ಯಾತ್ಮಿಕ ಉತ್ಸಾಹದಿಂದ ಜೀವಂತವಾಗಿರುತ್ತದೆ. ಪ್ರಾರ್ಥನೆಗಳು, ಆಚರಣೆಗಳಿಗಾಗಿ ಭಕ್ತರು ಗಂಗಾನದಿಯ ದಡದಲ್ಲಿ ಸೇರುತ್ತಾರೆ. ಮಾರ್ಚ್ 8 ರಂದು ಮಹಾ ಶಿವರಾತ್ರಿಯವನ್ನು ಆಚರಿಸಲಾಗುತ್ತದೆ.(HT Photo/Anil Kumar Maurya)

    ಹಂಚಿಕೊಳ್ಳಲು ಲೇಖನಗಳು