logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Largest Kidney Stone: ವಿಶ್ವದ ಅತಿದೊಡ್ಡ ಕಿಡ್ನಿ ಸ್ಟೋನ್ ಹೊರತೆಗೆದು ಭಾರತದ ದಾಖಲೆ ಮುರಿದ ಶ್ರೀಲಂಕಾ ವೈದ್ಯರು

Largest Kidney Stone: ವಿಶ್ವದ ಅತಿದೊಡ್ಡ ಕಿಡ್ನಿ ಸ್ಟೋನ್ ಹೊರತೆಗೆದು ಭಾರತದ ದಾಖಲೆ ಮುರಿದ ಶ್ರೀಲಂಕಾ ವೈದ್ಯರು

Jun 14, 2023 05:04 PM IST

World Largest Kidney Stone: ಶ್ರೀಲಂಕಾ ಸೇನಾಸ್ಪತ್ರೆಯ ವೈದ್ಯರ ತಂಡವೊಂದು ವಿಶ್ವದ ಅತಿದೊಡ್ಡ ಕಿಡ್ನಿ ಸ್ಟೋನ್ (ಮೂತ್ರಪಿಂಡದ ಕಲ್ಲು) ತೆಗೆದುಹಾಕುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ 2004ರಲ್ಲಿ ಭಾರತೀಯ ವೈದ್ಯರು ಮಾಡಿದ್ದ ದಾಖಲೆಯನ್ನು ಮುರಿದಿದ್ದಾರೆ.

  • World Largest Kidney Stone: ಶ್ರೀಲಂಕಾ ಸೇನಾಸ್ಪತ್ರೆಯ ವೈದ್ಯರ ತಂಡವೊಂದು ವಿಶ್ವದ ಅತಿದೊಡ್ಡ ಕಿಡ್ನಿ ಸ್ಟೋನ್ (ಮೂತ್ರಪಿಂಡದ ಕಲ್ಲು) ತೆಗೆದುಹಾಕುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ 2004ರಲ್ಲಿ ಭಾರತೀಯ ವೈದ್ಯರು ಮಾಡಿದ್ದ ದಾಖಲೆಯನ್ನು ಮುರಿದಿದ್ದಾರೆ.
ಕೊಲಂಬೊ ಆರ್ಮಿ ಆಸ್ಪತ್ರೆಯಲ್ಲಿ ದಾಖಲಾದ ವ್ಯಕ್ತಿಯೋರ್ವನ ಮೂತ್ರಪಿಂಡದಲ್ಲಿ 13.372 ಸೆಂಟಿಮೀಟರ್ (5.264 ಇಂಚು) ಉದ್ದ ಮತ್ತು 801 ಗ್ರಾಂ ತೂಕದ ಕಲ್ಲು ಇತ್ತು. ವರದಿಗಳ ಪ್ರಕಾರ ಇದು ವಿಶ್ವದ ಅತಿದೊಡ್ಡ ಕಿಡ್ನಿ ಸ್ಟೋನ್ ಆಗಿದೆ. 
(1 / 5)

ಜೂನ್​ 1 ರಂದು ಶಸ್ತ್ರಚಿಕಿತ್ಸೆ ನಡೆಸಿದ ಕನ್ಸಲ್ಟೆಂಟ್ ಯುರಾಲಜಿಸ್ಟ್ ಲೆಫ್ಟಿನೆಂಟ್ ಕರ್ನಲ್ ಹಾಗೂ ಜೆನಿಟೊ ಯೂರಿನರಿ ಯೂನಿಟ್​​ನ ಮುಖ್ಯಸ್ಥ ಡಾ. ಕೆ. ಸುದರ್ಶನ್ ಅವರ ನೇತೃತ್ವದ ವೈದ್ಯಕೀಯ ತಂಡವು ಕಿಡ್ನಿ ಸ್ಟೋನ್ ಅನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. 
(2 / 5)

ಕೊಲಂಬೊ ಆರ್ಮಿ ಆಸ್ಪತ್ರೆಯ ವೈದ್ಯರು ಈ ಮೂಲಕ 2004ರಲ್ಲಿ ಭಾರತೀಯ ವೈದ್ಯರು ಮಾಡಿದ್ದ ದಾಖಲೆಯನ್ನು ಮುರಿದಿದ್ದಾರೆ.  
(3 / 5)

2004 ರಲ್ಲಿ ಭಾರತದಲ್ಲಿ ವ್ಯಕ್ತಿಯೊಬ್ಬರಲ್ಲಿ ಇದ್ದ 13 ಸೆಂಟಿಮೀಟರ್ ಉದ್ದದ ಮೂತ್ರಪಿಂಡದ ಕಲ್ಲನ್ನು ವೈದ್ಯರು ತೆಗೆದುಹಾಕಿದ್ದರು. ಇದು ಈವರೆಗೆ ವಿಶ್ವದ ಅತಿದೊಡ್ಡ ಕಿಡ್ನಿ ಸ್ಟೋನ್ ಆಗಿತ್ತು.  
(4 / 5)

ಹಾಗೆಯೇ 2008 ರಲ್ಲಿ ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬರಲ್ಲಿ 620 ಗ್ರಾಂ ತೂಕದ ಕಿಡ್ನಿ ಸ್ಟೋನ್ ತೆಗೆದುಹಾಕಲಾಗಿತ್ತು. ಇದು ವಿಶ್ವದ ಅತ್ಯಂತ ಭಾರವಾದ ಮೂತ್ರಪಿಂಡದ ಕಲ್ಲಾಗಿತ್ತು. 
(5 / 5)

    ಹಂಚಿಕೊಳ್ಳಲು ಲೇಖನಗಳು