logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Samsung Galaxy Z Fold: ಸ್ಯಾಮ್‌ಸಂಗ್‌ನ ಮಡುಚಬಹುದಾದ ಸ್ಮಾರ್ಟ್‌ಫೋನ್‌ ಜಾಗತಿಕವಾಗಿ ಲಾಂಚ್‌, ಭಾರತದಲ್ಲಿ ಬಿಡುಗಡೆ ಯಾವಾಗ

Samsung Galaxy Z Fold: ಸ್ಯಾಮ್‌ಸಂಗ್‌ನ ಮಡುಚಬಹುದಾದ ಸ್ಮಾರ್ಟ್‌ಫೋನ್‌ ಜಾಗತಿಕವಾಗಿ ಲಾಂಚ್‌, ಭಾರತದಲ್ಲಿ ಬಿಡುಗಡೆ ಯಾವಾಗ

Jan 09, 2024 07:42 PM IST

Samsung foldable smartphones: ಜಾಗತಿಕವಾಗಿ ಸ್ಯಾಮಸಂಗ್‌ ಕಂಪನಿಯು ನೂತನ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ಗಳನ್ನು ನಿನ್ನೆ ಅಂದರೆ ಜುಲೈ 26ರಂದು ಬಿಡುಗಡೆ ಮಾಡಿದೆ. ಭಾರತದಲ್ಲೂ ಈ ಸ್ಮಾರ್ಟ್‌ಫೋನ್‌ ಕುರಿತು ಕ್ರೇಜ್‌ ಹುಟ್ಟಿಕೊಂಡಿದೆ.

Samsung foldable smartphones: ಜಾಗತಿಕವಾಗಿ ಸ್ಯಾಮಸಂಗ್‌ ಕಂಪನಿಯು ನೂತನ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ಗಳನ್ನು ನಿನ್ನೆ ಅಂದರೆ ಜುಲೈ 26ರಂದು ಬಿಡುಗಡೆ ಮಾಡಿದೆ. ಭಾರತದಲ್ಲೂ ಈ ಸ್ಮಾರ್ಟ್‌ಫೋನ್‌ ಕುರಿತು ಕ್ರೇಜ್‌ ಹುಟ್ಟಿಕೊಂಡಿದೆ.
ಜುಲೈ 26ರಂದು ಸ್ಯಾಮ್‌ಸಂಗ್‌ ಕಂಪನಿಯು ಬಹುನಿರೀಕ್ಷಿತ Galaxy Z Fold 5  ಮತ್ತು  Flip 5 ಎಂಬ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ಗಳ ಮಾರಾಟವು ಆಗಸ್ಟ್‌ 11ರಂದು ಆರಂಭವಾಗಲಿದೆ. 
(1 / 8)
ಜುಲೈ 26ರಂದು ಸ್ಯಾಮ್‌ಸಂಗ್‌ ಕಂಪನಿಯು ಬಹುನಿರೀಕ್ಷಿತ Galaxy Z Fold 5  ಮತ್ತು  Flip 5 ಎಂಬ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ಗಳ ಮಾರಾಟವು ಆಗಸ್ಟ್‌ 11ರಂದು ಆರಂಭವಾಗಲಿದೆ. (samsung)
ಆದರೆ, ಭಾರತದಲ್ಲಿ ಈ ಉತ್ಪನ್ನಗಳು ಸದ್ಯ ದೊರಕದು. ಆಗಸ್ಟ್‌ 11ರ ಬಳಿಕ ಕೆಲವು ದಿನ ಕಳೆದು ಭಾರತದಲ್ಲಿ ಈ ಸ್ಮಾರ್ಟ್‌ಫೋನ್‌ ಲಾಂಚ್‌ ಆಗಬಹುದು ಎಂದು ಮೂಲಗಳು ತಿಳಿಸಿವೆ.
(2 / 8)
ಆದರೆ, ಭಾರತದಲ್ಲಿ ಈ ಉತ್ಪನ್ನಗಳು ಸದ್ಯ ದೊರಕದು. ಆಗಸ್ಟ್‌ 11ರ ಬಳಿಕ ಕೆಲವು ದಿನ ಕಳೆದು ಭಾರತದಲ್ಲಿ ಈ ಸ್ಮಾರ್ಟ್‌ಫೋನ್‌ ಲಾಂಚ್‌ ಆಗಬಹುದು ಎಂದು ಮೂಲಗಳು ತಿಳಿಸಿವೆ.(Samsung)
ಮುಂದಿನ ಕೆಲವು ವರ್ಷಗಳಲ್ಲಿ ಫೋಲ್ಡೆಬಲ್‌ ಸಾಧನಗಳ ಮಾರುಕಟ್ಟೆಯು 100 ದಶಲಕ್ಷ ಸಾಧನಗಳಿಗೆ ತಲುಪಲಿದೆ. ಈಗಾಗಲೇ ಸಾಕಷ್ಟು ಗ್ರಾಹಕರು ಇಂತಹ ಫೋನ್‌ಗಳ ಕುರಿತು ಒಲವು ತೋರುತ್ತಿದ್ದಾರೆ ಎಂದು ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್‌ನ ಮೊಬೈಲ್‌ ಎಕ್ಸ್‌ಪಿರಿಯೆನ್ಸ್‌ ಬಿಸ್ನೆಸ್‌ ವಿಭಾಗದ ಮುಖ್ಯಸ್ಥ ಟಿಎಂ ರೋಹ್‌ ಹೇಳಿದ್ದಾರೆ.
(3 / 8)
ಮುಂದಿನ ಕೆಲವು ವರ್ಷಗಳಲ್ಲಿ ಫೋಲ್ಡೆಬಲ್‌ ಸಾಧನಗಳ ಮಾರುಕಟ್ಟೆಯು 100 ದಶಲಕ್ಷ ಸಾಧನಗಳಿಗೆ ತಲುಪಲಿದೆ. ಈಗಾಗಲೇ ಸಾಕಷ್ಟು ಗ್ರಾಹಕರು ಇಂತಹ ಫೋನ್‌ಗಳ ಕುರಿತು ಒಲವು ತೋರುತ್ತಿದ್ದಾರೆ ಎಂದು ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್‌ನ ಮೊಬೈಲ್‌ ಎಕ್ಸ್‌ಪಿರಿಯೆನ್ಸ್‌ ಬಿಸ್ನೆಸ್‌ ವಿಭಾಗದ ಮುಖ್ಯಸ್ಥ ಟಿಎಂ ರೋಹ್‌ ಹೇಳಿದ್ದಾರೆ.(Samsung)
ಕಳೆದ ಐದು ವರ್ಷಗಳಲ್ಲಿ ಕಂಪನಿಯ ಫೋಲ್ಡೆಬಲ್‌ ಸಾಧನಗಳ ಕುರಿತು ಭಾರತದ ಗ್ರಾಹಕರು ಸಾಕಷ್ಟು ಆಸಕ್ತಿ ವಹಿಸಿದ್ದಾರೆ. ಇದು ಇನ್ನೋವೇಟಿವ್‌ ಆಗಿರುವುದರಿಂದ ಸಾಕಷ್ಟು ಬೇಡಿಕೆ ಪಡೆದುಕೊಂಡಿದೆ ಎಂದು ಸ್ಯಾಮ್‌ಸಂಗ್‌ ಇಂಡಿಯಾದ ನಿರ್ದೇಶಕರಾದ ಆದಿತ್ಯ ಬಾಬರ್‌ ಹೇಳಿದ್ದಾರೆ.
(4 / 8)
ಕಳೆದ ಐದು ವರ್ಷಗಳಲ್ಲಿ ಕಂಪನಿಯ ಫೋಲ್ಡೆಬಲ್‌ ಸಾಧನಗಳ ಕುರಿತು ಭಾರತದ ಗ್ರಾಹಕರು ಸಾಕಷ್ಟು ಆಸಕ್ತಿ ವಹಿಸಿದ್ದಾರೆ. ಇದು ಇನ್ನೋವೇಟಿವ್‌ ಆಗಿರುವುದರಿಂದ ಸಾಕಷ್ಟು ಬೇಡಿಕೆ ಪಡೆದುಕೊಂಡಿದೆ ಎಂದು ಸ್ಯಾಮ್‌ಸಂಗ್‌ ಇಂಡಿಯಾದ ನಿರ್ದೇಶಕರಾದ ಆದಿತ್ಯ ಬಾಬರ್‌ ಹೇಳಿದ್ದಾರೆ.(Samsung)
ಸ್ಯಾಮ್‌ಸಂಗ್‌ ಕಂಪನಿಯು ಈ ಹಿಂದೆ ಪರಿಚಯಿಸಿದ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ ಐದನೇ ತಲೆಮಾರಿನ ನೂತನ ಫೋನ್‌ಗಳು ಬಳಕೆದಾರರ ಅನುಭವವನ್ನು ಇನ್ನಷ್ಟು ಉತ್ತಮಪಡಿಸುವ ನಿರೀಕ್ಷೆಯಿದೆ. ಇದರ ಸ್ನಾಪ್‌ಡ್ರಾಗನ್‌ 8 ಜೆನ್‌ 2 ಚಿಪ್‌ಸೆಟ್‌ ಅತ್ಯುತ್ತಮ ಪರ್ಫಾಮೆನ್ಸ್‌ ಹೊಂದಿರಲಿದೆ.
(5 / 8)
ಸ್ಯಾಮ್‌ಸಂಗ್‌ ಕಂಪನಿಯು ಈ ಹಿಂದೆ ಪರಿಚಯಿಸಿದ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ ಐದನೇ ತಲೆಮಾರಿನ ನೂತನ ಫೋನ್‌ಗಳು ಬಳಕೆದಾರರ ಅನುಭವವನ್ನು ಇನ್ನಷ್ಟು ಉತ್ತಮಪಡಿಸುವ ನಿರೀಕ್ಷೆಯಿದೆ. ಇದರ ಸ್ನಾಪ್‌ಡ್ರಾಗನ್‌ 8 ಜೆನ್‌ 2 ಚಿಪ್‌ಸೆಟ್‌ ಅತ್ಯುತ್ತಮ ಪರ್ಫಾಮೆನ್ಸ್‌ ಹೊಂದಿರಲಿದೆ.(Samsung)
ಮರುವಿನ್ಯಾಸದ ಈ ಸ್ಮಾರ್ಟ್‌ಫೋನ್‌ ತುಸು ಹಗುರವಾಗಿದೆ. ಸುಲಭವಾಗಿ ಮಡುಚಿ ಕಿಸೆಯೊಳಗೆ ಇಟ್ಟುಕೊಳ್ಳಬಹುದು. 
(6 / 8)
ಮರುವಿನ್ಯಾಸದ ಈ ಸ್ಮಾರ್ಟ್‌ಫೋನ್‌ ತುಸು ಹಗುರವಾಗಿದೆ. ಸುಲಭವಾಗಿ ಮಡುಚಿ ಕಿಸೆಯೊಳಗೆ ಇಟ್ಟುಕೊಳ್ಳಬಹುದು. (Samsung)
2023ರ ತ್ರೈಮಾಸಿಕದಲ್ಲಿ  ಸ್ಯಾಮ್‌ಸಂಗ್ನ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಅಂದರೆ, ಹೆಚ್ಚು ದರದ ಸ್ಯಾಮ್‌ಸಂಗ್‌ ಫೋನ್‌ಗಳು ಹೆಚ್ಚು ಗ್ರಾಹಕರನ್ನು ಆಕರ್ಷಿಸುತ್ತಿದೆ. 
(7 / 8)
2023ರ ತ್ರೈಮಾಸಿಕದಲ್ಲಿ  ಸ್ಯಾಮ್‌ಸಂಗ್ನ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಅಂದರೆ, ಹೆಚ್ಚು ದರದ ಸ್ಯಾಮ್‌ಸಂಗ್‌ ಫೋನ್‌ಗಳು ಹೆಚ್ಚು ಗ್ರಾಹಕರನ್ನು ಆಕರ್ಷಿಸುತ್ತಿದೆ. (Samsung)
ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಯಾಮ್‌ಸಂಗ್‌ ಕಂಪನಿಯು ಗ್ಯಾಲಾಕ್ಸಿ ಟ್ಯಾಬ್‌ ಎಸ್‌9  ಎಂಬ ಸ್ಮಾರ್ಟ್‌ಫೋನ್‌ ಪರಿಚಯಿಸಿದೆ. ಇದರ ದರ 799 ಡಾಲರ್‌ ಇದೆ. ಇದರೊಂದಿಗೆ ಎರಡು ಸ್ಮಾರ್ಟ್‌ವಾಚ್‌ಗಳನ್ನೂ ಪರಿಚಯಿಸಿದೆ. 
(8 / 8)
ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಯಾಮ್‌ಸಂಗ್‌ ಕಂಪನಿಯು ಗ್ಯಾಲಾಕ್ಸಿ ಟ್ಯಾಬ್‌ ಎಸ್‌9  ಎಂಬ ಸ್ಮಾರ್ಟ್‌ಫೋನ್‌ ಪರಿಚಯಿಸಿದೆ. ಇದರ ದರ 799 ಡಾಲರ್‌ ಇದೆ. ಇದರೊಂದಿಗೆ ಎರಡು ಸ್ಮಾರ್ಟ್‌ವಾಚ್‌ಗಳನ್ನೂ ಪರಿಚಯಿಸಿದೆ. (Samsung)

    ಹಂಚಿಕೊಳ್ಳಲು ಲೇಖನಗಳು