logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಅತ್ತೆ ಮಂದಾಕಿನಿ ಬೆಂಬಲಕ್ಕೆ ನಿಂತು ಅಬ್ಬರಿಸಿದ ಮಹಿಮಾ; ಸರ ರೋಲ್ಡ್‌ಗೋಲ್ಡಾ? ಒರಿಜಿನಲಾ ಎಂದು ತನಿಖೆ ಮಾಡಿದವರಿಗೆ ಶಾಸ್ತ್ರಿ

Amruthadhaare: ಅತ್ತೆ ಮಂದಾಕಿನಿ ಬೆಂಬಲಕ್ಕೆ ನಿಂತು ಅಬ್ಬರಿಸಿದ ಮಹಿಮಾ; ಸರ ರೋಲ್ಡ್‌ಗೋಲ್ಡಾ? ಒರಿಜಿನಲಾ ಎಂದು ತನಿಖೆ ಮಾಡಿದವರಿಗೆ ಶಾಸ್ತ್ರಿ

Apr 29, 2024 03:48 PM IST

Amruthadhaare Serial Today Episode: ಝೀ ಕನ್ನಡ ವಾಹಿನಿ ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆಯ ಪ್ರಮೋ ಬಿಡುಗಡೆ ಮಾಡಿದೆ. ಈ ಎಪಿಸೋಡ್‌ನಲ್ಲಿ ಮಂದಾಕಿನಿ ಅತ್ತೆಗೆ ಆಗುವ ಅವಮಾನವನ್ನು ಮಹಿಮಾ ತಪ್ಪಿಸಿದ್ದಾಳೆ. ಶಕುಂತಲಾದೇವಿ ಸ್ನೇಹಿತೆಯರ ಸೊಕ್ಕು ಇಳಿಸಿದ್ದಾಳೆ.

  • Amruthadhaare Serial Today Episode: ಝೀ ಕನ್ನಡ ವಾಹಿನಿ ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆಯ ಪ್ರಮೋ ಬಿಡುಗಡೆ ಮಾಡಿದೆ. ಈ ಎಪಿಸೋಡ್‌ನಲ್ಲಿ ಮಂದಾಕಿನಿ ಅತ್ತೆಗೆ ಆಗುವ ಅವಮಾನವನ್ನು ಮಹಿಮಾ ತಪ್ಪಿಸಿದ್ದಾಳೆ. ಶಕುಂತಲಾದೇವಿ ಸ್ನೇಹಿತೆಯರ ಸೊಕ್ಕು ಇಳಿಸಿದ್ದಾಳೆ.
ಏನು ಶಕುಂತಲಾ, ನಿಮ್ಮ ಭೀಗತಿ ದೊಡ್ಡ ಸ್ಕ್ಯಾಮ್‌ ಮಾಡಿದಂತೆ ಇದೆ. ನಿಮ್ಮ ಮಗನಿಗೆ ಬರ್ತ್‌ಡೇ ಅಂತ ಚೈನ್‌ ಹಾಕಿದ್ರಲ್ವ. ಅದು ರೋಲ್ಡ್‌ ಗೋಲ್ಡ್‌ ಅಂತೆ. ಅಂತಹ ಯಾವುದೇ ಡಿಸೈನ್‌ ಆ ಶಾಪ್‌ನಲ್ಲಿ ಇಲ್ವಂತೆ. ನಾನು ಆ ಶಾಪ್‌ನವರಲ್ಲಿ ವಿಚಾರಿಸಿದೆ ಎಂದು ಶಕುಂತಲಾದೇವಿಯ ಸ್ನೇಹಿತೆ ಎಲ್ಲರ ಮುಂದೆ ಮಂದಾಕಿನಿಯ ಸುದ್ದಿ ಮಾತನಾಡುತ್ತಾಳೆ.  
(1 / 14)

ಶಕುಂತಲಾದೇವಿಯ ಸ್ನೇಹಿತೆ ಹಾಗೆ ಹೇಳಿದಾಗ ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಈಗಾಗಲೇ ಈ ವಿಷಯ ತಿಳಿದಿರುವ ಭೂಮಿಕಾಳಿಗೂ ಏನು ಮಾಡಬೇಕೆಂದು ತಿಳಿಯುವುದಿಲ್ಲ. 
(2 / 14)

ನಾನು ಆಗ್ಲೇ ಅಂದುಕೊಂಡೆ. ಇದು ಗೋಲ್ಡೇ ಅಲ್ಲ, ರೋಲ್ಡ್‌ ಗೋಲ್ಡ್‌ ಅಂತ ಎಂದು ಮತ್ತೊಬ್ಬಳು ಸ್ನೇಹಿತೆಯೂ ಕೊಂಕಾಗಿ ಮಾತಾಡನಾಡುತ್ತಾಳೆ.
(3 / 14)

ನೋಡಿ ಇಲ್ಲಿ ಜುವೆಲ್ಲರಿ ಶಾಪ್‌ನವರೇ ಮಾಡಿರುವ ಮೆಸೆಜ್‌. ನಿಮ್ಮ ಬೀಗತಿ ಹೇಳಿದ್ದೆಲ್ಲ ಸುಳ್ಳು. ಬಿಲ್ಡಪ್‌ಗೋಸ್ಕರ ಹೀಗೆಲ್ಲ ಮಾಡ್ತಾರೆ ಎಂದು ಶಕುಂತಲಾದೇವಿಯ ಸ್ನೇಹಿತೆ ಚುಚ್ಚು ಮಾತುಗಳನ್ನಾಡುತ್ತಾರೆ.
(4 / 14)

ಈ ಸಂದರ್ಭದಲ್ಲಿ ಶಕುಂತಲಾ "ನಮ್ಮ ಬೀಗರು ಹೀಗ್ಯಾಕೆ ಮಾಡ್ತಾರೆ" ಎನ್ನುತ್ತಾರೆ. "ಯಾಕೆ ಎಂದು ಅವರನ್ನೇ ಕೇಳಬೇಕು" ಎಂದಾಗ ಎಕ್ಸ್‌ಕ್ಯೂಸ್‌ಮೀ ಎಂಬ ಧ್ವನಿ ಕೇಳುತ್ತದೆ. 
(5 / 14)

ಎಕ್ಸ್‌ಕ್ಯೂಮಿ ಎಂದು ಜೋರಾದ ಧ್ವನಿಯಲ್ಲಿ ಮಹಿಮಾ ಹೇಳುತ್ತಾಳೆ. ತನ್ನ ಅತ್ತೆಯ ಮರ್ಯಾದೆ ಎಲ್ಲರ ಮುಂದೆ ಹೋಗುವುದನ್ನು ಆಕೆ ಇಷ್ಟಪಡುವುದಿಲ್ಲ. 
(6 / 14)

ಯಾರ ಬಗ್ಗೆ ಹೀಗೆಲ್ಲ ಮಾತನಾಡ್ತಾ ಇದ್ದೀರ? ಇನ್ನೊಬ್ಬರ ಬಗ್ಗೆ ಹೀಗೆಲ್ಲ ಚೀಪ್‌ ಆಗಿ ಮಾತನಾಡಲು ನಾಚಿಕೆಯಾಗೋಲ್ವ ಎಂದು ಮಹಿಮಾ ಪ್ರಶ್ನಿಸುತ್ತಾಳೆ. 
(7 / 14)

ನಾಚಿಕೆಯಾಗಬೇಕಾದ್ದು ನಮಗಲ್ಲ. ರಾಜಾರೋಷವಾಗಿ ರೋಲ್ಡ್‌ ಗೋಲ್ಡ್‌ ಹಾಕಿದ್ದಾರಲ್ವ ಅವರಿಗೆ ನಾಚಿಕೆಯಾಗಬೇಕು ಎಂದು ಶಕುಂತಲಾ ಸ್ನೇಹಿತೆ ಹೇಳುತ್ತಾರೆ.
(8 / 14)

ಅದು ರೋಲ್ಡ್‌ಗೋಲ್ಡ್‌ ಅಲ್ಲ. ಒರಿಜಿನಲ್‌ ಅಂತ ಆಣೆ ಮಾಡಿ ಹೇಳೋಕ್ಕೆ ಹೇಳಿ ಎಂದಾಗ ಭೂಮಿಕಾ, ಮಂದಾಕಿನಿ ಸೇರಿದಂತೆ ಎಲ್ಲರ ಕಣ್ಣಲ್ಲೂ ದುಃಖದ ಛಾಯೆ ಮೂಡುತ್ತದೆ. 
(9 / 14)

"ಹಲೋ, ಮಾತನಾಡುವುದಕ್ಕೂ ಮೊದಲು ಸರಿಯಾಗಿ ತಿಳಿದುಕೊಂಡು ಮಾತನಾಡಿ. ಆ ಚೈನ್‌ ತಂದದ್ದು ನಾನೇ" ಎಂದು ಮಹಿಮಾ ಹೇಳಿದಾಗ ಎಲ್ಲರಿಗೂ ಆಶ್ಚರ್ಯವಾಗುತ್ತದೆ. 
(10 / 14)

"ಅದು ರೋಲ್ಡ್‌ಗೋಲ್ಡೇ, ತಂದದ್ದು ನಾನೇ. ಕೊಟ್ಟದ್ದು ನಮ್ಮ ಅತ್ತೆ. ಹಾಕಿಕೊಂಡದ್ದು ನಮ್ಮಣ್ಣ. ಇದರ ನಡುವೆ ನಿಮ್ದೇನ್ರಿ ಪ್ರಾಬ್ಲಂ" ಎಂದು ಮಹಿಮಾ ಪ್ರಶ್ನಿಸುತ್ತಾಳೆ. 
(11 / 14)

ಅದು ರಿಯಲಾ,  ಡುಪ್ಲಿಕೇಟಾ ಎಂದು  ಇನ್ವೆಸ್ಟಿಗೇಷನ್‌ ಮಾಡೋಕ್ಕೆ ಹೋಗ್ತಿರಲ್ವ ನಿಮಗೆ ಬೇರೆ ಕೆಲಸ ಇಲ್ವ? ಎಂದಾಗ ಶಕುಂತಲಾ "ಮಹಿ" ಎನ್ನುತ್ತಾರೆ.
(12 / 14)

ಇವರು ನನ್ನ ಫ್ಯಾಮಿಲಿ ಬಗ್ಗೆ, ನನ್ನ ಅತ್ತೆ ಬಗ್ಗೆ ಮಾತನಾಡ್ತಾ ಇದ್ದಾರೆ. ಹೀಗಾಗಿ ನಾನು ಮಾತನಾಡಲೇಬೇಕು ಎಂದು ಮಹಿಮಾ ಹೇಳುತ್ತಾಳೆ. 
(13 / 14)

ನಮ್ಮ ಅಣ್ಣನಿಗೆ ನಿಮ್ಮ ಥರ ಚೀಪ್‌ ಮೆಂಟಾಲಿಟಿ ಇಲ್ಲ. ಏನು ಕೊಟ್ಟಿದ್ದಾರೆ ಎಂದು ನೋಡುವುದಿಲ್ಲ. ಸಂಬಂಧಗಳಿಗೆ ಬೆಲೆ ಕೊಡ್ತಾರೆ ಎಂದು ಹೇಳಿ ಮಹಿಮಾ ಎಲ್ಲರಿಗೂ ಮಂಗಳಾರತಿ ಮಾಡುತ್ತಾಳೆ. ಈ ಮೂಲಕ ಅತ್ತೆ ಮಂದಾಕಿನಿಯ ನೆರವಿಗೆ ಬರುತ್ತಾಳೆ. ಈ ಕುರಿತು ಸಂಪೂರ್ಣ ವಿವರ ಇಂದಿನ  ಅಮೃತಧಾರೆ ಸಂಚಿಕೆಯಲ್ಲಿ ದೊರಕಲಿದೆ. 
(14 / 14)

    ಹಂಚಿಕೊಳ್ಳಲು ಲೇಖನಗಳು