logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಅಪೇಕ್ಷಾ ಜೈದೇವ್‌ ನಿಶ್ಚಿತಾರ್ಥ ಆಯ್ತು, ಮದುವೆ ದಿನಾನೂ ಫಿಕ್ಸ್‌, ರೋಚಕ ತಿರುವಿನ ಸನಿಹಕ್ಕೆ ಅಮೃತಧಾರೆ ಧಾರಾವಾಹಿ

Amruthadhaare: ಅಪೇಕ್ಷಾ ಜೈದೇವ್‌ ನಿಶ್ಚಿತಾರ್ಥ ಆಯ್ತು, ಮದುವೆ ದಿನಾನೂ ಫಿಕ್ಸ್‌, ರೋಚಕ ತಿರುವಿನ ಸನಿಹಕ್ಕೆ ಅಮೃತಧಾರೆ ಧಾರಾವಾಹಿ

Feb 13, 2024 03:29 PM IST

Amruthadhaare serial today episode: ಅಮೃತಧಾರೆ ಧಾರಾವಾಹಿಯ ಮಂಗಳವಾರದ ಸಂಚಿಕೆಯಲ್ಲಿ ಅಪೇಕ್ಷಾ ಮತ್ತು ಜೈದೇವ್‌ಗೆ ನಿಶ್ಚಿತಾರ್ಥ ಕಾರ್ಯಕ್ರಮಗಳು ನಡೆಯುತ್ತಿವೆ. ಝೀ ಕನ್ನಡ ಹಂಚಿಕೊಂಡಿರುವ ಪ್ರಮೋದಲ್ಲಿ ನಿಶ್ಚಿತಾರ್ಥ, ಉಂಗುರ ಬದಲಾಯಿಸಿಕೊಂಡ ಕ್ಷಣ, ಅಪೇಕ್ಷಾಳ ಆತಂಕ ಇತ್ಯಾದಿಗಳು ಕಾಣಿಸಿವೆ.

  • Amruthadhaare serial today episode: ಅಮೃತಧಾರೆ ಧಾರಾವಾಹಿಯ ಮಂಗಳವಾರದ ಸಂಚಿಕೆಯಲ್ಲಿ ಅಪೇಕ್ಷಾ ಮತ್ತು ಜೈದೇವ್‌ಗೆ ನಿಶ್ಚಿತಾರ್ಥ ಕಾರ್ಯಕ್ರಮಗಳು ನಡೆಯುತ್ತಿವೆ. ಝೀ ಕನ್ನಡ ಹಂಚಿಕೊಂಡಿರುವ ಪ್ರಮೋದಲ್ಲಿ ನಿಶ್ಚಿತಾರ್ಥ, ಉಂಗುರ ಬದಲಾಯಿಸಿಕೊಂಡ ಕ್ಷಣ, ಅಪೇಕ್ಷಾಳ ಆತಂಕ ಇತ್ಯಾದಿಗಳು ಕಾಣಿಸಿವೆ.
ಅಮೃತಧಾರೆ ಧಾರಾವಾಹಿ ಇಂದಿನ ಸಂಚಿಕೆ: ಪಾರ್ಥ ದೂರದಲ್ಲಿರುವ ಸಂದರ್ಭದಲ್ಲಿ ಜೈದೇವ್‌ ಅಪೇಕ್ಷಾಳನ್ನು ವಿವಾಹವಾಗುವ ಪ್ಲಾನ್‌ ವರ್ಕ್‌ ಆಗುವಂತೆ ಇದೆ. ಸೋಮವಾರದ ಸಂಚಿಕೆಯಲ್ಲಿ ಅಪೇಕ್ಷಾ ಮತ್ತು ಜೈದೇವ್‌ ಹೂವು ಮುಡಿಸುವ ಶಾಸ್ತ್ರ ನಡೆದಿತ್ತು. ಇಂದಿನ ಸಂಚಿಕೆಯಲ್ಲಿ ಅಪೇಕ್ಷಾ ಮತ್ತು ಜೈದೇವ್‌ ನಿಶ್ಚಿತಾರ್ಥ ನಡೆದಿದೆ. ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದಾರೆ. 
(1 / 8)

ನಮ್ಮ ಮಗಳಾದ ಅಪೇಕ್ಷಾ ಮತ್ತು ನಮ್ಮ ಮಗನಾದ ಜೈದೇವ್‌ ಇವರ ವಿವಾಹವನ್ನು ಗುರುಹಿರಿಯರು ನಿಶ್ಚಯಿಸಿರುತ್ತಾರೆ ಎಂದು ಶಾಸ್ತ್ರಿಗಳು ಹೇಳಿದಾಗ ಅಪೇಕ್ಷಾ ಮತ್ತು ಜೈದೇವ್‌ ಹಾರ ಬದಲಾಯಿಸಿಕೊಳ್ಳುತ್ತಾರೆ. 
(2 / 8)

ಅಪೇಕ್ಷಾ ತುಂಬಾ ಆತಂಕ, ಅಳು ಮುಖದಲ್ಲಿಯೇ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕಾಣಿಸಿದ್ದಾಳೆ. ಅಪೇಕ್ಷಾ ಕೈ ಬೆರಳಿಗೆ ಜೈದೇವ್‌ ಉಂಗುರ ತೊಡಿಸುವ ದೃಶ್ಯವೂ ಕಾಣಿಸಿಕೊಂಡಿದೆ. ಒಟ್ಟಾರೆ ಇಂದಿನ ಅಮೃತಧಾರೆ ಸಂಚಿಕೆಯಲ್ಲಿ ಎಂಗೇಜ್‌ಮೆಂಟ್‌ ಕಾರ್ಯಕ್ರಮ ಸಾಂಗವಾಗಿ ನಡೆದಿರುವುದು ಪಕ್ಕಾ. 
(3 / 8)

ಇದೇ ಸಮಯದಲ್ಲಿ ಅಪೇಕ್ಷಾ ಮತ್ತು ಜೈದೇವ್‌ ಮದುವೆ ದಿನಾಂಕವನ್ನೂ ಗೊತ್ತು ಪಡಿಸಲಾಗಿದೆ. ಮದುವೆ ದಿನ ಮಲ್ಲಿ ತಾತಾ ಕತ್ತಿ ಹಿಡಿದುಕೊಂಡು ಬರುವ ಮತ್ತು ಭೂಮಿಕಾ ಮಲ್ಲಿಯನ್ನು ಮದುಮಗಳ ಸ್ಥಾನದಲ್ಲಿ ಕೂರಿಸುವಂತಹ ಮಹಾ ತಿರುವು ನಡೆಯಲಿದೆ. 
(4 / 8)

ಇನ್ನೊಂದೆಡೆ ಪಾಪ ಪಾರ್ಥ ನೆಟ್‌ವರ್ಕ್‌ಗೆ ಪರದಾಡುತ್ತ ಇರುತ್ತಾನೆ. ಗುಡ್ಡದ ತುದಿಯಲ್ಲಿ ತುಸು ನೆಟ್‌ವರ್ಕ್‌ ದೊರಕಿದೆ. ಈ ಸಮಯದಲ್ಲಿ ಅಪೇಕ್ಷಾಳಿಗೆ ಕಾಲ್‌ ಮಾಡುತ್ತಾನೆ. ಪಾರ್ಥನ ಕರೆ ಬಂದಿರುವುದು ಅಪೇಕ್ಷಾಳ ಮೊಬೈಲ್‌ನಲ್ಲಿ ಕಾಣಿಸುತ್ತದೆ. ಆದರೆ, ಆ ಸಮಯದಲ್ಲಿ ಅಪೇಕ್ಷಾ ಮತ್ತು ಜೈದೇವ್‌ ಎಂಗೇಜ್‌ಮೆಂಟ್‌ ಆಗಿರುತ್ತದೆ. ಇವಿಷ್ಟು ಮಂಗಳವಾರದ ಸಂಚಿಕೆಯಲ್ಲಿ ನಡೆಯುವ ಕೆಲವು ದೃಶ್ಯಗಳ ಪ್ರಮೋ ಝಲಕ್‌. ಸೋಮವಾರದ ಸಂಚಿಕೆಯಲ್ಲಿ ಏನಾಗಿತ್ತು ಎಂದು ನೆನಪಿಸಿಕೊಳ್ಳೋಣ. 
(5 / 8)

ಸೋಮವಾರದ ಸಂಚಿಕೆಯಲ್ಲಿ ಜೈದೇವ್‌ ಮತ್ತು ಅಪೇಕ್ಷಾಳ ಹೂವು ಮುಡಿಸೋ ಶಾಸ್ತ್ರ ನಡೆದಿತ್ತು..  ಇವತ್ತೇ ಎಂಗೇಜ್‌ಮೆಂಟ್‌ ಮಾಡೋಣ ಎಂದು ಜೈದೇವ್‌ ಹೇಳಿದಾಗ ಶಕುಂತಲಾದೇವಿಗೆ ಕೇಳದೆ ವಿಧಿ ಇರುವುದಿಲ್ಲ.
(6 / 8)

ಶಕುಂತಲಾದೇವಿ ಎರಡು ಕುಟುಂಬದ ಮುಂದೆ ಎಂಗೇಜ್‌ಮೆಂಟ್‌ ಪ್ರಸ್ತಾಪ ಇಡುತ್ತಾರೆ. "ಶಾಸ್ತ್ರಿಗಳು ಹೇಳಿದ್ರು. ಜೈದೇವ್‌ ಜಾತಕದಲ್ಲಿ ಗುರುಬಲ ಜಾಸ್ತಿ ದಿನ ಇಲ್ವಂತೆ. ನೇರವಾಗಿ ಎಂಗೇಜ್‌ಮೆಂಟ್‌ ಮಾಡೋದು ಒಳ್ಳೆಯದು ಅನ್ಸುತೆ. "ನೆಂಟರಿಸ್ಟರನ್ನು ಕರೆಯದೆ ಎಂಗೇಜ್‌ಮೆಂಟ್‌ ಮಾಡೋದು ಹೇಗೆ ಆಗುತ್ತದೆ?" ಎಂದು ಹೇಳುತ್ತಾರೆ. ಮಂದಾಕಿನಿಯವರಲ್ಲಿ ಅಭಿಪ್ರಾಯ ಕೇಳಿದಾಗ "ನಮ್ಮವರನ್ನು ಕೇಳಿದ್ರೆ ಒಳ್ಳೆಯದು" ಎಂದು ಹೇಳುತ್ತಾರೆ. ಒಟ್ಟಾರೆ, ಮನೆಯೊಳಗೆ ಎಂಗೇಜ್‌ಮೆಂಟ್‌ ಶಾಸ್ತ್ರ ಮಾಡೋ ಅವಸರದಲ್ಲಿರುತ್ತಾರೆ. ಈಗ ಮಂದಾಕಿನಿ ಅಭಿಪ್ರಾಯ ಮುಖ್ಯವಾಗುತ್ತದೆ. "ಅಮ್ಮ ಯಾವುದೇ ಕಾರಣಕ್ಕೆ ಒಪ್ಪಿಗೆ ನೀಡಬೇಡ" ಎಂದು ಅಪೇಕ್ಷಾ ಮನಸ್ಸಲ್ಲಿ ಪ್ರಾರ್ಥಿಸುತ್ತಾಳೆ. 
(7 / 8)

ಅಮೃತಧಾರೆ ಧಾರಾವಾಹಿಯ ಮಂಗಳವಾರದ ಸಂಚಿಕೆಯಲ್ಲಿ ಇವರಿಬ್ಬರ ಎಂಗೇಜ್‌ಮೆಂಟ್‌ ನಡೆಯುತ್ತದೆ. ಈ ವಾರವೇ ಝೀ ಕನ್ನಡ ಅಮೃತಧಾರೆ ಸೀರಿಯಲ್‌ನಲ್ಲಿ ಅಪೇಕ್ಷಾ ಮತ್ತು ಜೈದೇವ್‌ ಮದುವೆ ಕಾರ್ಯಕ್ರಮ ಆರಂಭವಾದರೆ ಅಚ್ಚರಿಯಿಲ್ಲ. ಅಮೃತಧಾರೆ ಸೀರಿಯಲ್‌ನ ಪ್ರತಿದಿನದ ಎಪಿಸೋಡ್‌ನ ಕಥೆಗಳನ್ನು ಓದಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡಿ. 
(8 / 8)

    ಹಂಚಿಕೊಳ್ಳಲು ಲೇಖನಗಳು