logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಈಗ ಅದ್ಧೂರಿ ಕಾರಿನ ಒಡತಿ; ಮನೆದೇವ್ರು ಸೀರಿಯಲ್‌ ನಟಿ ಮನೆಗೆ ಬಂತು ಮರ್ಸಿಡಿಸ್‌ ಬೆಂಝ್ ಜಿಎಲ್‌ಇ 450

ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಈಗ ಅದ್ಧೂರಿ ಕಾರಿನ ಒಡತಿ; ಮನೆದೇವ್ರು ಸೀರಿಯಲ್‌ ನಟಿ ಮನೆಗೆ ಬಂತು ಮರ್ಸಿಡಿಸ್‌ ಬೆಂಝ್ ಜಿಎಲ್‌ಇ 450

May 14, 2024 12:56 PM IST

ಕನ್ನಡ ಕಿರುತೆರೆ ನಟಿ ಅರ್ಚನಾ ಲಕ್ಷೀನರಸಿಂಹಸ್ವಾಮಿ ಮನೆಗೆ ಹೊಸ ಕಾರೊಂದರ ಆಗಮನವಾಗಿದೆ. ವಿದೇಶದಲ್ಲಿ ನೆಲೆಸಿರುವ ಅರ್ಚನಾ- ವಿಘ್ನೇಶ್‌ ದಂಪತಿ ಮರ್ಸಿಡಿಸ್‌ ಬೆಂಝ್‌ ಜಿಎಲ್‌ಇ 450 ಕಾರು ಖರೀದಿಸಿದ್ದಾರೆ. ಈ ಕಾರಿನ ಕುರಿತು ಮತ್ತು ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ ಬನ್ನಿ.

  • ಕನ್ನಡ ಕಿರುತೆರೆ ನಟಿ ಅರ್ಚನಾ ಲಕ್ಷೀನರಸಿಂಹಸ್ವಾಮಿ ಮನೆಗೆ ಹೊಸ ಕಾರೊಂದರ ಆಗಮನವಾಗಿದೆ. ವಿದೇಶದಲ್ಲಿ ನೆಲೆಸಿರುವ ಅರ್ಚನಾ- ವಿಘ್ನೇಶ್‌ ದಂಪತಿ ಮರ್ಸಿಡಿಸ್‌ ಬೆಂಝ್‌ ಜಿಎಲ್‌ಇ 450 ಕಾರು ಖರೀದಿಸಿದ್ದಾರೆ. ಈ ಕಾರಿನ ಕುರಿತು ಮತ್ತು ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ ಬನ್ನಿ.
ಮಧುಬಾಲ, ಮನೆದೇವ್ರು ಸೀರಿಯಲ್‌ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದ ನಟಿ ಅರ್ಚನಾ ಮದುವೆಯಾದ ಬಳಿಕ ಅಮೆರಿಕದ ಫ್ಲೋರಿಡಾದಲ್ಲಿ ನೆಲೆಸಿದ್ದಾರೆ. ಅವರಿಗೆ ಮುದ್ದಾದ ಮಗುವೂ ಇದೆ. ಇದೀಗ ಇವರು ಮರ್ಸಿಡಿಸ್‌ ಬೆಂಝ್‌ ಕಾರಿನ ಮಾಲೀಕರಾಗಿದ್ದಾರೆ. 
(1 / 10)

ಕನ್ನಡ ಮಾತ್ರವಲ್ಲದೆ ತಮಿಳು ಕಿರುತೆರೆಯಲ್ಲೂ ನಟಿಸಿದ್ದ ಅರ್ಚನಾ ಲಕ್ಷ್ಮೀ ನರಸಿಂಹ ಅವರು ವಿಘ್ನೇಶ್‌ರನ್ನು ವಿವಾಹದ ಬಳಿಕ ವಿದೇಶದಲ್ಲಿ ಸೆಟಲ್‌ ಆಗಿದ್ದಾರೆ. ಫ್ಲೋರಿಡಾದಲ್ಲಿ ವಾಸಿಸುತ್ತಿರುವ ಇವರ ಮನೆಗೆ ದುಬಾರಿ ಕಾರೊಂದರ ಆಗಮನವಾಗಿದೆ.
(2 / 10)

ಅರ್ಚನಾ ಲಕ್ಷೀನರಸಿಂಹಸ್ವಾಮಿ ದಂಪತಿ ಖರೀದಿಸಿದ ಹೊಸ ಕಾರಿನ ದರವೆಷ್ಟು ಎಂಬ ಕುತೂಹಲ ನಿಮ್ಮಲ್ಲಿರಬಹುದು. ನಿಮಗೆ ಗೊತ್ತೆ, ಕೆಲವೊಂದು ವಿಲಾಸಿ ಕಾರುಗಳು ಭಾರತದಲ್ಲಿ ಮಾತ್ರ ದುಬಾರಿ. ವಿದೇಶಗಳಲ್ಲಿ ಅಷ್ಟೇನೂ ದುಬಾರಿಯಲ್ಲ. 
(3 / 10)

ಭಾರತದಲ್ಲಿ ಆಮದು ಸುಂಕ, ಇತರೆ ತೆರಿಗೆ ಎಲ್ಲಾ ಸೇರಿ ವಿದೇಶಿ ಮೂಲದ ವಿಲಾಸಿ ಕಾರುಗಳ ದರ ಸುಮಾರು ಎರಡು ಪಟ್ಟು ಹೆಚ್ಚಾಗುತ್ತದೆ. ಇದೇ ಕಾರಣಕ್ಕೆ ಅಮೆರಿಕ, ಜರ್ಮನಿ ಮುಂತಾದ ಕಡೆ ಒಂದಿಷ್ಟು ಸ್ಥಿತಿವಂತರು ಯಾವುದೇ ವರಿ ಇಲ್ಲದೆ ವಿಲಾಸಿ ಕಾರುಗಳನ್ನು ಖರೀದಿಸಬಹುದು. 
(4 / 10)

ಅರ್ಚನಾ ಲಕ್ಷ್ಮೀ ನರಸಿಂಹಸ್ವಾಮಿ ಖರೀದಿಸಿದ ನೂತನ ಮರ್ಸಿಡಿಸ್‌ ಬೆಂಝ್‌ ಜಿಎಲ್‌ಇ 450 ಕಾರಿಗೆ ಭಾರತದಲ್ಲಿಯಾದರೆ ಸುಮಾರು 1.10 ಕೋಟಿ ರೂಪಾಯಿ ನೀಡಬೇಕು. 
(5 / 10)

ಭಾರತಕ್ಕೆ ಹೋಲಿಸಿದರೆ ಫ್ಲೋರಿಡಾದಲ್ಲಿ ಈ ಕಾರು ಸುಮಾರು ಅರ್ಧದಷ್ಟು ಕಡಿಮೆ ದರಕ್ಕೆ ದೊರಕುತ್ತದೆ. ಟಾಪ್‌ ಎಂಡ್‌ಗೆ ಸುಮಾರು 70 ಸಾವಿರ ಡಾಲರ್‌ ಇದೆ. ಭಾರತದ ಹಣದ ಲೆಕ್ಕದಲ್ಲಿ ಇದು ಸುಮಾರು 56 ಲಕ್ಷ ರೂಪಾಯಿ.
(6 / 10)

ಅರ್ಚನಾ ಲಕ್ಷ್ಮೀನರಸಿಂಹ ಸ್ವಾಮಿ ಮತ್ತು ವಿಘ್ನೇಶ್‌ ದಂಪತಿಗೆ ವಿಯಾರಾ ಹೆಸರಿನ ಮಗಳಿದ್ದಾಳೆ. ಕಾರು ಖರೀದಿಸಿದ ಸಮಯದಲ್ಲಿ ಮಗಳನ್ನು ಹೊಸ ಕಾರಿನ ಬಾನೆಟ್‌ ಮೇಲೆ ಕೂರಿಸಿ ಫೋಟೋಶೂಟ್‌ ಮಾಡಿದ್ದಾರೆ. 
(7 / 10)

ಮನೆದೇವ್ರು ಖ್ಯಾತಿಯ ಅರ್ಚನಾ ಅವರು 1992ರ ಫೆಬ್ರವರಿ 3ರಂದು ಮೈಸೂರಿನಲ್ಲಿ ಜನಿಸಿದರು.ಮೈಸೂರು ವಿಶ್ವವಿದ್ಯಾಲಯದಲ್ಲಿ  ಬಿಸ್ನೆಸ್‌ ಮ್ಯಾನೇಜ್‌ಮೆಂಟ್‌ (ಎಚ್‌ಆರ್‌) ಓದಿರುವ ಇವರು ಒಂದಿಷ್ಟು ಸಮಯ ಎಚ್‌ಆರ್‌ ಆಗಿಯೂ ಕೆಲಸ ಮಾಡಿದ್ದಾರೆ. ಬಳಿಕ ರಿಸರ್ಚ್‌ ಅನಾಲಿಸ್ಟ್‌ ಆಗಿ ಕೆಲಸ ಮಾಡಿದ್ದಾರೆ. 
(8 / 10)

ಮಾಡೆಲಿಂಗ್‌ ಕುರಿತು ಆಸಕ್ತಿ ಹೊಂದಿದ್ದ ಇವರು ಬಳಿಕ ಉದ್ಯೋಗ ತೊರೆದು ಮಾಡೆಲಿಂಗ್‌ನತ್ತ ಪೂರ್ಣ ಗಮನ ನೀಡಿದರು. 2013ರಲ್ಲಿ ಮಿಸ್‌ ಕರ್ನಾಟಕ ಟೈಟಲ್‌ ಗೆದ್ದರು. ಇದರಿಂದ ಇವರಿಗೆ ನಟನಾ ಕ್ಷೇತ್ರದಲ್ಲೂ ಅವಕಾಶ ದೊರಕಿತು. ಮಧುಬಾಲ ಸೀರಿಯಲ್‌ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದರು.     
(9 / 10)

ಕನ್ನಡ ಸಿನಿಮಾ, ಒಟಿಟಿ, ಸೀರಿಯಲ್‌ ಸುದ್ದಿ, ಸೆಲೆಬ್ರಿಟಿಗಳ ಸುದ್ದಿಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಮನರಂಜನೆ ವಿಭಾಗಕ್ಕೆ ಭೇಟಿ ನೀಡಿ.
(10 / 10)

    ಹಂಚಿಕೊಳ್ಳಲು ಲೇಖನಗಳು