logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vegan Crocodile Babiya Death: ದೇವರ ಮೊಸಳೆ ʻಬಬಿಯಾʼ ಅಂತ್ಯ ಸಂಸ್ಕಾರ ಪೂರ್ಣ; ಇಲ್ಲಿವೆ ಕೆಲವು ಫೋಟೋಸ್‌

Vegan crocodile babiya death: ದೇವರ ಮೊಸಳೆ ʻಬಬಿಯಾʼ ಅಂತ್ಯ ಸಂಸ್ಕಾರ ಪೂರ್ಣ; ಇಲ್ಲಿವೆ ಕೆಲವು ಫೋಟೋಸ್‌

Oct 10, 2022 05:24 PM IST

Ananthapura Temple Crocodile Babiya Death: ಕೇರಳದ ಏಕೈಕ ದೇವರ ಮೊಸಳೆ ಬಬಿಯಾ ಭಾನುವಾರ ರಾತ್ರಿ ಅಸುನೀಗಿದೆ. ದೇವರ ಮೊಸಳೆಯ ಅಂತ್ಯಸಂಸ್ಕಾರವು ಕುಂಬಳೆ ಸಮೀಪದ ಅನಂತಪುರ ಶ್ರೀ ಅನಂತಪದ್ಮನಾಭ ದೇವಸ್ಥಾನದ ಸಮೀಪದ ಜಮೀನಿನಲ್ಲಿ ಸೋಮವಾರ ಅಪರಾಹ್ನ ನೆರವೇರಿದೆ. ಅನಂತಪುರ ದೇವರ ಮೊಸಳೆಯ ಅಂತ್ಯಸಂಸ್ಕಾರದ ಕೆಲವು ಫೋಟೋಸ್‌ ಇಲ್ಲಿವೆ. 

  • Ananthapura Temple Crocodile Babiya Death: ಕೇರಳದ ಏಕೈಕ ದೇವರ ಮೊಸಳೆ ಬಬಿಯಾ ಭಾನುವಾರ ರಾತ್ರಿ ಅಸುನೀಗಿದೆ. ದೇವರ ಮೊಸಳೆಯ ಅಂತ್ಯಸಂಸ್ಕಾರವು ಕುಂಬಳೆ ಸಮೀಪದ ಅನಂತಪುರ ಶ್ರೀ ಅನಂತಪದ್ಮನಾಭ ದೇವಸ್ಥಾನದ ಸಮೀಪದ ಜಮೀನಿನಲ್ಲಿ ಸೋಮವಾರ ಅಪರಾಹ್ನ ನೆರವೇರಿದೆ. ಅನಂತಪುರ ದೇವರ ಮೊಸಳೆಯ ಅಂತ್ಯಸಂಸ್ಕಾರದ ಕೆಲವು ಫೋಟೋಸ್‌ ಇಲ್ಲಿವೆ. 
ಅನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ದೇವರ ಮೊಸಳೆ ಬಬಿಯಾ ಅಂತ್ಯ ಸಂಸ್ಕಾರ ಪೂರ್ಣವಾಗಿದ್ದು, ದೇವಸ್ಥಾನದ ಸಮೀಪದ ಜಮೀನಿನಲ್ಲಿ ಅದನ್ನು ಸಮಾಧಿಮಾಡಲಾಗಿದೆ. 
(1 / 11)
ಅನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ದೇವರ ಮೊಸಳೆ ಬಬಿಯಾ ಅಂತ್ಯ ಸಂಸ್ಕಾರ ಪೂರ್ಣವಾಗಿದ್ದು, ದೇವಸ್ಥಾನದ ಸಮೀಪದ ಜಮೀನಿನಲ್ಲಿ ಅದನ್ನು ಸಮಾಧಿಮಾಡಲಾಗಿದೆ. (ananthapuratemple)
ಸರೋವರ ದೇವಸ್ಥಾನದಲ್ಲಿ 75 ವರ್ಷಗಳಷ್ಟು ಸುದೀರ್ಘ ಬದುಕು ಸಾಗಿಸಿದ್ದ ಬಬಿಯಾ ನಿನ್ನೆ ತಡರಾತ್ರಿ ಅನಂತ ಸಾನ್ನಿಧ್ಯ ಸೇರಿದೆ. ಕೂಡಲೇ ಅದನ್ನು ದೇವಸ್ಥಾನದ ಆವರಣಕ್ಕೆ ತಂದು ಬಿಳಿ ಬಟ್ಟೆಯ ಮೇಲೆ ಮಲಗಿಸಿ, ಹೂವಿನ ಹಾರ ಹಾಕಿ, ವಿಧಿವತ್ತಾಗಿ ಅದರ ತಲೆ ಮತ್ತು ಬಾಲದ ಬಳಿ ದೀಪ ಬೆಳಗಿಸಿದರು. 
(2 / 11)
ಸರೋವರ ದೇವಸ್ಥಾನದಲ್ಲಿ 75 ವರ್ಷಗಳಷ್ಟು ಸುದೀರ್ಘ ಬದುಕು ಸಾಗಿಸಿದ್ದ ಬಬಿಯಾ ನಿನ್ನೆ ತಡರಾತ್ರಿ ಅನಂತ ಸಾನ್ನಿಧ್ಯ ಸೇರಿದೆ. ಕೂಡಲೇ ಅದನ್ನು ದೇವಸ್ಥಾನದ ಆವರಣಕ್ಕೆ ತಂದು ಬಿಳಿ ಬಟ್ಟೆಯ ಮೇಲೆ ಮಲಗಿಸಿ, ಹೂವಿನ ಹಾರ ಹಾಕಿ, ವಿಧಿವತ್ತಾಗಿ ಅದರ ತಲೆ ಮತ್ತು ಬಾಲದ ಬಳಿ ದೀಪ ಬೆಳಗಿಸಿದರು. (ananthapuratemple)
ದೇವರ ಮೊಸಳೆಯ ಪಾರ್ಥಿವ ಶರೀರವನ್ನು ಮರುದಿನದ ತನಕ ಉಳಿಸಬೇಕಾದ್ದರಿಂದ ಕೂಡಲೇ ಮಂಜುಗಡ್ಡೆ ಪೆಟ್ಟಿಗೆ ತರಿಸಿ ಅದರಲ್ಲಿ ಇರಿಸಲಾಗಿತ್ತು. 
(3 / 11)
ದೇವರ ಮೊಸಳೆಯ ಪಾರ್ಥಿವ ಶರೀರವನ್ನು ಮರುದಿನದ ತನಕ ಉಳಿಸಬೇಕಾದ್ದರಿಂದ ಕೂಡಲೇ ಮಂಜುಗಡ್ಡೆ ಪೆಟ್ಟಿಗೆ ತರಿಸಿ ಅದರಲ್ಲಿ ಇರಿಸಲಾಗಿತ್ತು. (ananthapura temple)
ದೇವರ ಮೊಸಳೆ ಬಬಿಯಾ ನಿಧನವಾಗಿರುವ ಸುದ್ದಿ ಬಹುಬೇಗ ಹರಡಿದ್ದು, ಕೂಡಲೇ ಭಕ್ತ ಸಮೂಹ ದೇವಸ್ಥಾನಕ್ಕೆ ಆಗಮಿಸಿತ್ತು. ದೇವರ ಮೊಸಳೆಯ ಅಂತಿಮ ದರ್ಶನ ಪಡೆದು ನಮಸ್ಕರಿಸುತ್ತಿದ್ದ ದೃಶ್ಯ ಇಂದು ಬೆಳಗ್ಗೆ ಸಾಮಾನ್ಯವಾಗಿತ್ತು. 
(4 / 11)
ದೇವರ ಮೊಸಳೆ ಬಬಿಯಾ ನಿಧನವಾಗಿರುವ ಸುದ್ದಿ ಬಹುಬೇಗ ಹರಡಿದ್ದು, ಕೂಡಲೇ ಭಕ್ತ ಸಮೂಹ ದೇವಸ್ಥಾನಕ್ಕೆ ಆಗಮಿಸಿತ್ತು. ದೇವರ ಮೊಸಳೆಯ ಅಂತಿಮ ದರ್ಶನ ಪಡೆದು ನಮಸ್ಕರಿಸುತ್ತಿದ್ದ ದೃಶ್ಯ ಇಂದು ಬೆಳಗ್ಗೆ ಸಾಮಾನ್ಯವಾಗಿತ್ತು. (ananthapura temple)
ದೇವರ ಮೊಸಳೆ ಬಬಿಯಾ ನಿಧನಕ್ಕೆ ನಾಡಿನ ಗಣ್ಯರು ಸಂತಾಪ ವ್ಯಕ್ತಪಡಿಸಿದರು. ನಾಡಿನ ಜನತೆ ದೇವರ ಮೊಸಳೆಯ ಚಟುವಟಿಕೆಗಳ ನೆನಪುಗಳನ್ನು ಮಾಡಿಕೊಂಡರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಈ ಕುರಿತು ಟ್ವೀಟ್‌ ಮಾಡಿಕೊಂಡಿದ್ದಾರೆ. 
(5 / 11)
ದೇವರ ಮೊಸಳೆ ಬಬಿಯಾ ನಿಧನಕ್ಕೆ ನಾಡಿನ ಗಣ್ಯರು ಸಂತಾಪ ವ್ಯಕ್ತಪಡಿಸಿದರು. ನಾಡಿನ ಜನತೆ ದೇವರ ಮೊಸಳೆಯ ಚಟುವಟಿಕೆಗಳ ನೆನಪುಗಳನ್ನು ಮಾಡಿಕೊಂಡರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಈ ಕುರಿತು ಟ್ವೀಟ್‌ ಮಾಡಿಕೊಂಡಿದ್ದಾರೆ. (ananthapura temple)
ಅನಂತಪುರ ದೇಗುಲದ ಆಚಾರ್ಯರ ನೇತೃತ್ವದಲ್ಲಿ ದೇವರ ಮೊಸಳೆಯ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಆಗುತ್ತಿರುವಂತೆ, ಇನ್ನೊಂದೆಡೆ, ಸಮಾಧಿಗೆ ಬೇಕಾದ ಹೊಂಡವನ್ನು ಜೆಸಿಬಿ ಮೂಲಕ ಮಾಡಲಾಗಿದೆ. 
(6 / 11)
ಅನಂತಪುರ ದೇಗುಲದ ಆಚಾರ್ಯರ ನೇತೃತ್ವದಲ್ಲಿ ದೇವರ ಮೊಸಳೆಯ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಆಗುತ್ತಿರುವಂತೆ, ಇನ್ನೊಂದೆಡೆ, ಸಮಾಧಿಗೆ ಬೇಕಾದ ಹೊಂಡವನ್ನು ಜೆಸಿಬಿ ಮೂಲಕ ಮಾಡಲಾಗಿದೆ. (ananthapura temple)
ದೇವರ ಮೊಸಳೆಯ ಅಂತಿಮ ಸಂಸ್ಕಾರವನ್ನು ವಿಧಿವತ್ತಾಗಿ ನಡೆಲಾಗಿದೆ.  ಸಮಾಧಿ ಸ್ಥಳದಲ್ಲಿ ಕೆಳ ಭಾಗದಲ್ಲಿ ತೆಂಗಿನ ಗರಿಯನ್ನು ಹಾಸಲಾಗಿತ್ತು. ಅದರ ಮೇಲೆ ಬಿಳಿಬಟ್ಟೆಯಲ್ಲಿ ಸುತ್ತಿದ ಮೊಸಳೆಯ ಪಾರ್ಥಿವ ಶರೀರವನ್ನು ಇರಿಸಲಾಗಿದೆ. ಬಳಿಕ ಅಂತಿಮ ಗೌರವ ಸಲ್ಲಿಸಿ ಮಣ್ಣು ಮಾಡಲಾಗಿದೆ. 
(7 / 11)
ದೇವರ ಮೊಸಳೆಯ ಅಂತಿಮ ಸಂಸ್ಕಾರವನ್ನು ವಿಧಿವತ್ತಾಗಿ ನಡೆಲಾಗಿದೆ.  ಸಮಾಧಿ ಸ್ಥಳದಲ್ಲಿ ಕೆಳ ಭಾಗದಲ್ಲಿ ತೆಂಗಿನ ಗರಿಯನ್ನು ಹಾಸಲಾಗಿತ್ತು. ಅದರ ಮೇಲೆ ಬಿಳಿಬಟ್ಟೆಯಲ್ಲಿ ಸುತ್ತಿದ ಮೊಸಳೆಯ ಪಾರ್ಥಿವ ಶರೀರವನ್ನು ಇರಿಸಲಾಗಿದೆ. ಬಳಿಕ ಅಂತಿಮ ಗೌರವ ಸಲ್ಲಿಸಿ ಮಣ್ಣು ಮಾಡಲಾಗಿದೆ. (ananthapura temple)
ದೇವರ ಮೊಸಳೆ ಬಬಿಯಾಳ ಸಮಾಧಿ ಸ್ಥಳ
(8 / 11)
ದೇವರ ಮೊಸಳೆ ಬಬಿಯಾಳ ಸಮಾಧಿ ಸ್ಥಳ(ananthapura temple)
ದೇವರ ಮೊಸಳೆ ಬಬಿಯಾ ಇದ್ದ ಅತ್ಯಂತ ವಿಶಿಷ್ಟ ದೇಗುಲ ಅನಂತಪುರದ ಶ್ರೀಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಒಂದು ನೋಟ. 
(9 / 11)
ದೇವರ ಮೊಸಳೆ ಬಬಿಯಾ ಇದ್ದ ಅತ್ಯಂತ ವಿಶಿಷ್ಟ ದೇಗುಲ ಅನಂತಪುರದ ಶ್ರೀಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಒಂದು ನೋಟ. (twitter)
ದೇವರ ಮೊಸಳೆ ಬಬಿಯಾ ಎರಡು ಸಲ ದೇವಸ್ಥಾನದ ಪ್ರಾಂಗಣದಲ್ಲಿ ಕಾಣಿಸಿಕೊಂಡಿತ್ತು. ಆಗ ಅದರ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. 
(10 / 11)
ದೇವರ ಮೊಸಳೆ ಬಬಿಯಾ ಎರಡು ಸಲ ದೇವಸ್ಥಾನದ ಪ್ರಾಂಗಣದಲ್ಲಿ ಕಾಣಿಸಿಕೊಂಡಿತ್ತು. ಆಗ ಅದರ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. (twitter)
ದೇವಸ್ಥಾನದ ಗರ್ಭಗುಡಿಯ ಮೆಟ್ಟಿಲ ಸಮೀಪ ದೇವರ ಮೊಸಳೆ ಕಾಣಿಸಿಕೊಂಡ ಸಂದರ್ಭದಲ್ಲಿ ತೆಗೆದ ಫೋಟೋ. 
(11 / 11)
ದೇವಸ್ಥಾನದ ಗರ್ಭಗುಡಿಯ ಮೆಟ್ಟಿಲ ಸಮೀಪ ದೇವರ ಮೊಸಳೆ ಕಾಣಿಸಿಕೊಂಡ ಸಂದರ್ಭದಲ್ಲಿ ತೆಗೆದ ಫೋಟೋ. (twitter)

    ಹಂಚಿಕೊಳ್ಳಲು ಲೇಖನಗಳು