logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Signs Of Heart Disease: ಈ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಾ? ಅವು ಹೃದ್ರೋಗದ ಲಕ್ಷಣವಿರಬಹುದು

Signs of Heart Disease: ಈ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಾ? ಅವು ಹೃದ್ರೋಗದ ಲಕ್ಷಣವಿರಬಹುದು

Jan 13, 2023 10:59 AM IST

Signs of Heart Disease: ನಲವತ್ತು ವರ್ಷಗಳ ಬಳಿಕ, ಹೃದ್ರೋಗದ ಅಪಾಯ ಹೆಚ್ಚಾಗುತ್ತದೆ. ಈ ವಯಸ್ಸಿನಲ್ಲಿ ಹೃದಯಕ್ಕೆ ಸಂಬಂಧಿಸಿದ ಸಾಮಾನ್ಯ ರೋಗಲಕ್ಷಣಗಳನ್ನು ಸಹ ನಿರ್ಲಕ್ಷಿಸಬಾರದು. ಹೀಗಾಗಿ ಯಾವ ರೋಗಲಕ್ಷಣಗಳು ಸಂಭವಿಸಬಹುದು ಎಂಬುದನ್ನು ತಿಳಿದುಕೊಳ್ಳಿ.

  • Signs of Heart Disease: ನಲವತ್ತು ವರ್ಷಗಳ ಬಳಿಕ, ಹೃದ್ರೋಗದ ಅಪಾಯ ಹೆಚ್ಚಾಗುತ್ತದೆ. ಈ ವಯಸ್ಸಿನಲ್ಲಿ ಹೃದಯಕ್ಕೆ ಸಂಬಂಧಿಸಿದ ಸಾಮಾನ್ಯ ರೋಗಲಕ್ಷಣಗಳನ್ನು ಸಹ ನಿರ್ಲಕ್ಷಿಸಬಾರದು. ಹೀಗಾಗಿ ಯಾವ ರೋಗಲಕ್ಷಣಗಳು ಸಂಭವಿಸಬಹುದು ಎಂಬುದನ್ನು ತಿಳಿದುಕೊಳ್ಳಿ.
ತಂತ್ರಜ್ಞಾನ ಬೆಳೆದಂತೆ ದೈಹಿಕ ಶ್ರಮ ಕಡಿಮೆಯಾಗಿದೆ. ಕುಳಿತುಕೊಳ್ಳುವ ಜೀವನಶೈಲಿಯು ನಲವತ್ತರ ದಶಕದಲ್ಲಿ ತೀವ್ರ ಹೃದಯ ಕಾಯಿಲೆಗೆ ಕಾರಣವಾಗುತ್ತದೆ, ಚಳಿಗಾಲದಲ್ಲಿ ಹೃದ್ರೋಗದ ಅಪಾಯವು ತುಂಬಾ ಹೆಚ್ಚಾಗುತ್ತದೆ.
(1 / 6)
ತಂತ್ರಜ್ಞಾನ ಬೆಳೆದಂತೆ ದೈಹಿಕ ಶ್ರಮ ಕಡಿಮೆಯಾಗಿದೆ. ಕುಳಿತುಕೊಳ್ಳುವ ಜೀವನಶೈಲಿಯು ನಲವತ್ತರ ದಶಕದಲ್ಲಿ ತೀವ್ರ ಹೃದಯ ಕಾಯಿಲೆಗೆ ಕಾರಣವಾಗುತ್ತದೆ, ಚಳಿಗಾಲದಲ್ಲಿ ಹೃದ್ರೋಗದ ಅಪಾಯವು ತುಂಬಾ ಹೆಚ್ಚಾಗುತ್ತದೆ.(Freepik)
ನಲವತ್ತು ವರ್ಷಗಳ ನಂತರ, ಹೃದ್ರೋಗದ ಅಪಾಯವು ಹೆಚ್ಚಾಗುತ್ತದೆ. ಹೃದ್ರೋಗದ ಪ್ರಸ್ತುತ ಹೆಚ್ಚಳಕ್ಕೆ ಕೋವಿಡ್‌ನ ಅಡ್ಡಪರಿಣಾಮಗಳು ಸಹ ಕಾರಣ ಎಂದು ಹೇಳಲಾಗಿದೆ. ಕೆಲವು ಲಕ್ಷಣಗಳ ಮೂಲಕ ಹೃದ್ರೋಗವನ್ನು ಮೊದಲೇ ಪತ್ತೆ ಹಚ್ಚಬಹುದು.
(2 / 6)
ನಲವತ್ತು ವರ್ಷಗಳ ನಂತರ, ಹೃದ್ರೋಗದ ಅಪಾಯವು ಹೆಚ್ಚಾಗುತ್ತದೆ. ಹೃದ್ರೋಗದ ಪ್ರಸ್ತುತ ಹೆಚ್ಚಳಕ್ಕೆ ಕೋವಿಡ್‌ನ ಅಡ್ಡಪರಿಣಾಮಗಳು ಸಹ ಕಾರಣ ಎಂದು ಹೇಳಲಾಗಿದೆ. ಕೆಲವು ಲಕ್ಷಣಗಳ ಮೂಲಕ ಹೃದ್ರೋಗವನ್ನು ಮೊದಲೇ ಪತ್ತೆ ಹಚ್ಚಬಹುದು.(Pixabay)
ಯಾವುದೇ ಶ್ರಮದಾಯಕ ಚಟುವಟಿಕೆ ಅಥವಾ ವ್ಯಾಯಾಮದ ಬಳಿಕ ಉಸಿರಾಟದ ತೊಂದರೆ ಅಥವಾ ಉಸಿರಾಡಲು ಆಗದಂತಹ ತೊಂದರೆಯು ಹೃದ್ರೋಗದ ಆರಂಭಿಕ ಲಕ್ಷಣಗಳಾಗಿವೆ.
(3 / 6)
ಯಾವುದೇ ಶ್ರಮದಾಯಕ ಚಟುವಟಿಕೆ ಅಥವಾ ವ್ಯಾಯಾಮದ ಬಳಿಕ ಉಸಿರಾಟದ ತೊಂದರೆ ಅಥವಾ ಉಸಿರಾಡಲು ಆಗದಂತಹ ತೊಂದರೆಯು ಹೃದ್ರೋಗದ ಆರಂಭಿಕ ಲಕ್ಷಣಗಳಾಗಿವೆ.(Pixabay)
ಮಧ್ಯರಾತ್ರಿಯಲ್ಲಿ ಉಸಿರಾಟದ ತೊಂದರೆಯಾಗಿ ಅನೇಕ ಜನರು ರಾತ್ರಿ ಮಲಗಿದ ಬಳಿಕ ಎಚ್ಚರಗೊಳ್ಳುತ್ತಾರೆ. ಸ್ವಲ್ಪ ಹೊತ್ತು ಕುಳಿತ ನಂತರ ಉಸಿರಾಟ ಸುಲಭವಾಗುತ್ತದೆ. ಇಂತಹ ಸಂದರ್ಭದಲ್ಲಿ, ಹೃದ್ರೋಗದ ಅಪಾಯವನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗುವುದಿಲ್ಲ.
(4 / 6)
ಮಧ್ಯರಾತ್ರಿಯಲ್ಲಿ ಉಸಿರಾಟದ ತೊಂದರೆಯಾಗಿ ಅನೇಕ ಜನರು ರಾತ್ರಿ ಮಲಗಿದ ಬಳಿಕ ಎಚ್ಚರಗೊಳ್ಳುತ್ತಾರೆ. ಸ್ವಲ್ಪ ಹೊತ್ತು ಕುಳಿತ ನಂತರ ಉಸಿರಾಟ ಸುಲಭವಾಗುತ್ತದೆ. ಇಂತಹ ಸಂದರ್ಭದಲ್ಲಿ, ಹೃದ್ರೋಗದ ಅಪಾಯವನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗುವುದಿಲ್ಲ.(Freepik)
ಸಣ್ಣ ಪುಟ್ಟ ಕೆಲಸ ಮಾಡಿದರೆ ಕೂಡಾ ಆಯಾಸ ಮತ್ತು ಉಸಿರಾಟದ ತೊಂದರೆಯಾಗುವುದು ಹೃದ್ರೋಗದ ಲಕ್ಷಣಗಳಾಗಿರಬಹುದು. ಅಲ್ಲದೆ, ಎದೆಯ ಮಧ್ಯದಲ್ಲಿ ಭಾರವಾಗುವುದು, ಉರಿ, ನೋವು ಕೂಡಾ ಹೃದಯಾಘಾತದ ಲಕ್ಷಣಗಳಾಗಿರಬಹುದು.
(5 / 6)
ಸಣ್ಣ ಪುಟ್ಟ ಕೆಲಸ ಮಾಡಿದರೆ ಕೂಡಾ ಆಯಾಸ ಮತ್ತು ಉಸಿರಾಟದ ತೊಂದರೆಯಾಗುವುದು ಹೃದ್ರೋಗದ ಲಕ್ಷಣಗಳಾಗಿರಬಹುದು. ಅಲ್ಲದೆ, ಎದೆಯ ಮಧ್ಯದಲ್ಲಿ ಭಾರವಾಗುವುದು, ಉರಿ, ನೋವು ಕೂಡಾ ಹೃದಯಾಘಾತದ ಲಕ್ಷಣಗಳಾಗಿರಬಹುದು.(Unsplash)
ಮೆಟ್ಟಿಲುಗಳನ್ನು ಹತ್ತಿದ ನಂತರ ಎದೆ ಬಡಿತ, ಪಾದಗಳ ಊತ, ಉಸಿರಾಟದ ತೊಂದರೆ, ಹೃದಯ ಕವಾಟದ ತೊಂದರೆಗಳಂತಹ ಲಕ್ಷಣಗಳು ಕಂಡುಬರಬಹುದು. ಅಲ್ಲದೆ, ತಜ್ಞರ ಪ್ರಕಾರ ಇದು ದುರ್ಬಲ ಹೃದಯದ ಸಂಕೇತವಾಗಿದೆ. ಈ ಸಂದರ್ಭದಲ್ಲಿ, ರೋಗಲಕ್ಷಣಗಳನ್ನು ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ
(6 / 6)
ಮೆಟ್ಟಿಲುಗಳನ್ನು ಹತ್ತಿದ ನಂತರ ಎದೆ ಬಡಿತ, ಪಾದಗಳ ಊತ, ಉಸಿರಾಟದ ತೊಂದರೆ, ಹೃದಯ ಕವಾಟದ ತೊಂದರೆಗಳಂತಹ ಲಕ್ಷಣಗಳು ಕಂಡುಬರಬಹುದು. ಅಲ್ಲದೆ, ತಜ್ಞರ ಪ್ರಕಾರ ಇದು ದುರ್ಬಲ ಹೃದಯದ ಸಂಕೇತವಾಗಿದೆ. ಈ ಸಂದರ್ಭದಲ್ಲಿ, ರೋಗಲಕ್ಷಣಗಳನ್ನು ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ(Unsplash)

    ಹಂಚಿಕೊಳ್ಳಲು ಲೇಖನಗಳು