logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Asia Cup 2023: ಏಕದಿನ ಏಷ್ಯಾಕಪ್​​ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತಿರುವ ತಂಡ ಯಾವುದು?

Asia Cup 2023: ಏಕದಿನ ಏಷ್ಯಾಕಪ್​​ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತಿರುವ ತಂಡ ಯಾವುದು?

Jan 09, 2024 07:31 PM IST

Asia Cup ODI Format Records: ಬಹುನಿರೀಕ್ಷಿತ ಏಷ್ಯಾಕಪ್​ಗೆ ಏಷ್ಯನ್ ರಾಷ್ಟ್ರಗಳು ಸಜ್ಜಾಗುತ್ತಿವೆ. ಮತ್ತೊಂದೆಡೆ ಭಾರತ ತನ್ನ ತಂಡವನ್ನು ಪ್ರಕಟಿಸುವಲ್ಲಿ ನಿರತವಾಗಿದೆ. 2018ರ ನಂತರ ಏಕದಿನ ಮಾದರಿಯ ಟೂರ್ನಿ ನಡೆಯುತ್ತಿದೆ. ಹಾಗಾಗಿ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಗೆಲ್ಲಲು ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ.

ಏಷ್ಯಾಕಪ್​ ಆಗಸ್ಟ್​ 30ರಿಂದ ಶುರುವಾಗಲಿದ್ದು, ಸೆಪ್ಟೆಂಬರ್​ 17ರವರೆಗೆ ನಡೆಯಲಿದೆ. ನೇಪಾಳ ಮೊದಲ ಬಾರಿಗೆ ಏಕದಿನ ಮಾದರಿಯ ಏಷ್ಯಾ ಕಪ್ ಆಡುತ್ತಿದೆ. ಆದರೆ ಉಳಿದ 5 ತಂಡಗಳಲ್ಲಿ ಏಕದಿನ ಮಾದರಿಯ ಏಷ್ಯಾಕಪ್​​ ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಸೋತ ತಂಡ ಯಾವುದು ಎಂಬುದನ್ನು ಈ ಮುಂದೆ ನೋಡೋಣ.
(1 / 6)

ಅಫ್ಘಾನಿಸ್ತಾನ ತಂಡ ಪ್ರಸ್ತುತ ಏಷ್ಯಾಕಪ್‌ ಬಿ ಗುಂಪಿನಲ್ಲಿದೆ. 2014ರಲ್ಲಿ ಮೊದಲ ಬಾರಿಗೆ ಈ ಟೂರ್ನಿಯಲ್ಲಿ ಆಡಿದ ಅಫ್ಘನ್, 50 ಓವರ್‌ಗಳ ಮಾದರಿಯಲ್ಲಿ 9 ಪಂದ್ಯಗಳನ್ನಾಡಿದೆ. ಇದರಲ್ಲಿ 3 ಗೆಲುವು, 5ರಲ್ಲಿ ಸೋಲನುಭವಿಸಿದೆ. ಒಂದು ಪಂದ್ಯ ಡ್ರಾ ಆಗಿತ್ತು. ಗೆಲುವಿನ ಪ್ರಮಾಣ 33.33 ರಷ್ಟಿದ್ದು, 55.55ರಷ್ಟು ಸೋಲಿನ ಪ್ರಮಾಣ ಹೊಂದಿದೆ.
(2 / 6)

1986ರಲ್ಲಿ ಮೊದಲ ಬಾರಿಗೆ ಏಷ್ಯಾಕಪ್‌ನ ಭಾಗವಾಗಿದ್ದ ಬಾಂಗ್ಲಾದೇಶ ಈವರೆಗೂ 50 ಓವರ್‌ಗಳ ಮಾದರಿಯಲ್ಲಿ ಒಟ್ಟು 43 ಪಂದ್ಯಗಳನ್ನು ಆಡಿದೆ. ಆದರೆ, 7ರಲ್ಲಿ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆದರೆ 36 ಪಂದ್ಯಗಳಲ್ಲಿ ತಂಡ ಸೋಲು ಕಂಡಿದೆ. ಆದಾಗ್ಯೂ, ತಂಡವು 2018ರ ಏಷ್ಯಾಕಪ್‌ನಲ್ಲಿ ರನ್ನರ್-ಅಪ್ ಆಗಿತ್ತು. ಗೆಲುವಿನ ಪ್ರಮಾಣ 16.27 ಇದ್ದರೆ, ಸೋಲಿನ ಪ್ರಮಾಣ 83.72ರಷ್ಟಿದೆ.
(3 / 6)

ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ತಂಡ 50 ಓವರ್‌ಗಳ ಮಾದರಿಯಲ್ಲಿ ಉತ್ತಮ ದಾಖಲೆ ಹೊಂದಿದೆ. ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ 45 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು,  26 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನು 18 ಪಂದ್ಯಗಳಲ್ಲಿ ಸೋತಿದೆ. ಇನ್ನು ಭಾರತ ವಿರುದ್ಧ ಆಡಿದ 13 ಪಂದ್ಯಗಳಲ್ಲಿ 8ರಲ್ಲಿ ಸೋತಿದೆ. ಪಾಕ್​ ತಂಡದ ಗೆಲುವಿನ ಶೇಕಡವಾರು 57.77 ರಷ್ಟಿದ್ದರೆ,     40ರಷ್ಟು ಸೋಲಿನ ಪ್ರಮಾಣ ಹೊಂದಿದೆ.
(4 / 6)

ಶ್ರೀಲಂಕಾ ಏಕದಿನ ಮಾದರಿಯಲ್ಲಿ 5 ಬಾರಿ ಏಷ್ಯಾಕಪ್ ಗೆದ್ದಿದೆ. ಏಷ್ಯಾಕಪ್‌ನಲ್ಲಿ ಇದುವರೆಗೆ ಲಂಕಾ ದಾಖಲೆ ಆಕರ್ಷಕವಾಗಿದೆ. ಶ್ರೀಲಂಕಾ 50 ಪಂದ್ಯಗಳಲ್ಲಿ 34 ಪಂದ್ಯಗಳನ್ನು ಗೆದ್ದಿದೆ. ಕೇವಲ 16 ಪಂದ್ಯಗಳಲ್ಲಿ ಸೋತಿದೆ. ಗೆಲುವಿನ ಪ್ರಮಾಣ 68 ರಷ್ಟು, ಸೋಲಿನ ಪ್ರಮಾಣ 32ರಷ್ಟಿದೆ.
(5 / 6)

ಏಷ್ಯಾಕಪ್‌ ಏಕದಿನ ಮಾದರಿಯಲ್ಲಿ ಭಾರತ ತಂಡ ಈವರೆಗಿನ ದಾಖಲೆ ನೋಡಿದರೆ, 49 ಪಂದ್ಯಗಳಲ್ಲಿ 16 ಪಂದ್ಯಗಳಲ್ಲಿ ಮಾತ್ರ ಸೋತಿದೆ. ಅದೇ ಸಮಯದಲ್ಲಿ ಭಾರತ 31 ಪಂದ್ಯ ಗೆದ್ದಿದೆ. ಟೀಮ್​ ಇಂಡಿಯಾ 50 ಓವರ್‌ಗಳ ಏಷ್ಯಾಕಪ್ ಅನ್ನು ಇದುವರೆಗೆ 6 ಬಾರಿ ಗೆದ್ದಿದೆ. ಗೆಲುವಿನ ಪ್ರಮಾಣ 63.26 ರಷ್ಟಿದೆ, ಸೋಲಿನ ಪ್ರಮಾಣ 32.65 ರಷ್ಟಿದೆ.
(6 / 6)

    ಹಂಚಿಕೊಳ್ಳಲು ಲೇಖನಗಳು