logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ranji Trophy 2024: ಐದು ಪಂದ್ಯಗಳು ಮುಕ್ತಾಯ, ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಆಟಗಾರರು

Ranji Trophy 2024: ಐದು ಪಂದ್ಯಗಳು ಮುಕ್ತಾಯ, ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಆಟಗಾರರು

Feb 07, 2024 08:30 PM IST

Top Five Run Getters In Ranji Trophy 2024 : ರಣಜಿ ಟ್ರೋಫಿಯ 5 ಪಂದ್ಯಗಳ ನಂತರ ಎಲೈಟ್ ಗುಂಪಿನ ಕ್ರಿಕೆಟಿಗರಲ್ಲಿ ಹೆಚ್ಚು ರನ್ ಗಳಿಸಿದ ಟಾಪ್​-5 ಆಟಗಾರರು ಯಾರು? ಇಲ್ಲಿದೆ ಪಟ್ಟಿ.

  • Top Five Run Getters In Ranji Trophy 2024 : ರಣಜಿ ಟ್ರೋಫಿಯ 5 ಪಂದ್ಯಗಳ ನಂತರ ಎಲೈಟ್ ಗುಂಪಿನ ಕ್ರಿಕೆಟಿಗರಲ್ಲಿ ಹೆಚ್ಚು ರನ್ ಗಳಿಸಿದ ಟಾಪ್​-5 ಆಟಗಾರರು ಯಾರು? ಇಲ್ಲಿದೆ ಪಟ್ಟಿ.
ರಣಜಿ ಟ್ರೋಫಿಯ ಮೊದಲ 5 ಪಂದ್ಯಗಳ ನಂತರ ಎಲೈಟ್ ಗುಂಪಿನ ಕ್ರಿಕೆಟಿಗರಲ್ಲಿ ತಮಿಳುನಾಡಿನ ಎನ್​ ಜಗದೀಶನ್ ಅತಿ ಹೆಚ್ಚು ರನ್ ಗಳಿಸಿದ್ದಾರೆ. 5 ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದು, 135.80 ಸರಾಸರಿಯಲ್ಲಿ 679 ರನ್ ಗಳಿಸಿದ್ದಾರೆ. ಜಗದೀಶನ್, 1 ತ್ರಿಶತಕ, 1 ದ್ವಿಶತಕ, 1 ಅರ್ಧಶತಕ ಗಳಿಸಿದ್ದಾರೆ. ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ 321 ರನ್.
(1 / 5)

ಗೋವಾದ ಪ್ರಭುದೇಸಾಯಿ ಎರಡನೇ ಸ್ಥಾನದಲ್ಲಿದ್ದಾರೆ. 5 ಪಂದ್ಯಗಳ 9 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ನಡೆಸಿದ್ದು, 74ರ ಸರಾಸರಿಯಲ್ಲಿ 592 ರನ್​ ಗಳಿಸಿದ್ದಾರೆ. ಸುಯೇಶ್ 3 ಶತಕ, ಒಂದು ಅರ್ಧಶತಕ ಗಳಿಸಿದರು. 60 ಬೌಂಡರಿ, 1 ಸಿಕ್ಸರ್ ಬಾರಿಸಿದರು. ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ 197 ರನ್.
(2 / 5)

ಆಂಧ್ರಪ್ರದೇಶದ ರಿಕಿ ಭುಯಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 5 ಪಂದ್ಯಗಳ 7 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ನಡೆಸಿದ್ದು, 78.57 ಸರಾಸರಿಯಲ್ಲಿ 550 ರನ್ ಗಳಿಸಿದ್ದಾರೆ. 3 ಶತಕ, ಒಂದು ಅರ್ಧಶತಕ ಸಿಡಿಸಿದರು. ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ 175 ರನ್ ಆಗಿತ್ತು.
(3 / 5)

ಈ ಪಟ್ಟಿಯಲ್ಲಿ ಕೇರಳದ ಸಚಿನ್ ಬೇಬಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 5 ಪಂದ್ಯಗಳ 9 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ನಡೆಸಿದ್ದು, 77.42 ಸರಾಸರಿಯಲ್ಲಿ 542 ರನ್ ಗಳಿಸಿದ್ದಾರೆ. ಸಚಿನ್ 2 ಶತಕ ಹಾಗೂ 3 ಅರ್ಧ ಶತಕ ಸಿಡಿಸಿದ್ದಾರೆ. ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ 131 ರನ್.
(4 / 5)

ಸೌರಾಷ್ಟ್ರದ ಚೇತೇಶ್ವರ ಪೂಜಾರ ಎಲೈಟ್ ಗುಂಪಿನ ಕ್ರಿಕೆಟಿಗರಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. 4 ಪಂದ್ಯಗಳ ಅಂತ್ಯಕ್ಕೆ 2ನೇ ಸ್ಥಾನದಲ್ಲಿದ್ದ ಪೂಜಾರ, 8 ಇನ್ನಿಂಗ್ಸ್‌ಗಳಲ್ಲಿ 57.84 ಸರಾಸರಿಯಲ್ಲಿ 1 ದ್ವಿಶತಕ, 2 ಅರ್ಧಶತಕ ಸಹಿತ 538 ರನ್ ಗಳಿಸಿದ್ದಾರೆ. ಪೂಜಾರ ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ ಔಟಾಗದೆ 243 ರನ್ ಆಗಿದೆ.
(5 / 5)

    ಹಂಚಿಕೊಳ್ಳಲು ಲೇಖನಗಳು