logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Temples In Belgaum: ಶಿವರಾತ್ರಿ ಸಮಯದಲ್ಲಿ ಬೆಳಗಾವಿ ಕಡೆ ಹೊಂಟಿದ್ರೆ ಈ ದೇವಸ್ಥಾನಗಳನ್ನೂ ತಪ್ಪದೇ ನೋಡಿ ಬನ್ನಿ

Temples in Belgaum: ಶಿವರಾತ್ರಿ ಸಮಯದಲ್ಲಿ ಬೆಳಗಾವಿ ಕಡೆ ಹೊಂಟಿದ್ರೆ ಈ ದೇವಸ್ಥಾನಗಳನ್ನೂ ತಪ್ಪದೇ ನೋಡಿ ಬನ್ನಿ

Feb 27, 2024 05:30 AM IST

ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಬೆಳಗಾವಿಯೂ ಒಂದು. ಪಶ್ಚಿಮ ಘಟ್ಟವು ಈ ಜಿಲ್ಲೆಯಲ್ಲೂ ಹಾದು ಹೋಗಿದ್ದು, ಅದ್ಭುತ ಪ್ರಾಕೃತಿಕ ಸೌಂದರ್ಯ ಹೊಂದಿರುವ ಪ್ರದೇಶವಿದು. ಇಲ್ಲಿ ಹಲವು ದೇವಾಲಯಗಳಿದ್ದು, ನೀವು ಈ ಕಡೆ ಟ್ರಿಪ್‌ ಪ್ಲಾನ್‌ ಮಾಡಿದ್ರೆ ಈ ದೇಗುಲಗಳನ್ನೂ ನಿಮ್ಮ ಪ್ರವಾಸ ಪಟ್ಟಿಯಲ್ಲಿ ಸೇರಿಸಿಕೊಳ್ಳಿ.

  • ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಬೆಳಗಾವಿಯೂ ಒಂದು. ಪಶ್ಚಿಮ ಘಟ್ಟವು ಈ ಜಿಲ್ಲೆಯಲ್ಲೂ ಹಾದು ಹೋಗಿದ್ದು, ಅದ್ಭುತ ಪ್ರಾಕೃತಿಕ ಸೌಂದರ್ಯ ಹೊಂದಿರುವ ಪ್ರದೇಶವಿದು. ಇಲ್ಲಿ ಹಲವು ದೇವಾಲಯಗಳಿದ್ದು, ನೀವು ಈ ಕಡೆ ಟ್ರಿಪ್‌ ಪ್ಲಾನ್‌ ಮಾಡಿದ್ರೆ ಈ ದೇಗುಲಗಳನ್ನೂ ನಿಮ್ಮ ಪ್ರವಾಸ ಪಟ್ಟಿಯಲ್ಲಿ ಸೇರಿಸಿಕೊಳ್ಳಿ.
ಕರ್ನಾಟಕದ ಎರಡನೇ ರಾಜಧಾನಿ ಎಂದೇ ಕರೆಸಿಕೊಳ್ಳುವ ಬೆಳಗಾವಿಯು ಧಾರ್ಮಿಕ ಪರಂಪರೆಯ ತಾಣವೂ ಹೌದು. ಇಲ್ಲಿ ಹಲವಾರು ಪ್ರಸಿದ್ಧ ದೇವಾಲಯಗಳಿವೆ. ಸುವರ್ಣ ಸೌಧ ನೋಡಲು ಬೆಳಗಾವಿಗೆ ಹೋಗುವ ಯೋಚನೆ ಇದ್ದರೆ, ಇಲ್ಲಿನ ಈ ದೇವಾಲಯಗಳನ್ನೂ ನೋಡಿ ಬನ್ನಿ. ಶಿವರಾತ್ರಿ ಸಮೀಪದಲ್ಲಿದ್ದೂ ಇಲ್ಲಿನ ಪ್ರಸಿದ್ಧ ಶಿವ ದೇಗುಲಗಳ ಬಗ್ಗೆಯೂ ಇಲ್ಲಿದೆ ಪರಿಚಯ. 
(1 / 10)

ಪಂಚಲಿಂಗೇಶ್ವರ ದೇವಾಲಯ: ಈ ದೇವಾಲಯವು ಪುರಾತನ ಗ್ರಾಮವಾದ ಹೂಲಿ ಸೌಂದತ್ತಿಯಿಂದ 9 ಕಿಲೋಮೀಟರ್‌ ಹಾಗೂ ಬೆಳಗಾವಿ ನಗರದಿಂದ 78 ಕಿಲೋಮೀಟರ್‌ ದೂರದಲ್ಲಿದೆ. ಚಾಲುಕ್ಯ ವಾಸ್ತುಶಿಲ್ಪ ಹೊಂದಿರುವ ಈ ದೇವಾಲಯವನ್ನು ಹೂಲಿ ಪಂಚಲಿಂಗೇಶ್ವರ ದೇವಾಲಯ ಎಂದೂ ಕರೆಯುತ್ತಾರೆ. 
(2 / 10)

ಕಲ್ಮೇಶ್ವರ ದೇವಾಲಯ: ಬೆಳಗಾವಿಯಲ್ಲಿನ ಪ್ರಸಿದ್ಧ ದೇವಾಲಯಗಳಲ್ಲಿ ಕಲ್ಮೇಶ್ವರ ದೇವಾಲಯವೂ ಒಂದು. ಶಿವನಿಗೆ ಅರ್ಪಿತವಾದ ಈ ದೇಗುಲಕ್ಕೆ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ. ಇದು ಹಳೆ ಬೆಳಗಾವಿ ಪ್ರಾಂತ್ಯದಲ್ಲಿರುವ ದೇವಾಲಯವಾಗಿದೆ. 
(3 / 10)
ಕಲ್ಮೇಶ್ವರ ದೇವಾಲಯ: ಬೆಳಗಾವಿಯಲ್ಲಿನ ಪ್ರಸಿದ್ಧ ದೇವಾಲಯಗಳಲ್ಲಿ ಕಲ್ಮೇಶ್ವರ ದೇವಾಲಯವೂ ಒಂದು. ಶಿವನಿಗೆ ಅರ್ಪಿತವಾದ ಈ ದೇಗುಲಕ್ಕೆ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ. ಇದು ಹಳೆ ಬೆಳಗಾವಿ ಪ್ರಾಂತ್ಯದಲ್ಲಿರುವ ದೇವಾಲಯವಾಗಿದೆ. 
ಕಪಿಲೇಶ್ವರ ದೇವಸ್ಥಾನ: ಬೆಳಗಾವಿಯಲ್ಲಿನ ಪ್ರಸಿದ್ಧ ದೇವಾಲಯಗಳ ಪಟ್ಟಿಯಲ್ಲಿ ಹೆಸರು ಪಡೆದಿರುವ ಕಪಿಲೇಶ್ವರ ದೇವಸ್ಥಾನಕ್ಕೆ ದಕ್ಷಿಣದ ಕಾಶಿ ಎಂದೂ ಕರೆಯುತ್ತಾರೆ. ಭಾರತದ 12 ಜ್ಯೋತಿರ್ಲಿಂಗಗಳಿಗೆ ಭೇಟಿ ನೀಡುವ ಮುನ್ನ ಈ ದೇಗುಲಕ್ಕೆ ಭೇಟಿ ನೀಡಿ ಶಿವನ ಆಶೀರ್ವಾದ ಪಡೆಯಬೇಕು ಎಂದು ಪ್ರತೀತಿ ಇದೆ. ಈ ದೇಗುಲವನ್ನು 1000 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿರುವ ಶಿವಲಿಂಗವು ಮೂಡಿ ಬಂದಿರುವುದು ಎಂದು ಜನರು ನಂಬುತ್ತಾರೆ. 
(4 / 10)
ಕಪಿಲೇಶ್ವರ ದೇವಸ್ಥಾನ: ಬೆಳಗಾವಿಯಲ್ಲಿನ ಪ್ರಸಿದ್ಧ ದೇವಾಲಯಗಳ ಪಟ್ಟಿಯಲ್ಲಿ ಹೆಸರು ಪಡೆದಿರುವ ಕಪಿಲೇಶ್ವರ ದೇವಸ್ಥಾನಕ್ಕೆ ದಕ್ಷಿಣದ ಕಾಶಿ ಎಂದೂ ಕರೆಯುತ್ತಾರೆ. ಭಾರತದ 12 ಜ್ಯೋತಿರ್ಲಿಂಗಗಳಿಗೆ ಭೇಟಿ ನೀಡುವ ಮುನ್ನ ಈ ದೇಗುಲಕ್ಕೆ ಭೇಟಿ ನೀಡಿ ಶಿವನ ಆಶೀರ್ವಾದ ಪಡೆಯಬೇಕು ಎಂದು ಪ್ರತೀತಿ ಇದೆ. ಈ ದೇಗುಲವನ್ನು 1000 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿರುವ ಶಿವಲಿಂಗವು ಮೂಡಿ ಬಂದಿರುವುದು ಎಂದು ಜನರು ನಂಬುತ್ತಾರೆ. (HinduPad)
ಕಮಲ್‌ ಬಸ್ತಿ: ಇದು ಬೆಳಗಾವಿಯಲ್ಲಿರುವ ಪ್ರಸಿದ್ಧ ಜೈನ ದೇಗುಲ. 10ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ. ಇದು 72 ದಳಗಳನ್ನು ಹೊಂದಿರುವ ಕಮಲವನ್ನು ಹೋಲುವ ಕಾರಣ ಇದಕ್ಕೆ ಕಮಲ್‌ ಬಸ್ತಿ ಎಂದೂ ಕರೆಯಲಾಗುತ್ತದೆ. ಪ್ರತಿ ದಳಗಳ ಮೇಲೂ 24 ತೀರ್ಥಂಕರರ ಹೆಸರುಗಳನ್ನು ಕೆತ್ತಲಾಗಿದೆ. 
(5 / 10)
ಕಮಲ್‌ ಬಸ್ತಿ: ಇದು ಬೆಳಗಾವಿಯಲ್ಲಿರುವ ಪ್ರಸಿದ್ಧ ಜೈನ ದೇಗುಲ. 10ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ. ಇದು 72 ದಳಗಳನ್ನು ಹೊಂದಿರುವ ಕಮಲವನ್ನು ಹೋಲುವ ಕಾರಣ ಇದಕ್ಕೆ ಕಮಲ್‌ ಬಸ್ತಿ ಎಂದೂ ಕರೆಯಲಾಗುತ್ತದೆ. ಪ್ರತಿ ದಳಗಳ ಮೇಲೂ 24 ತೀರ್ಥಂಕರರ ಹೆಸರುಗಳನ್ನು ಕೆತ್ತಲಾಗಿದೆ. (Wikipedia)
ಮಿಲಿಟರಿ ದುರ್ಗಾದೇವಿ ದೇವಸ್ಥಾನ: ಮಿಲಿಟರಿ ದುರ್ಗಾದೇವಿ ದೇವಸ್ಥಾನವು ಸಶಸ್ತ್ರ ಪಡೆಗಳ ಅಧೀನದಲ್ಲಿದೆ. ಈ ಕಾರಣಕ್ಕೆ ಇದಕ್ಕೆ ಮಿಲಿಟರಿ ದುರ್ಗಾದೇವಿ ದೇವಸ್ಥಾನ ಎಂಬ ಹೆಸರು ಬಂದಿದೆ. ಇದು ಕೂಡ ಬೆಳಗಾವಿಯಲ್ಲಿರುವ 1000 ವರ್ಷಕ್ಕೂ ಹಳೆಯದಾದ ದೇಗುಲವಾಗಿದೆ. ದ್ರಾವಿಡ ವಾಸ್ತುಶಿಲ್ಪವನ್ನು ಹೊಂದಿರುವ ದೇವಾಲಯ ಇದಾಗಿದೆ. ಚಾಲುಕ್ಯ, ಹೊಯ್ಸಳ ಹಾಗೂ ವಿಜಯನಗರ ಕಾಲದ ಶಿಲ್ಪಗಳನ್ನು ಇಲ್ಲಿ ಕಾಣಬಹುದಾಗಿದೆ.
(6 / 10)
ಮಿಲಿಟರಿ ದುರ್ಗಾದೇವಿ ದೇವಸ್ಥಾನ: ಮಿಲಿಟರಿ ದುರ್ಗಾದೇವಿ ದೇವಸ್ಥಾನವು ಸಶಸ್ತ್ರ ಪಡೆಗಳ ಅಧೀನದಲ್ಲಿದೆ. ಈ ಕಾರಣಕ್ಕೆ ಇದಕ್ಕೆ ಮಿಲಿಟರಿ ದುರ್ಗಾದೇವಿ ದೇವಸ್ಥಾನ ಎಂಬ ಹೆಸರು ಬಂದಿದೆ. ಇದು ಕೂಡ ಬೆಳಗಾವಿಯಲ್ಲಿರುವ 1000 ವರ್ಷಕ್ಕೂ ಹಳೆಯದಾದ ದೇಗುಲವಾಗಿದೆ. ದ್ರಾವಿಡ ವಾಸ್ತುಶಿಲ್ಪವನ್ನು ಹೊಂದಿರುವ ದೇವಾಲಯ ಇದಾಗಿದೆ. ಚಾಲುಕ್ಯ, ಹೊಯ್ಸಳ ಹಾಗೂ ವಿಜಯನಗರ ಕಾಲದ ಶಿಲ್ಪಗಳನ್ನು ಇಲ್ಲಿ ಕಾಣಬಹುದಾಗಿದೆ.(Facebook )
ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ: ಸವದತ್ತಿ ಯಲ್ಲಮ್ಮ ದೇವಿ ಎಂದೂ ಕರೆಸಿಕೊಳ್ಳುವ ಈ ದೇಗುಲವು ಭಾರತದಾದ್ಯಂತ ಸಾಕಷ್ಟು ಖ್ಯಾತಿ ಗಳಿಸಿದೆ. ಇದು ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರುವ ಪುಣ್ಯಕ್ಷೇತ್ರ. ಸವದತ್ತಿಯಿಂದ 5 ಕಿಲೋಮೀಟರ್‌ ದೂರದಲ್ಲಿರುವ ಎಲ್ಲಮ್ಮ ಗುಡ್ಡದ ಮೇಲಿದೆ.
(7 / 10)
ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ: ಸವದತ್ತಿ ಯಲ್ಲಮ್ಮ ದೇವಿ ಎಂದೂ ಕರೆಸಿಕೊಳ್ಳುವ ಈ ದೇಗುಲವು ಭಾರತದಾದ್ಯಂತ ಸಾಕಷ್ಟು ಖ್ಯಾತಿ ಗಳಿಸಿದೆ. ಇದು ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರುವ ಪುಣ್ಯಕ್ಷೇತ್ರ. ಸವದತ್ತಿಯಿಂದ 5 ಕಿಲೋಮೀಟರ್‌ ದೂರದಲ್ಲಿರುವ ಎಲ್ಲಮ್ಮ ಗುಡ್ಡದ ಮೇಲಿದೆ.(Incredible India )
ಮಲ್ಲಿಕಾರ್ಜುನ ದೇವಾಲಯ: ಬೆಳಗಾವಿಯ ಪ್ರಸಿದ್ಧ ದೇಗುಲಗಳಲ್ಲಿ ಈ ದೇವಾಲಯವೂ ಒಂದು. ಇದು ವಡಂಗಾವ್‌ನ ಚಾವಡಿ ಗಲ್ಲಿಯಲ್ಲಿದೆ. 
(8 / 10)
ಮಲ್ಲಿಕಾರ್ಜುನ ದೇವಾಲಯ: ಬೆಳಗಾವಿಯ ಪ್ರಸಿದ್ಧ ದೇಗುಲಗಳಲ್ಲಿ ಈ ದೇವಾಲಯವೂ ಒಂದು. ಇದು ವಡಂಗಾವ್‌ನ ಚಾವಡಿ ಗಲ್ಲಿಯಲ್ಲಿದೆ. (Tripadvisor )
ಶ್ರೀ ಮೌಲಿದೇವಿ ದೇವಾಲಯ: ಇದು ಬೆಳಗಾವಿಯ ಪ್ರಸಿದ್ಧ ಪ್ರವಾಸಿ ತಾಣವೂ ಹೌದು. ಅದ್ಭುತ ವಾಸ್ತುಶಿಲ್ಪದ ಕಾರಣದಿಂದ ಈ ದೇವಾಲಯವು ಸಾಕಷ್ಟು ಪ್ರಸಿದ್ಧ ಪಡೆದಿದೆ.
(9 / 10)
ಶ್ರೀ ಮೌಲಿದೇವಿ ದೇವಾಲಯ: ಇದು ಬೆಳಗಾವಿಯ ಪ್ರಸಿದ್ಧ ಪ್ರವಾಸಿ ತಾಣವೂ ಹೌದು. ಅದ್ಭುತ ವಾಸ್ತುಶಿಲ್ಪದ ಕಾರಣದಿಂದ ಈ ದೇವಾಲಯವು ಸಾಕಷ್ಟು ಪ್ರಸಿದ್ಧ ಪಡೆದಿದೆ.
ಧರ್ಮ, ಅಧ್ಯಾತ್ಮ, ಹಬ್ಬ, ಗ್ರಹಗತಿ, ಜ್ಯೋತಿಷ್ಯ, ಭವಿಷ್ಯ ಈ ಎಲ್ಲ ವಿಚಾರಗಳೂ ಒಂದೇ ಕಡೆ ಸಿಗಲು ನೀವೂ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ರಾಶಿಭವಿಷ್ಯ ಪುಟಕ್ಕೆ ಭೇಟಿ ನೀಡಬೇಕು. 
(10 / 10)
ಧರ್ಮ, ಅಧ್ಯಾತ್ಮ, ಹಬ್ಬ, ಗ್ರಹಗತಿ, ಜ್ಯೋತಿಷ್ಯ, ಭವಿಷ್ಯ ಈ ಎಲ್ಲ ವಿಚಾರಗಳೂ ಒಂದೇ ಕಡೆ ಸಿಗಲು ನೀವೂ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ರಾಶಿಭವಿಷ್ಯ ಪುಟಕ್ಕೆ ಭೇಟಿ ನೀಡಬೇಕು. 

    ಹಂಚಿಕೊಳ್ಳಲು ಲೇಖನಗಳು