logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೊಡೈಕೆನಾಲ್‌ಗೆ ಪ್ರವಾಸ ಹೋದ್ರೆ ತಪ್ಪದೇ ನೋಡಬೇಕಾದ 6 ಅದ್ಭುತ ತಾಣಗಳಿವು

ಕೊಡೈಕೆನಾಲ್‌ಗೆ ಪ್ರವಾಸ ಹೋದ್ರೆ ತಪ್ಪದೇ ನೋಡಬೇಕಾದ 6 ಅದ್ಭುತ ತಾಣಗಳಿವು

Nov 24, 2023 07:45 AM IST

ಸೌತ್‌ ಇಂಡಿಯಾದ ಹನಿಮೂನ್‌ ಸ್ಪಾಟ್‌ಗಳಲ್ಲಿ ಟಾಪ್‌ನಲ್ಲಿರುವುದು ಊಟಿ, ಕೊಡೈಕೆನಾಲ್‌. ಸುಂದರ ಹಸಿರು ಬೆಟ್ಟ, ಗುಡ್ಡಗಳಿಂದ ಸುತ್ತವರಿದಿರುವ ಈ ಜಾಗಗಳನ್ನು ಜೀವನದಲ್ಲಿ ಒಮ್ಮೆಯಾದ್ರೂ ನೋಡಬೇಕು. ಅದರಲ್ಲೂ ಕೊಡೈಕೆನಾಲ್‌ಗೆ ಹೋದ್ರೆ ಈ 6 ಜಾಗಗಳನ್ನು ಮಿಸ್‌ ಮಾಡದೇ ನೋಡಬೇಕು.

  • ಸೌತ್‌ ಇಂಡಿಯಾದ ಹನಿಮೂನ್‌ ಸ್ಪಾಟ್‌ಗಳಲ್ಲಿ ಟಾಪ್‌ನಲ್ಲಿರುವುದು ಊಟಿ, ಕೊಡೈಕೆನಾಲ್‌. ಸುಂದರ ಹಸಿರು ಬೆಟ್ಟ, ಗುಡ್ಡಗಳಿಂದ ಸುತ್ತವರಿದಿರುವ ಈ ಜಾಗಗಳನ್ನು ಜೀವನದಲ್ಲಿ ಒಮ್ಮೆಯಾದ್ರೂ ನೋಡಬೇಕು. ಅದರಲ್ಲೂ ಕೊಡೈಕೆನಾಲ್‌ಗೆ ಹೋದ್ರೆ ಈ 6 ಜಾಗಗಳನ್ನು ಮಿಸ್‌ ಮಾಡದೇ ನೋಡಬೇಕು.
ಒತ್ತಡ, ಜಂಜಡದ ಜೀವನದಿಂದ ಬೇಸತ್ತು ಒಂದೆರಡು ದಿನ ಎಲ್ಲಾದ್ರೂ ಪ್ರವಾಸ ಹೋಗಬೇಕು ಅಂತಿದ್ರೆ ಕೊಡೈಕೆನಾಲ್‌ ಬೆಸ್ಟ್‌ ತಾಣ. ಸುತ್ತಲೂ ಹಚ್ಚ ಹಸಿರ ಗುಡ್ಡಗಳಿಂದ ಸುತ್ತುವರಿದಿರುವ ಈ ಪ್ರಕೃತಿ ರಮಣೀಯ ಜಾಗ ಇರುವುದು ತಮಿಳುನಾಡಿನಲ್ಲಿ. ಪಶ್ಚಿಮ ಘಟ್ಟದ ಸುಂದರ ಬೆಟ್ಟಗಳನ್ನು ಹೊಂದಿರುವ ಈ ತಾಣಕ್ಕೆ ಪ್ರಪಂಚದಾದ್ಯಂತ ಪ್ರವಾಸಿಗರು ಭೇಟಿ ನೀಡುತ್ತಾರೆ. ನೀವು ಇಲ್ಲಿಗೆ ಹೋದ್ರೆ ಈ 6 ಜಾಗಗಳನ್ನು ಮಿಸ್‌ ಮಾಡ್ಡೆ ನೋಡಿ ಬನ್ನಿ. 
(1 / 7)
ಒತ್ತಡ, ಜಂಜಡದ ಜೀವನದಿಂದ ಬೇಸತ್ತು ಒಂದೆರಡು ದಿನ ಎಲ್ಲಾದ್ರೂ ಪ್ರವಾಸ ಹೋಗಬೇಕು ಅಂತಿದ್ರೆ ಕೊಡೈಕೆನಾಲ್‌ ಬೆಸ್ಟ್‌ ತಾಣ. ಸುತ್ತಲೂ ಹಚ್ಚ ಹಸಿರ ಗುಡ್ಡಗಳಿಂದ ಸುತ್ತುವರಿದಿರುವ ಈ ಪ್ರಕೃತಿ ರಮಣೀಯ ಜಾಗ ಇರುವುದು ತಮಿಳುನಾಡಿನಲ್ಲಿ. ಪಶ್ಚಿಮ ಘಟ್ಟದ ಸುಂದರ ಬೆಟ್ಟಗಳನ್ನು ಹೊಂದಿರುವ ಈ ತಾಣಕ್ಕೆ ಪ್ರಪಂಚದಾದ್ಯಂತ ಪ್ರವಾಸಿಗರು ಭೇಟಿ ನೀಡುತ್ತಾರೆ. ನೀವು ಇಲ್ಲಿಗೆ ಹೋದ್ರೆ ಈ 6 ಜಾಗಗಳನ್ನು ಮಿಸ್‌ ಮಾಡ್ಡೆ ನೋಡಿ ಬನ್ನಿ. (Herzindagi.com )
ಕೊಡೈಕೆನಾಲ್‌ ಲೇಕ್‌: ಕೊಡೈಕೆನಾಲ್‌ನಲ್ಲಿ ಹೆಚ್ಚು ಆಕರ್ಷಣೀಯವಾಗಿರುವುದು ಇಲ್ಲಿರುವ ಸರೋವರ. ನಕ್ಷತ್ರಾಕಾರದ ಈ ಸರೋವರ ಮಾನವ ನಿರ್ಮಿತವಾಗಿದೆ. ಸರೋವರದ ಸುತ್ತಲೂ ಹಚ್ಚ ಹಸಿರಿನಿಂದ ನಳ ನಳಿಸುತ್ತಿರುವ ಮರಗಳಿವೆ. ಈ ಸರೋವರವು ಸುತ್ತಲೂ ಬೆಟ್ಟಗಳಿಂದ ಆವೃತವಾಗಿದ್ದು, ಒಟ್ಟಾರೆ ಅದ್ಭುತ ತಾಣವಾಗಿ ಮಾರ್ಪಾಡಾಗಿದೆ. ಇಲ್ಲಿ ಪ್ರವಾಸಿಗರು ದೋಣೆಯನ್ನು ಬಾಡಿಗೆಗೆ ಪಡೆದು ಬೋಟಿಂಗ್‌ ಮಾಡಬಹುದು. ಸರೋವರದ ಸುತ್ತಲೂ ವಾಕಿಂಗ್‌ ಮಾಡಲು ಜಾಗವಿದೆ. ಫೋಟೊಗ್ರಫಿಗಂತೂ ಇದು ಹೇಳಿ ಮಾಡಿಸಿದ ಜಾಗ.
(2 / 7)

ಕೋಕರ್ಸ್‌ ವಾಕ್‌: ಲೆಫ್ಟಿನಂಟ್‌ ಕೋಕರ್‌ ಎನ್ನುವವರು 1872ರಲ್ಲಿ ಪರ್ವತದ ಇಳಿಜಾರಿನಲ್ಲಿ ದಾರಿಯನ್ನು ನಿರ್ಮಿಸಿದ್ದರು. ಕಣಿವೆಯ ವಿಹಂಗಮ ನೋಟದೊಂದಿಗೆ ಈ ಜಾಗದಲ್ಲಿ ನಡೆಯುತ್ತಿದ್ದರೆ ಸ್ವರ್ಗದಲ್ಲೇ ಇದ್ದಂತೆ ಭಾಸವಾಗುವುದರಲ್ಲಿ ಅನುಮಾನವಿಲ್ಲ. ಈ ಹಾದಿಯು ಕಾಡಿನ ಮೂಲಕ ಆರಂಭವಾಗುತ್ತದೆ. ಕೊಡೈಕೆನಾಲ್‌ ಹೋದ್ರೆ ಈ ಜಾಗ ಖಂಡಿತ ಮಿಸ್‌ ಮಾಡ್ಬೇಡಿ
(3 / 7)

ಪೂಂಬರೈ ಗ್ರಾಮ: ಪೂಂಬರೈ ಬೆಳ್ಳುಳ್ಳಿ ಉತ್ಪಾದನೆಗೆ ಹೆಸರುವಾಸಿಯಾಗಿರುವ ಗ್ರಾಮ. ಇದೊಂದು ಸಣ್ಣ ಹಳ್ಳಿಯಾಗಿದ್ದು, ತಾರಸಿ ಹೊಲದ ಮನೆಗಳು ಇಲ್ಲಿನ ವಿಶೇಷ. ಇದು ಪಳನಿ ಬೆಟ್ಟಗಳ ಭಾಗದಲ್ಲಿದೆ. ಇಲ್ಲಿಗೆ ಹೋದರೆ ಕುಜಂತೈ ವೇಲಪ್ಪರ್ ದೇವಸ್ಥಾನ ಅಥವಾ ಮುರುಗನ್ ದೇವಸ್ಥಾನ ಮತ್ತು ಪೂಂಬರೈ ವ್ಯೂಪಾಯಿಂಟ್‌ಗೆ ಹೋಗಲೇಬೇಕು.
(4 / 7)

ಡಾಲ್ಫಿನ್ಸ್ ನೋಸ್: ಡಾಲ್ಫಿನ್ಸ್ ನೋಸ್ ಕೊಡೈಕೆನಾಲ್‌ನಲ್ಲಿ ಭೇಟಿ ನೀಡಲು ಜನಪ್ರಿಯ ಸ್ಥಳವಾಗಿದ್ದು, ಸುತ್ತಲೂ ಕಣಿವೆಗಳು ಹಾಗೂ ಪರ್ವತಗಳಿಂದ ಸುತ್ತುವರಿದಿದೆ. ಡಾಲ್ಫಿನ್ಸ್ ನೋಸ್ ಒಂದು ಸಮತಟ್ಟಾದ ಬಂಡೆಯಾಗಿದ್ದು, ಬಂಡೆಯ ತುದಿ ಡಾಲ್ಫಿನ್‌ ಮೂಗಿನಂತೆ ಕಾಣಿಸುತ್ತದೆ. ಇದು ನೈಸರ್ಗಿಕವಾಗಿ ಸೃಷ್ಟಿಯಾಗಿದ್ದು, ಇದಕ್ಕೆ ಡಾಲ್ಫಿನ್‌ ನೋಸ್‌ ಎಂದೇ ಕರೆಯಲಾಗುತ್ತದೆ. ಈ ಜಾಗ ತಲುಪಲು ವಟ್ಟಕ್ಕನಾಲ್‌ ಪ್ರದೇಶದಿಂದ 1 ಕಿಲೋಮೀಟರ್‌ ನಡೆಯಬೇಕು.
(5 / 7)
ಡಾಲ್ಫಿನ್ಸ್ ನೋಸ್: ಡಾಲ್ಫಿನ್ಸ್ ನೋಸ್ ಕೊಡೈಕೆನಾಲ್‌ನಲ್ಲಿ ಭೇಟಿ ನೀಡಲು ಜನಪ್ರಿಯ ಸ್ಥಳವಾಗಿದ್ದು, ಸುತ್ತಲೂ ಕಣಿವೆಗಳು ಹಾಗೂ ಪರ್ವತಗಳಿಂದ ಸುತ್ತುವರಿದಿದೆ. ಡಾಲ್ಫಿನ್ಸ್ ನೋಸ್ ಒಂದು ಸಮತಟ್ಟಾದ ಬಂಡೆಯಾಗಿದ್ದು, ಬಂಡೆಯ ತುದಿ ಡಾಲ್ಫಿನ್‌ ಮೂಗಿನಂತೆ ಕಾಣಿಸುತ್ತದೆ. ಇದು ನೈಸರ್ಗಿಕವಾಗಿ ಸೃಷ್ಟಿಯಾಗಿದ್ದು, ಇದಕ್ಕೆ ಡಾಲ್ಫಿನ್‌ ನೋಸ್‌ ಎಂದೇ ಕರೆಯಲಾಗುತ್ತದೆ. ಈ ಜಾಗ ತಲುಪಲು ವಟ್ಟಕ್ಕನಾಲ್‌ ಪ್ರದೇಶದಿಂದ 1 ಕಿಲೋಮೀಟರ್‌ ನಡೆಯಬೇಕು.(Herzindagi.com )
ಕುರಿಂಜಿ ಆಂಡವರ್ ದೇವಸ್ಥಾನ: ಕುರಿಂಜಿ ಆಂಡವರ್ ದೇವಾಲಯವು ಮುರುಗನ್ ದೇವರಿಗೆ ಸಮರ್ಪಿತವಾಗಿದೆ. ತಮಿಳುನಾಡಿನ ಕೊಡೈಕೆನಾಲ್‌ನಲ್ಲಿರುವ ಈ ಹಳೆಯ ದೇವಾಲಯವು ಅತ್ಯಂತ ಪ್ರಸಿದ್ಧವಾದ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ಈ ದೇವಾಲಯವನ್ನು ಯಾವುದೇ ಕಾರಣಕ್ಕೂ ಮಿಸ್‌ ಮಾಡಬಾರದು. 
(6 / 7)

ಬ್ರ್ಯಾಂಟ್ ಪಾರ್ಕ್: ಕೊಡೈಕೆನಾಲ್‌ ಪ್ರವಾಸದಲ್ಲಿ ನೋಡಲೇಬೇಕಾದ ಇನ್ನೊಂದು ಪ್ರಮುಖ ಜಾಗವಿದು. ಇದೊಂದು ಸುಂದರ ಬೊಟಾನಿಕಲ್‌ ಗಾರ್ಡನ್‌. ಇದು ಸುಂದರವಾದ ಹುಲ್ಲುಹಾಸುಗಳನ್ನು ಹೊಂದಿದೆ. ವಿಶ್ರಾಂತಿ ಪಡೆಯಲು ಮತ್ತು ಏಕಾಂತ ಬಯಸುವವರಿಗೆ ಇದು ಹೇಳಿ ಮಾಡಿಸಿದ ಜಾಗ. 160 ವರ್ಷಗಳಷ್ಟು ಹಳೆಯ ನೀಲಗಿರಿ ಮರ, ಪವಿತ್ರ ಬೋಧಿ ವೃಕ್ಷವನ್ನು ಇಲ್ಲಿ ಕಾಣಬಹುದಾಗಿದೆ. ವೈವಿಧ್ಯಮಯ ಗುಲಾಬಿ ಹೂಗಳಿಂದ ತುಂಬಿರುವ ಗುಲಾಬಿ ವಿಭಾಗ ಇಲ್ಲಿದೆ. 
(7 / 7)
ಬ್ರ್ಯಾಂಟ್ ಪಾರ್ಕ್: ಕೊಡೈಕೆನಾಲ್‌ ಪ್ರವಾಸದಲ್ಲಿ ನೋಡಲೇಬೇಕಾದ ಇನ್ನೊಂದು ಪ್ರಮುಖ ಜಾಗವಿದು. ಇದೊಂದು ಸುಂದರ ಬೊಟಾನಿಕಲ್‌ ಗಾರ್ಡನ್‌. ಇದು ಸುಂದರವಾದ ಹುಲ್ಲುಹಾಸುಗಳನ್ನು ಹೊಂದಿದೆ. ವಿಶ್ರಾಂತಿ ಪಡೆಯಲು ಮತ್ತು ಏಕಾಂತ ಬಯಸುವವರಿಗೆ ಇದು ಹೇಳಿ ಮಾಡಿಸಿದ ಜಾಗ. 160 ವರ್ಷಗಳಷ್ಟು ಹಳೆಯ ನೀಲಗಿರಿ ಮರ, ಪವಿತ್ರ ಬೋಧಿ ವೃಕ್ಷವನ್ನು ಇಲ್ಲಿ ಕಾಣಬಹುದಾಗಿದೆ. ವೈವಿಧ್ಯಮಯ ಗುಲಾಬಿ ಹೂಗಳಿಂದ ತುಂಬಿರುವ ಗುಲಾಬಿ ವಿಭಾಗ ಇಲ್ಲಿದೆ. (Herzindagi.com )

    ಹಂಚಿಕೊಳ್ಳಲು ಲೇಖನಗಳು