logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Odi World Cup 2023: ಏಕದಿನ ವಿಶ್ವಕಪ್ 10 ತಂಡಗಳ ಹೊಸ ಜೆರ್ಸಿ ಅನಾವರಣ: ನಿಮಗೆ ಇಷ್ಟವಾದ ಚೆಂದದ ಜೆರ್ಸಿ ಯಾವುದು?

ODI World Cup 2023: ಏಕದಿನ ವಿಶ್ವಕಪ್ 10 ತಂಡಗಳ ಹೊಸ ಜೆರ್ಸಿ ಅನಾವರಣ: ನಿಮಗೆ ಇಷ್ಟವಾದ ಚೆಂದದ ಜೆರ್ಸಿ ಯಾವುದು?

Dec 22, 2023 05:33 PM IST

Official World Cup 2023 Kits: ಏಕದಿನ ವಿಶ್ವಕಪ್‌ ಟೂರ್ನಿಗೆ 10 ತಂಡಗಳು ಪ್ರತ್ಯೇಕವಾಗಿ ವಿಶೇಷ ಜೆರ್ಸಿಗಳನ್ನು ತಯಾರಿಸಿವೆ. ಟೂರ್ನಿಗೂ ಆರಂಭಕ್ಕೂ ಮುನ್ನ ಎಲ್ಲಾ ತಂಡಗಳ ಜೆರ್ಸಿ ಹೇಗಿವೆ ಎಂಬುದನ್ನು ನೋಡಿ.

  • Official World Cup 2023 Kits: ಏಕದಿನ ವಿಶ್ವಕಪ್‌ ಟೂರ್ನಿಗೆ 10 ತಂಡಗಳು ಪ್ರತ್ಯೇಕವಾಗಿ ವಿಶೇಷ ಜೆರ್ಸಿಗಳನ್ನು ತಯಾರಿಸಿವೆ. ಟೂರ್ನಿಗೂ ಆರಂಭಕ್ಕೂ ಮುನ್ನ ಎಲ್ಲಾ ತಂಡಗಳ ಜೆರ್ಸಿ ಹೇಗಿವೆ ಎಂಬುದನ್ನು ನೋಡಿ.
ಭಾರತ ಪರಿಚಿತ ನೀಲಿ ಜೆರ್ಸಿಯಲ್ಲಿ ಮೈದಾನಕ್ಕಿಳಿಯಲಿದೆ. ಜೆರ್ಸಿಯ ಹಿಂಭಾಗದಲ್ಲಿ ಆಟಗಾರರ ಹೆಸರು ಮತ್ತು ಜೆರ್ಸಿ ಸಂಖ್ಯೆಯನ್ನು ಕಿತ್ತಳೆ ಬಣ್ಣದಲ್ಲಿ ಬರೆಯಲಾಗಿದೆ. ಜರ್ಸಿ ಮುಂಭಾಗದಲ್ಲಿ ದೇಶದ ಹೆಸರನ್ನು ಕಿತ್ತಳೆ ಬಣ್ಣದಲ್ಲಿ ಬರೆಯಲಾಗಿದೆ. ವಿಶ್ವಕಪ್ ಲೋಗೋ ಎದೆಯ ಬಲಭಾಗದಲ್ಲಿದ್ದು, ಎಡಭಾಗದಲ್ಲಿ ಬಿಸಿಸಿಐ ಲಾಂಛನವಿದೆ. 2 ಏಕದಿನ ವಿಶ್ವಕಪ್ ಗೆಲುವಿನ ನೆನಪಿಗಾಗಿ ಎರಡು ನಕ್ಷತ್ರಗಳನ್ನು ಚಿತ್ರಿಸಲಾಗಿದೆ. ಭುಜಗಳು ಓಚರ್, ಬಿಳಿ ಮತ್ತು ಹಸಿರು ಪಟ್ಟೆಗಳನ್ನು ಹೊಂದಿವೆ.
(1 / 11)

ದಕ್ಷಿಣ ಆಫ್ರಿಕಾದ ಜೆರ್ಸಿಯ ಬಣ್ಣ ಹಸಿರು. ತೋಳಿನ ಕೊನೆಯಲ್ಲಿ ಹಳದಿ ಪಟ್ಟಿ ಇದೆ. ಕ್ರಿಕೆಟಿಗರ ಹೆಸರು ಮತ್ತು ದೇಶದ ಹೆಸರನ್ನು ಹಳದಿ ಬಣ್ಣದಲ್ಲಿ ಬರೆಯಲಾಗಿದೆ. ವಿಶ್ವಕಪ್ ಲೋಗೋ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಲಾಂಛನ ಸಹ ಹಳದಿ ಬಣ್ಣದಲ್ಲಿ ಚಿತ್ರಿಸಲಾಗುತ್ತದೆ. ಜರ್ಸಿ ನೀಲಿ, ಕಿತ್ತಳೆ ಮತ್ತು ಕಪ್ಪು ಸ್ಪರ್ಶವನ್ನು ಹೊಂದಿದೆ. ಜೆರ್ಸಿಯಲ್ಲಿ ಹಸಿರು ಬಣ್ಣದ ಬಹು ಛಾಯೆಗಳಿವೆ. 
(2 / 11)
ದಕ್ಷಿಣ ಆಫ್ರಿಕಾದ ಜೆರ್ಸಿಯ ಬಣ್ಣ ಹಸಿರು. ತೋಳಿನ ಕೊನೆಯಲ್ಲಿ ಹಳದಿ ಪಟ್ಟಿ ಇದೆ. ಕ್ರಿಕೆಟಿಗರ ಹೆಸರು ಮತ್ತು ದೇಶದ ಹೆಸರನ್ನು ಹಳದಿ ಬಣ್ಣದಲ್ಲಿ ಬರೆಯಲಾಗಿದೆ. ವಿಶ್ವಕಪ್ ಲೋಗೋ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಲಾಂಛನ ಸಹ ಹಳದಿ ಬಣ್ಣದಲ್ಲಿ ಚಿತ್ರಿಸಲಾಗುತ್ತದೆ. ಜರ್ಸಿ ನೀಲಿ, ಕಿತ್ತಳೆ ಮತ್ತು ಕಪ್ಪು ಸ್ಪರ್ಶವನ್ನು ಹೊಂದಿದೆ. ಜೆರ್ಸಿಯಲ್ಲಿ ಹಸಿರು ಬಣ್ಣದ ಬಹು ಛಾಯೆಗಳಿವೆ. (Twitter)
ಪಾಕಿಸ್ತಾನದ ಜೆರ್ಸಿ ಎಂದಿನಂತೆ ಹಸಿರು. ಹಸಿರು ಬಣ್ಣದ ಅನೇಕ ಛಾಯೆಗಳು ಇದ್ದರೂ ವಿಶ್ವಕಪ್ ಲೋಗೋವನ್ನು ಎದೆಯ ಬಲಭಾಗದಲ್ಲಿ ಬಿಳಿ ಬಣ್ಣದಲ್ಲಿ ಚಿತ್ರಿಸಲಾಗಿದೆ. ಪಿಸಿಬಿ ಲೋಗೋವನ್ನು ಎಡಭಾಗದಲ್ಲಿ ಹಳದಿ ಬಣ್ಣದಲ್ಲಿ ಚಿತ್ರಿಸಲಾಗಿದೆ. ಅದರ ಮೇಲೆ ಪಾಕಿಸ್ತಾನದ ಧ್ವಜವಿದೆ.
(3 / 11)
ಪಾಕಿಸ್ತಾನದ ಜೆರ್ಸಿ ಎಂದಿನಂತೆ ಹಸಿರು. ಹಸಿರು ಬಣ್ಣದ ಅನೇಕ ಛಾಯೆಗಳು ಇದ್ದರೂ ವಿಶ್ವಕಪ್ ಲೋಗೋವನ್ನು ಎದೆಯ ಬಲಭಾಗದಲ್ಲಿ ಬಿಳಿ ಬಣ್ಣದಲ್ಲಿ ಚಿತ್ರಿಸಲಾಗಿದೆ. ಪಿಸಿಬಿ ಲೋಗೋವನ್ನು ಎಡಭಾಗದಲ್ಲಿ ಹಳದಿ ಬಣ್ಣದಲ್ಲಿ ಚಿತ್ರಿಸಲಾಗಿದೆ. ಅದರ ಮೇಲೆ ಪಾಕಿಸ್ತಾನದ ಧ್ವಜವಿದೆ.(Twitter)
ನೆದರ್ಲೆಂಡ್ಸ್​ ಜರ್ಸಿ ಪ್ರಕಾಶಮಾನವಾದ ಕಿತ್ತಳೆ ಬಣ್ಣ ಹೊಂದಿದೆ. ಜೆರ್ಸಿಯ ಮುಂಭಾಗದಲ್ಲಿ ದೇಶದ ಹೆಸರನ್ನು ಬಿಳಿ ಬಣ್ಣದಲ್ಲಿ ಬರೆಯಲಾಗಿದೆ. ಕ್ರಿಕೆಟಿಗನ ಹೆಸರು ಮತ್ತು ಜೆರ್ಸಿ ಸಂಖ್ಯೆ ಹಿಂಭಾಗದಲ್ಲಿ ಬಿಳಿ ಬಣ್ಣದಲ್ಲಿದೆ. ಕ್ರಿಕೆಟ್ ಮಂಡಳಿಯ ಲೋಗೋ ಮತ್ತು ತೋಳುಗಳು ನೀಲಿ ಸ್ಪರ್ಶವನ್ನು ಹೊಂದಿವೆ.
(4 / 11)
ನೆದರ್ಲೆಂಡ್ಸ್​ ಜರ್ಸಿ ಪ್ರಕಾಶಮಾನವಾದ ಕಿತ್ತಳೆ ಬಣ್ಣ ಹೊಂದಿದೆ. ಜೆರ್ಸಿಯ ಮುಂಭಾಗದಲ್ಲಿ ದೇಶದ ಹೆಸರನ್ನು ಬಿಳಿ ಬಣ್ಣದಲ್ಲಿ ಬರೆಯಲಾಗಿದೆ. ಕ್ರಿಕೆಟಿಗನ ಹೆಸರು ಮತ್ತು ಜೆರ್ಸಿ ಸಂಖ್ಯೆ ಹಿಂಭಾಗದಲ್ಲಿ ಬಿಳಿ ಬಣ್ಣದಲ್ಲಿದೆ. ಕ್ರಿಕೆಟ್ ಮಂಡಳಿಯ ಲೋಗೋ ಮತ್ತು ತೋಳುಗಳು ನೀಲಿ ಸ್ಪರ್ಶವನ್ನು ಹೊಂದಿವೆ.(Twitter)
ಅಫ್ಘಾನಿಸ್ತಾನದ ಜರ್ಸಿ ತುಂಬಾ ವರ್ಣರಂಜಿತವಾಗಿದೆ. ಮೂಲತಃ ನೀಲಿ ಬಣ್ಣದ ಮೇಲೆ ಕೆಂಪು ಮತ್ತು ಕಪ್ಪು ಬಣ್ಣದ ವಿನ್ಯಾಸವಿದೆ. ದೇಶದ ಹೆಸರು ಮತ್ತು ವಿಶ್ವಕಪ್ ಲೋಗೋದ ಬಣ್ಣ ಬಿಳಿ. ಎದೆಯ ಎಡಭಾಗದಲ್ಲಿ ರಾಷ್ಟ್ರಧ್ವಜದಲ್ಲಿ ಕ್ರಿಕೆಟ್ ಮಂಡಳಿಯ ಲೋಗೋ ಇದೆ.
(5 / 11)
ಅಫ್ಘಾನಿಸ್ತಾನದ ಜರ್ಸಿ ತುಂಬಾ ವರ್ಣರಂಜಿತವಾಗಿದೆ. ಮೂಲತಃ ನೀಲಿ ಬಣ್ಣದ ಮೇಲೆ ಕೆಂಪು ಮತ್ತು ಕಪ್ಪು ಬಣ್ಣದ ವಿನ್ಯಾಸವಿದೆ. ದೇಶದ ಹೆಸರು ಮತ್ತು ವಿಶ್ವಕಪ್ ಲೋಗೋದ ಬಣ್ಣ ಬಿಳಿ. ಎದೆಯ ಎಡಭಾಗದಲ್ಲಿ ರಾಷ್ಟ್ರಧ್ವಜದಲ್ಲಿ ಕ್ರಿಕೆಟ್ ಮಂಡಳಿಯ ಲೋಗೋ ಇದೆ.(Twitter)
ಬಾಂಗ್ಲಾದೇಶದ ಜೆರ್ಸಿ ಹಸಿರು. ಹಸಿರು ಬಣ್ಣದ ಹಲವಾರು ಛಾಯೆಗಳಿವೆ. ಭುಜ ಮತ್ತು ಎರಡೂ ಬದಿಗಳಲ್ಲಿ ಕೆಂಪು ವಿನ್ಯಾಸವಿದೆ. ದೇಶದ ಹೆಸರನ್ನು ಬಿಳಿ ಬಣ್ಣದಲ್ಲಿ ಬರೆಯಲಾಗಿದೆ. ವಿಶ್ವಕಪ್ ಲೋಗೋದ ಬಣ್ಣ ಬಿಳಿ.
(6 / 11)
ಬಾಂಗ್ಲಾದೇಶದ ಜೆರ್ಸಿ ಹಸಿರು. ಹಸಿರು ಬಣ್ಣದ ಹಲವಾರು ಛಾಯೆಗಳಿವೆ. ಭುಜ ಮತ್ತು ಎರಡೂ ಬದಿಗಳಲ್ಲಿ ಕೆಂಪು ವಿನ್ಯಾಸವಿದೆ. ದೇಶದ ಹೆಸರನ್ನು ಬಿಳಿ ಬಣ್ಣದಲ್ಲಿ ಬರೆಯಲಾಗಿದೆ. ವಿಶ್ವಕಪ್ ಲೋಗೋದ ಬಣ್ಣ ಬಿಳಿ.
ಆಸ್ಟ್ರೇಲಿಯಾದ ಜೆರ್ಸಿಯು ಹಳದಿ ಬಣ್ಣವಾಗಿದೆ. ತೋಳುಗಳು ಮತ್ತು ಎರಡೂ ಬದಿಗಳು ಗಾಢ ಬಣ್ಣಗಳನ್ನು ಹೊಂದಿವೆ. ದೇಶದ ಹೆಸರು ಮತ್ತು ವಿಶ್ವಕಪ್ ಲೋಗೋವನ್ನು ಹಸಿರು ಬಣ್ಣದಲ್ಲಿ ಚಿತ್ರಿಸಲಾಗಿದೆ. ಕಾಲರ್ ಮೇಲೆ ಹಸಿರು ಪಟ್ಟಿಯೂ ಇದೆ.
(7 / 11)
ಆಸ್ಟ್ರೇಲಿಯಾದ ಜೆರ್ಸಿಯು ಹಳದಿ ಬಣ್ಣವಾಗಿದೆ. ತೋಳುಗಳು ಮತ್ತು ಎರಡೂ ಬದಿಗಳು ಗಾಢ ಬಣ್ಣಗಳನ್ನು ಹೊಂದಿವೆ. ದೇಶದ ಹೆಸರು ಮತ್ತು ವಿಶ್ವಕಪ್ ಲೋಗೋವನ್ನು ಹಸಿರು ಬಣ್ಣದಲ್ಲಿ ಚಿತ್ರಿಸಲಾಗಿದೆ. ಕಾಲರ್ ಮೇಲೆ ಹಸಿರು ಪಟ್ಟಿಯೂ ಇದೆ.
ಇಂಗ್ಲೆಂಡ್‌ನ ಜೆರ್ಸಿಯು ಗಾಢ ನೀಲಿ ಬಣ್ಣದ್ದಾಗಿದೆ. ಈ ಜೆರ್ಸಿಯಲ್ಲಿ ಕೆಂಪು ಬಣ್ಣವನ್ನು ಅಲ್ಲಲ್ಲಿ ಕಾಣಬಹುದು. ತೋಳಿನ ಮೇಲೆ ಬಿಳಿ ಪಟ್ಟಿ ಇದೆ. ದೇಶದ ಹೆಸರು ಮತ್ತು ಆಟಗಾರರ ಹೆಸರನ್ನು ಬಿಳಿ ಬಣ್ಣದಲ್ಲಿ ಚಿತ್ರಿಸಲಾಗಿದೆ. 
(8 / 11)
ಇಂಗ್ಲೆಂಡ್‌ನ ಜೆರ್ಸಿಯು ಗಾಢ ನೀಲಿ ಬಣ್ಣದ್ದಾಗಿದೆ. ಈ ಜೆರ್ಸಿಯಲ್ಲಿ ಕೆಂಪು ಬಣ್ಣವನ್ನು ಅಲ್ಲಲ್ಲಿ ಕಾಣಬಹುದು. ತೋಳಿನ ಮೇಲೆ ಬಿಳಿ ಪಟ್ಟಿ ಇದೆ. ದೇಶದ ಹೆಸರು ಮತ್ತು ಆಟಗಾರರ ಹೆಸರನ್ನು ಬಿಳಿ ಬಣ್ಣದಲ್ಲಿ ಚಿತ್ರಿಸಲಾಗಿದೆ. 
ನ್ಯೂಜಿಲೆಂಡ್‌ನ ಜೆರ್ಸಿ ಎಂದಿನಂತೆ ಕಪ್ಪು. ದೇಶದ ಹೆಸರನ್ನು ಬಿಳಿ ಬಣ್ಣದಲ್ಲಿ ಬರೆಯಲಾಗಿದೆ. ಎಲ್ಲಾ ಲೋಗೋಗಳನ್ನು ಬಿಳಿ ಬಣ್ಣದಲ್ಲಿ ಚಿತ್ರಿಸಲಾಗಿದೆ. ಮುಂಭಾಗದಲ್ಲಿ ಬೂದು ಬಣ್ಣದ ಪಟ್ಟಿ ಇದೆ.
(9 / 11)
ನ್ಯೂಜಿಲೆಂಡ್‌ನ ಜೆರ್ಸಿ ಎಂದಿನಂತೆ ಕಪ್ಪು. ದೇಶದ ಹೆಸರನ್ನು ಬಿಳಿ ಬಣ್ಣದಲ್ಲಿ ಬರೆಯಲಾಗಿದೆ. ಎಲ್ಲಾ ಲೋಗೋಗಳನ್ನು ಬಿಳಿ ಬಣ್ಣದಲ್ಲಿ ಚಿತ್ರಿಸಲಾಗಿದೆ. ಮುಂಭಾಗದಲ್ಲಿ ಬೂದು ಬಣ್ಣದ ಪಟ್ಟಿ ಇದೆ.
ಶ್ರೀಲಂಕಾದ ಜೆರ್ಸಿ ನೀಲಿ. ಮುಂಭಾಗ ಮತ್ತು ಹಿಂಭಾಗದಲ್ಲಿ ನೀಲಿ ಬಣ್ಣದ ಬಹು ಛಾಯೆಗಳ ವಿನ್ಯಾಸ ಇದೆ. ದೇಶದ ಮತ್ತು ಕ್ರಿಕೆಟಿಗರ ಹೆಸರನ್ನು ಹಳದಿ ಬಣ್ಣದಲ್ಲಿ ಬರೆಯಲಾಗಿದೆ. ಜೆರ್ಸಿ ಸಂಖ್ಯೆಯೂ ಹಳದಿಯಾಗಿದೆ. ಏಕದಿನ ವಿಶ್ವಕಪ್ ಲೋಗೋವನ್ನು ಬಿಳಿ ಬಣ್ಣದಲ್ಲಿ ಚಿತ್ರಿಸಲಾಗಿದೆ.
(10 / 11)

 ಏಕದಿನ ವಿಶ್ವಕಪ್ 10 ತಂಡಗಳ ಹೊಸ ಜೆರ್ಸಿ ಅನಾವರಣ.
(11 / 11)
 ಏಕದಿನ ವಿಶ್ವಕಪ್ 10 ತಂಡಗಳ ಹೊಸ ಜೆರ್ಸಿ ಅನಾವರಣ.

    ಹಂಚಿಕೊಳ್ಳಲು ಲೇಖನಗಳು