logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Hdk Campain In Kunigal: ಕುಣಿಗಲ್​ನಲ್ಲಿ ಹೆಚ್​ಡಿಕೆ ಪ್ರಚಾರದ ವೇಳೆ ಜನಸಾಗರ; ಈ ಬಾರಿ ಜನತಾ ಸರಕಾರ ಎಂದ ಜೆಡಿಎಸ್ ನಾಯಕ Photos

HDK Campain in Kunigal: ಕುಣಿಗಲ್​ನಲ್ಲಿ ಹೆಚ್​ಡಿಕೆ ಪ್ರಚಾರದ ವೇಳೆ ಜನಸಾಗರ; ಈ ಬಾರಿ ಜನತಾ ಸರಕಾರ ಎಂದ ಜೆಡಿಎಸ್ ನಾಯಕ PHOTOS

May 06, 2023 09:47 AM IST

ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲಾ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿವೆ. ತುಮಕೂರಿನ ಕುಣಿಗಲ್​ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಜೆಡಿಎಸ್​ ಅಭ್ಯರ್ಥಿ ರವಿ ಬಿ ಪರ ನಿನ್ನೆ (ಮೇ 5, ಶುಕ್ರವಾರ) ಪ್ರಚಾರ ನಡೆಸಿದರು. ಈ ವೇಳೆ ಕುಣಿಗಲ್​ ಪಟ್ಟಣದಲ್ಲಿ ಜನಸಾಗರವೇ ಹರಿದುಬಂದಿತ್ತು.

  • ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲಾ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿವೆ. ತುಮಕೂರಿನ ಕುಣಿಗಲ್​ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಜೆಡಿಎಸ್​ ಅಭ್ಯರ್ಥಿ ರವಿ ಬಿ ಪರ ನಿನ್ನೆ (ಮೇ 5, ಶುಕ್ರವಾರ) ಪ್ರಚಾರ ನಡೆಸಿದರು. ಈ ವೇಳೆ ಕುಣಿಗಲ್​ ಪಟ್ಟಣದಲ್ಲಿ ಜನಸಾಗರವೇ ಹರಿದುಬಂದಿತ್ತು.
ಕುಣಿಗಲ್​ನಲ್ಲಿ ಜೆಡಿಎಸ್​ ಅಭ್ಯರ್ಥಿ ರವಿ ಬಿ ಪರ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಭರ್ಜರಿ ಪ್ರಚಾರ ನಡೆಸಿದ್ದು, ಅಪಾರ ಪ್ರಮಾಣದಲ್ಲಿ ಜನರು ಸೇರಿದ್ದರು. 
(1 / 5)

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್​ಡಿಕೆ, “ಚುನಾವಣೆ ಪ್ರಚಾರದ ವೇಳೆ ಕುಣಿಗಲ್ ಪಟ್ಟಣದಲ್ಲಿ ಜನಸಾಗರ. ಕ್ಷೇತ್ರದ ಮಹಾಜನತೆಗೆ ಅನಂತ ಧನ್ಯವಾದಗಳು” ಎಂದು ಟ್ವೀಟ್​ ಮಾಡಿದ್ದಾರೆ.  
(2 / 5)

“ಕುಣಿಗಲ್ ಕ್ಷೇತ್ರದಲ್ಲಿ ಜೆಡಿಎಸ್​ ಅಭ್ಯರ್ಥಿ ಶ್ರೀ ರವಿ ಅವರ ಪರವಾಗಿ ಬಿರುಸಿನ ಪ್ರಚಾರ ನಡೆಸಲಾಯಿತು. ಕಣ್ಣು ಹಾಯಿಸಿದಷ್ಟು ದೂರಕ್ಕೂ ಜನಸಾಗರವೇ ನೆರೆದಿತ್ತು. ಕ್ಷೇತ್ರದ ಜನರು ತೋರಿದ ಪ್ರೀತಿ ವಿಶ್ವಾಸಕ್ಕೆ ನಾನು ಆಭಾರಿ. ಈ ಬಾರಿ ಜನತಾ ಸರಕಾರ ಖಚಿತ ಎನುವುದಕ್ಕೆ ಇದೇ ಸಾಕ್ಷಿ” ಎಂದು ಹೆಚ್​ಡಿಕೆ ಹೇಳಿದರು. 
(3 / 5)

ಮಾಜಿ ಸಚಿವ ಶ್ರೀ ಡಿ.ನಾಗರಾಜಯ್ಯ ಸೇರಿದಂತೆ ಸ್ಥಳೀಯ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅನೇಕ ನಾಯಕರು ಈ ಸಂದರ್ಭದಲ್ಲಿ ಹಾಜರಿದ್ದರು.
(4 / 5)

ಕುಣಿಗಲ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಿ ಕೃಷ್ಣ ಕುಮಾರ್ ಹಾಗೂ ಕಾಂಗ್ರೆಸ್​ನಿಂದ ಎಚ್‌ ಡಿ ರಂಗನಾಥ್ ಕಣದಲ್ಲಿದ್ದಾರೆ. 
(5 / 5)

    ಹಂಚಿಕೊಳ್ಳಲು ಲೇಖನಗಳು