logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತುಮಕೂರು ಅಯ್ಯನಪಾಳ್ಯದಲ್ಲಿತ್ತು 13 ಅಡಿ ಉದ್ದದ ಹೆಬ್ಬಾವು; ವರಂಗಲ್‌ ಫೌಂಡೇಶನ್‌ ತಂಡದ ನೆರವಿನೊಂದಿಗೆ ಸುರಕ್ಷಿತಾರಣ್ಯಕ್ಕೆ-ಚಿತ್ರನೋಟ

ತುಮಕೂರು ಅಯ್ಯನಪಾಳ್ಯದಲ್ಲಿತ್ತು 13 ಅಡಿ ಉದ್ದದ ಹೆಬ್ಬಾವು; ವರಂಗಲ್‌ ಫೌಂಡೇಶನ್‌ ತಂಡದ ನೆರವಿನೊಂದಿಗೆ ಸುರಕ್ಷಿತಾರಣ್ಯಕ್ಕೆ-ಚಿತ್ರನೋಟ

Jul 27, 2024 03:03 PM IST

ತುಮಕೂರು ಅಯ್ಯನಪಾಳ್ಯದಲ್ಲಿದ್ದ 13 ಅಡಿ ಉದ್ದದ ಹೆಬ್ಬಾವನ್ನು ವರಂಗಲ್ ಫೌಂಡೇಶನ್‌ನ ಉರಗತಜ್ಞ ದಿಲೀಪ್ ಸೆರೆಹಿಡಿದು ದೇವರಾಯನದುರ್ಗ ಸುರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ. ಈ ಕಾರ್ಯಾಚರಣೆಯ ಚಿತ್ರನೋಟ ಇಲ್ಲಿದೆ.

ತುಮಕೂರು ತಾಲೂಕು ಉರುಡಗೆರೆ ಹೋಬಳಿ, ಮೈದಾಳ ಗ್ರಾಮ ಪಂಚಾಯಿತಿಯ ಅಯ್ಯನಪಾಳ್ಯ ಗ್ರಾಮದ ರಾಮಚಂದ್ರಯ್ಯ ಅವರ ಮನೆ ಸಮೀಪ 13 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿತ್ತು. ಪುಟ್ಟಯ್ಯ ಅವರು ಹುಲ್ಲು ಕೊಯ್ಯಲು ಹೋದಾಗ ಹೆಬ್ಬಾವು ಅವರಿಗೆ ಕಾಣಸಿಕ್ಕಿತ್ತು. ಕೂಡಲೇ ಅವರು ತುಮಕೂರಿನ ವರಂಗಲ್ ವನ್ಯಜೀವಿ ಜಾಗೃತ ಹಾಗೂ ಉರಗ ರಕ್ಷಣಾ ಸಂಸ್ಥೆಗೆ ಕರೆ ಮಾಡಿ ಹೆಬ್ಬಾವು ಇರುವುದರ ಬಗ್ಗೆ ತಿಳಿಸಿದ್ದರು.
(1 / 6)

ವಾರಂಗಲ್ ವನ್ಯಜೀವಿ ಜಾಗೃತ ಹಾಗೂ ಉರಗ ರಕ್ಷಣಾ ಸಂಸ್ಥೆಯ ಉರಗ ತಜ್ಞ ದಿಲೀಪ್ ಅವರು ಮತ್ತು ಹನುಮಯ್ಯ ಕೂಡಲೇ ಸ್ಥಳಕ್ಕೆ ಆಗಮಿಸಿದರು. ಅರ್ಧ ಗಂಟೆ ಕಾರ್ಯಾಚರಣೆಯಲ್ಲಿ 13 ಅಡಿ ಉದ್ದದ ಹೆಬ್ಬಾವನ್ನು ಹಿಡಿದರು.
(2 / 6)

ದಿಲೀಪ್ ಮತ್ತು ಹನುಮಯ್ಯ ಅವರು ಬೃಹತ್ ಗಾತ್ರದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದಾಗ ಗ್ರಾಮಸ್ಥರೆಲ್ಲ ಅಲ್ಲಿ ನೆರೆದಿದ್ದರು. ಬೃಹತ್ ಗಾತ್ರದ ಹೆಬ್ಬಾವು ನೋಡಿ ಬೆರಗಾಗಿದ್ದರು.
(3 / 6)

ಅಯ್ಯನಪಾಳ್ಯದಲ್ಲಿದ್ದ ಹೆಬ್ಬಾವು ಹಿಡಿಯುವುದಕ್ಕೆ ದಿಲೀಪ್ ಅವರ ತಂಡಕ್ಕೆ ಅರ್ಧಗಂಟೆ ಬೇಕಾಯಿತು. ಬಹಳ ತೂಕ ಇದ್ದ ಹಾವನ್ನು ಗೋಣಿ ಚೀಲಕ್ಕೆ ತುಂಬಿಸಿ ಬಳಿಕ ದೇವರಾಯನ ದುರ್ಗ ಸುರಕ್ಷಿತಾರಣ್ಯಕ್ಕೆ ಬಿಡಲಾಗಿದೆ.
(4 / 6)

ಮನೆ ಸಮೀಪದ ಜಮೀನಲ್ಲಿ ಹೆಬ್ಬಾವು ಕಂಡ ಬಗ್ಗೆ ರಾಮಚಂದ್ರಯ್ಯ ಮಾತನಾಡಿದ್ದು, ಮನೆಯ ಹಿತ್ತಿಲಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿತ್ತು. ಕೂಡಲೇ ವರಂಗಲ್ ಫೌಂಡೇಶನ್‌ನ ದಿಲೀಪ್ ಮತ್ತು ಹನುಮಯ್ಯ ಅವರಿಗೆ ವಿಷಯ ತಿಳಿಸಿದೆವು. ಅವರು ಕೂಡಲೇ ಸ್ಪಂದಿಸಿ ಸ್ಥಳಕ್ಕಾಗಮಿಸಿ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದರು" ಎಂದಿದ್ದಾರೆ.
(5 / 6)

ವರಂಗಲ್‌ ಫೌಂಡೇಶನ್‌ ವನ್ಯಜೀವಿ ಜಾಗೃತಿ ಬಳಗದ ದಿಲೀಪ್‌ ಅವರು ಬೃಹತ್‌ ಗಾತ್ರದ ಹೆಬ್ಬಾವು ಹಿಡಿಯುವ ಕಾರ್ಯಾಚರಣೆ ಮುಗಿಸಿದ ಬಳಿಕ ಮಾತನಾಡಿದರು. “ಬೃಹತ್ ಗಾತ್ರದ ಹೆಬ್ಬಾವು 13 ಅಡಿ ಉದ್ದ ಮತ್ತು 12 ಕಿಲೋ ತೂಕ ಇತ್ತು. ದೇವರಾಯನ ದುರ್ಗ ಅರಣ್ಯಕ್ಕೆ ಬಿಟ್ಟಿದ್ದೇವೆ. ಹಾವು ಇತರ ವನ್ಯ ಜೀವಿಗಳು ಜನವಸತಿ ಪ್ರದೇಶಕ್ಕೆ ಬಂದರೆ ಅವುಗಳಿಗೆ ತೊಂದರೆ ಕೊಡದೆ ಈ ಸಂಸ್ಥೆಗೆ (9916790692/  8748814569/ 8217236108) ಕರೆ ಮಾಡಬೇಕು” ಎಂದು ದಿಲೀಪ್ ಹೇಳಿದ್ದಾರೆ. 
(6 / 6)

    ಹಂಚಿಕೊಳ್ಳಲು ಲೇಖನಗಳು