logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಂಡರ್ 19 ವಿಶ್ವಕಪ್​; ದಾಖಲೆಯ 9 ಸಲ ಫೈನಲ್ ಪ್ರವೇಶಿಸಿದ ಭಾರತ ಗೆದ್ದಿದ್ದೆಷ್ಟು ಸೋತಿದ್ದೆಷ್ಟು, ನಾಯಕರು ಯಾರು?

ಅಂಡರ್ 19 ವಿಶ್ವಕಪ್​; ದಾಖಲೆಯ 9 ಸಲ ಫೈನಲ್ ಪ್ರವೇಶಿಸಿದ ಭಾರತ ಗೆದ್ದಿದ್ದೆಷ್ಟು ಸೋತಿದ್ದೆಷ್ಟು, ನಾಯಕರು ಯಾರು?

Feb 07, 2024 08:48 AM IST

U19 World Cup 2024 : ಭಾರತ ಯಾವ ವರ್ಷ, ಯಾರ ನಾಯಕತ್ವದಲ್ಲಿ, ಯಾವ ತಂಡವನ್ನು ಸೋಲಿಸಿ ಅಂಡರ್​ 19 ವಿಶ್ವಕಪ್ ಪ್ರಶಸ್ತಿ ಗೆದ್ದಿದೆ? ಎಷ್ಟು ಬಾರಿ ಭಾರತದ ಕಿರಿಯ ತಂಡ ಫೈನಲ್ ಪ್ರವೇಶಿಸಿದೆ ಎಂಬುದನ್ನು ಈ ಮುಂದೆ ನೋಡೋಣ.

  • U19 World Cup 2024 : ಭಾರತ ಯಾವ ವರ್ಷ, ಯಾರ ನಾಯಕತ್ವದಲ್ಲಿ, ಯಾವ ತಂಡವನ್ನು ಸೋಲಿಸಿ ಅಂಡರ್​ 19 ವಿಶ್ವಕಪ್ ಪ್ರಶಸ್ತಿ ಗೆದ್ದಿದೆ? ಎಷ್ಟು ಬಾರಿ ಭಾರತದ ಕಿರಿಯ ತಂಡ ಫೈನಲ್ ಪ್ರವೇಶಿಸಿದೆ ಎಂಬುದನ್ನು ಈ ಮುಂದೆ ನೋಡೋಣ.
ಫೆಬ್ರವರಿ 6ರ ಮಂಗಳವಾರ ನಡೆದ ಅಂಡರ್ 19 ವಿಶ್ವಕಪ್ ಸೆಮಿಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಭಾರತ ತಂಡ, ಸತತ 5ನೇ ಬಾರಿ ಸೇರಿ ಒಟ್ಟು 9 ಸಲ ಫೈನಲ್ ಪ್ರವೇಶಿಸಿದೆ. ಬೆನೋನಿಯಲ್ಲಿ ನಡೆದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 7 ವಿಕೆಟ್‌ಗೆ 244 ರನ್ ಗಳಿಸಿತು. ಉದಯ್ ಸಹರನ್ ನೇತೃತ್ವದ ಭಾರತ, 8 ವಿಕೆಟ್‌ ನಷ್ಟಕ್ಕೆ  248 ರನ್ ಗಳಿಸಿ ಪಂದ್ಯವನ್ನು ಗೆದ್ದಿತು. ಆ ಮೂಲಕ 2 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತು.
(1 / 8)

2016ರಿಂದ 2024ರವರೆಗೂ ಸತತ 5 ಬಾರಿ ಸೇರಿ ಭಾರತ ಒಟ್ಟು 9 ಬಾರಿ ಅಂಡರ್-19 ವಿಶ್ವಕಪ್ ಫೈನಲ್ ತಲುಪಿದೆ. ಭಾರತ ಈ ಹಿಂದೆ 2000, 2006, 2008, 2012, 2016, 2018, 2020 ಮತ್ತು 2022ರಲ್ಲಿ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಆಡಿದೆ. ಆ ಮೂಲಕ ಅಂಡರ್​-19 ವಿಶ್ವಕಪ್​ನಲ್ಲಿ ಭಾರತ ಕಿರಿಯರ ತಂಡ ಅತಿ ಹೆಚ್ಚು ಬಾರಿ ಫೈನಲ್‌ ತಲುಪಿದ ವಿಶ್ವದ ಮೊದಲ ತಂಡ ಎಂಬ ವಿಶ್ವ ದಾಖಲೆ ಬರೆದಿದೆ.
(2 / 8)

ಫೈನಲ್​ಗೇರಿದ 9 ಸಲದಲ್ಲಿ ಭಾರತ ಗರಿಷ್ಠ 5 ಬಾರಿ ಚಾಂಪಿಯನ್‌ ಆಗಿದೆ. ಭಾರತ 2000, 2008, 2012, 2018 ಮತ್ತು 2022ರಲ್ಲಿ ಅಂಡರ್-19 ವಿಶ್ವಕಪ್ ಪ್ರಶಸ್ತಿ ಗೆದ್ದುಕೊಂಡಿದೆ. ಹಾಲಿ ಚಾಂಪಿಯನ್​ ಟೀಮ್ ಇಂಡಿಯಾ, 6ನೇ ಬಾರಿಗೆ ಟ್ರೋಫಿಗೆ ಮುತ್ತಿಕ್ಕಲು ಸಜ್ಜಾಗಿದೆ.
(3 / 8)

ಮೊಹಮ್ಮದ್ ಕೈಫ್ ನಾಯಕತ್ವದಲ್ಲಿ ಭಾರತ ತಂಡ 2000ರಲ್ಲಿ ಮೊದಲ ಬಾರಿಗೆ ಅಂಡರ್-19 ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು. ಫೈನಲ್‌ನಲ್ಲಿ ಭಾರತ 6 ವಿಕೆಟ್‌ಗಳಿಂದ ಶ್ರೀಲಂಕಾವನ್ನು ಸೋಲಿಸಿತು. ಶ್ರೀಲಂಕಾ 178 ರನ್ ಗಳಿಸಿದರೆ, ಭಾರತ 4 ವಿಕೆಟ್‌ಗೆ 180 ರನ್ ಗಳಿಸಿ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿತು. ಯುವರಾಜ್ ಸಿಂಗ್ 203 ರನ್, 12 ವಿಕೆಟ್‌ ಪಡೆದು ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು.
(4 / 8)

ಭಾರತ 2008ರಲ್ಲಿ 2ನೇ ಬಾರಿಗೆ ಯೂತ್‌ ವಿಶ್ವಕಪ್‌ ಪ್ರಶಸ್ತಿ ಗೆದ್ದಿತು. ವಿರಾಟ್ ಕೊಹ್ಲಿ ಭಾರತ ತಂಡದ ನಾಯಕರಾಗಿದ್ದರು. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಡಕ್‌ವರ್ತ್ ಲೂಯಿಸ್ ನಿಯಮದ ಅಡಿಯಲ್ಲಿ 12 ರನ್‌ಗಳಿಂದ ಸೋಲಿಸಿತು. ಭಾರತ 159 ರನ್‌ಗಳಿಗೆ ಆಲೌಟ್ ಆಗಿತ್ತು. ನ್ಯೂಜಿಲೆಂಡ್ ತಂಡದ ವೇಗಿ ಟಿಮ್ ಸೌಥಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡರು.
(5 / 8)

2012ರಲ್ಲಿ ಮೂರನೇ ಬಾರಿಗೆ ಅಂಡರ್​​-19 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಉನ್ಮುಕ್ತ್ ಚಾಂದ್ ನಾಯಕತ್ವ ವಹಿಸಿದ್ದರು. ಫೈನಲ್‌ನಲ್ಲಿ ಭಾರತ 6 ವಿಕೆಟ್‌ಗಳಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತು. ಆಸ್ಟ್ರೇಲಿಯಾ 8 ವಿಕೆಟ್‌ಗೆ 225 ರನ್ ಗಳಿಸಿದರೆ, ಭಾರತ 4 ವಿಕೆಟ್‌ ನಷ್ಟಕ್ಕೆ 227 ರನ್ ಗಳಿಸಿ ಟ್ರೋಫಿಗೆ ಮುತ್ತಿಕ್ಕಿತು. ಆಸೀಸ್ ಆಟಗಾರ ವಿಲಿಯಂ ಬೊಸಿಸ್ಟೊ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದರು.
(6 / 8)

2018ರಲ್ಲಿ ಪೃಥ್ವಿ ಶಾ ನಾಯಕತ್ವದಲ್ಲಿ ಭಾರತ ನಾಲ್ಕನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದಿತ್ತು. ಫೈನಲ್‌ನಲ್ಲಿ ಭಾರತ 8 ವಿಕೆಟ್​ಗಳಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತು. ಆಸ್ಟ್ರೇಲಿಯಾ 216 ರನ್‌ಗಳಿಗೆ ಆಲೌಟ್ ಆಯಿತು. ಭಾರತ 2 ವಿಕೆಟ್‌ಗೆ 220 ರನ್‌ ಗಳಿಸಿ ಜಯ ಸಾಧಿಸಿತು. ಶುಭ್ಮನ್ ಗಿಲ್ 372 ರನ್ ಗಳಿಸಿ ಮ್ಯಾನ್​ ಆಫ್ ದ ಸಿರೀಸ್ ಗೆದ್ದರು.
(7 / 8)

2022ರಲ್ಲಿ ಯಶ್ ಧುಲ್ ನಾಯಕತ್ವದಲ್ಲಿ ಭಾರತ ಯುವ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು. ಇದು ಭಾರತಕ್ಕೆ 5ನೇ ಪ್ರಶಸ್ತಿಯಾಗಿತ್ತು. ಫೈನಲ್‌ನಲ್ಲಿ ಭಾರತ 4 ವಿಕೆಟ್‌ಗಳಿಂದ ಇಂಗ್ಲೆಂಡ್ ಅನ್ನು ಸೋಲಿಸಿತು. ಇಂಗ್ಲೆಂಡ್ 189 ರನ್‌ಗಳಿಗೆ ಆಲೌಟ್ ಆಯಿತು. ಭಾರತ 6 ವಿಕೆಟ್‌ಗೆ 195 ರನ್ ಗಳಿಸಿ ಪಂದ್ಯ ಗೆದ್ದುಕೊಂಡಿತು. ರಾಜ್ ಬಾವಾ 5 ವಿಕೆಟ್, 35 ರನ್ ಕಲೆಹಾಕಿ ಪಂದ್ಯ ಶ್ರೇಷ್ಠ ಜಯಿಸಿದರು. ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೂವಿಸ್ 506 ರನ್, 7 ವಿಕೆಟ್‌ ಪಡೆದು ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದರು.
(8 / 8)

    ಹಂಚಿಕೊಳ್ಳಲು ಲೇಖನಗಳು