logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Uddhav Thackeray: ಠಾಕ್ರೆ ಬಣಕ್ಕೆ ಜ್ಯೋತಿ, ಶಿಂಧೆ ಬಣಕ್ಕೆ ಖಡ್ಗ, ಗುರಾಣಿ: ಪಕ್ಷಪಾತದ ಆರೋಪ ಹೊರಿಸಿದ ಉದ್ಧವ್!‌

Uddhav Thackeray: ಠಾಕ್ರೆ ಬಣಕ್ಕೆ ಜ್ಯೋತಿ, ಶಿಂಧೆ ಬಣಕ್ಕೆ ಖಡ್ಗ, ಗುರಾಣಿ: ಪಕ್ಷಪಾತದ ಆರೋಪ ಹೊರಿಸಿದ ಉದ್ಧವ್!‌

Oct 13, 2022 09:31 PM IST

ಮುಂಬೈ: ಶಿವಸೇನೆಯ ಉದ್ಧವ್‌ ಠಾಕ್ರೆ ಬಣಕ್ಕೆ ಉಇರಯುವ ಜ್ಯೋತಿ ಮತ್ತು ಏಕನಾಥ್‌ ಶಿಂಧೆ ಬಣಕ್ಕೆ ಖಡ್ಗ ಮತ್ತು ಗುರಾಣಿಯನ್ನು ಚುನಾವಣಾ ಚಿಹ್ನೆಯನ್ನಾಗಿ ಕೇಂದ್ರ ಚುನಾವಣಾ ಆಯೋಗ ನೀಡಿದೆ. ಅಲ್ಲದೇ ಠಾಕ್ರೆ ಬಣಕ್ಕೆ 'ಶಿವಸೇನಾ ಉದ್ಧವ್‌ ಭಾಳ್‌ ಸಾಹೇಬ್‌ ಠಾಕ್ರೆ'‌ ಎಂದೂ ಮತ್ತು ಏಕನಾಥ ಶಿಂಧೆ ಬಣಕ್ಕೆ 'ಭಾಳ್‌ ಸಾಹೇಬ್‌ ಶಿವಸೇನಾʼ ಎಂದು ಚುನಾವಣಾ ಆಯೋಗ ಹೆಸರು ನೀಡಿದೆ. ಆದರೆ ಠಾಕ್ರೆ ಬಣ ಪಕ್ಷಪಾತದ ಆರೋಪ ಹೊರಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಈ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

  • ಮುಂಬೈ: ಶಿವಸೇನೆಯ ಉದ್ಧವ್‌ ಠಾಕ್ರೆ ಬಣಕ್ಕೆ ಉಇರಯುವ ಜ್ಯೋತಿ ಮತ್ತು ಏಕನಾಥ್‌ ಶಿಂಧೆ ಬಣಕ್ಕೆ ಖಡ್ಗ ಮತ್ತು ಗುರಾಣಿಯನ್ನು ಚುನಾವಣಾ ಚಿಹ್ನೆಯನ್ನಾಗಿ ಕೇಂದ್ರ ಚುನಾವಣಾ ಆಯೋಗ ನೀಡಿದೆ. ಅಲ್ಲದೇ ಠಾಕ್ರೆ ಬಣಕ್ಕೆ 'ಶಿವಸೇನಾ ಉದ್ಧವ್‌ ಭಾಳ್‌ ಸಾಹೇಬ್‌ ಠಾಕ್ರೆ'‌ ಎಂದೂ ಮತ್ತು ಏಕನಾಥ ಶಿಂಧೆ ಬಣಕ್ಕೆ 'ಭಾಳ್‌ ಸಾಹೇಬ್‌ ಶಿವಸೇನಾʼ ಎಂದು ಚುನಾವಣಾ ಆಯೋಗ ಹೆಸರು ನೀಡಿದೆ. ಆದರೆ ಠಾಕ್ರೆ ಬಣ ಪಕ್ಷಪಾತದ ಆರೋಪ ಹೊರಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಈ ಕುರಿತು ವಿವರವಾದ ಮಾಹಿತಿ ಇಲ್ಲಿದೆ.
ಪಕ್ಷದ ಹೆಸರು ಮತ್ತು ಚಿಹ್ನೆ ನಿರ್ಧರಿಸುವಲ್ಲಿ ತಮ್ಮ ಎದುರಾಳಿ ಏಕನಾಥ್ ಶಿಂಧೆ ಬಣದ ಅವರ ಪರವಾಗಿ, ಚುನಾವಣಾ ಆಯೋಗ ನಿರ್ಧಾರ ಕೈಗೊಂಡಿದೆ ಎಂದು ಉದ್ಧವ್‌ ಠಾಕ್ರೆ ಬಣ ಗಂಭೀರ ಆರೋಪ ಮಾಡಿದೆ. ಈ ಕುರಿತು ಠಾಕ್ರೆ ಬಣ ಆಯೋಗಕ್ಕೆ 12 ಅಂಶಗಳ ಪತ್ರ ಬರೆದಿದೆ.
(1 / 5)
ಪಕ್ಷದ ಹೆಸರು ಮತ್ತು ಚಿಹ್ನೆ ನಿರ್ಧರಿಸುವಲ್ಲಿ ತಮ್ಮ ಎದುರಾಳಿ ಏಕನಾಥ್ ಶಿಂಧೆ ಬಣದ ಅವರ ಪರವಾಗಿ, ಚುನಾವಣಾ ಆಯೋಗ ನಿರ್ಧಾರ ಕೈಗೊಂಡಿದೆ ಎಂದು ಉದ್ಧವ್‌ ಠಾಕ್ರೆ ಬಣ ಗಂಭೀರ ಆರೋಪ ಮಾಡಿದೆ. ಈ ಕುರಿತು ಠಾಕ್ರೆ ಬಣ ಆಯೋಗಕ್ಕೆ 12 ಅಂಶಗಳ ಪತ್ರ ಬರೆದಿದೆ.(ANI)
ಹೆಸರು ಮತ್ತು ಚಿಹ್ನೆಗಳನ್ನು ವೆಬ್‌ಸೈಟ್‌ಗೆ ಅಪ್ಲೋಡ್ ಮಾಡುವುದು ಹಾಗೂ ಡಿಲೀಟ್ ಮಾಡುವುದು, ದಾಖಲೆಗಳನ್ನು ಸಲ್ಲಿಸಲು ಗಡುವು ವಿಸ್ತರಿಸುವುದು ಹೀಗೆ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನಿರ್ಧರಿಸಲು ಶಿಂಧೆ ಬಣಕ್ಕೆ ಹೆಚ್ಚು ಅನುಕೂಲ ಮಾಡಿಕೊಡಲಾಗಿದೆ ಎಂಬುದು ಉದ್ಧವ್‌ ಠಾಕ್ರೆ ಬಣದ ಆರೋಪವಾಗಿದೆ.
(2 / 5)
ಹೆಸರು ಮತ್ತು ಚಿಹ್ನೆಗಳನ್ನು ವೆಬ್‌ಸೈಟ್‌ಗೆ ಅಪ್ಲೋಡ್ ಮಾಡುವುದು ಹಾಗೂ ಡಿಲೀಟ್ ಮಾಡುವುದು, ದಾಖಲೆಗಳನ್ನು ಸಲ್ಲಿಸಲು ಗಡುವು ವಿಸ್ತರಿಸುವುದು ಹೀಗೆ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನಿರ್ಧರಿಸಲು ಶಿಂಧೆ ಬಣಕ್ಕೆ ಹೆಚ್ಚು ಅನುಕೂಲ ಮಾಡಿಕೊಡಲಾಗಿದೆ ಎಂಬುದು ಉದ್ಧವ್‌ ಠಾಕ್ರೆ ಬಣದ ಆರೋಪವಾಗಿದೆ.(HT_PRINT)
ತಮಗೆ ಹೆಸರು ಮತ್ತು ಚಿಹ್ನೆಯನ್ನು ಹಂಚಿಕೆ ಮಾಡುವ ಪತ್ರವನ್ನು, ಚಿಹ್ನೆಯ ಚಿತ್ರವಿಲ್ಲದೆಯೇ ವೆಬ್‌ಸೈಟ್‌ಗೆ ಚುನಾವಣಾ ಆಯೋಗ ಅಪ್ಲೋಡ್ ಮಾಡಿತ್ತು ಎಂದೂ ಠಾಕ್ರೆ ಬಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
(3 / 5)
ತಮಗೆ ಹೆಸರು ಮತ್ತು ಚಿಹ್ನೆಯನ್ನು ಹಂಚಿಕೆ ಮಾಡುವ ಪತ್ರವನ್ನು, ಚಿಹ್ನೆಯ ಚಿತ್ರವಿಲ್ಲದೆಯೇ ವೆಬ್‌ಸೈಟ್‌ಗೆ ಚುನಾವಣಾ ಆಯೋಗ ಅಪ್ಲೋಡ್ ಮಾಡಿತ್ತು ಎಂದೂ ಠಾಕ್ರೆ ಬಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.(HT_PRINT)
ಇನ್ನು ತಮ್ಮ ಬಣಕ್ಕೆ 'ಭಾಳ್ ಸಾಹೇಬ್‌ ಶಿವಸೇನಾ'‌ ಮತ್ತು ಚಿಹ್ನೆಯಾಗಿ ಎರಡು ಖಡ್ಗ ಮತ್ತು ಒಂದು ಗುರಾಣಿಯನ್ನು ನೀಡಿರುವ ಚುನಾವಣಾ ಆಯೋಗದ ಕ್ರಮವನ್ನು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣ ಸ್ವಾಗತಿಸಿದೆ.
(4 / 5)
ಇನ್ನು ತಮ್ಮ ಬಣಕ್ಕೆ 'ಭಾಳ್ ಸಾಹೇಬ್‌ ಶಿವಸೇನಾ'‌ ಮತ್ತು ಚಿಹ್ನೆಯಾಗಿ ಎರಡು ಖಡ್ಗ ಮತ್ತು ಒಂದು ಗುರಾಣಿಯನ್ನು ನೀಡಿರುವ ಚುನಾವಣಾ ಆಯೋಗದ ಕ್ರಮವನ್ನು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣ ಸ್ವಾಗತಿಸಿದೆ.(HT)
ಎರಡು ಬಣಗಳ ಪೈಕಿ ಯಾವುದು ನಿಜವಾದ ಶಿವಸೇನೆ ಎಂಬುದನ್ನು ಈ ರಾಜ್ಯದ ಜನ ನಿರ್ಧರಿಸಲಿದ್ದಾರೆ. ಶಿವಸೇನಾ ಸಂಸ್ಥಾಪಕ ಭಾಳ್‌ ಸಾಹೇಬ್‌ ಠಾಕ್ರೆ ಅವರು ತೋರಿದ ದಾರಿಯಲ್ಲಿ ಯಾರು ಮುನ್ನಡೆಯುತ್ತಿದ್ದಾರೆ ಎಂಬುದು ಜಗಜ್ಜಾಹೀರಾಗಲಿದೆ ಎಂದೂ ಶಿಂಧೆ ಬಣ ಹೂಂಕರಿಸಿದೆ.
(5 / 5)
ಎರಡು ಬಣಗಳ ಪೈಕಿ ಯಾವುದು ನಿಜವಾದ ಶಿವಸೇನೆ ಎಂಬುದನ್ನು ಈ ರಾಜ್ಯದ ಜನ ನಿರ್ಧರಿಸಲಿದ್ದಾರೆ. ಶಿವಸೇನಾ ಸಂಸ್ಥಾಪಕ ಭಾಳ್‌ ಸಾಹೇಬ್‌ ಠಾಕ್ರೆ ಅವರು ತೋರಿದ ದಾರಿಯಲ್ಲಿ ಯಾರು ಮುನ್ನಡೆಯುತ್ತಿದ್ದಾರೆ ಎಂಬುದು ಜಗಜ್ಜಾಹೀರಾಗಲಿದೆ ಎಂದೂ ಶಿಂಧೆ ಬಣ ಹೂಂಕರಿಸಿದೆ.(HT_PRINT)

    ಹಂಚಿಕೊಳ್ಳಲು ಲೇಖನಗಳು