logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Midlands Kannadigaru: ಮಿಡ್ಲ್ಯಾಂಡ್ಸ್ ಕನ್ನಡಿಗರ ರಾಜ್ಯೋತ್ಸವ ಸಂಭ್ರಮ, ಸಡಗರದ ಆಕರ್ಷಕ ಫೋಟೋಸ್‌

Midlands Kannadigaru: ಮಿಡ್ಲ್ಯಾಂಡ್ಸ್ ಕನ್ನಡಿಗರ ರಾಜ್ಯೋತ್ಸವ ಸಂಭ್ರಮ, ಸಡಗರದ ಆಕರ್ಷಕ ಫೋಟೋಸ್‌

Dec 07, 2023 11:48 PM IST

ಮಿಡ್ಲ್ಯಾಂಡ್ಸ್‌ ಕನ್ನಡಿಗರು ಯುಕೆ ಬಳಗ ಇತ್ತೀಚೆಗೆ ಸಂಭ್ರಮದ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿತು. ಈ ಸಂಭ್ರಮಾಚರಣೆಯ ಆಕರ್ಷಕ ಫೋಟೋ ವರದಿ ಇಲ್ಲಿದೆ. 

ಭಾರತದ ಕಾನ್ಸುಲೇಟ್ (ಹೆಡ್ ಆಫ್ ಚಾನ್ಸಲರ್ ಬರ್ಮಿಂಗ್ಹ್ಯಾಮ್) ಅಮನ್ ಬನ್ಸಾಲ್, ಲಾರ್ಡ್ ಮೇಯರ್ ಆಫ್ ಕೊವೆಂಟ್ರಿ ಜಸ್ವಂತ್ ಸಿಂಗ್ ಬಿರ್ದಿ ದಂಪತಿ, ವಿಶೇಷ ಅತಿಥಿಗಳಾಗಿ ೭೭೭ ಚಾರ್ಲಿ ನಿರ್ದೇಶಕ ಕಿರಣರಾಜ್ ಕೆ, ಗೌರವಾನ್ವಿತ ಅತಿಥಿಯಾಗಿ ಕಲಾತ್ಮಕ ನಿರ್ದೇಶಕಿ ವಿದುಷಿ ಚಿತ್ರಲೇಖಾ ಭೋಲಾರ್ ಉಪಸ್ಥಿತಿಯಲ್ಲಿ ಯುಕೆಯ ಮಿಡ್ಲ್ಯಾಂಡಿನ ಮುನ್ನೂರೈವತ್ತಕ್ಕೂ ಹೆಚ್ಚು ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(1 / 6)

ಯುನೈಟೆಡ್ ಕಿಂಗ್ಡಂನ ಮಿಡ್ಲ್ಯಾಂಡ್‌ನಲ್ಲಿರುವ ಕನ್ನಡಿಗರು ಇತ್ತೀಚೆಗೆ (ನ.25) ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿದರು. ಯುಕೆಗೆ ಬಂದು ಎರಡು ತಿಂಗಳಾದರೂ, ಇಂದು ಮತ್ತೆ ಬೆಂಗಳೂರಿನಲ್ಲಿ ಇರುವ ಅನುಭವವಾಗುತ್ತಿದೆ. ಕಾಸರಗೋಡಿನ ಮಲಯಾಳಿ ಮಾತೃಭಾಷಿಕರಾದರೂ ಕಲಿತದ್ದು ಕನ್ನಡ ಶಾಲಿಯಲ್ಲಿ ಎಂದು ಹೇಳಿದ ಕಿರಣ್‌ರಾಜ್‌, ಮಕ್ಕಳಿಗೆ ಕನ್ನಡವನ್ನು ಕಲಿಸಿ ಎಂದು ಮನವಿ ಮಾಡಿದರು.
(2 / 6)

ನಾಡಗೀತೆ “ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೇ” ಎಂದು ನಾಡು ನುಡಿಗೆ ನಮಿಸಿ, "ಎಲ್ಲಾದರೂ ಇರು; ಎಂತಾದರು ಇರು; ಎಂದೆಂದಿಗೂ ನೀ ಕನ್ನಡವಾಗಿರು" ಎಂಬ ಮಿಡ್ಲ್ಯಾಂಡ್ಸ್ ಕನ್ನಡಿಗರ ಗುಂಪಿನ ಹೊಸ ಲಾಂಛನವನ್ನ ಅತಿಥಿಗಳು ಉದ್ಘಾಟಿಸಿದರು.
(3 / 6)

ಮಿಡ್ಲ್ಯಾಂಡ್ಸ್ ಕನ್ನಡಿಗರ ನೃತ್ಯ ವೈಭವ
(4 / 6)
ಮಿಡ್ಲ್ಯಾಂಡ್ಸ್ ಕನ್ನಡಿಗರ ನೃತ್ಯ ವೈಭವ
ಮಿಡ್ಲ್ಯಾಂಡ್ಸ್ ಕನ್ನಡಿಗರು ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳ ನೃತ್ಯ ಸಂಭ್ರಮ
(5 / 6)

ಮಕ್ಕಳ ಜಾನಪದ ನೃತ್ಯ ಸಡಗರ
(6 / 6)
ಮಕ್ಕಳ ಜಾನಪದ ನೃತ್ಯ ಸಡಗರ

    ಹಂಚಿಕೊಳ್ಳಲು ಲೇಖನಗಳು