logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Budget 2024 Team: ಕೇಂದ್ರ ಬಜೆಟ್‌ ತಯಾರಿಸಿದ ನಿರ್ಮಲಾ ತಂಡ, ಪ್ರಮುಖ 10 ಜನರ ತಂಡ ಇದು,ಕರ್ನಾಟಕದ ಇಬ್ಬರು ಈ ತಂಡದಲ್ಲಿದ್ದಾರೆ

Budget 2024 Team: ಕೇಂದ್ರ ಬಜೆಟ್‌ ತಯಾರಿಸಿದ ನಿರ್ಮಲಾ ತಂಡ, ಪ್ರಮುಖ 10 ಜನರ ತಂಡ ಇದು,ಕರ್ನಾಟಕದ ಇಬ್ಬರು ಈ ತಂಡದಲ್ಲಿದ್ದಾರೆ

Feb 01, 2024 11:16 AM IST

ಗಜ ಗಾತ್ರದ ಕೇಂದ್ರ ಬಜೆಟ್‌ ತಯಾರಿ ಸುಲಭದ ಕೆಲಸವೇನಲ್ಲ. ಕನಿಷ್ಠ ಮೂರು ತಿಂಗಳಿನಿಂದಾದರೂ ಗಂಭಿರ ತಯಾರಿ ಇದಕ್ಕಾಗಿ ನಡೆದಿರುತ್ತದೆ. ಹಲವಾರು ಇಲಾಖೆಗಳು ಇದಕ್ಕೆ ಕೈಜೋಡಿಸುತ್ತವೆ. ಬಜೆಟ್‌ ತಯಾರಿಸುವಲ್ಲಿ ಹಲವಾರು ಮಂದಿ ಪಾತ್ರವಿದ್ದರೂ ಈ ಹತ್ತು ಮಂದಿ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡುತ್ತಾರೆ.  ಅವರು ಯಾರು ಎನ್ನುವ ವಿವರ ಇಲ್ಲಿದೆ

  • ಗಜ ಗಾತ್ರದ ಕೇಂದ್ರ ಬಜೆಟ್‌ ತಯಾರಿ ಸುಲಭದ ಕೆಲಸವೇನಲ್ಲ. ಕನಿಷ್ಠ ಮೂರು ತಿಂಗಳಿನಿಂದಾದರೂ ಗಂಭಿರ ತಯಾರಿ ಇದಕ್ಕಾಗಿ ನಡೆದಿರುತ್ತದೆ. ಹಲವಾರು ಇಲಾಖೆಗಳು ಇದಕ್ಕೆ ಕೈಜೋಡಿಸುತ್ತವೆ. ಬಜೆಟ್‌ ತಯಾರಿಸುವಲ್ಲಿ ಹಲವಾರು ಮಂದಿ ಪಾತ್ರವಿದ್ದರೂ ಈ ಹತ್ತು ಮಂದಿ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡುತ್ತಾರೆ.  ಅವರು ಯಾರು ಎನ್ನುವ ವಿವರ ಇಲ್ಲಿದೆ
ಇದು ನಿರ್ಮಲಾ ಅವರ ತಂಡ. ಹಣಕಾಸು ರಾಜ್ಯ ಸಚಿವರು, ಆರ್ಥಿಕ ತಜ್ಞರು. ಐಎಎಸ್‌ ಅಧಿಕಾರಿಗಳು, ಅವರೊಂದಿಗೆ ಬಜೆಟ್‌ ತಯಾರಿಸಿದ್ದಾರೆ ನಿರ್ಮಲಾ ಸೀತಾರಾಮನ್‌. ಹತ್ತು ವರ್ಷದಿಂದ ಸಚಿವರಾಗಿರುವ ನಿರ್ಮಲಾ ಸತತ ಆರನೇ ಬಾರಿ ಬಜೆಟ್‌ ಮಂಡಿಸುವರು.
(1 / 10)

ಪಂಕಜ್‌ ಚೌಧರಿ ರಾಜ್ಯ ಸಚಿವ  ಉತ್ತರ ಪ್ರದೇಶ ಮೂಲದವರು ಆರು ಬಾರಿ ಸಂಸದರಾಗಿ ಮೊದಲ ಬಾರಿ ರಾಜ್ಯ ಸಚಿವರಾಗಿದ್ದಾರೆ. ಮೂರು ವರ್ಷದಿಂದ ಹಣಕಾಸು ಸಚಿವರು.
(2 / 10)

ಡಾ.ಭಗವಂತ್‌ ಕಿಶನ್‌ ರಾವ್‌ ಕರಡೆ ರಾಜ್ಯ ಸಚಿವ ಮಹಾರಾಷ್ಟ್ರದ ಖ್ಯಾತ ವೈದ್ಯ, ರಾಜ್ಯಸಭಾ ಸದಸ್ಯ ಮೂರು ವರ್ಷದಿಂದ ಹಣಕಾಸು ರಾಜ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
(3 / 10)

ಟಿವಿ ಸೋಮನಾಥನ್‌ ಕಾರ್ಯದರ್ಶಿ ಹಣಕಾಸು ಇಲಾಖೆ ತಮಿಳುನಾಡು ಕೇಡರ್‌ನ 1987 ಬ್ಯಾಚ್‌ನ ಐಎಎಸ್‌ ಅಧಿಕಾರಿ. ಆರ್ಥಿಕ ವಿಷಯದಲ್ಲಿ ಸಾಕಷ್ಟು ಅನುಭವವಿದೆ. ಪ್ರಸ್ತುತ ಭಾರತದ ಹಣಕಾಸು ಕಾರ್ಯದರ್ಶಿಯಾಗಿದ್ದಾರೆ    
(4 / 10)

ಅಜಯ್‌ ಸೇಠ್‌ ಕಾರ್ಯದರ್ಶಿ   ಆರ್ಥಿಕ ವ್ಯವಹಾರಗಳ ಇಲಾಖೆ  ಕರ್ನಾಟಕ ಕೇಡರ್‌ಗೆ ಸೇರಿದ  1987 ಬ್ಯಾಚ್ ನ  ದಕ್ಷ ಅಧಿಕಾರಿ ಅಜಯ್‌ ಸೇಠ್‌, ಮೈಸೂರು ಡಿಸಿಯಾಗಿದ್ದವರು. ಬಜೆಟ್, ತೆರಿಗೆ ನೀತಿ, ವಿದೇಶಿ ಹೂಡಿಕೆಗಳು, ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಹಣಕಾಸು ಸಹಕಾರ, ಅಭಿವೃದ್ಧಿ ಹಣಕಾಸು ಮತ್ತು ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳಿಗೆ ಸಂಬಂಧಿಸಿದ ವಿಷಯಗಳೊಂದಿಗೆ ಸಾರ್ವಜನಿಕ ಹಣಕಾಸು ಮತ್ತು ಸಾಮಾಜಿಕ ವಲಯದ ಆಡಳಿತದಲ್ಲಿ 33 ವರ್ಷಗಳ ಅನುಭವವನ್ನು ಹೊಂದಿದ್ದಾರೆ.  
(5 / 10)

ತುಹಿನ್‌ ಕಾಂತಾ ಪಾಂಡೆ  ಕಾರ್ಯದರ್ಶಿ ಹೂಡಿಕೆ ಹಾಗೂ ಸಾರ್ವಜನಿಕ  ಆಸ್ತಿ ನಿರ್ವಹಣಾ ಇಲಾಖೆತುಹಿನ್ ಕಾಂತಾ ಪಾಂಡೆ, 1987-ಬ್ಯಾಚ್ನ ಒಡಿಶಾ ಕೇಡರ್‌ ಐಎಎಸ್ ಅಧಿಕಾರಿ, 2019 ರಿಂದ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿಯಾಗಿದ್ದಾರೆ.
(6 / 10)

ವಿವೇಕ್‌ ಜೋಶಿ ಕಾರ್ಯದರ್ಶಿ  ಆರ್ಥಿಕ ಸೇವೆಗಳ ಇಲಾಖೆಡಾ. ವಿವೇಕ್ ಜೋಶಿ ಅವರು ಹರಿಯಾಣ ಕೇಡರ್‌ನ 1989ನೇ ಬ್ಯಾಚ್‌ ಐಎಎಸ್‌ ಅಧಿಕಾರಿ. ಡಾ. ಜೋಶಿ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಜಿನೀವಾ (ಸ್ವಿಟ್ಜರ್ಲೆಂಡ್) ನಿಂದ ಅಂತರರಾಷ್ಟ್ರೀಯ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಪ್ರೊ. ರಿಚರ್ಡ್ ಬಾಲ್ಡ್ವಿನ್ ಅವರ ಮಾರ್ಗದರ್ಶನದಲ್ಲಿ ಅವರು ತಮ್ಮ ಡಾಕ್ಟರೇಟ್ ಅನ್ನು ಪೂರ್ಣಗೊಳಿಸಿದರು. ಅವರು ರೂರ್ಕಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯೂ ಹೌದು.
(7 / 10)

ಸಂಜಯ್‌ ಮಲ್ಹೋತ್ರ ಕಾರ್ಯದರ್ಶಿ ಕಂದಾಯರಾಜಸ್ಥಾನ ಕೇಡರ್‌ನ 1990ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಮಲ್ಹೋತ್ರಾ ಅವರು ಕಳೆದ ವರ್ಷದ ವರ್ಷದ ಅಕ್ಟೋಬರ್‌ನಿಂದ ಕಂದಾಯ ಇಲಾಖೆಯಲ್ಲಿ ವಿಶೇಷ ಕರ್ತವ್ಯದ ಅಧಿಕಾರಿಯಾಗಿ (ಒಎಸ್‌ಡಿ) ಕಾರ್ಯನಿರ್ವಹಿಸುತ್ತಿದ್ದರು. ಅದಕ್ಕೂ ಮೊದಲು, ಅವರು ಹಣಕಾಸು ಸೇವೆಗಳ ಇಲಾಖೆಯಲ್ಲಿ (DFS) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
(8 / 10)

ಎಸ್‌ಎಸ್‌ ನಕುಲ್‌ ಸಚಿವ ಆಪ್ತ ಕಾರ್ಯದರ್ಶಿ  2010ನೇ ಬ್ಯಾಚ್ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ. ಕೊಡಗು ಮೂಲದವರು. ಉತ್ತರ ಕನ್ನಡ, ಬಳ್ಳಾರಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮೂರು ವರ್ಷದಿಂದ ನಿರ್ಮಲಾ ಸೀತಾರಾಮನ್‌ ಅವರ ಆಪ್ತ ಕಾರ್ಯದರ್ಶಿ.  
(9 / 10)

ವಿ ಅನಂತ ನಾಗೇಶ್ವರನ್‌ ಮುಖ್ಯ ಆರ್ಥಿಕ ಸಲಹೆಗಾರತಮಿಳುನಾಡು ಮೂಲದ ವೆಂಕಟ್ರಮಣನ್ ಅನಂತ ನಾಗೇಶ್ವರನ್  ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ಭಾರತ ಸರ್ಕಾರದ 18 ನೇ ಮುಖ್ಯ ಆರ್ಥಿಕ ಸಲಹೆಗಾರ. ಅವರು ಏಷ್ಯಾದ ಸಂಶೋಧನೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ನಂತರ ಸ್ವಿಟ್ಜರ್ಲೆಂಡ್‌ನ ಬ್ಯಾಂಕ್ ಜೂಲಿಯಸ್ ಬೇರ್‌ನಲ್ಲಿ ಜಾಗತಿಕ ಮುಖ್ಯ ಹೂಡಿಕೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ನಿರ್ಮಲಾ ಸೀತಾರಾಮನ್‌ ಅವರೊಂದಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 
(10 / 10)

    ಹಂಚಿಕೊಳ್ಳಲು ಲೇಖನಗಳು