logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿ20 ವಿಶ್ವಕಪ್‌ ಪಂದ್ಯ ನಡೆಯುವ ನ್ಯೂಯಾರ್ಕ್ ನಸ್ಸೌ ಕೌಂಟಿ ಸ್ಟೇಡಿಯಂ ಈಗ ಹೇಗಿದೆ; ನಿರ್ಮಾಣಕ್ಕೆ ಆದ ಖರ್ಚು ಎಷ್ಟು?

ಟಿ20 ವಿಶ್ವಕಪ್‌ ಪಂದ್ಯ ನಡೆಯುವ ನ್ಯೂಯಾರ್ಕ್ ನಸ್ಸೌ ಕೌಂಟಿ ಸ್ಟೇಡಿಯಂ ಈಗ ಹೇಗಿದೆ; ನಿರ್ಮಾಣಕ್ಕೆ ಆದ ಖರ್ಚು ಎಷ್ಟು?

May 28, 2024 01:02 PM IST

ಟಿ20 ವಿಶ್ವಕಪ್‌ ಪಂದ್ಯಗಳಿಗೆ ಆತಿಥ್ಯ ವಹಿಸಲು ಅಮೆರಿಕ ಸಜ್ಜಾಗಿದೆ. ನ್ಯೂಯಾರ್ಕ್‌ ನಗರದಲ್ಲಿ ಸುಂದರ ಸ್ಟೇಡಿಯಂ ಎದ್ದು ನಿಂತಿದೆ. ಈಸ್ಟರ್ನ್ ನ್ಯೂಯಾರ್ಕ್ ಸಿಟಿಯ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ವಿಶ್ವಕಪ್‌ ಪಂದ್ಯಗಳನ್ನು ಆಯೋಜಿಸಲು ಸಜ್ಜಾಗಿದೆ. ಇದೇ ಮೈದಾನದಲ್ಲಿ ಭಾರತ-ಪಾಕಿಸ್ತಾನ ಪಂದ್ಯಗಳು ನಡೆಯುತ್ತಿದ್ದು,‌ ದಿನಗಣನೆ ಆರಂಭವಾಗಿದೆ.

  • ಟಿ20 ವಿಶ್ವಕಪ್‌ ಪಂದ್ಯಗಳಿಗೆ ಆತಿಥ್ಯ ವಹಿಸಲು ಅಮೆರಿಕ ಸಜ್ಜಾಗಿದೆ. ನ್ಯೂಯಾರ್ಕ್‌ ನಗರದಲ್ಲಿ ಸುಂದರ ಸ್ಟೇಡಿಯಂ ಎದ್ದು ನಿಂತಿದೆ. ಈಸ್ಟರ್ನ್ ನ್ಯೂಯಾರ್ಕ್ ಸಿಟಿಯ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ವಿಶ್ವಕಪ್‌ ಪಂದ್ಯಗಳನ್ನು ಆಯೋಜಿಸಲು ಸಜ್ಜಾಗಿದೆ. ಇದೇ ಮೈದಾನದಲ್ಲಿ ಭಾರತ-ಪಾಕಿಸ್ತಾನ ಪಂದ್ಯಗಳು ನಡೆಯುತ್ತಿದ್ದು,‌ ದಿನಗಣನೆ ಆರಂಭವಾಗಿದೆ.
ಕೇವಲ 2 ತಿಂಗಳಲ್ಲಿ ಅತಿ ವೇಗವಾಗಿ ನಿರ್ಮಾಣಗೊಂದ ಕ್ರೀಡಾಂಗಣವನ್ನು ಒಲಿಂಪಿಕ್ ದಂತಕಥೆ ಹಾಗೂ ಪಂದ್ಯಾವಳಿಯ ರಾಯಭಾರಿ ಉಸೇನ್ ಬೋಲ್ಟ್ ಇತ್ತೀಚೆಗೆ ಉದ್ಘಾಟಿಸಿದರು.
(1 / 8)
ಕೇವಲ 2 ತಿಂಗಳಲ್ಲಿ ಅತಿ ವೇಗವಾಗಿ ನಿರ್ಮಾಣಗೊಂದ ಕ್ರೀಡಾಂಗಣವನ್ನು ಒಲಿಂಪಿಕ್ ದಂತಕಥೆ ಹಾಗೂ ಪಂದ್ಯಾವಳಿಯ ರಾಯಭಾರಿ ಉಸೇನ್ ಬೋಲ್ಟ್ ಇತ್ತೀಚೆಗೆ ಉದ್ಘಾಟಿಸಿದರು.(AFP)
ಕ್ರೀಡಾಂಗಣದ ಪ್ರಮುಖ ವೈಶಿಷ್ಟ್ಯವೆಂದರೆ, ಇದನ್ನು ಕೇವಲ 3 ತಿಂಗಳ ಅವಧಿಯಲ್ಲಿ ನಿರ್ಮಿಸಲಾಗಿದೆ. 
(2 / 8)
ಕ್ರೀಡಾಂಗಣದ ಪ್ರಮುಖ ವೈಶಿಷ್ಟ್ಯವೆಂದರೆ, ಇದನ್ನು ಕೇವಲ 3 ತಿಂಗಳ ಅವಧಿಯಲ್ಲಿ ನಿರ್ಮಿಸಲಾಗಿದೆ. (AFP)
ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂ 34,000 ಆಸನ ಸಾಮರ್ಥ್ಯ ಹೊಂದಿದ್ದು, ದೊಡ್ಡ ಸಂಖ್ಯೆಯಲ್ಲಿ ಹಾಜರಾಗಿ ಅಭಿಮಾನಿಗಳು ಪಂದ್ಯ ವೀಕ್ಷಿಸಬಹುದಾಗಿದೆ.
(3 / 8)
ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂ 34,000 ಆಸನ ಸಾಮರ್ಥ್ಯ ಹೊಂದಿದ್ದು, ದೊಡ್ಡ ಸಂಖ್ಯೆಯಲ್ಲಿ ಹಾಜರಾಗಿ ಅಭಿಮಾನಿಗಳು ಪಂದ್ಯ ವೀಕ್ಷಿಸಬಹುದಾಗಿದೆ.(AFP)
2024ರ ಟಿ20 ವಿಶ್ವಕಪ್ ಪಂದ್ಯಾವಳಿ ಆಯೋಜನೆಗೆಂದೇ ನಿರ್ದಿಷ್ಟವಾಗಿ ನಿರ್ಮಿಸಲಾದ ಕ್ರೀಡಾಂಗಣದಲ್ಲಿ ಅತಿರೋಚಕ ಪಂದ್ಯ ನಡೆಯುತ್ತಿದೆ. ಅದುವೇ ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ.
(4 / 8)
2024ರ ಟಿ20 ವಿಶ್ವಕಪ್ ಪಂದ್ಯಾವಳಿ ಆಯೋಜನೆಗೆಂದೇ ನಿರ್ದಿಷ್ಟವಾಗಿ ನಿರ್ಮಿಸಲಾದ ಕ್ರೀಡಾಂಗಣದಲ್ಲಿ ಅತಿರೋಚಕ ಪಂದ್ಯ ನಡೆಯುತ್ತಿದೆ. ಅದುವೇ ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ.(Getty Images via AFP)
ಫೋರ್ಬ್ಸ್ ವರದಿಯ ಪ್ರಕಾರ, ನ್ಯೂಯಾರ್ಕ್ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸುಮಾರು 30 ಮಿಲಿಯನ್ ಡಾಲರ್ ವೆಚ್ಚವಾಗಿದೆ. ಅಂದರೆ ಬರೋಬ್ಬರಿ 250 ಕೋಟಿ ರೂಪಾಯಿ. ಇಷ್ಟೊಂದು ಮೊತ್ತವನ್ನು ಒಂದು ತಾತ್ಕಾಲಿಕ ಸ್ಟೇಡಿಯಂ ನಿರ್ಮಾಣಕ್ಕೆ ಹೂಡಿಕೆ ಮಾಡಿದ್ದರೂ, ಇದರಿಂದ ಗಣನೀಯ ಆದಾಯ ಬರುವ ನಿರೀಕ್ಷೆ ಇದೆ.
(5 / 8)
ಫೋರ್ಬ್ಸ್ ವರದಿಯ ಪ್ರಕಾರ, ನ್ಯೂಯಾರ್ಕ್ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸುಮಾರು 30 ಮಿಲಿಯನ್ ಡಾಲರ್ ವೆಚ್ಚವಾಗಿದೆ. ಅಂದರೆ ಬರೋಬ್ಬರಿ 250 ಕೋಟಿ ರೂಪಾಯಿ. ಇಷ್ಟೊಂದು ಮೊತ್ತವನ್ನು ಒಂದು ತಾತ್ಕಾಲಿಕ ಸ್ಟೇಡಿಯಂ ನಿರ್ಮಾಣಕ್ಕೆ ಹೂಡಿಕೆ ಮಾಡಿದ್ದರೂ, ಇದರಿಂದ ಗಣನೀಯ ಆದಾಯ ಬರುವ ನಿರೀಕ್ಷೆ ಇದೆ.(AFP)
ನ್ಯೂಯಾರ್ಕ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಈ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುಂಪು ಹಂತದಲ್ಲಿ ಒಟ್ಟು ಎಂಟು ಪಂದ್ಯಗಳು ನಡೆಯಲಿವೆ. ಜೂನ್ 3ರಂದು ಈ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ.
(6 / 8)
ನ್ಯೂಯಾರ್ಕ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಈ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುಂಪು ಹಂತದಲ್ಲಿ ಒಟ್ಟು ಎಂಟು ಪಂದ್ಯಗಳು ನಡೆಯಲಿವೆ. ಜೂನ್ 3ರಂದು ಈ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ.(Getty Images via AFP)
ಈ ಮೈದಾನದಲ್ಲಿ ಭಾರತವು 2 ಪಂದ್ಯಗಳಲ್ಲಿ ಆಡಲಿದೆ. ಜೂನ್ 5ರಂದು ಐರ್ಲೆಂಡ್ ವಿರುದ್ಧ ಸೆಣಸಿದರೆ, ಜೂನ್ 9ರಂದು ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ.
(7 / 8)
ಈ ಮೈದಾನದಲ್ಲಿ ಭಾರತವು 2 ಪಂದ್ಯಗಳಲ್ಲಿ ಆಡಲಿದೆ. ಜೂನ್ 5ರಂದು ಐರ್ಲೆಂಡ್ ವಿರುದ್ಧ ಸೆಣಸಿದರೆ, ಜೂನ್ 9ರಂದು ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ.(AFP)
ಈ ಮೈದಾನದಲ್ಲಿ ನಡೆಯುವ ಪಂದ್ಯಗಳಿಗೆ ಐಸಿಸಿ ವೆಬ್‌ಸೈಟ್‌ನಲ್ಲಿ ಟಿಕೆಟ್‌ಗಳು ಲಭ್ಯವಿದೆ. ಆರಂಭಿಕ ಬೆಲೆಯು 175 ಡಾಲರ್‌ (ಸರಿಸುಮಾರು 14555 ರೂಪಾಯಿ) ಆಗಿದ್ದು, ಪ್ರೀಮಿಯಂ ಟಿಕೆಟ್‌ಗೆ 300 ಹಾಗೂ 400 ಡಾಲರ್‌ ವೆಚ್ಚವಾಗುತ್ತದೆ.
(8 / 8)
ಈ ಮೈದಾನದಲ್ಲಿ ನಡೆಯುವ ಪಂದ್ಯಗಳಿಗೆ ಐಸಿಸಿ ವೆಬ್‌ಸೈಟ್‌ನಲ್ಲಿ ಟಿಕೆಟ್‌ಗಳು ಲಭ್ಯವಿದೆ. ಆರಂಭಿಕ ಬೆಲೆಯು 175 ಡಾಲರ್‌ (ಸರಿಸುಮಾರು 14555 ರೂಪಾಯಿ) ಆಗಿದ್ದು, ಪ್ರೀಮಿಯಂ ಟಿಕೆಟ್‌ಗೆ 300 ಹಾಗೂ 400 ಡಾಲರ್‌ ವೆಚ್ಚವಾಗುತ್ತದೆ.(AFP)

    ಹಂಚಿಕೊಳ್ಳಲು ಲೇಖನಗಳು