logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Usman Khawaja Love Story: ಆಸೀಸ್ ಕ್ರಿಕೆಟಿಗ ಖವಾಜಾರದ್ದು ದೇಶ-ಧರ್ಮದ ಗಡಿ ಮೀರಿದ ಪ್ರೀತಿ; ಇವರ ಪ್ರೇಮಕಥೆ ಹಲವರಿಗೆ ಸ್ಫೂರ್ತಿ

Usman Khawaja love story: ಆಸೀಸ್ ಕ್ರಿಕೆಟಿಗ ಖವಾಜಾರದ್ದು ದೇಶ-ಧರ್ಮದ ಗಡಿ ಮೀರಿದ ಪ್ರೀತಿ; ಇವರ ಪ್ರೇಮಕಥೆ ಹಲವರಿಗೆ ಸ್ಫೂರ್ತಿ

Feb 19, 2023 05:20 PM IST

Usman Khawaja love story : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯ ಎರಡು ಪಂದ್ಯಗಳು ಇಂದಿಗೆ ಮುಗಿದಿವೆ. ಭಾರತವು ಎರಡೂ ಪಂದ್ಯಗಳನ್ನು ಗೆದ್ದು ಮುನ್ನಡೆಯಲ್ಲಿದೆ. ಅತ್ತ ಆಸ್ಟ್ರೇಲಿಯಾ ಸತತ ಸೋಲನುಭವಿಸಿದೆ. ಈ ಬಾರಿ ಆಸೀಸ್‌ ತಂಡವು ಉಸ್ಮಾನ್ ಖವಾಜಾ ಅವರನ್ನು ತಂಡಕ್ಕೆ ಕರೆತಂದಿದೆ. ಅವರು ಸ್ಪಿನ್ ಬೌಲಿಂಗ್ ವಿರುದ್ಧ ಉತ್ತಮವಾಗಿ ಆಡುತ್ತಾರೆ ಎಂಬ ಉದ್ದೇಶದಿಂದ ಅವರನ್ನು ಭಾರತಕ್ಕೆ ಕರೆತರಲಾಗಿದೆ. ಈ ಹಿಂದಿನ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಖವಾಜಾ ಅವರನ್ನು ತಂಡದಲ್ಲಿ ಸೇರಿಸಿಕೊಂಡಿರಲಿಲ್ಲ. ಪಾಕಿಸ್ತಾನ ಮೂಲದವರಾದ ಉಸ್ಮಾನ್‌, ಬಾಲ್ಯದಿಂದಲೂ ಆಸ್ಟ್ರೇಲಿಯಾದಲ್ಲೇ ನೆಲೆಸಿದ್ದಾರೆ. ಅವರ ಪತ್ನಿ ಕೂಡಾ ಆಸ್ಟ್ರೇಲಿಯಾದವರು. ಇವರಿಬ್ಬರ ನಡುವೆ ಸುಂದರ ಪ್ರೇಮಕಥೆಯಿದೆ.

  • Usman Khawaja love story : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯ ಎರಡು ಪಂದ್ಯಗಳು ಇಂದಿಗೆ ಮುಗಿದಿವೆ. ಭಾರತವು ಎರಡೂ ಪಂದ್ಯಗಳನ್ನು ಗೆದ್ದು ಮುನ್ನಡೆಯಲ್ಲಿದೆ. ಅತ್ತ ಆಸ್ಟ್ರೇಲಿಯಾ ಸತತ ಸೋಲನುಭವಿಸಿದೆ. ಈ ಬಾರಿ ಆಸೀಸ್‌ ತಂಡವು ಉಸ್ಮಾನ್ ಖವಾಜಾ ಅವರನ್ನು ತಂಡಕ್ಕೆ ಕರೆತಂದಿದೆ. ಅವರು ಸ್ಪಿನ್ ಬೌಲಿಂಗ್ ವಿರುದ್ಧ ಉತ್ತಮವಾಗಿ ಆಡುತ್ತಾರೆ ಎಂಬ ಉದ್ದೇಶದಿಂದ ಅವರನ್ನು ಭಾರತಕ್ಕೆ ಕರೆತರಲಾಗಿದೆ. ಈ ಹಿಂದಿನ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಖವಾಜಾ ಅವರನ್ನು ತಂಡದಲ್ಲಿ ಸೇರಿಸಿಕೊಂಡಿರಲಿಲ್ಲ. ಪಾಕಿಸ್ತಾನ ಮೂಲದವರಾದ ಉಸ್ಮಾನ್‌, ಬಾಲ್ಯದಿಂದಲೂ ಆಸ್ಟ್ರೇಲಿಯಾದಲ್ಲೇ ನೆಲೆಸಿದ್ದಾರೆ. ಅವರ ಪತ್ನಿ ಕೂಡಾ ಆಸ್ಟ್ರೇಲಿಯಾದವರು. ಇವರಿಬ್ಬರ ನಡುವೆ ಸುಂದರ ಪ್ರೇಮಕಥೆಯಿದೆ.
ಉಸ್ಮಾನ್ ಖವಾಜಾ ಹುಟ್ಟಿದ್ದು ಪಾಕಿಸ್ತಾನದಲ್ಲಿ. ಇವರು ಆಸ್ಟ್ರೇಲಿಯಾ ಪರ ಆಡಿದ ಮೊದಲ ಮುಸ್ಲಿಂ ಕ್ರಿಕೆಟಿಗ. ಉಸ್ಮಾನ್ 5 ವರ್ಷದವರಿದ್ದಾಗಲೇ ಅವರ ಕುಟುಂಬವು ಪಾಕ್‌ನಿಂದ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ಗೆ ಸ್ಥಳಾಂತರಗೊಂಡಿತ್ತು.
(1 / 10)

ಅವರು 2010-11ರ ಪ್ರತಿಷ್ಠಿತ ಆಶಸ್ ಸರಣಿಯೊಂದಿಗೆ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಸಿಡ್ನಿಯಲ್ಲಿ ಆಡಿದರು.
(2 / 10)

ಉಸ್ಮಾನ್ ಖವಾಜಾ ಅವರು ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾನಿಲಯದಿಂದ ವಾಯುಯಾನ ವಿಭಾಗದಲ್ಲಿ ಬ್ಯಾಚುಲರ್ ಪದವಿಯನ್ನು ಪಡೆದಿದ್ದಾರೆ. ಅವರು ವೃತ್ತಿಪರ ಪೈಲಟ್. ಅದಾಗ್ಯೂ, ಅವರ ಆಸಕ್ತಿಯು ಕ್ರಿಕೆಟ್‌ನಲ್ಲಿತ್ತು. ಹೀಗಾಗಿ ತಮ್ಮ ವೃತ್ತಿಜೀವನವನ್ನು ಈ ಕ್ರೀಡೆಯಲ್ಲಿ ಮುಂದುವರೆಸಲು ನಿರ್ಧರಿಸಿದರು.
(3 / 10)

ಉಸ್ಮಾನ್ ಖವಾಜಾ ಮತ್ತು ಅವರ ಪತ್ನಿ ರಾಚೆಲ್ ಅವರ ಪ್ರೇಮಕಥೆ ತುಂಬಾ ವಿಶೇಷವಾಗಿದೆ. ಇವರಿಬ್ಬರ ಮದುವೆ ಬಗ್ಗೆಯೂ ಸಾಕಷ್ಟು ಚರ್ಚೆ ನಡೆದಿದೆ. ಉಸ್ಮಾನ್ ಖವಾಜಾ ಮತ್ತು ರಾಚೆಲ್ ಮೆಕ್ಲೆಲನ್ 2018ರಲ್ಲಿ ವಿವಾಹವಾದರು.
(4 / 10)

ರಾಚೆಲ್ ಅವರು ಇಸ್ಲಾಂಗೆ ಮತಾಂತರಗೊಂಡ ನಂತರ ಇಬ್ಬರೂ ಮದುವೆಯಾಗಿದ್ದರು. ರಾಚೆಲ್ ಮತಾಂತರಗೊಂಡು ಉಸ್ಮಾನ್‌ ಅವರನ್ನು ಮದುವೆಯಾದಾಗ ಸಾಕಷ್ಟು ವಾದ-ವಿವಾದಗಳು ನಡೆದಿತ್ತು. ರಾಚೆಲ್ ಅವರು ಮೂಲತಃ ಕ್ಯಾಥೋಲಿಕ್ ಕ್ರಿಶ್ಚಿಯನ್.
(5 / 10)

“ಉಸ್ಮಾನ್, ತಾನು ಭೇಟಿಯಾದ ಮೊದಲ ಮುಸ್ಲಿಂ. ಅಲ್ಲದೆ, ಮುಸ್ಲಿಮರ ಬಗ್ಗೆ ನನಗೆ ಆಗ ತೀರಾ ನಿರ್ಲಕ್ಷ್ಯವಿತ್ತು. ಆದರೆ ಉಸ್ಮಾನ್ ಖವಾಜಾ ಅವರನ್ನು ಪ್ರೀತಿಸಿದ ನಂತರ ಆ ಭಾವನೆ ಮಾಯವಾಯ್ತು” ಎಂದು ರಾಚೆಲ್ ಹೇಳಿದ್ದರು.
(6 / 10)

ಕುತೂಹಲಕಾರಿಯಾಗಿ, ಮದುವೆಯಾದ ತಕ್ಷಣ ರಾಚೆಲ್ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. ಅಲ್ಲದೆ ತನ್ನನ್ನು ಮತಾಂತರಕ್ಕೆ ಯಾರೂ ಬಲವಂತ ಮಾಡಿಲ್ಲ ಮತ್ತು ಅದು ತನ್ನ ಸ್ವಂತ ನಿರ್ಧಾರ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
(7 / 10)

ರಾಚೆಲ್ ಅವರ ಮತಾಂತರದಿಂದಾಗಿ ಉಸ್ಮಾನ್ ಸಾಕಷ್ಟು ಟೀಕೆಗಳನ್ನು ಎದುರಿಸಿದರು. ಆ ಬಳಿಕ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಟೀಕೆಗಳಿಗೆ ಪ್ರತಿಕ್ರಿಯಿಸಿದರು.
(8 / 10)

ಉಸ್ಮಾನ್ ಖವಾಜಾ ಅವರು, “ನಾನು ಸಾಮಾಜಿಕ ಮಾಧ್ಯಮದಲ್ಲಿ ಇತರ ಮುಸ್ಲಿಮರಿಂದ ಅನೇಕ ಬಾರಿ ದ್ವೇಷವನ್ನು ಎದುರಿಸಿದ್ದೇನೆ. ನಮ್ಮಿಬ್ಬರ ಚಿತ್ರವನ್ನು ಶೇರ್ ಮಾಡಿದಾಗಲೆಲ್ಲ ‘ಅಯ್ಯೋ ಅವಳು ಮುಸಲ್ಮಾನಳಲ್ಲ’ ಎಂಬ ಕಾಮೆಂಟ್‌ಗಳು ಬರುತ್ತಿದ್ದವು. 'ಇದು ಹರಾಮ್, ನೀವು ಅವಳನ್ನು ಮದುವೆಯಾಗಲು ಸಾಧ್ಯವಿಲ್ಲ' ಎಂದು ಹೇಳುತ್ತಿದ್ದರು. ಆದರೆ ಖವಾಜಾ ಮತ್ತು ರಾಚೆಲ್ ಎಲ್ಲಾ ದ್ವೇಷವನ್ನು ಮೆಟ್ಟಿ ನಿಂತು ತಮ್ಮ ಪ್ರೀತಿಯನ್ನು ಗೆಲ್ಲಿಸಿದರು. ಅವರ ಪ್ರೇಮಕಥೆಯು ಧಾರ್ಮಿಕ ತಾರತಮ್ಯದ ಸಂಕೋಲೆಗಳನ್ನು ಮುರಿಯಲು ಅನೇಕರನ್ನು ಪ್ರೇರೇಪಿಸುತ್ತದೆ.
(9 / 10)

ಉಸ್ಮಾನ್ ಖವಾಜಾ ಮತ್ತು ರಾಚೆಲ್ ಮೆಕ್ಲೆಲನ್ ಸುಂದರ ಪ್ರೇಮಕಥೆ
(10 / 10)
ಉಸ್ಮಾನ್ ಖವಾಜಾ ಮತ್ತು ರಾಚೆಲ್ ಮೆಕ್ಲೆಲನ್ ಸುಂದರ ಪ್ರೇಮಕಥೆ(all photos- Usman Khawaja instagram)

    ಹಂಚಿಕೊಳ್ಳಲು ಲೇಖನಗಳು