logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Uttara Kannada Monsoon Tourism: ಜಲಪಾತ, ಬೀಚ್‌ಗಳ ಜತೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ನೀವೇನು ನೋಡಬಹುದು

Uttara Kannada monsoon tourism: ಜಲಪಾತ, ಬೀಚ್‌ಗಳ ಜತೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ನೀವೇನು ನೋಡಬಹುದು

Jul 06, 2024 07:00 AM IST

monsoon tour ಪ್ರವಾಸಿಗರ ಸ್ವರ್ಗದಂತಿರುವ ಉತ್ತರ ಕನ್ನಡ ಜಿಲ್ಲೆ ಹಲವು ವೈವಿಧ್ಯಗಳ ಸಂಗಮ( Uttara Kannada Tourism) . ಮಳೆಗಾಲಕ್ಕಂತೂ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ ಈ ಜಿಲ್ಲೆ. ಇದರ ಚಿತ್ರಣ ಇಲ್ಲಿದೆ. 

  • monsoon tour ಪ್ರವಾಸಿಗರ ಸ್ವರ್ಗದಂತಿರುವ ಉತ್ತರ ಕನ್ನಡ ಜಿಲ್ಲೆ ಹಲವು ವೈವಿಧ್ಯಗಳ ಸಂಗಮ( Uttara Kannada Tourism) . ಮಳೆಗಾಲಕ್ಕಂತೂ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ ಈ ಜಿಲ್ಲೆ. ಇದರ ಚಿತ್ರಣ ಇಲ್ಲಿದೆ. 
ತಿಳ್ಮಾತಿ ಬೀಚ್//  ಕಾರವಾರ ಸಮೀಪದ ಬೀಚ್‌ ಇದು. ಇಲ್ಲಿನ ಮರಳು ಕಪ್ಪು ಎಳ್ಳಿನಂತೆ ಕಾಣುವುದರಿಂದ ಈ ಕಡಲತೀರಕ್ಕೆ ತಿಳ್ಮಾತಿ ಎಂಬ ಹೆಸರು ಬಂದಿದೆ. ಈ ಹೆಸರು ಕೊಂಕಣಿ ಪದವಾದ ‘ತಿಳ್’ ಎಂದರೆ ಎಳ್ಳು ಮತ್ತು ‘ಮಾತ್ತಿ’ ಎಂದರೆ ಮಣ್ಣು ಎಂಬ ಪದದಿಂದ ಬಂದಿದೆ.ಹತ್ತಿರದಲ್ಲಿ ರೈಲು ನಿಲ್ದಾಣ ಕಾರವಾರ. ರಸ್ತೆ ಮೂಲಕ ಕಾರವಾರದಿಂದ 13 ಕಿ. ಮೀ. 
(1 / 10)

ನಾದಿಭಾಗ್ ಬೀಚ್ ಅಂಕೋಲಾ// ನದಿಭಾಗ್ ಎಂಬ ಸಣ್ಣ ನದಿಯು ಅಬ್ಬರಿಸುವ ಅಲೆಗಳೊಂದಿಗೆ ಕೊಲ್ಲಿಯನ್ನು ತಲುಪುತ್ತದೆ ಮತ್ತು ಪೂರ್ವ ಸೂರ್ಯನ ಮಧ್ಯದಲ್ಲಿ ಮತ್ತು ಹೊರಗೆ ಚಲಿಸುವ ದೋಣಿಯ ಜೊತೆಗೆ ತಂಪಾದ ಗಾಳಿಯ ಅಲೆ ಪ್ರವಾಸಿಗರಿಗೆ ವಿಶ್ರಾಂತಿಯ ಜೊತೆಗೆ ದೈತ್ಯಾಕಾರದ ಬಂಡೆಗಳ ರೂಪದಲ್ಲಿ ಸ್ಥಳದ ಆಕರ್ಷಣೆಯಾಗಿದೆ. ಈ ಎಲ್ಲಾ ವಿಶೇಷತೆಗಳಿಂದಾಗಿ ನಾದಿಭಾಗ್ ಬೀಚ್ ಎಂದು ಹೆಸರಿಸಲಾಗಿದೆ. ಹತ್ತಿರದಲ್ಲಿರುವ ರೈಲು ನಿಲ್ದಾಣ ಅಂಕೋಲಾ.  ರಸ್ತೆ ಮೂಲಕ ಬರುವುದಾದರೆ ಅಂಕೋಲಾದಿಂದ 4 ಕಿ.ಮೀ ಆಗಲಿದೆ. 
(2 / 10)

ಸಾತೋಡ್ಡಿ ಜಲಪಾತ//ಸಾತೋಡ್ಡಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟದ ​​ಒಂದು ಆಕರ್ಷಕ ಜಲಪಾತವಾಗಿದೆ. ಅನೇಕ ಸಣ್ಣ ತೊರೆಗಳು ಸೇರಿಕೊಂಡು ಸಾತೋಡ್ಡಿ ಜಲಪಾತವಾಗಿ ಅಂತಿಮವಾಗಿ ಕಾಳಿ ನದಿಯನ್ನು ಸೇರುತ್ತದೆ. ನಿತ್ಯಹರಿದ್ವರ್ಣ ಕಾಡುಗಳ ಮಧ್ಯದಲ್ಲಿ ಎತ್ತರದ ಬಂಡೆಗಳ ಮೇಲೆ ಹರಿಯುವ, 50 ಅಡಿ (15 ಮೀಟರ್) ಎತ್ತರದ ಈ ಜಲಪಾತವು ವಿಹಂಗಮ ನೋಟವನ್ನುನೀಡುತ್ತದೆ. ಇಲ್ಲಿಗೆ ಹತ್ತಿರದಲ್ಲಿರುವ ರೈಲು ನಿಲ್ದಾಣ ಅಂಕೋಲಾ ಮತ್ತು ಕುಮಟಾ. ರಸ್ತೆ ಮೂಲಕ ಬರುವುದಾದರೆ ಕಾರವಾರದಿಂದ 90 ಕಿ.ಮೀ. ದೂರದಲ್ಲಿದೆ 
(3 / 10)

ಮಾಗೋಡು ಜಲಪಾತ ಯಲ್ಲಾಪುರ//ಮಾಗೋಡು ಉತ್ತರ ಕನ್ನಡ ಜಿಲ್ಲೆಯ ಜನಪ್ರಿಯ ಜಲಪಾತಳಲ್ಲೊಂದು, ಯೆಲ್ಲಾಪುರ ತಾಲೂಕಿನಲ್ಲಿ ಬೇಡ್ತಿ ನದಿ ಸುಮಾರು 200 ಮೀಟರ್ ಎತ್ತರದಿಂದ ದೈತ್ಯ ಬಂಡೆಯ ಮೇಲೆ ಎರಡು ಭಾಗಗಳಾಗಿ ಧುಮುಕಿ ಮಾಗೋಡು ಜಲಪಾತ ಸೃಷ್ಟಿಯಾಗುತ್ತದೆ. ವಾಹನ ನಿಲುಗಡೆಯಿಂದ ಜಲಪಾತದ ವೀಕ್ಷಣಾ ಮಂಚದ  ತನಕ ತಲುಪಲು ಉತ್ತಮ ಕಾಲು ಹಾದಿಯಿದೆ. ರಸ್ತೆ ಮೂಲಕ ಹುಬ್ಬಳ್ಳಿಯಿಂದ 88 ಕಿ.ಮೀ ದೂರದಲ್ಲಿದೆ.
(4 / 10)

ವಿಭೂತಿ ಜಲಪಾತ//ವಿಭೂತಿ ಜಲಪಾತವು ಅಂಕೋಲಾ ತಾಲೂಕಿನ ಅಚವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಈ ಜಲಪಾತದಲ್ಲಿನ ನೀರು ಯಾಣದ ಬಳಿ ಸುಣ್ಣದ ಕಲ್ಲುಗಳಿಂದ  ಬರುತ್ತದೆ ಆದ್ದರಿಂದ ಈ ಜಲಪಾತವನ್ನು “ವಿಭೂತಿ ಜಲಪಾತ” ಎಂದು ಕರೆಯಲಾಗುತ್ತದೆ. ಭೇಟಿಗೆ ಹತ್ತಿರದಲ್ಲಿರುವ ರೈಲು ನಿಲ್ದಾಣ  ಕುಮಟಾ.  ರಸ್ತೆ ಮೂಲಕ ಬರುವವರಿಗೆ ಅಂಕೋಲಾದಿಂದ 60 ಕಿ.ಮೀ, ಕುಮಟಾದಿಂದ 57 ಕಿ,ಮೀ. 
(5 / 10)

ಅಪ್ಸರಕೊಂಡ ಜಲಪಾತಹೊನ್ನಾವರ ಹಾಗೂ ಕುಮಟಾ ಸಮೀಪವಿರುವ ಜಲಪಾತ. ಅಪ್ಸರಕೊಂಡ ಎಂಬ ಹೆಸರು ಅಪ್ಸರಾ (ದೇವತೆ) ಮತ್ತು ಕೊಂಡ (ಕೊಳ) ದಿಂದ ಬಂದಿದೆ, ಅಂದರೆ ದೇವತೆಗಳ ಕೊಳ.ದೈವಿಕ ದೇವತೆಗಳು ಇಲ್ಲಿ ಸ್ನಾನ ಮಾಡುತ್ತಿದ್ದರು.ಹತ್ತಿರದ ರೈಲು ನಿಲ್ದಾಣ ಹೊನ್ನಾವರ. ರಸ್ತೆ ಮೂಲಕ ಕಾರವಾರದಿಂದ 104 ಕಿ. ಮೀ. ಕುಮಟಾದಿಂದ – 35 ಕಿ.ಮೀ. ಆಗಲಿದೆ. 
(6 / 10)

ಯಾಣ//ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿರುವ ಯಾಣವು ಕಾಡಿನ ಮಧ್ಯೆ ಇರುವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇದು ಸಹ್ಯಾದ್ರಿ ಬೆಟ್ಟಗಳ ಸಾಲಿನ ಪಶ್ಚಿಮ ಘಟ್ಟದಲ್ಲಿದೆ.ಈ ಶಿಲಾ ಪ್ರರ್ವತವನ್ನು ವೀಕ್ಷಿಸಲು ಸಮೀಪದ ರಸ್ತೆಯಿಂದ 0.5 ಕಿ.ಮೀ. ದೂರ ಕಾಡಿನಲ್ಲಿ ಕ್ರಮಿಸಬೇಕು. ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರ ಎಂಬ ಬಹೃತ್ ಪರ್ವತ ಶೃಂಗಗಳಿಂದ ಯಾಣವು ಪ್ರಸಿದ್ಧಿಯನ್ನು ಪಡೆದಿದೆ. ಈ ಎರಡು ಬೃಹತ್ ಶಿಲಾ ಬಂಡೆಗಳು ಕಡುಗಪ್ಪು ಬಣ್ಣದ ಸುಣ್ಣದ ಹರಳಿನಿಂದ ನಿರ್ಮಿತವಾಗಿವೆ. ಇಲ್ಲಿಗೆ  ಹತ್ತಿರದಲ್ಲಿ ರೈಲು ನಿಲ್ದಾಣ ಕುಮಟಾ. ರಸ್ತೆ ಮೂಲಕ ಕಾರವಾರದಿಂದ 60 ಕಿ.ಮೀ. ಶಿರಿಸಿಯಿಂದ 40 ಕಿ.ಮೀ. ಕುಮಟಾದಿಂದ 31 ಕಿ.ಮೀ. ದೂರದಲ್ಲಿದೆ. 
(7 / 10)

ಶರಾವತಿ ಹಿನ್ನೀರು, ಹೊನ್ನಾವರ// ಇದು ಸಂಪೂರ್ಣವಾಗಿ ಈಗಲೂ  ಗುಪ್ತ ರತ್ನದಂತಹ ಪ್ರವಾಸಿ ತಾಣ, ಪ್ರವಾಸಿಗರಿಗೆ ಅದ್ಭುತವಾದ ಅನುಭವವನ್ನು ನೀಡುತ್ತದೆ. ಹಸಿರು ಮ್ಯಾಂಗ್ರೋವ್ ಅರಣ್ಯ, ಸುಂದರವಾದ ಸೂರ್ಯಾಸ್ತವನ್ನು ಅನ್ವೇಷಿಸಲು ಉತ್ತಮ ಸ್ಥಳ. ಕಾರವಾರದಿಂದ 92 ಕಿ. ಮೀ. ಕುಮಟಾದಿಂದ – 22 ಕಿ.ಮೀ ದೂರದಲ್ಲಿದೆ ಈ ತಾಣ.
(8 / 10)

ಭೀಮಕೋಲ್, ಕಾರವಾರ// ಅಚ್ಚ ಹಸಿರಿನ ನಡುವೆ ಭೀಮಕೋಲ್ ಕೆರೆ ಇರುವುದರಿಂದ ನಿಸರ್ಗ ಪ್ರಿಯರನ್ನು ಆಕರ್ಷಿಸುವ ತಾಣವಾಗಿದೆ. ಪ್ರವಾಸಿಗರನ್ನು ಕೈ ಬೀಸಿ ಸೆಳೆಯೋ ಚಿತ್ತವನ್ನ ಈ ಭೀಮಕೋಲ್‌ ಡ್ಯಾಂ ಹೊಂದಿದೆ. ಇಲ್ಲಿನ ಕೆರೆ, ಸುತ್ತಲೂ ಹಸಿರು ತಪ್ಪಲು, ಪ್ರಶಾಂತ ವಾತಾವರಣ ಇಲ್ಲಿಗೆ ಭೇಟಿ ನೀಡುವವರಿಗೆ ಖುಷಿ ನೀಡುತ್ತಿದೆ. ಇದು ಕಾರವಾರ ನಗರ ಸಮೀಪದಲ್ಲಿಯೇ ಇದೆ. 
(9 / 10)

ಮಿರ್ಜಾನ್ ಕೋಟೆ ಕುಮಟಾ//ಮಿರ್ಜಾನ್‌ ಕೋಟೆಯು ಅದ್ಭುತವಾದ ನಿರ್ಮಾಣ ಕೌಶಲ್ಯಕ್ಕೆ ಹೆಸರಾಗಿದೆ.  ಇದನ್ನು ನಿರ್ಮಿಸಲು ಸ್ಥಳೀಯವಾಗಿ ದೊರೆಯುವ ಕೆಂಪು ಕಲ್ಲು (ಲ್ಯಾಟರೈಟ್) ಗಳನ್ನು ಬಳಸಲಾಗಿದೆ. ಭೇಟಿಗೆ ಹತ್ತಿರದ ರೈಲು ನಿಲ್ದಾಣ ಕುಮಟಾ. ರಸ್ತೆ ಮೂಲಕ ಕಾರವಾರದಿಂದ 62 ಕಿ. ಮೀ. ಕುಮಟಾದಿಂದ – 12 ಕಿ.ಮೀ ದೂರದಲ್ಲಿದೆ.
(10 / 10)

    ಹಂಚಿಕೊಳ್ಳಲು ಲೇಖನಗಳು