logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  9 ದಿನಗಳ ಕಾಲ ನಡೆಯುವ ಶಿರಸಿ ಮಾರಿಕಾಂಬಾ ಜಾತ್ರೆ ಆರಂಭ; ಮಾರಿಕಾಂಬೆಯ ಕಲ್ಯಾಣೋತ್ಸವದ ವೈಭವವನ್ನು ಫೋಟೊಗಳಲ್ಲಿ ಕಣ್ತುಂಬಿಕೊಳ್ಳಿ

9 ದಿನಗಳ ಕಾಲ ನಡೆಯುವ ಶಿರಸಿ ಮಾರಿಕಾಂಬಾ ಜಾತ್ರೆ ಆರಂಭ; ಮಾರಿಕಾಂಬೆಯ ಕಲ್ಯಾಣೋತ್ಸವದ ವೈಭವವನ್ನು ಫೋಟೊಗಳಲ್ಲಿ ಕಣ್ತುಂಬಿಕೊಳ್ಳಿ

Mar 20, 2024 02:31 PM IST

ದಕ್ಷಿಣ ಭಾರತದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಶಿರಸಿ ಮಾರಿಕಾಂಬೆ ಜಾತ್ರೆ ಮಾರ್ಚ್‌ 19 ರಿಂದ ಆರಂಭವಾಗಿದೆ. ಮಾರ್ಚ್‌ 27ರವರೆಗೆ ಈ ಜಾತ್ರೆಯು ನಡೆಯಲಿದ್ದು, ಇಂದು (ಮಾರ್ಚ್‌ 20) ದೇವಿ ರಥಾರೋಹಣ ಹಾಗೂ ಶೋಭಾಯಾತ್ರೆ ನಡೆಯಿತು. ರಥೋತ್ಸವದ ವೈಭವದ ಫೋಟೊಗಳು ಇಲ್ಲಿವೆ. (ಫೋಟೊ ವರದಿ: ಹರೀಶ್‌ ಮಾಂಬಾಡಿ)

  • ದಕ್ಷಿಣ ಭಾರತದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಶಿರಸಿ ಮಾರಿಕಾಂಬೆ ಜಾತ್ರೆ ಮಾರ್ಚ್‌ 19 ರಿಂದ ಆರಂಭವಾಗಿದೆ. ಮಾರ್ಚ್‌ 27ರವರೆಗೆ ಈ ಜಾತ್ರೆಯು ನಡೆಯಲಿದ್ದು, ಇಂದು (ಮಾರ್ಚ್‌ 20) ದೇವಿ ರಥಾರೋಹಣ ಹಾಗೂ ಶೋಭಾಯಾತ್ರೆ ನಡೆಯಿತು. ರಥೋತ್ಸವದ ವೈಭವದ ಫೋಟೊಗಳು ಇಲ್ಲಿವೆ. (ಫೋಟೊ ವರದಿ: ಹರೀಶ್‌ ಮಾಂಬಾಡಿ)
ಉತ್ತರ ಕನ್ನಡ ಜಿಲ್ಲೆ ಶಿರಸಿಯ ಮಾರಿಕಾಂಬಾ ಜಾತ್ರೆ ಕರ್ನಾಟಕದಲ್ಲಿ ನಡೆಯುವ ಬಹುದೊಡ್ಡ ಜಾತ್ರೆಗಳಲ್ಲಿ ಒಂದು. ಪ್ರತಿ ವರ್ಷವು ಮಾರಿಕಾಂಬಾ ಜಾತ್ರೆ ಬಹಳ ಸಂಭ್ರಮ, ಸಡಗರದಿಂದ ನೆರವೇರುತ್ತದೆ. ಲಕ್ಷಾಂತರ ಮಂದಿ ಭಕ್ತರು ಈ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಮಂಗಳವಾರ (ಮಾರ್ಚ್‌ 19) ರಿಂದ ಜಾತ್ರೆ ಆರಂಭವಾಗಿದ್ದು, ದೇವಿ ಕಲ್ಯಾಣ ಮಹೋತ್ಸವ ನೆರವೇರಿದೆ. 
(1 / 7)

ಮಾರ್ಚ 27ರ ತನಕ ನಡೆಯಲಿರುವ ದೇವಿ ಜಾತ್ರೆಯ ಸಡಗರದ ಅಂಗವಾಗಿ ಮಂಗಳವಾರ ರಾತ್ರಿ 11.39ರ ವೇಳೆಗೆ ನವ ವಧುವಾಗಿ ಸಿಂಗಾರಗೊಂಡ‌ ಅಮ್ಮನ ಕಲ್ಯಾಣ ಪ್ರತಿಷ್ಠೆ ಕಾರ್ಯಗಳು ನಡೆದವು.
(2 / 7)

ಹೊಸ ರೇಷ್ಮೆ ಸೀರೆ ತೊಟ್ಟ ಮಾರಿಕಾಂಬೆಯು ಚಿನ್ನಾಭರಣಗಳಿಂದ ಅಲಂಕರಿಸಿಕೊಂಡು ನಗುತ್ತಿದ್ದಳು. ತಾಯಿಯ ತವರು ಮನೆಯವರು ಎಂದೇ ಗುರುತಿಸಲಾದ ನಾಡಿಗ ಮನೆತನದ ವಿಜಯ ನಾಡಿಗ್ ಕಲ್ಯಾಣ ಮಹೋತ್ಸವ ನಡೆಸಿದರು.
(3 / 7)

ಮಾರ್ಚ್‌ 20ರ ಬೆಳಗ್ಗೆ 7.27ರಿಂದ 7.39ರೊಳಗೆ ದೇವಿಯ ರಥಾರೋಹಣ ನೆರವೇರಿದ್ದು, ನಂತರ ರಥೋತ್ಸವ, ಶೋಭಾಯಾತ್ರೆ ನಡೆಯಿತು. ಭಕ್ತರ ಜಯಘೋಷದೊಂದಿಗೆ ರಥವು ಬಿಡಕಿ ಬಯಲಿನ ಜಾತ್ರಾ ಗದ್ದುಗೆ ಸ್ಥಳಕ್ಕೆ ತೆರಳಿತು. 
(4 / 7)

ಮಾ.21ರಿಂದ ಬೆಳಗ್ಗೆ 5ರಿಂದ ಜಾತ್ರಾ ಗದ್ದುಗೆಯಲ್ಲಿ ಮಾರಿಕಾಂಬೆಗೆ ಸೇವೆ ಸಲ್ಲಿಕೆ, ಹರಕೆ ಅರ್ಪಣೆ ಪ್ರಾರಂಭವಾಗಲಿದ್ದು ನಿರಂತರ ಎಳು ದಿನಗಳ ಕಾಲ ಮುಂದುವರೆಯಲಿದೆ. ಮಾ.27ರ ಬೆಳಗ್ಗೆ 10.41ಕ್ಕೆ ದೇವಿ ಗದ್ದುಗೆಯಿಂದ ಏಳುವುದರೊಂದಿಗೆ ಜಾತ್ರೆ ಮುಕ್ತಾಯವಾಗಲಿದೆ.
(5 / 7)

ಏಪ್ರಿಲ್‌ 9ರಂದು ಬೆಳಿಗ್ಗೆ 7:51ರಿಂದ 8.03 ಯುಗಾದಿಗೆ ದೇವಾಲಯದಲ್ಲಿ ದೇವಿ ಪುನರ್ ಪ್ರತಿಷ್ಠೆ ಆಗಲಿದೆ
(6 / 7)

ದೇಶ-ವಿದೇಶ, ರಾಜ್ಯ-ಜಿಲ್ಲೆ, ನಿಮ್ಮೂರು-ನಮ್ಮೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ತಿಳಿಯಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ನೋಡಿ.
(7 / 7)

    ಹಂಚಿಕೊಳ್ಳಲು ಲೇಖನಗಳು