logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Valentines Day 2024: ಕರ್ನಾಟಕದ ಐಎಎಸ್‌- ಐಪಿಎಸ್‌-ಐಎಫ್‌ಎಸ್ ಜೋಡಿ, ಪ್ರೀತಿಸಿ ವಿವಾಹವಾದ ಅಧಿಕಾರಿಗಳಿವರು Photos

Valentines Day 2024: ಕರ್ನಾಟಕದ ಐಎಎಸ್‌- ಐಪಿಎಸ್‌-ಐಎಫ್‌ಎಸ್ ಜೋಡಿ, ಪ್ರೀತಿಸಿ ವಿವಾಹವಾದ ಅಧಿಕಾರಿಗಳಿವರು Photos

Feb 14, 2024 07:00 AM IST

ಪ್ರೀತಿಗೆ ಭಾಷೆ, ಗಡಿ ಅಡ್ಡಿಯಿರುವುದಿಲ್ಲ. ಅದು ಎಲ್ಲಿ ಬೇಕಾದರೂ ಆಗಬಹುದು. ಕರ್ನಾಟಕದಲ್ಲಿಯೇ ಸೇವೆ ಸಲ್ಲಿಸುತ್ತಿರುವ ಹಲವಾರು ಅಧಿಕಾರಿಗಳು ಹೀಗೆ ಪ್ರೀತಿಸುತ್ತಲೇ ಜೋಡಿಗಳಾಗಿ, ಮದುವೆಯಾಗಿ ಈಗಲೂ ಪ್ರೀತಿಯ ಜೋಡಿಗಳಂತೆಯೇ ಇದ್ದಾರೆ. 

  • ಪ್ರೀತಿಗೆ ಭಾಷೆ, ಗಡಿ ಅಡ್ಡಿಯಿರುವುದಿಲ್ಲ. ಅದು ಎಲ್ಲಿ ಬೇಕಾದರೂ ಆಗಬಹುದು. ಕರ್ನಾಟಕದಲ್ಲಿಯೇ ಸೇವೆ ಸಲ್ಲಿಸುತ್ತಿರುವ ಹಲವಾರು ಅಧಿಕಾರಿಗಳು ಹೀಗೆ ಪ್ರೀತಿಸುತ್ತಲೇ ಜೋಡಿಗಳಾಗಿ, ಮದುವೆಯಾಗಿ ಈಗಲೂ ಪ್ರೀತಿಯ ಜೋಡಿಗಳಂತೆಯೇ ಇದ್ದಾರೆ. 
ಒಂದು ಕಾಲಕ್ಕೆ ಡೆಮಾಲಿಷನ್‌ ಮ್ಯಾನ್‌ ಎಂದು ಹೆಸರು ಪಡೆದಿದ್ದ ಪಿ.ಮಣಿವಣ್ಣನ್‌ ಅವರು ತಮಿಳುನಾಡಿದವರು. ಕರ್ನಾಟಕ ಕೆಡರ್‌ ಅಧಿಕಾರಿ. ಬೆಂಗಳೂರಿನವರಾದ ಐಎಎಸ್‌ ಅಧಿಕಾರಿ ಸಲ್ಮಾಫಾಹೀಮ್‌ ಅವರನ್ನು ಪ್ರೀತಿಸಿ ದಶಕದ ಹಿಂದೆಯೇ ವಿವಾಹವಾದರು.
(1 / 10)

ಕರ್ನಾಟಕದ ದಕ್ಷ ಹಾಗೂ ತಂತ್ರಜ್ಞಾನದ ಮೂಲಕ ಆಡಳಿತಕ್ಕೆ ಗಟ್ಟಿತನ ತಂದ ಐಎಎಸ್‌  ಅಧಿಕಾರಿ ಉತ್ತರ ಭಾರತ ಮೂಲದ ಮುನೀಷ್‌ ಮೌದ್ಗಿಲ್‌ ಹಾಗೂ ಕರ್ನಾಟಕದ ದಾವಣಗೆರೆಯವರಾದ ಆದ ಖಡಕ್ ಐಪಿಎಸ್‌  ಅಧಿಕಾರಿ ಡಿ.ರೂಪಾ ಅವರು ಪ್ರೇಮಿಸಿ ವಿವಾಹವಾಗಿ ಎರಡು ದಶಕವೇ ಆಗುತ್ತಿದೆ. 
(2 / 10)

ದಕ್ಷ ಹಾಗೂ ಪ್ರಾಮಾಣಿಕತೆಗೆ ಹೆಸರಾದ ಐಎಎಸ್ ಜೋಡಿ ಇದು. ಕರ್ನಾಟಕದ ಮಧುಗಿರಿಯವರಾದ ಡಾ.ಅಜಯ್‌ ನಾಗಭೂಷಣ್‌  ಹಾಗೂ ಮಧ್ಯಪ್ರದೇಶದವರಾದ ಸಿ.ಶಿಖಾ ಒಂದೇ ಬ್ಯಾಚ್‌ನ ಐಎಎಸ್‌ ಅಧಿಕಾರಿಗಳು. ಪ್ರೀತಿಸಿ ವಿವಾಹವಾಗಿ ಒಂದೂವರೆ ದಶಕವೇ ಕಳೆದಿದೆ.
(3 / 10)

ತಮಿಳುನಾಡು ಮೂಲದವರಾದ ಡಾ.ಮಾಲತಿಪ್ರಿಯ ಹಾಗೂ ಡಾ.ರಮೇಶ್‌ಕುಮಾರ್‌ ಅವರು ಒಂದೇ ಬ್ಯಾಚ್‌ನ ಐಎಫ್‌ಎಸ್‌ ಅಧಿಕಾರಿಗಳು. ಪ್ರೀತಿಸಿ ವಿವಾಹವಾಗಿ ದಶಕವೇ ಮುಗಿದಿದೆ. 
(4 / 10)

ದಾವಣಗೆರೆಯಲ್ಲಿದ್ದಾಗ ಪ್ರೀತಿಸಿ ಚಿಕ್ಕಮಗಳೂರಿನಲ್ಲಿ ವಿವಾಹವಾದ ಕರ್ನಾಟಕ ಕೆಡರ್‌ನ ಐಎಎಸ್‌ ಅಧಿಕಾರಿ ಜೋಡಿ ಇದು. ಆಂಧ್ರದ ಡಾ.ಬಗಾದಿಗೌತಮ್‌ ಹಾಗೂ ಕೇರಳದ ಎಸ್‌.ಅಶ್ವಥಿ ಸತಿಪತಿಗಳಾಗಿ ಈಗ ಕೇಂದ್ರ ಸರ್ಕಾರದ ಸೇವೆಯಲ್ಲಿದ್ದಾರೆ. 
(5 / 10)

ಉತ್ತರ ಭಾರತದವರಾದರೂ ಕರ್ನಾಟಕದ ಕಲಬುರಗಿಯಲ್ಲಿ ಸೇವೆಯಲ್ಲಿರುವ ಐಎಎಸ್‌ ಅಧಿಕಾರಿ ಕೃಷ್ಣ ಬಾಜಪೇಯಿ, ಧಾರವಾಡ, ಗದಗ ನಂತರ ಬೆಂಗಳೂರಿಗೆ ಬಂದಿರುವ ಐಎಫ್‌ಎಸ್‌ ಅಧಿಕಾರಿ ದೀಪಿಕಾ ಗೋಯಲ್‌ ಬಾಜಪೇಯಿ ಕೂಡ ಪ್ರೀತಿಸಿ ವಿವಾಹವಾದವರೇ.
(6 / 10)

ಆಂಧ್ರಪ್ರದೇಶದ ಹೆಪ್ಸಿಬಾ ರಾಣಿ ಕೊರ್ಲಪೇಟೆ ಹಾಗೂ ಪಶ್ಚಿಮ ಬಂಗಾಳದವರಾದ ಉಜ್ವಲ್‌ ಕುಮಾರ್‌ ಘೋಷ್‌ ಕೂಡ ಪ್ರೇಮಿಸಿ ಕೆಲ ವರ್ಷದ ಹಿಂದೆ ವಿವಾಹವಾದರು. ಇಬ್ಬರೂ ಕರ್ನಾಟಕ ಕೇಡರ್‌ ಐಎಎಸ್‌ ಅಧಿಕಾರಿಗಳೇ.
(7 / 10)

ದಕ್ಷತೆಗೆ ಹೆಸರಾದ ಕಲಬುರಗಿಯಲ್ಲಿರುವ ಐಎಎಸ್‌ ಅಧಿಕಾರಿ ಅನಿರುದ್ಧ್‌ ಶ್ರವಣ್‌ ಹಾಗೂ ಐಪಿಎಸ್‌ ಅಧಿಕಾರಿ ಇಶಾ ಪಂತ್‌ ಕೂಡ ಪ್ರೀತಿಸಿ ವಿವಾಹವಾದವರೇ. ಉತ್ತರ ಭಾರತ ಕೇಡರ್‌ನಿಂದ ಕರ್ನಾಟಕಕ್ಕೆ ಇಶಾ ಬಂದು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. 
(8 / 10)

ಕರ್ನಾಟಕದ ಚಿಕ್ಕಬಳ್ಳಾಪುರದವರಾದ ಡಿ.ಮಹೇಶ್‌ ಕುಮಾರ್‌ ಹಾಗೂ ಗುಜರಾತ್‌ ಮೂಲದ  ದೀಪ್ ಜೆ. ಕಂಟ್ರಾಕ್ಟರ್‌ ಒಂದೇ ಕೇಡರ್‌ನ ಐಎಫ್‌ಎಸ್‌ ಅಧಿಕಾರಿಗಳು. ಇಬ್ಬರು ಪ್ರೀತಿಸಿ ವಿವಾಹವಾಗಿದ್ದಾರೆ, 
(9 / 10)

ಕರ್ನಾಟಕದ ಬೆಳಗಾವಿ ಜಿಲ್ಲೆಯವರಾದ ಸದ್ಯ ಮೈಸೂರು ಪೊಲೀಸ್‌ ಅಕಾಡೆಮಿ ನಿರ್ದೇಶಕರಾದ ಲೋಕೇಶ್‌ ಜಗಲಾಸರ್‌ ಹಾಗೂ ಒರಿಸಾ ಮೂಲದವರಾಗಿ ಸದ್ಯ ಕರ್ನಾಟಕಕ್ಕೆ ವರ್ಗಗೊಂಡು ಚಾಮರಾಜನಗರ ಎಸ್ಪಿ ಆಗಿರುವ ಪದ್ಮಿನಿ ಸಾಹು ಒಂದೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಗಳು. ಇದೂ ಪ್ರೀತಿಸಿಯೇ ವಿವಾಹವಾದ  ಜೋಡಿ.
(10 / 10)

    ಹಂಚಿಕೊಳ್ಳಲು ಲೇಖನಗಳು