logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Propose Day 2024: ನಿಮ್ಮಷ್ಟದ ವ್ಯಕ್ತಿಗೆ ರೊಮ್ಯಾಂಟಿಕ್‌ ಆಗಿ ಪ್ರಪೋಸ್‌ ಮಾಡಲು ಇಲ್ಲಿದೆ 8 ಕ್ರಿಯೆಟಿವ್‌ ಐಡಿಯಾಗಳು

Propose Day 2024: ನಿಮ್ಮಷ್ಟದ ವ್ಯಕ್ತಿಗೆ ರೊಮ್ಯಾಂಟಿಕ್‌ ಆಗಿ ಪ್ರಪೋಸ್‌ ಮಾಡಲು ಇಲ್ಲಿದೆ 8 ಕ್ರಿಯೆಟಿವ್‌ ಐಡಿಯಾಗಳು

Feb 04, 2024 11:00 AM IST

ವ್ಯಾಲೆಂಟೈನ್ಸ್‌ ವೀಕ್‌ನಲ್ಲಿ ಪ್ರೇಮಿಗಳ ದಿನದಷ್ಟೇ ಮಹತ್ವ ಪಡೆದಿರುವುದು ಪ್ರಪೋಸ್‌ ಡೇ. ಫೆ 8 ರಂದು ಪ್ರಪೋಸ್‌ ಡೇ ಆಚರಿಸಲಾಗುತ್ತದೆ. ಅಂದು ನಿಮ್ಮ ಒಲವಿನ ವ್ಯಕ್ತಿಯ ಮುಂದೆ ಪ್ರೇಮಿ ನಿವೇದಿಸುವ ಮೂಲಕ ಖುಷಿ ಪಡಿಸಬಹುದು. ಈ ವರ್ಷ ನೀವು ನಿಮ್ಮ ಸಂಗಾತಿಗೆ ರೊಮ್ಯಾಂಟಿಕ್‌ ಹಾಗೂ ಕ್ರಿಯೇಟಿವ್‌ ಆಗಿ ಪ್ರಪೋಸ್‌ ಮಾಡ್ಬೇಕು ಅಂತಿದ್ರೆ, ನಿಮಗಾಗಿ ಇಲ್ಲಿದೆ 8 ಐಡಿಯಾ. 

  • ವ್ಯಾಲೆಂಟೈನ್ಸ್‌ ವೀಕ್‌ನಲ್ಲಿ ಪ್ರೇಮಿಗಳ ದಿನದಷ್ಟೇ ಮಹತ್ವ ಪಡೆದಿರುವುದು ಪ್ರಪೋಸ್‌ ಡೇ. ಫೆ 8 ರಂದು ಪ್ರಪೋಸ್‌ ಡೇ ಆಚರಿಸಲಾಗುತ್ತದೆ. ಅಂದು ನಿಮ್ಮ ಒಲವಿನ ವ್ಯಕ್ತಿಯ ಮುಂದೆ ಪ್ರೇಮಿ ನಿವೇದಿಸುವ ಮೂಲಕ ಖುಷಿ ಪಡಿಸಬಹುದು. ಈ ವರ್ಷ ನೀವು ನಿಮ್ಮ ಸಂಗಾತಿಗೆ ರೊಮ್ಯಾಂಟಿಕ್‌ ಹಾಗೂ ಕ್ರಿಯೇಟಿವ್‌ ಆಗಿ ಪ್ರಪೋಸ್‌ ಮಾಡ್ಬೇಕು ಅಂತಿದ್ರೆ, ನಿಮಗಾಗಿ ಇಲ್ಲಿದೆ 8 ಐಡಿಯಾ. 
ನಕ್ಷತ್ರಗಳ ಅಡಿಯಲ್ಲಿ ಪ್ರೇಮಲೋಕ ಸೃಷ್ಟಿಸಿ: ಲವ್‌ ಪ್ರಪೋಸ್‌ ಮಾಡೋದು ಒಂದು ಕಲೆ, ನೆಲದ ಮೇಲೆ ಮಂಡಿಯೂರಿ ಐ ಲವ್‌ ಯು, ವಿಲ್‌ ಯು ಮ್ಯಾರಿ ಮಿ ಅಂತ ಎಲ್ರೂ ಹೇಳ್ತಾರೆ. ನೀವು ಈ ವರ್ಷದ ಪ್ರಪೋಸ್‌ ಡೇಯನ್ನು ರೊಮ್ಯಾಂಟಿಕ್‌ ಆಗಿ ಆಚರಿಸಬೇಕು ಅಂತಿದ್ರೆ, ತಿಳಿ ನೀಲಿ ಆಕಾಶ, ಎಳೆ ಬೀಸುವ ತಂಗಾಳಿ, ಆಕಾಶದಲ್ಲಿ ಮಿನುಗುವ ನಕ್ಷತ್ರಗಳ ನಡುವೆ ಪ್ರಪೋಸ್‌ ಮಾಡಿ. ಅದಕ್ಕೆ ನೀವು ಬೀಚ್‌ನಂತಹ ಜಾಗ ಆಯ್ಕೆ ಮಾಡಿಕೊಳ್ಳಬಹುದು. ಅದು ನಿಮ್ಮಿಂದ ಸಾಧ್ಯವಾಗದೇ ಇದ್ದರೆ, ಮನೆಯ ಟೆರೆಸ್‌ನಲ್ಲೂ ಲೈಟಿಂಗ್ಸ್‌, ಹೂಗಳು, ಬೊಕೆಗಳನ್ನು ಇರಿಸಿ ಸುಂದರ ಪ್ರೇಮ ಲೋಕ ಸೃಷ್ಟಿಸಿ ಅಲ್ಲಿ ಪ್ರಪೋಸ್‌ ಮಾಡಬಹುದು. 
(1 / 8)

ಮರುಸೃಷ್ಟಿಸಿ: ನೀವು ಇದೇ ಮೊದಲ ಬಾರಿ ಪ್ರಪೋಸ್‌ ಮಾಡುತ್ತಿದ್ದರೆ, ಹೊಸಲೋಕ ಸೃಷ್ಟಿಸಿ, ಅಲ್ಲಿ ನಿಮ್ಮ ಸಂಗಾತಿ ಎಂದೂ ಮರೆಯದ ರೀತಿ ಪ್ರಪೋಸ್‌ ಮಾಡಿ. ನೀವು ಈಗಾಗಲೇ ಪ್ರೀತಿಯಲ್ಲಿ ಬಿದ್ದವರು ಅಥವಾ ಮದುವೆಯಾದರೂ ಆಗಿದ್ದರೆ, ನೀವಿಬ್ಬರು ಮೊದಲ ಬಾರಿ ಭೇಟಿಯಾದ ಜಾಗಕ್ಕೆ ನಿಮ್ಮ ಸಂಗಾತಿಯನ್ನು ಕರೆದ್ಯೊಯ್ದು ಸರ್ಪ್ರೈಸ್‌ ನೀಡಬಹುದು. ಆರಂಭದ ದಿನದಿಂದ ಇಂದಿನವರೆಗೆ ಏನೇನಾಯ್ತು ಆ ಘಟನೆಗಳಲ್ಲಿ ಮೋಸ್ಟ್‌ ಫೇವರಿಟ್‌ ಎನ್ನುವ ಘಟನೆಗಳನ್ನು ಮರುಕಳಿಸುವಂತೆ ಮಾಡಬಹುದು. ಮೊದಲು ಪ್ರಪೋಸ್‌ ಮಾಡಿದ ಜಾಗದಲ್ಲೇ ಇನ್ನೊಮ್ಮೆ ಮಂಡಿಯೂರಿ ಪ್ರೇಮ ನಿವೇದನೆ ಮಾಡಿ, ಮತ್ತೆ ಅವರ ಮನ ಗೆಲ್ಲಬಹುದು. 
(2 / 8)

ಮನೆಯಲ್ಲೇ ಅಚ್ಚರಿ ಪಡುವಂತೆ ಪ್ರಪೋಸ್‌ ಮಾಡಿ: ಪ್ರಪೋಸ್‌ ಡೇ ದಿನದಂದು ಹೊಸತಾಗಿ ಪ್ರಪೋಸ್‌ ಮಾಡುವವರಿಗೆ ಮಾತ್ರವಲ್ಲ, ಈಗಾಗಲೇ ಪ್ರೀತಿಯಲ್ಲಿ ಇರುವವರು, ಮದುವೆಯಾದವರೂ ಕೂಡ ತಮ್ಮ ಸಂಗಾತಿಗೆ ಅಚ್ಚರಿ ನೀಡುವಂತೆ ಪ್ರಪೋಸ್‌ ಮಾಡಬಹುದು. ಮನೆಯ ಕೋಣೆಯನ್ನೇ ಬಲೂನ್‌, ಹೂಗಳು, ಬೊಂಬೆಗಳಿಂದ ಭಿನ್ನವಾಗಿ ಅಲಂಕರಿಸಬಹುದು. ಅಲ್ಲಿ ಐ ಲವ್‌ ಯು ಎಂದು ಬರೆದಿರುವ ಬೋರ್ಡ್‌ ಅಂಟಿಸಬಹುದು. ಅವರಿಗೆ ತಿಳಿಯದಂತೆ ಈ ಸೆಟ್‌ಅಪ್‌ ಮಾಡಿ, ಅವರು ಬಂದಾಗ ಸರ್ಪ್ರೈಸ್‌ ನೀಡಬಹುದು. ಅದು ನಿಮ್ಮ ಸಂಗಾತಿಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ. 
(3 / 8)

ಸ್ಪೆಷಲ್‌ ಜಾಗ ಹುಡುಕಿ: ನಿಮ್ಮ ಸಂಗಾತಿ ಪ್ರವಾಸಪ್ರೇಮಿಯಾಗಿದ್ದರೆ, ನೀವು ಈ ಬಾರಿ ಅವರಿಷ್ಟದ ಜಾಗಕ್ಕೆ ಕರೆದ್ಯೊಯ್ದು ಪ್ರಪೋಸ್‌ ಮಾಡಬಹುದು. ಕಡಲತೀರ, ಜಲಪಾತ, ದೇವಸ್ಥಾನ, ಬೆಟ್ಟ-ಗುಡ್ಡ ಹೀಗೆ ಅವರಿಗೆ ಏನಿಷ್ಟ ಎಂಬುದನ್ನು ಮೊದಲೇ ತಿಳಿದುಕೊಳ್ಳಿ. ನಂತರ ಅಂತಹ ಜಾಗಕ್ಕೆ ಕರೆದುಕೊಂಡು ಹೋಗಿ ಪ್ರಪೋಸ್‌ ಮಾಡಿ. ಅಲ್ಲೂ ಕೂಡ ವಿಶೇಷ ಎನ್ನಿಸುವ ರೀತಿ ರಿಂಗ್‌ ತೊಡಿಸಿ, ಪ್ರಪೋಸ್‌ ಮಾಡಿ ಅವರ ಹೃದಯ ಗೆಲ್ಲಬಹುದು. 
(4 / 8)

ಪಾರ್ಕ್‌ನಲ್ಲಿ ವಾಕ್‌ಗೆಂದು ಕರೆದ್ಯೊಯ್ದು ಮಾತನಾಡುವ ಮಧ್ಯೆ ಮಂಡಿಯೂರಿ ಪ್ರಪೋಸ್‌ ಮಾಡಿ ಬಿಗ್‌ ಸರ್ಪ್ರೈಸ್‌ ನೀಡಬಹುದು. ಇದು ಸರಳ ಅನ್ನಿಸಿದ್ರೂ ಹಲವರಿಗೆ ಈ ರೀತಿ ಪ್ರಪೋಸ್‌ ಮಾಡುವುದು ಇಷ್ಟವಾಗುತ್ತದೆ. 
(5 / 8)

ರೆಸ್ಟೊರೆಂಟ್‌ಗೆ ಕರೆದ್ಯೊಯ್ದು ಡಿನ್ನರ್‌ ಮಧ್ಯೆ, ಸರ್ಪೈಸಿಂಗ್‌ ಆಗಿ ರಿಂಗ್‌ ತೊಡಿಸಿ ಪ್ರಪೋಸ್‌ ಮಾಡಬಹುದು. ಕ್ಯಾಂಡಲ್‌ ಲೈಟ್‌ ಡಿನ್ನರ್‌ ಆಯೋಜಿಸಿ ಪ್ರಪೋಸ್‌ ಮಾಡಬಹುದು.  
(6 / 8)

ಜೊತೆಯಾಗಿ ಲಾಂಗ್‌ಡ್ರೈವ್‌ ಹೋಗಿ ಮಾರ್ಗ ಮಧ್ಯೆದಲ್ಲಿ ವಿಶಾಲವಾದ ಜಾಗದಲ್ಲಿ ಕಾರು ಅಥವಾ ಬೈಕ್‌ ನಿಲ್ಲಿಸಿ ಪ್ರಪೋಸ್‌ ಮಾಡಿ, ನಿಮ್ಮ ಸಂಗಾತಿಯ ಮನ ಗೆಲ್ಲಬಹುದು. 
(7 / 8)

ಪಾರ್ಕ್‌ನಲ್ಲಿ ವಾಕ್‌ಗೆ ಕರೆದ್ಯೊಯ್ದು ಮಾತನಾಡುವ ಮಧ್ಯೆ ಮಂಡಿಯೂರಿ ಪ್ರಪೋಸ್‌ ಮಾಡಿ ಬಿಗ್‌ ಸರ್ಪ್ರೈಸ್‌ ನೀಡಬಹುದು. 
(8 / 8)

    ಹಂಚಿಕೊಳ್ಳಲು ಲೇಖನಗಳು