logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಿವೀಸ್‌ ವಿರುದ್ಧ ಕಣಕ್ಕಿಳಿದು ವಿಶೇಷ ಮೈಲಿಗಲ್ಲು ತಲುಪಿದ ವಿರಾಟ್; ಈ ವಿಶ್ವಕಪ್ ದಾಖಲೆ ಮಾಡಿದ ಮೊದಲ ಭಾರತೀಯ

ಕಿವೀಸ್‌ ವಿರುದ್ಧ ಕಣಕ್ಕಿಳಿದು ವಿಶೇಷ ಮೈಲಿಗಲ್ಲು ತಲುಪಿದ ವಿರಾಟ್; ಈ ವಿಶ್ವಕಪ್ ದಾಖಲೆ ಮಾಡಿದ ಮೊದಲ ಭಾರತೀಯ

Nov 15, 2023 04:02 PM IST

India vs New Zealand World Cup 2023 Semi-Final: ಏಕದಿನ ವಿಶ್ವಕಪ್‌ನಲ್ಲಿ ಇದಕ್ಕೂ ಮೊದಲು ವಿಶ್ವದ ನಾಲ್ವರು ಕ್ರಿಕೆಟಿಗರು ಮಾತ್ರ ತಲುಪಿದ್ದ ಮೈಲಿಗಲ್ಲನ್ನು ವಿರಾಟ್ ತಲುಪಿದ್ದಾರೆ.  ಕೊಹ್ಲಿ ಜೊತೆಗೆ ಕಿವೀಸ್‌ ನಾಯಕ ವಿಲಿಯಮ್ಸನ್‌ ಕೂಡಾ ಈ ರೆಕಾರ್ಡ್‌ ಮಾಡಿದ್ದಾರೆ. ವಿಶೇಷವೆಂದರೆ ಈ ದಾಖಲೆ ಮಾಡಿದ ಮೊದಲ ಭಾರತೀಯ ವಿರಾಟ್.

  • India vs New Zealand World Cup 2023 Semi-Final: ಏಕದಿನ ವಿಶ್ವಕಪ್‌ನಲ್ಲಿ ಇದಕ್ಕೂ ಮೊದಲು ವಿಶ್ವದ ನಾಲ್ವರು ಕ್ರಿಕೆಟಿಗರು ಮಾತ್ರ ತಲುಪಿದ್ದ ಮೈಲಿಗಲ್ಲನ್ನು ವಿರಾಟ್ ತಲುಪಿದ್ದಾರೆ.  ಕೊಹ್ಲಿ ಜೊತೆಗೆ ಕಿವೀಸ್‌ ನಾಯಕ ವಿಲಿಯಮ್ಸನ್‌ ಕೂಡಾ ಈ ರೆಕಾರ್ಡ್‌ ಮಾಡಿದ್ದಾರೆ. ವಿಶೇಷವೆಂದರೆ ಈ ದಾಖಲೆ ಮಾಡಿದ ಮೊದಲ ಭಾರತೀಯ ವಿರಾಟ್.
2023ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ವಾಂಖೆಡೆಯಲ್ಲಿ ಮೈದಾನಕ್ಕಿಳಿಯುವುದರೊಂದಿಗೆ ವಿರಾಟ್ ಕೊಹ್ಲಿ ಅಭೂತಪೂರ್ವ ವೈಯಕ್ತಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಈ ಹಿಂದೆ ವಿಶ್ವದ ಕೇವಲ ನಾಲ್ವರು ಕ್ರಿಕೆಟಿಗರ ಹೆಸರಿನಲ್ಲಿದ್ದ ಇಂಥ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ. ಕೊಹ್ಲಿ ಜೊತೆಗೆ ಎದುರಾಳಿ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಕೂಡಾ ಈ ಪಟ್ಟಿಯಲ್ಲಿ ಆರನೆಯವರಾಗಿ ಕಾಣಿಸಿಕೊಂಡಿದ್ದಾರೆ. ವಿರಾಟ್ ಏಕದಿನ ಸ್ವರೂಪದಲ್ಲಿ ಅತಿ ಹೆಚ್ಚು 4 ವಿಶ್ವಕಪ್ ಸೆಮಿಫೈನಲ್‌ಗಳಲ್ಲಿ ಕಾಣಿಸಿಕೊಂಡ ಜಂಟಿ ವಿಶ್ವದಾಖಲೆ ನಿರ್ಮಿಸಿದ್ದಾರೆ. 2011, 2015, 2019ರ ವಿಶ್ವಕಪ್‌ ಬಳಿಕ, ಇದೀಗ 2023ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಕೊಹ್ಲಿ ಆಡಿದ್ದಾರೆ. ಇಂಥಾ ಸಾಧನೆ ಮಾಡಿದ ಭಾರತದ ಮೊದಲ ಕ್ರಿಕೆಟಿಗ ಎಂಬ ಹಿರಿಮೆ ಕೊಹ್ಲಿಯದ್ದು.
(1 / 7)
2023ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ವಾಂಖೆಡೆಯಲ್ಲಿ ಮೈದಾನಕ್ಕಿಳಿಯುವುದರೊಂದಿಗೆ ವಿರಾಟ್ ಕೊಹ್ಲಿ ಅಭೂತಪೂರ್ವ ವೈಯಕ್ತಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಈ ಹಿಂದೆ ವಿಶ್ವದ ಕೇವಲ ನಾಲ್ವರು ಕ್ರಿಕೆಟಿಗರ ಹೆಸರಿನಲ್ಲಿದ್ದ ಇಂಥ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ. ಕೊಹ್ಲಿ ಜೊತೆಗೆ ಎದುರಾಳಿ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಕೂಡಾ ಈ ಪಟ್ಟಿಯಲ್ಲಿ ಆರನೆಯವರಾಗಿ ಕಾಣಿಸಿಕೊಂಡಿದ್ದಾರೆ. ವಿರಾಟ್ ಏಕದಿನ ಸ್ವರೂಪದಲ್ಲಿ ಅತಿ ಹೆಚ್ಚು 4 ವಿಶ್ವಕಪ್ ಸೆಮಿಫೈನಲ್‌ಗಳಲ್ಲಿ ಕಾಣಿಸಿಕೊಂಡ ಜಂಟಿ ವಿಶ್ವದಾಖಲೆ ನಿರ್ಮಿಸಿದ್ದಾರೆ. 2011, 2015, 2019ರ ವಿಶ್ವಕಪ್‌ ಬಳಿಕ, ಇದೀಗ 2023ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಕೊಹ್ಲಿ ಆಡಿದ್ದಾರೆ. ಇಂಥಾ ಸಾಧನೆ ಮಾಡಿದ ಭಾರತದ ಮೊದಲ ಕ್ರಿಕೆಟಿಗ ಎಂಬ ಹಿರಿಮೆ ಕೊಹ್ಲಿಯದ್ದು.(ICC Twitter)
ವಿರಾಟ್ ಜೊತೆಗೆ ಇದೇ ಸೆಮಿಫೈನಲ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಕೂಡ ವಿಶೇಷ ಮೈಲಿಗಲ್ಲು ಸ್ಥಾಪಿಸಿದರು. ಕಿವೀಸ್ ನಾಯಕ ಕೊಹ್ಲಿಯಂತೆ 2011, 2015 ಮತ್ತು 2019ರ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಆಡಿದ್ದಾರೆ.
(2 / 7)
ವಿರಾಟ್ ಜೊತೆಗೆ ಇದೇ ಸೆಮಿಫೈನಲ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಕೂಡ ವಿಶೇಷ ಮೈಲಿಗಲ್ಲು ಸ್ಥಾಪಿಸಿದರು. ಕಿವೀಸ್ ನಾಯಕ ಕೊಹ್ಲಿಯಂತೆ 2011, 2015 ಮತ್ತು 2019ರ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಆಡಿದ್ದಾರೆ.(AFP)
ಪಾಕ್‌ ಮಾಜಿ ನಾಯಕ ಇಮ್ರಾನ್ ಖಾನ್, ನಾಲ್ಕು ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯಗಳಲ್ಲಿ ಆಡಿದ ವಿಶ್ವದ ಮೊದಲ ಕ್ರಿಕೆಟಿಗ. ಅವರು 1979, 1983, 1987 ಮತ್ತು 1992ರ ವಿಶ್ವಕಪ್‌ ಸೆಮಿಫೈನಲ್‌ಗಳಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದರು.
(3 / 7)
ಪಾಕ್‌ ಮಾಜಿ ನಾಯಕ ಇಮ್ರಾನ್ ಖಾನ್, ನಾಲ್ಕು ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯಗಳಲ್ಲಿ ಆಡಿದ ವಿಶ್ವದ ಮೊದಲ ಕ್ರಿಕೆಟಿಗ. ಅವರು 1979, 1983, 1987 ಮತ್ತು 1992ರ ವಿಶ್ವಕಪ್‌ ಸೆಮಿಫೈನಲ್‌ಗಳಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದರು.(Reuters)
ಮಾಜಿ ಆಸೀಸ್ ನಾಯಕ ರಿಕಿ ಪಾಂಟಿಂಗ್ ಕೂಡ ನಾಲ್ಕು ಏಕದಿನ ವಿಶ್ವಕಪ್ ಸೆಮಿಫೈನಲ್‌ಗಳಲ್ಲಿ ಆಡಿದ್ದಾರೆ. ಅವರು 1996, 1999, 2003 ಮತ್ತು 2007ರ ವಿಶ್ವಕಪ್‌ಗಳ ಕೊನೆಯ ನಾಲ್ಕು ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದಾರೆ.
(4 / 7)
ಮಾಜಿ ಆಸೀಸ್ ನಾಯಕ ರಿಕಿ ಪಾಂಟಿಂಗ್ ಕೂಡ ನಾಲ್ಕು ಏಕದಿನ ವಿಶ್ವಕಪ್ ಸೆಮಿಫೈನಲ್‌ಗಳಲ್ಲಿ ಆಡಿದ್ದಾರೆ. ಅವರು 1996, 1999, 2003 ಮತ್ತು 2007ರ ವಿಶ್ವಕಪ್‌ಗಳ ಕೊನೆಯ ನಾಲ್ಕು ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದಾರೆ.(PTI)
ಆಸ್ಟ್ರೇಲಿಯಾದ ದಿಗ್ಗಜ ವೇಗಿ ಗ್ಲೆನ್ ಮೆಕ್‌ಗ್ರಾತ್ ಅವರು ಪಾಂಟಿಂಗ್ ಅವರಂತೆ ನಾಲ್ಕು ಏಕದಿನ ವಿಶ್ವಕಪ್ ಸೆಮಿಫೈನಲ್‌ಗಳಲ್ಲಿ ಆಡಿದ್ದಾರೆ. ಅವರು 1996, 1999, 2003 ಮತ್ತು 2007ರ ವಿಶ್ವಕಪ್‌ಗಳ ಸೆಮೀಸ್‌ನಲ್ಲಿ ಕಾಂಗರೂಗಳ ಪರ ಕಣಕ್ಕಿಳಿದಿದ್ದರು.
(5 / 7)
ಆಸ್ಟ್ರೇಲಿಯಾದ ದಿಗ್ಗಜ ವೇಗಿ ಗ್ಲೆನ್ ಮೆಕ್‌ಗ್ರಾತ್ ಅವರು ಪಾಂಟಿಂಗ್ ಅವರಂತೆ ನಾಲ್ಕು ಏಕದಿನ ವಿಶ್ವಕಪ್ ಸೆಮಿಫೈನಲ್‌ಗಳಲ್ಲಿ ಆಡಿದ್ದಾರೆ. ಅವರು 1996, 1999, 2003 ಮತ್ತು 2007ರ ವಿಶ್ವಕಪ್‌ಗಳ ಸೆಮೀಸ್‌ನಲ್ಲಿ ಕಾಂಗರೂಗಳ ಪರ ಕಣಕ್ಕಿಳಿದಿದ್ದರು.(Reuters)
ಶ್ರೀಲಂಕಾದ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ 1996, 2003, 2007 ಮತ್ತು 2011ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಡಿದ್ದರು.
(6 / 7)
ಶ್ರೀಲಂಕಾದ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ 1996, 2003, 2007 ಮತ್ತು 2011ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಡಿದ್ದರು.(ICC)
ಕಿವೀಸ್‌ ಮಾಜಿ ನಾಯಕ ರಾಸ್ ಟೇಲರ್ ನಾಲ್ಕು ವಿಶ್ವಕಪ್ ಸೆಮಿಫೈನಲ್‌ಗಳಲ್ಲಿ ಆಡಿದ ಮೊದಲ ನ್ಯೂಜಿಲ್ಯಾಂಡ್ ಕ್ರಿಕೆಟಿಗ. ಅವರು 2007, 2011, 2015 ಮತ್ತು 2019ರಲ್ಲಿ ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯಗಳಲ್ಲಿ ಆಡಿದ್ದರು.
(7 / 7)
ಕಿವೀಸ್‌ ಮಾಜಿ ನಾಯಕ ರಾಸ್ ಟೇಲರ್ ನಾಲ್ಕು ವಿಶ್ವಕಪ್ ಸೆಮಿಫೈನಲ್‌ಗಳಲ್ಲಿ ಆಡಿದ ಮೊದಲ ನ್ಯೂಜಿಲ್ಯಾಂಡ್ ಕ್ರಿಕೆಟಿಗ. ಅವರು 2007, 2011, 2015 ಮತ್ತು 2019ರಲ್ಲಿ ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯಗಳಲ್ಲಿ ಆಡಿದ್ದರು.(AFP)

    ಹಂಚಿಕೊಳ್ಳಲು ಲೇಖನಗಳು