logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಾಷಿಂಗ್ಟನ್ ಸುಂದರ್ ಇನ್, ರಜತ್ ಪಾಟೀದಾರ್ ಪದಾರ್ಪಣೆ; ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ

ವಾಷಿಂಗ್ಟನ್ ಸುಂದರ್ ಇನ್, ರಜತ್ ಪಾಟೀದಾರ್ ಪದಾರ್ಪಣೆ; ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ

Jan 30, 2024 10:00 AM IST

India Squad For 2nd Test vs England: ವಿಶಾಖಪಟ್ಟಣದಲ್ಲಿ ಫೆ. 2ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ದೊಡ್ಡ ಹೊಡೆತ ಬಿದ್ದಿದೆ. ಅನುಭವಿ ಆಟಗಾರರಾದ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಪ್ರಮುಖ ಪಂದ್ಯದಲ್ಲಿ ಭಾರತ ಆಡುವ ಬಳಗದಲ್ಲಿ ಹಲವು ಬದಲಾವಣೆಗಳಾಲಿವೆ.

  • India Squad For 2nd Test vs England: ವಿಶಾಖಪಟ್ಟಣದಲ್ಲಿ ಫೆ. 2ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ದೊಡ್ಡ ಹೊಡೆತ ಬಿದ್ದಿದೆ. ಅನುಭವಿ ಆಟಗಾರರಾದ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಪ್ರಮುಖ ಪಂದ್ಯದಲ್ಲಿ ಭಾರತ ಆಡುವ ಬಳಗದಲ್ಲಿ ಹಲವು ಬದಲಾವಣೆಗಳಾಲಿವೆ.
ಜಡೇಜಾ ಮತ್ತು ರಾಹುಲ್ ಬದಲಿಗೆ ಭಾರತ ತಂಡಕ್ಕೆ ಸೌರಭ್ ಕುಮಾರ್, ಸರ್ಫರಾಜ್ ಖಾನ್ ಮತ್ತು ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಲಾಗಿದೆ. 
(1 / 5)

ರವೀಂದ್ರ ಜಡೇಜಾ ಬದಲಿಗೆ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲಿ ನೆರವಾಗಲು ವಾಷಿಂಗ್ಟನ್ ಸುಂದರ್ ಆಡುವ ಸಾಧ್ಯತೆಯಿದೆ. ತಂಡವು ಬ್ಯಾಟಿಂಗ್‌ನಲ್ಲಿ ಮತ್ತಷ್ಟು ಬಲಿಷ್ಠವಾಗುವ ಗುರಿ ಇಟ್ಟುಕೊಂಡಿದೆ. 
(2 / 5)

ಈಗಾಗಲೇ ವಿರಾಟ್ ಕೊಹ್ಲಿ ಅನುಪಸ್ಥಿತಿಯಿಂದ ಭಾರತ ತಂಡದ ಬ್ಯಾಟಿಂಗ್ ಲೈನಪ್‌ ಬಲ ಕಳೆದುಕೊಂಡಿದೆ. ಅತ್ತ ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಇಬ್ಬರೂ ಫಾರ್ಮ್‌‌ ಕಳೆದುಕೊಂಡಿದ್ದಾರೆ. ಇದೀಗ ಎರಡನೇ ಟೆಸ್ಟ್‌ನಿಂದ ಶುಭ್ಮನ್ ಮತ್ತು ಶ್ರೇಯಸ್ ಇಬ್ಬರೂ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಅತ್ತ ರಜತ್ ಪಾಟೀದಾರ್ ಅಥವಾ ಸರ್ಫರಾಜ್ ಖಾನ್ ಟೆಸ್ಟ್‌ ಪದಾರ್ಪಣೆಯ ಅವಕಾಶ ಪಡೆಯುವ ಸಾಧ್ಯತೆ ಇದೆ. 
(3 / 5)

ಕೆಎಸ್ ಭರತ್, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತ. ಆದರೆ, ಸ್ಪಿನ್ ಸ್ನೇಹಿ ಟ್ರ್ಯಾಕ್‌ನಲ್ಲಿ ಒಬ್ಬ ವೇಗಿ ಮತ್ತು ನಾಲ್ವರು ಸ್ಪಿನ್ನರ್‌ಗಳಿಗಗೆ ಮಣೆ ಹಾಕಿದರೂ ಅಚ್ಚರಿಯಿಲ್ಲ. ಹೀಗಾದರೆ ಸಿರಾಜ್ ಅವರನ್ನು ಕೈಬಿಟ್ಟು, ಕುಲ್ದೀಪ್‌ ತಂಡ ಸೇರಿಕೊಳ್ಳಲಿದ್ದಾರೆ.
(4 / 5)

2ನೇ ಟೆಸ್ಟ್‌ ಪಂದ್ಯಕ್ಕೆ ಭಾರತ ಸಂಭಾವ್ಯ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರಜತ್ ಪಾಟೀದಾರ್, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್‌ ಕೀಪರ್), ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್/ಕುಲ್ದೀಪ್ ಯಾದವ್
(5 / 5)

    ಹಂಚಿಕೊಳ್ಳಲು ಲೇಖನಗಳು