logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Health Tips: ಉರಿಯೂತವನ್ನು ಕಡೆಗಣಿಸಬೇಡಿ, ದೀರ್ಘಕಾಲದ ಉರಿಯೂತ ತಗ್ಗಿಸಲು ಇಲ್ಲಿದೆ ಅಮೂಲ್ಯ ಸಲಹೆಗಳು

Health Tips: ಉರಿಯೂತವನ್ನು ಕಡೆಗಣಿಸಬೇಡಿ, ದೀರ್ಘಕಾಲದ ಉರಿಯೂತ ತಗ್ಗಿಸಲು ಇಲ್ಲಿದೆ ಅಮೂಲ್ಯ ಸಲಹೆಗಳು

Jan 09, 2024 08:02 PM IST

Tips to reduce chronic inflammation: ಉರಿಯೂತ ಬಹುತೇಕರಿಗೆ ಕಾಡುವ ತೊಂದರೆ. ದೀರ್ಘಕಾಲದಿಂದ ಉರಿಯೂತ ನಿಮ್ಮನ್ನು ಕಾಡುತ್ತಿದ್ದರೆ ನಿಮ್ಮ ಆಹಾರ ಪದ್ಧತಿಯಲ್ಲಿ ತುಸು ಬದಲಾವಣೆ ಮಾಡಿಕೊಳ್ಳುವ ಮೂಲಕ ಗುಣಮುಖರಾಗಬಹುದು. ಹಣ್ಣು, ತರಕಾರಿ ಸೇವನೆ ಮತ್ತು ಸಂಸ್ಕರಣೆ ಮಾಡದ ಆಹಾರ ಸೇವನೆ ಮೂಲಕ ಉರಿಯೂತಕ್ಕೆ ಗುಡ್‌ಬೈ ಹೇಳಬಹುದು.

  • Tips to reduce chronic inflammation: ಉರಿಯೂತ ಬಹುತೇಕರಿಗೆ ಕಾಡುವ ತೊಂದರೆ. ದೀರ್ಘಕಾಲದಿಂದ ಉರಿಯೂತ ನಿಮ್ಮನ್ನು ಕಾಡುತ್ತಿದ್ದರೆ ನಿಮ್ಮ ಆಹಾರ ಪದ್ಧತಿಯಲ್ಲಿ ತುಸು ಬದಲಾವಣೆ ಮಾಡಿಕೊಳ್ಳುವ ಮೂಲಕ ಗುಣಮುಖರಾಗಬಹುದು. ಹಣ್ಣು, ತರಕಾರಿ ಸೇವನೆ ಮತ್ತು ಸಂಸ್ಕರಣೆ ಮಾಡದ ಆಹಾರ ಸೇವನೆ ಮೂಲಕ ಉರಿಯೂತಕ್ಕೆ ಗುಡ್‌ಬೈ ಹೇಳಬಹುದು.
ಉರಿಯೂತವು ದೇಹದ ನೈಸರ್ಗಿಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪ್ರಚೋದಿಸಿದಾಗ ಉಂಟಾಗುವ ಸ್ಥಿತಿ. ಇದು ದೀರ್ಘಕಾಲದಿಂದ ಕಾಡುವ ಮೂಲಕ ಸಾಕಷ್ಟು ಜನರು ಯಾತನೆ ಅನುಭವಿಸುತ್ತಾರೆ. ಈ ದೀರ್ಘಕಾಲದ ಉರಿಯೂತ ಕಡಿಮೆ ಮಾಡಲು ತಜ್ಞರಾದ ಅಂಜಲಿ ಮುಖರ್ಜಿ ಅವರು ಕೆಲವು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. "ನಿಮ್ಮ ಉತ್ತಮ ಆರೋಗ್ಯಕ್ಕಾಗಿ, ದೀರ್ಘಕಾಲದ ಉರಿಯೂತ ಕಡಿಮೆ ಮಾಡಲು ನಾನು ಹೇಳುವ ಕೆಲವು ಸರಳ ವಿಧಾನವನ್ನು ಅನುಸರಿಸಿ" ಎಂದು ಅವರು ಹೇಳಿದ್ದಾರೆ. 
(1 / 7)
ಉರಿಯೂತವು ದೇಹದ ನೈಸರ್ಗಿಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪ್ರಚೋದಿಸಿದಾಗ ಉಂಟಾಗುವ ಸ್ಥಿತಿ. ಇದು ದೀರ್ಘಕಾಲದಿಂದ ಕಾಡುವ ಮೂಲಕ ಸಾಕಷ್ಟು ಜನರು ಯಾತನೆ ಅನುಭವಿಸುತ್ತಾರೆ. ಈ ದೀರ್ಘಕಾಲದ ಉರಿಯೂತ ಕಡಿಮೆ ಮಾಡಲು ತಜ್ಞರಾದ ಅಂಜಲಿ ಮುಖರ್ಜಿ ಅವರು ಕೆಲವು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. "ನಿಮ್ಮ ಉತ್ತಮ ಆರೋಗ್ಯಕ್ಕಾಗಿ, ದೀರ್ಘಕಾಲದ ಉರಿಯೂತ ಕಡಿಮೆ ಮಾಡಲು ನಾನು ಹೇಳುವ ಕೆಲವು ಸರಳ ವಿಧಾನವನ್ನು ಅನುಸರಿಸಿ" ಎಂದು ಅವರು ಹೇಳಿದ್ದಾರೆ. (Unsplash)
ಹಣ್ಣುಗಳು, ತರಕಾರಿಗಳು ಮತ್ತು ಸಂಸ್ಕರಿಸದ ಆಹಾರ ಪದಾರ್ಥಗಳನ್ನು ಒಳಗೊಂಡ ಉರಿಯೂತ ಕಡಿಮೆ ಮಾಡುವ ಆಹಾರವನ್ನು ಹೊಂದಿರುವುದು ದೀರ್ಘಕಾಲದ ಉರಿಯೂತವನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
(2 / 7)
ಹಣ್ಣುಗಳು, ತರಕಾರಿಗಳು ಮತ್ತು ಸಂಸ್ಕರಿಸದ ಆಹಾರ ಪದಾರ್ಥಗಳನ್ನು ಒಳಗೊಂಡ ಉರಿಯೂತ ಕಡಿಮೆ ಮಾಡುವ ಆಹಾರವನ್ನು ಹೊಂದಿರುವುದು ದೀರ್ಘಕಾಲದ ಉರಿಯೂತವನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.(Unsplash)
ಸಂಸ್ಕರಿಸಿದ ಸಕ್ಕರೆ, ಸಂಸ್ಕರಿಸಿದ ಆಹಾರ ಪದಾರ್ಥಗಳು ಮತ್ತು ಆಲ್ಕೋಹಾಲ್ ಸೇವನೆ ತಪ್ಪಿಸುವ ಮೂಲಕ ಉರಿಯೂತದಿಂದ ಪಾರಾಗಬಹುದು ಎಂದು ಅವರು ಟಿಪ್ಸ್‌ ನೀಡಿದ್ದಾರೆ.
(3 / 7)
ಸಂಸ್ಕರಿಸಿದ ಸಕ್ಕರೆ, ಸಂಸ್ಕರಿಸಿದ ಆಹಾರ ಪದಾರ್ಥಗಳು ಮತ್ತು ಆಲ್ಕೋಹಾಲ್ ಸೇವನೆ ತಪ್ಪಿಸುವ ಮೂಲಕ ಉರಿಯೂತದಿಂದ ಪಾರಾಗಬಹುದು ಎಂದು ಅವರು ಟಿಪ್ಸ್‌ ನೀಡಿದ್ದಾರೆ.(Unsplash)
ಸಾಲ್ಮನ್ ಮತ್ತು ಸಾರ್ಡೀನ್‌ಗಳಂತಹ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇದು ದೀರ್ಘಕಾಲದ ಉರಿಯೂತವನ್ನು ಎದುರಿಸಲು ಪ್ರಮುಖ ಪೋಷಕಾಂಶವಾಗಿದೆ. ಹೀಗಾಗಿ ಇಂತಹ ಮೀನುಗಳ ಸೇವನೆ ಮಾಡಿ ಎಂದು ಅವರು ಹೇಳಿದ್ದಾರೆ. 
(4 / 7)
ಸಾಲ್ಮನ್ ಮತ್ತು ಸಾರ್ಡೀನ್‌ಗಳಂತಹ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇದು ದೀರ್ಘಕಾಲದ ಉರಿಯೂತವನ್ನು ಎದುರಿಸಲು ಪ್ರಮುಖ ಪೋಷಕಾಂಶವಾಗಿದೆ. ಹೀಗಾಗಿ ಇಂತಹ ಮೀನುಗಳ ಸೇವನೆ ಮಾಡಿ ಎಂದು ಅವರು ಹೇಳಿದ್ದಾರೆ. (Unsplash)
ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮತ್ತು ಉರಿಯೂತವನ್ನು ಹೆಚ್ಚಿಸಬಹುದು. ಬಿಳಿ ಬ್ರೆಡ್ ಮತ್ತು ಬಿಳಿ ಅಕ್ಕಿಯಂತಹ ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿ ಇಂತಹ ಕಾರ್ಬೋಹೈಡ್ರೇಟ್‌ ಸಮೃದ್ಧವಾಗಿದ್ದು, ಇಂತಹ ಆಹಾರ ಪದಾರ್ಥಗಳನ್ನು ತಪ್ಪಿಸಬೇಕು. 
(5 / 7)
ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮತ್ತು ಉರಿಯೂತವನ್ನು ಹೆಚ್ಚಿಸಬಹುದು. ಬಿಳಿ ಬ್ರೆಡ್ ಮತ್ತು ಬಿಳಿ ಅಕ್ಕಿಯಂತಹ ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿ ಇಂತಹ ಕಾರ್ಬೋಹೈಡ್ರೇಟ್‌ ಸಮೃದ್ಧವಾಗಿದ್ದು, ಇಂತಹ ಆಹಾರ ಪದಾರ್ಥಗಳನ್ನು ತಪ್ಪಿಸಬೇಕು. (Unsplash)
ಉರಿಯೂತ ತಗ್ಗಿಸಲು ದೈಹಿಕ ಚಟುವಟಿಕೆ ಕೂಡ ಬೇಕು. ನಮ್ಮ ದಿನನಿತ್ಯದ ದಿನಚರಿಯಲ್ಲಿ  ಈಜು, ಸೈಕ್ಲಿಂಗ್ ಅಥವಾ ವೇಗದ ನಡಿಗೆ ಇತ್ಯಾದಿ ಚಟುವಟಿಕೆ ಸೇರಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. 
(6 / 7)
ಉರಿಯೂತ ತಗ್ಗಿಸಲು ದೈಹಿಕ ಚಟುವಟಿಕೆ ಕೂಡ ಬೇಕು. ನಮ್ಮ ದಿನನಿತ್ಯದ ದಿನಚರಿಯಲ್ಲಿ  ಈಜು, ಸೈಕ್ಲಿಂಗ್ ಅಥವಾ ವೇಗದ ನಡಿಗೆ ಇತ್ಯಾದಿ ಚಟುವಟಿಕೆ ಸೇರಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. (Unsplash)
ಯೋಗ, ಧ್ಯಾನ ಮತ್ತು ದೀರ್ಘ ಉಸಿರಾಟವು ದೇಹದ ಒತ್ತಡವನ್ನು ಕಡಿಮೆ ಮಾಡಲು ಮತ್ತು ದೇಹವನ್ನು ವಿಶ್ರಾಂತಿಗೆ ಸಹಾಯ ಮಾಡುತ್ತದೆ, ಇದರಿಂದಾಗಿ ಉರಿಯೂತದ ಲಕ್ಷಣಗಳು ಕಡಿಮೆಯಾಗುತ್ತವೆ.  
(7 / 7)
ಯೋಗ, ಧ್ಯಾನ ಮತ್ತು ದೀರ್ಘ ಉಸಿರಾಟವು ದೇಹದ ಒತ್ತಡವನ್ನು ಕಡಿಮೆ ಮಾಡಲು ಮತ್ತು ದೇಹವನ್ನು ವಿಶ್ರಾಂತಿಗೆ ಸಹಾಯ ಮಾಡುತ್ತದೆ, ಇದರಿಂದಾಗಿ ಉರಿಯೂತದ ಲಕ್ಷಣಗಳು ಕಡಿಮೆಯಾಗುತ್ತವೆ.  (Unsplash)

    ಹಂಚಿಕೊಳ್ಳಲು ಲೇಖನಗಳು