logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Gukesh Net Worth: ವಿಶ್ವ ಚೆಸ್ ಚಾಂಪಿಯನ್ ಡಿ ಗುಕೇಶ್​ಗೆ ಸಿಕ್ತು 11 ಕೋಟಿ ಬಹುಮಾನ; 18ನೇ ವಯಸ್ಸಿಗೆ ಎಷ್ಟು ಕೋಟಿ ಒಡೆಯ?

Gukesh Net worth: ವಿಶ್ವ ಚೆಸ್ ಚಾಂಪಿಯನ್ ಡಿ ಗುಕೇಶ್​ಗೆ ಸಿಕ್ತು 11 ಕೋಟಿ ಬಹುಮಾನ; 18ನೇ ವಯಸ್ಸಿಗೆ ಎಷ್ಟು ಕೋಟಿ ಒಡೆಯ?

Dec 13, 2024 01:25 PM IST

Gukesh Net worth: ಭಾರತದ ಗುಕೇಶ್ ದೊಮ್ಮರಾಜು ಅವರು ವಿಶ್ವ ಚೆಸ್ ಚಾಂಪಿಯನ್ ಶಿಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅವರು ಅತ್ಯಂತ ಕಿರಿಯ ಚೆಸ್ ಚಾಂಪಿಯನ್ ಆಗಿದ್ದಾರೆ. ಹಾಗಿದ್ದರೆ ಅವರ ಆಸ್ತಿ ಎಷ್ಟಿದೆ? ಚೆಸ್ ಚಾಂಪಿಯನ್ ಆಗಿದ್ದಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?

  • Gukesh Net worth: ಭಾರತದ ಗುಕೇಶ್ ದೊಮ್ಮರಾಜು ಅವರು ವಿಶ್ವ ಚೆಸ್ ಚಾಂಪಿಯನ್ ಶಿಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅವರು ಅತ್ಯಂತ ಕಿರಿಯ ಚೆಸ್ ಚಾಂಪಿಯನ್ ಆಗಿದ್ದಾರೆ. ಹಾಗಿದ್ದರೆ ಅವರ ಆಸ್ತಿ ಎಷ್ಟಿದೆ? ಚೆಸ್ ಚಾಂಪಿಯನ್ ಆಗಿದ್ದಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?
ಚೆನ್ನೈ ಮೂಲದ ಗುಕೇಶ್ ದೊಮ್ಮರಾಜು ಅವರು ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ವಿಶ್ವ ಚೆಸ್ ಚಾಂಪಿಯನ್​ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಪ್ರಶಸ್ತಿ ಜಯಿಸಿದ ವಿಶ್ವದ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಮತ್ತು ವಿಶ್ವನಾಥನ್ ಆನಂದ್ ಅವರ ನಂತರ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
(1 / 5)
ಚೆನ್ನೈ ಮೂಲದ ಗುಕೇಶ್ ದೊಮ್ಮರಾಜು ಅವರು ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ವಿಶ್ವ ಚೆಸ್ ಚಾಂಪಿಯನ್​ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಪ್ರಶಸ್ತಿ ಜಯಿಸಿದ ವಿಶ್ವದ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಮತ್ತು ವಿಶ್ವನಾಥನ್ ಆನಂದ್ ಅವರ ನಂತರ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.(D Gukesh Instagram)
ಗುಕೇಶ್‌ಗಿಂತ ಮೊದಲು, ರಷ್ಯಾದ ಗ್ಯಾರಿ ಕಾಸ್ಪರೋವ್ ಅವರು 1985 ರಲ್ಲಿ 22ನೇ ವಯಸ್ಸಿನಲ್ಲಿ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದಿದ್ದರು. ಇದೀಗ ಗುಕೇಶ್ 18ನೇ ವಯಸ್ಸಿನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು 7.5-6.5 ರಿಂದ ಸೋಲಿಸುವ ಮೂಲಕ ದಾಖಲೆ ಬರೆದಿದ್ದಾರೆ.
(2 / 5)

ಈ ಹಿಂದೆ ವಿಶ್ವನಾಥನ್ ಆನಂದ್ ಅವರು ಒಟ್ಟು ಐದು ಬಾರಿ ಭಾರತಕ್ಕಾಗಿ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ಗುಕೇಶ್ 17ನೇ ವಯಸ್ಸಿನಲ್ಲಿ FIDE ಕ್ಯಾಂಡಿಡೇಟ್ಸ್ ಚೆಸ್ ಚಾಂಪಿಯನ್‌ಶಿಪ್ ಗೆದ್ದು ಅಲ್ಲಿಯೂ ದಾಖಲೆಯ ಬರೆದಿದ್ದರು.
(3 / 5)
ಈ ಹಿಂದೆ ವಿಶ್ವನಾಥನ್ ಆನಂದ್ ಅವರು ಒಟ್ಟು ಐದು ಬಾರಿ ಭಾರತಕ್ಕಾಗಿ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ಗುಕೇಶ್ 17ನೇ ವಯಸ್ಸಿನಲ್ಲಿ FIDE ಕ್ಯಾಂಡಿಡೇಟ್ಸ್ ಚೆಸ್ ಚಾಂಪಿಯನ್‌ಶಿಪ್ ಗೆದ್ದು ಅಲ್ಲಿಯೂ ದಾಖಲೆಯ ಬರೆದಿದ್ದರು.
ಮಾಧ್ಯಮ ವರದಿಗಳ ಪ್ರಕಾರ, ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಡಿ ಗುಕೇಶ್ ಅವರು 11 ಕೋಟಿ ರೂಪಾಯಿ ಬಹುಮಾನ ಪಡೆಯಲಿದ್ದಾರೆ. ಗುಕೇಶ್ ಅವರ ಆಸ್ತಿ 8.26 ಕೋಟಿ ರೂಪಾಯಿ. ಈಗ ಅವರ ಆಸ್ತಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಲಿದೆ.
(4 / 5)
ಮಾಧ್ಯಮ ವರದಿಗಳ ಪ್ರಕಾರ, ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಡಿ ಗುಕೇಶ್ ಅವರು 11 ಕೋಟಿ ರೂಪಾಯಿ ಬಹುಮಾನ ಪಡೆಯಲಿದ್ದಾರೆ. ಗುಕೇಶ್ ಅವರ ಆಸ್ತಿ 8.26 ಕೋಟಿ ರೂಪಾಯಿ. ಈಗ ಅವರ ಆಸ್ತಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಲಿದೆ.
 2006ರ ಮೇ 29 ರಂದು ಚೆನ್ನೈನಲ್ಲಿ ಜನಿಸಿದ ಡಿ ಗುಕೇಶ್ 7 ನೇ ವಯಸ್ಸಿನಲ್ಲಿ ಚೆಸ್ ಆಡಲು ಪ್ರಾರಂಭಿಸಿದರು. ಅವರು ಅಂತಾರಾಷ್ಟ್ರೀಯ ಚೆಸ್ ಆಟಗಾರ ಭಾಸ್ಕರ್ ನಾಗಯ್ಯ ಅವರಿಂದ ತರಬೇತಿ ಪಡೆದಿದ್ದಾರೆ. ಗುಕೇಶ್ ಅವರ ತಂದೆ ವೈದ್ಯರು ಮತ್ತು ತಾಯಿ ಮೈಕ್ರೋಬಯಾಲಜಿಸ್ಟ್.
(5 / 5)

    ಹಂಚಿಕೊಳ್ಳಲು ಲೇಖನಗಳು