logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Odi World Cup: ಏಕದಿನ‌ ವಿಶ್ವಕಪ್ ಇತಿಹಾಸದಲ್ಲಿ ಅತಿ‌ ಹೆಚ್ಚು ರನ್ ಗಳಿಸಿದ ಭಾರತದ ಟಾಪ್-10 ಆಟಗಾರರು ಇವರೇ; ಅಗ್ರಸ್ಥಾನದಲ್ಲಿ ಸಚಿನ್

ODI World Cup: ಏಕದಿನ‌ ವಿಶ್ವಕಪ್ ಇತಿಹಾಸದಲ್ಲಿ ಅತಿ‌ ಹೆಚ್ಚು ರನ್ ಗಳಿಸಿದ ಭಾರತದ ಟಾಪ್-10 ಆಟಗಾರರು ಇವರೇ; ಅಗ್ರಸ್ಥಾನದಲ್ಲಿ ಸಚಿನ್

Sep 21, 2023 07:58 PM IST

ODI World Cup 2023: ಭಾರತದಲ್ಲಿ ವಿಶ್ವಕಪ್ ಹಬ್ಬಕ್ಕೆ ಅಂತಿಮ ಹಂತದ ತಯಾರಿ ನಡೆಯುತ್ತಿದೆ. ಅಭಿಮಾನಿಗಳು ಭಾರತ ಟ್ರೋಫಿ ಗೆಲ್ಲುವ ಕನಸಿನಲ್ಲಿದ್ದಾರೆ‌. 2011ರ ನಂತರ ಎರಡು ಆವೃತ್ತಿಗಳಲ್ಲೂ ಭಾರತಕ್ಕೆ ಟ್ರೋಫಿ ಸೆಮಿಫೈನಲ್‌ನಲ್ಲಿ ಮುಗ್ಗರಿದೆ. ಇದೀಗ ತವರಿನಲ್ಲಿ ಮೆಗಾ ಈವೆಂಟ್ ನಡೆಯುತ್ತಿರುವ ಕಾರಣ ಅಭಿಮಾನಿಗಳ ನಿರೀಕ್ಷೆ ಮುಗಿಲೆತ್ತಕ್ಕೆ ಏರಿದೆ. 

  • ODI World Cup 2023: ಭಾರತದಲ್ಲಿ ವಿಶ್ವಕಪ್ ಹಬ್ಬಕ್ಕೆ ಅಂತಿಮ ಹಂತದ ತಯಾರಿ ನಡೆಯುತ್ತಿದೆ. ಅಭಿಮಾನಿಗಳು ಭಾರತ ಟ್ರೋಫಿ ಗೆಲ್ಲುವ ಕನಸಿನಲ್ಲಿದ್ದಾರೆ‌. 2011ರ ನಂತರ ಎರಡು ಆವೃತ್ತಿಗಳಲ್ಲೂ ಭಾರತಕ್ಕೆ ಟ್ರೋಫಿ ಸೆಮಿಫೈನಲ್‌ನಲ್ಲಿ ಮುಗ್ಗರಿದೆ. ಇದೀಗ ತವರಿನಲ್ಲಿ ಮೆಗಾ ಈವೆಂಟ್ ನಡೆಯುತ್ತಿರುವ ಕಾರಣ ಅಭಿಮಾನಿಗಳ ನಿರೀಕ್ಷೆ ಮುಗಿಲೆತ್ತಕ್ಕೆ ಏರಿದೆ. 
1983 ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಂಡಿರುವ ಭಾರತ ತಂಡದ ಪರ ಆಟಗಾರರು, ಕೆಲವನ್ನು ಹೊರತುಪಡಿಸಿ ಉಳಿದೆಲ್ಲಾ ಟೂರ್ನಿಗಳಲ್ಲೂ ಅಬ್ಬರಿಸಿದ್ದಾರೆ. ಉತ್ತಮ ಸ್ಕೋರ್ ಕೂಡ ಕಲೆ ಹಾಕಿರುವುದು ವಿಶೇಷ. ಹಾಗಾದರೆ ಇವರನ್ನೂ ಸೇರಿದಂತೆ 1975ರಿಂದ 2019ರವರೆಗೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಟಾಪ್-10 ಆಟಗಾರರು ಯಾರು ಎಂಬುದನ್ನು ನೋಡೋಣ.
(1 / 11)

1. ಒಡಿಐ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗೆ ಅಗ್ರಸ್ಥಾನ. ಅವರು ಒಟ್ಟು 6 ವಿಶ್ವಕಪ್‌ಗಳಲ್ಲಿ ಆಡಿದ್ದು, 45 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದಾರೆ. 15 ಅರ್ಧಶತಕ, 6 ಶತಕಗಳ ಸಹಿತ 2278 ರನ್ ಗಳಿಸಿದ್ದಾರೆ. ಇದು ಭಾರತದ ಪರ ಮಾತ್ರವಲ್ಲ, ವಿಶ್ವ ಕ್ರಿಕೆಟ್‌ನಲ್ಲೂ ಯಾರೂ ಇಷ್ಟು ರನ್ ಸಿಡಿಸಿಲ್ಲ. ಅವರ ಬ್ಯಾಟಿಂಗ್ ಸರಾಸರಿ 56.95.
(2 / 11)

2. ಸಚಿನ್ ನಂತರ ಸ್ಥಾನ ಪಡೆದವರು ಕ್ರಿಕೆಟ್‌ ಲೋಕದ ಕಿಂಗ್ ವಿರಾಟ್ ಕೊಹ್ಲಿ. ರನ್ ಸರದಾರನಾಗಿ ಹೊರ ಹೊಮ್ಮುತ್ತಿರುವ ಚೀಕು, ಈವರೆಗೂ 3 ವಿಶ್ವಕಪ್ ಆಡಿದ್ದಾರೆ. 2019ರ ಟೂರ್ನಿಯಲ್ಲಿ ಕ್ಯಾಪ್ಟನ್ ಕೂಡ ಆಗಿದ್ದರು. 26 ಪಂದ್ಯಗಳಲ್ಲಿ ಕೊಹ್ಲಿ 6 ಅರ್ಧಶತಕ, 2 ಶತಕಗಳ ನೆರವಿನಿಂದ 1030 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 46.81.
(3 / 11)

3. ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಶಕೆ ಆರಂಭಿಸಿದ ಮಾಜಿ ನಾಯಕ, ಬಂಗಾಳದ ಹುಲಿ ಎಂದೇ ಕರೆಸಿಕೊಳ್ಳುವ ದಾದಾ ಸೌರವ್ ಗಂಗೂಲಿ ಮೂರನೇ ಸ್ಥಾನದಲ್ಲಿದ್ದಾರೆ. ನಾಯಕನಾಗಿ, ಆಟಗಾರನಾಗಿ ಹಲವು ದಾಖಲೆಗಳ ಒಡೆಯನಾದ ಗಂಗೂಲಿ, ಒಟ್ಟು 21 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದಾರೆ. 55.88ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ ಈ ಅಗ್ರೆಸ್ಸಿವ್ ಕ್ಯಾಪ್ಟನ್, 1 ಶತಕ, 6 ಅರ್ಧಶತಕಗಳ ನೆರವಿನಿಂದ 1006 ರನ್ ಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ‌. ಭಾರತದ ಪರ ಮೊದಲು ಸಾವಿರ ರನ್ ಕಲೆ ಹಾಕಿರುವ ಎರಡನೇ ಆಟಗಾರ ಎನಿಸಿದ್ದಾರೆ. 
(4 / 11)

4. ಪ್ರಸ್ತುತ ಟೀಮ್ ಇಂಡಿಯಾ ನಾಯಕ, ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರು 2019ರಲ್ಲಿ ರನ್ ಹಬ್ಬವನ್ನೇ ಸೃಷ್ಟಿಸಿದ್ದರು. ಐತಿಹಾಸಿಕ ದಾಖಲೆ ಬರೆದಿದ್ದರು. ಪಂದ್ಯ ಪಂದ್ಯಕ್ಕೂ ಶತಕ ಸಿಡಿಸಿ ಮಿಂಚಿದ್ದರು. ಏಕದಿನ ವಿಶ್ವಕಪ್ ಇತಿಹಾಸದಲ್ಲಿ ರೋಹಿತ್ ಆಡಿರುವುದು 17 ಪಂದ್ಯಗಳು ಮಾತ್ರ. ಇಷ್ಟು ಪಂದ್ಯಗಳಲ್ಲಿ 65.20ರ‌  ಸರಾಸರಿಯಲ್ಲಿ 978 ರನ್ ಚಚ್ಚಿದ್ದಾರೆ. 6 ಶತಕ, 3 ಅರ್ಧಶತಕ ಸಿಡಿಸಿದ್ದಾರೆ. ಆದರೆ 2019ರ ವಿಶ್ವಕಪ್‌ನಲ್ಲೇ ರೋಹಿತ್ 5 ಶತಕ ಸಿಡಿದ್ದರು. ಸದ್ಯ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. 
(5 / 11)

5. ನಂತರದ 5 ಸ್ಥಾನದಲ್ಲಿ ಕರ್ನಾಟಕದ ಆಟಗಾರ, ಮಾಜಿ ನಾಯಕ ಹಾಗೂ ತಾಳ್ಮೆಗೆ ಮತ್ತೊಂದು ಹೆಸರು ಎಂದು ಕರೆಸಿಕೊಳ್ಳುವ ರಾಹುಲ್ ದ್ರಾವಿಡ್, ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಸೊಗಸಾದ ಆಟದ ಮೂಲಕ ಗಮನ ಸೆಳೆದಿದ್ದಾರೆ. ಈವರೆಗೂ ಅವರು ಆಡಿರುವ ಪಂದ್ಯಗಳ ಪೈಕಿ 61.42ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ ಮಾಜಿ ನಾಯಕ, 2 ಶತಕ, 6 ಅರ್ಧಶತಕ ಸಹಿತ 860 ರನ್ ಗಳಿಸಿದ್ದಾರೆ.
(6 / 11)

6. ಟೀಮ್ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ‌ಸೆಹ್ವಾಗ್, 6ನೇ ಸ್ಥಾನದಲ್ಲಿ ಇದ್ದಾರೆ. ಬರೀ ಬೌಂಡರಿಗಳ ಮೂಲಕವೇ ಬೌಲರ್‌ಗಳ‌ ಬೆಂಡೆತ್ತುತ್ತಿದ್ದ ವೀರೂ, ಏಕದಿನ ವಿಶ್ವಕಪ್‌ನಲ್ಲಿ 22 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಅವರು ಒಟ್ಟು 843 ರನ್ ಗಳಿಸಿದ್ದಾರೆ. 2 ಶತಕ, 3 ಮೂರು ಅರ್ಧಶತಕ ಸಿಡಿಸಿದ್ದಾರೆ. 38.31 ಬ್ಯಾಟಿಂಗ್ ಸರಾಸರಿ ಇದೆ. 
(7 / 11)

7. ಟೀಮ್ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಕೂಡ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ವರ್ಲ್ಡ್ ‌ಕಪ್‌ ಇತಿಹಾಸದಲ್ಲಿ 30 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅಜರುದ್ದೀನ್, 38.33 ಬ್ಯಾಟಿಂಗ್ ಸರಾಸರಿಯಲ್ಲಿ 826 ರನ್ ಗಳಿಸಿದ್ದಾರೆ. ಒಂದೂ ಶತಕವನ್ನು ಬಾರಿಸದ ಅಜರುದ್ದೀನ್, 8 ಅರ್ಧಶತಕ ಸಿಡಿಸಿದ್ದಾರೆ. 
(8 / 11)

8. ಟೀಮ್ ಇಂಡಿಯಾದ ಚಾಣಾಕ್ಷ ನಾಯಕ, ಫಿನಿಷರ್ ಎಂಎಸ್ ಧೋನಿ‌ ಅವರು ಕೂಡ, ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿದ್ದಾರೆ. ಒಟ್ಟು ನಾಲ್ಕು ವಿಶ್ವಕಪ್ ಆಡಿರುವ ಧೋನಿ, 29 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ 780 ರನ್ ಗಳಿಸಿರುವ ಧೋನಿ, 43.33 ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಐದು ಅರ್ಧಶಕತ ಸಿಡಿಸಿದ್ದಾರೆ.
(9 / 11)

9. ಯುವರಾಜ್ ಸಿಂಗ್, 2011ರ ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬೌಲಿಂಗ್‌ ಬ್ಯಾಟಿಂಗ್‌ನಲ್ಲಿ ಭರ್ಜರಿ ಫರ್ಪಾಮೆನ್ಸ್ ನೀಡಿದ್ದ ಯುವಿ, ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡಿದ್ದರು. ಅವರು ಒಟ್ಟು ಮೂರು ವಿಶ್ವಕಪ್ ಆಡಿದ್ದು, 23 ಪಂದ್ಯಗಳಲ್ಲಿ 738 ರನ್ ಗಳಿಸಿದ್ದಾರೆ. 52.71ರ‌ ಸರಾಸರಿಯಲ್ಲಿ ರನ್ ಗಳಿಸಿರುವ ಯುವಿ, 1 ಶತಕ, 7 ಅರ್ಧಶತಕ ಸಿಡಿಸಿದ್ದಾರೆ.  
(10 / 11)

10. 1983ರಲ್ಲಿ ವಿಶ್ವಕಪ್ ಗೆದ್ದು ಅಸಾಧ್ಯ ಎನ್ನುತ್ತಿದ್ದವರಿಗೆ ತಿರುಗೇಟು ನೀಡಿದ್ದ ನಾಯಕ ಕಪಿಲ್‌ದೇವ್, ಒಟ್ಟು 4 ವಿಶ್ವಕಪ್‌ ಟೂರ್ನಿಗಳಲ್ಲಿ 26 ಪಂದ್ಯಗಳಲ್ಲಿ 669 ರನ್ ಗಳಿಸಿದ್ದಾರೆ. 37.16ರ ಬ್ಯಾಟಿಂಗ್ ಸರಾಸರಿ ಇದ್ದರೆ, 1 ಶತಕ, 1 ಅರ್ಧಶತಕದ ಸಿಡಿಸಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಮೆಂಟ್ ನಲ್ಲಿ ಭಾರತದ ಪರ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ ಹತ್ತನೇ ಸ್ಥಾನ ಪಡೆದಿದ್ದಾರೆ.
(11 / 11)

    ಹಂಚಿಕೊಳ್ಳಲು ಲೇಖನಗಳು