logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗ್ರ್ಯಾಮಿ ಅವಾರ್ಡ್‌ಗೆ ತಾರಾ ಮೆರುಗು: ಹುಟ್ಟುಡುಗೆಗೆ ಆಭರಣದ ನಿಲುವಂಗಿ, ರೆಡ್‌ಕಾರ್ಪೆಟ್‌ನಲ್ಲಿ ಉಡುಗೆಯ ಅಂದ, ನಡಿಗೆಯ ಚಂದ

ಗ್ರ್ಯಾಮಿ ಅವಾರ್ಡ್‌ಗೆ ತಾರಾ ಮೆರುಗು: ಹುಟ್ಟುಡುಗೆಗೆ ಆಭರಣದ ನಿಲುವಂಗಿ, ರೆಡ್‌ಕಾರ್ಪೆಟ್‌ನಲ್ಲಿ ಉಡುಗೆಯ ಅಂದ, ನಡಿಗೆಯ ಚಂದ

Feb 05, 2024 11:13 AM IST

Grammy Awards 2024: 66ನೇ ಗ್ರ್ಯಾಮಿ ಅವಾರ್ಡ್‌ ರೆಡ್‌ ಕಾರ್ಪೆಟ್‌ ಕಾರ್ಯಕ್ರಮವು ಗ್ಲಾಮರ್‌ ಮತ್ತು ಫ್ಯಾಷನ್‌ನ ಸಮಾಗಮ. ಹಾಲಿವುಡ್‌ ನಟಿಯರು ಅಂದದ ಉಡುಗೆ ತೊಟ್ಟು ಚಂದದ ಪೋಸ್‌ ನೀಡಿದ್ದಾರೆ. ಅವಾರ್ಡ್‌ ಕಾರ್ಯಕ್ರಮದಲ್ಲಿ ಕಂಡ ಚೆಲುವೆಯರ ಫೋಟೋಗಳು ಇಲ್ಲಿವೆ.

Grammy Awards 2024: 66ನೇ ಗ್ರ್ಯಾಮಿ ಅವಾರ್ಡ್‌ ರೆಡ್‌ ಕಾರ್ಪೆಟ್‌ ಕಾರ್ಯಕ್ರಮವು ಗ್ಲಾಮರ್‌ ಮತ್ತು ಫ್ಯಾಷನ್‌ನ ಸಮಾಗಮ. ಹಾಲಿವುಡ್‌ ನಟಿಯರು ಅಂದದ ಉಡುಗೆ ತೊಟ್ಟು ಚಂದದ ಪೋಸ್‌ ನೀಡಿದ್ದಾರೆ. ಅವಾರ್ಡ್‌ ಕಾರ್ಯಕ್ರಮದಲ್ಲಿ ಕಂಡ ಚೆಲುವೆಯರ ಫೋಟೋಗಳು ಇಲ್ಲಿವೆ.
2024ರ ಗ್ರ್ಯಾಮಿ  ಅವಾರ್ಡ್‌ ಕಾರ್ಯಕ್ರಮದಲ್ಲಿ ಸಂಗೀತ ಪ್ರೇಮಿಗಳಿಗೆ ಇಷ್ಟವಾಗುವಂತಹ ಬೃಹತ್‌ ಮ್ಯೂಸಿಕ್‌ ನೈಟ್‌ ಲಾಸ್‌ ಏಂಜೆಲ್ಸ್‌ನಲ್ಲಿ ನಡೆದಿದೆ. ಈ ರೆಡ್‌ ಕಾರ್ಪೆಟ್‌ ಕಾರ್ಯಕ್ರಮಕ್ಕೆ ಪ್ರಮುಖ ನಟಿಯರು, ನಟರು ಆಗಮಿಸಿದ್ದಾರೆ. ಟೇಲರ್ ಸ್ವಿಫ್ಟ್, ಮಿಲೀ ಸೈರಸ್, ದುವಾ ಲಿಪಾ ಮತ್ತು ಇತರರು ಈ ಕಾರ್ಯಕ್ರಮದ ಅಂದ ಹೆಚ್ಚಿಸಿದ್ದಾರೆ. 
(1 / 8)
2024ರ ಗ್ರ್ಯಾಮಿ  ಅವಾರ್ಡ್‌ ಕಾರ್ಯಕ್ರಮದಲ್ಲಿ ಸಂಗೀತ ಪ್ರೇಮಿಗಳಿಗೆ ಇಷ್ಟವಾಗುವಂತಹ ಬೃಹತ್‌ ಮ್ಯೂಸಿಕ್‌ ನೈಟ್‌ ಲಾಸ್‌ ಏಂಜೆಲ್ಸ್‌ನಲ್ಲಿ ನಡೆದಿದೆ. ಈ ರೆಡ್‌ ಕಾರ್ಪೆಟ್‌ ಕಾರ್ಯಕ್ರಮಕ್ಕೆ ಪ್ರಮುಖ ನಟಿಯರು, ನಟರು ಆಗಮಿಸಿದ್ದಾರೆ. ಟೇಲರ್ ಸ್ವಿಫ್ಟ್, ಮಿಲೀ ಸೈರಸ್, ದುವಾ ಲಿಪಾ ಮತ್ತು ಇತರರು ಈ ಕಾರ್ಯಕ್ರಮದ ಅಂದ ಹೆಚ್ಚಿಸಿದ್ದಾರೆ. 
ಪ್ಯಾರಿಸ್ ಹಿಲ್ಟನ್: 66ನೇ  ವಾರ್ಷಿಕ  ಗ್ರ್ಯಾಮಿ ಅವಾರ್ಡ್ಸ್‌ ಕಾರ್ಯಕ್ರಮಕ್ಕೆ ಸಮ್ಮೋಹನಗೊಳಿಸುವ ನೀಲಿ ಅಲಂಕಾರ ಮತ್ತು ಬೆಳ್ಳಿಯ ಟಸೆಲ್‌ನಿಂದ ಅಲಂಕಾರಗೊಂಡ ಗೌನ್‌ ತೊಟ್ಟು ಪ್ಯಾರಿಸ್‌ ಹಿಲ್ಟನ್‌ ಆಗಮಿಸಿದ್ದಾರೆ. ಇವರ ಗ್ಲಾಮರ್‌ ಹೆಚ್ಚಿಸಲು ಸರಳ ಮೇಕಪ್‌ ಮಾಡಿಕೊಂಡಿದ್ದಾರೆ.  ಡೈಮಂಡ್ ಡ್ರಾಪ್ ಕಿವಿಯೋಲೆಗಳನ್ನು ಧರಿಸಿದ್ದರು.   
(2 / 8)
ಪ್ಯಾರಿಸ್ ಹಿಲ್ಟನ್: 66ನೇ  ವಾರ್ಷಿಕ  ಗ್ರ್ಯಾಮಿ ಅವಾರ್ಡ್ಸ್‌ ಕಾರ್ಯಕ್ರಮಕ್ಕೆ ಸಮ್ಮೋಹನಗೊಳಿಸುವ ನೀಲಿ ಅಲಂಕಾರ ಮತ್ತು ಬೆಳ್ಳಿಯ ಟಸೆಲ್‌ನಿಂದ ಅಲಂಕಾರಗೊಂಡ ಗೌನ್‌ ತೊಟ್ಟು ಪ್ಯಾರಿಸ್‌ ಹಿಲ್ಟನ್‌ ಆಗಮಿಸಿದ್ದಾರೆ. ಇವರ ಗ್ಲಾಮರ್‌ ಹೆಚ್ಚಿಸಲು ಸರಳ ಮೇಕಪ್‌ ಮಾಡಿಕೊಂಡಿದ್ದಾರೆ.  ಡೈಮಂಡ್ ಡ್ರಾಪ್ ಕಿವಿಯೋಲೆಗಳನ್ನು ಧರಿಸಿದ್ದರು.   (Jordan Strauss/Invision/AP)
ದುವಾ ಲಿಪಾ:  ಮೆಟಾಲಿಕ್ ಗೌನ್‌ ತೊಟ್ಟು ಗ್ರ್ಯಾಮಿ ಅವಾರ್ಡ್‌ ರೆಡ್‌ ಕಾರ್ಪೆಟ್‌ನಲ್ಲಿ ದುವಾ ಲಿಪಾ ಚಕಿತಗೊಳಿಸಿದ್ದಾರೆ.  ಕಸ್ಟಮ್ ಕೊರೆಜೆಸ್ ಮತ್ತು ಟಿಫಾನಿ ನೆಕ್ಲೇಸ್ ಧರಿಸಿದ್ದರು. ವಿ-ನೆಕ್‌ಲೈನ್, ಪೂರ್ಣ ತೋಳುಗಳು, ಮ್ಯಾಕ್ಸಿ ಹೆಮ್ ವಿನ್ಯಾಸದ ಈ ಉಡುಗೆ  ಸೈಡ್ ಕಟ್-ಔಟ್‌ಗಳನ್ನು ಒಳಗೊಂಡಿತ್ತು. 
(3 / 8)
ದುವಾ ಲಿಪಾ:  ಮೆಟಾಲಿಕ್ ಗೌನ್‌ ತೊಟ್ಟು ಗ್ರ್ಯಾಮಿ ಅವಾರ್ಡ್‌ ರೆಡ್‌ ಕಾರ್ಪೆಟ್‌ನಲ್ಲಿ ದುವಾ ಲಿಪಾ ಚಕಿತಗೊಳಿಸಿದ್ದಾರೆ.  ಕಸ್ಟಮ್ ಕೊರೆಜೆಸ್ ಮತ್ತು ಟಿಫಾನಿ ನೆಕ್ಲೇಸ್ ಧರಿಸಿದ್ದರು. ವಿ-ನೆಕ್‌ಲೈನ್, ಪೂರ್ಣ ತೋಳುಗಳು, ಮ್ಯಾಕ್ಸಿ ಹೆಮ್ ವಿನ್ಯಾಸದ ಈ ಉಡುಗೆ  ಸೈಡ್ ಕಟ್-ಔಟ್‌ಗಳನ್ನು ಒಳಗೊಂಡಿತ್ತು. (REUTERS/Mario Anzuoni)
ಮಿಸ್‌ ಟೇಲರ್‌: ಜನಪ್ರಿಯ ಗಾಯಕಿ ಮಿಸ್‌ ಟೇಲರ್‌ ಅವರು ಗ್ರ್ಯಾಮಿ ಅವಾರ್ಡ್‌ ರೆಡ್‌ ಕಾರ್ಪೆಟ್‌ ಕಾರ್ಯಕ್ರಮಕ್ಕೆ ಬಿಳಿ ಗೌನ್‌ ತೊಟ್ಟು ಆಗಮಿಸಿದರು. ಕೈಗೆ ಕಪ್ಪು ಗ್ಲೌಸ್‌ ಧರಿಸಿದ್ದರು.
(4 / 8)
ಮಿಸ್‌ ಟೇಲರ್‌: ಜನಪ್ರಿಯ ಗಾಯಕಿ ಮಿಸ್‌ ಟೇಲರ್‌ ಅವರು ಗ್ರ್ಯಾಮಿ ಅವಾರ್ಡ್‌ ರೆಡ್‌ ಕಾರ್ಪೆಟ್‌ ಕಾರ್ಯಕ್ರಮಕ್ಕೆ ಬಿಳಿ ಗೌನ್‌ ತೊಟ್ಟು ಆಗಮಿಸಿದರು. ಕೈಗೆ ಕಪ್ಪು ಗ್ಲೌಸ್‌ ಧರಿಸಿದ್ದರು.(REUTERS/Mario Anzuoni)
ಮಿಲೀ ಸೈರಸ್‌: ಗ್ರ್ಯಾಮಿ ಅವಾರ್ಡ್‌ ಕಾರ್ಯಕ್ರಮಕ್ಕೆ ಜನಪ್ರಿಯ ಪಾಪ್‌ ತಾರೆ ಮಿಲೀ ಸೈರಸ್‌ ಆಗಮಿಸಿದ್ದರು. ಅವರ ಉಡುಗೆಯನ್ನು ಎಲ್ಲರೂ ಮತ್ತೆ ಮತ್ತೆ ನೋಡುತ್ತಿದ್ದರು. ಬಹುತೇಕ ಚಿನ್ನದ ಪಿನ್‌ಗಳಿಂದ ಜೋಡಿಸಿರುವಂತಹ ವಿನೂತನ ಉಡುಪನ್ನು ಧರಿಸಿದ್ದರು. ನಗ್ನ ದೇಹಕ್ಕೆ ಆಭರಣಗಳ ನಿಲುವಂಗಿ ತೊಡಿಸಿದ್ದರು.
(5 / 8)
ಮಿಲೀ ಸೈರಸ್‌: ಗ್ರ್ಯಾಮಿ ಅವಾರ್ಡ್‌ ಕಾರ್ಯಕ್ರಮಕ್ಕೆ ಜನಪ್ರಿಯ ಪಾಪ್‌ ತಾರೆ ಮಿಲೀ ಸೈರಸ್‌ ಆಗಮಿಸಿದ್ದರು. ಅವರ ಉಡುಗೆಯನ್ನು ಎಲ್ಲರೂ ಮತ್ತೆ ಮತ್ತೆ ನೋಡುತ್ತಿದ್ದರು. ಬಹುತೇಕ ಚಿನ್ನದ ಪಿನ್‌ಗಳಿಂದ ಜೋಡಿಸಿರುವಂತಹ ವಿನೂತನ ಉಡುಪನ್ನು ಧರಿಸಿದ್ದರು. ನಗ್ನ ದೇಹಕ್ಕೆ ಆಭರಣಗಳ ನಿಲುವಂಗಿ ತೊಡಿಸಿದ್ದರು.(REUTERS/Mario Anzuoni)
ಬಿಲ್ಲಿ ಎಲೀಸ್‌: ಗೀತೆ ರಚನೆಗಾರ್ತಿ ಬಿಲ್ಲಿ ಎಲಿಸ್‌ ಅವರು ಬಾರ್ಬಿ ಬಾಂಬರ್‌ ಜಾಕೆಟ್‌ನಲ್ಲಿ ಗಮನ ಸೆಳೆದರು. ದೊಡ್ಡ ಗಾತ್ರದ ಬಿಳಿ ಶರ್ಟ್, ಕಪ್ಪು ಟೈ ಮತ್ತು ಜೋಲಾಡುವ ಕಪ್ಪು ಪ್ಯಾಂಟ್‌ನೊಂದಿಗೆ ಗ್ಲಾಮರ್‌ ಅನ್ನು ಮರುವ್ಯಾಖ್ಯಾನಿಸಿದರು. 
(6 / 8)
ಬಿಲ್ಲಿ ಎಲೀಸ್‌: ಗೀತೆ ರಚನೆಗಾರ್ತಿ ಬಿಲ್ಲಿ ಎಲಿಸ್‌ ಅವರು ಬಾರ್ಬಿ ಬಾಂಬರ್‌ ಜಾಕೆಟ್‌ನಲ್ಲಿ ಗಮನ ಸೆಳೆದರು. ದೊಡ್ಡ ಗಾತ್ರದ ಬಿಳಿ ಶರ್ಟ್, ಕಪ್ಪು ಟೈ ಮತ್ತು ಜೋಲಾಡುವ ಕಪ್ಪು ಪ್ಯಾಂಟ್‌ನೊಂದಿಗೆ ಗ್ಲಾಮರ್‌ ಅನ್ನು ಮರುವ್ಯಾಖ್ಯಾನಿಸಿದರು. (REUTERS/Mario Anzuoni)
ಬೆಬೆ ರೆಕ್ಷಾ: ಅದ್ಭುತವಾದ ಕಪ್ಪು ಗೌನ್‌ನಲ್ಲಿ ಪೋಸ್ ನೀಡಿದರು. ಆಫ್-ದಿ-ಶೋಲ್ಡರ್ ನೆಕ್‌ಲೈನ್,  ಫಿಶ್‌ನೆಟ್ ತೋಳುಗಳು,  ಹೆಮ್‌ಲೈನ್ ಇತ್ಯಾದಿ ವಿಶೇಷಗಳನ್ನು ಹೊಂದಿರುವ ಉಡುಪು ಧರಿಸಿದ್ದರು.  
(7 / 8)
ಬೆಬೆ ರೆಕ್ಷಾ: ಅದ್ಭುತವಾದ ಕಪ್ಪು ಗೌನ್‌ನಲ್ಲಿ ಪೋಸ್ ನೀಡಿದರು. ಆಫ್-ದಿ-ಶೋಲ್ಡರ್ ನೆಕ್‌ಲೈನ್,  ಫಿಶ್‌ನೆಟ್ ತೋಳುಗಳು,  ಹೆಮ್‌ಲೈನ್ ಇತ್ಯಾದಿ ವಿಶೇಷಗಳನ್ನು ಹೊಂದಿರುವ ಉಡುಪು ಧರಿಸಿದ್ದರು.  (REUTERS/Mario Anzuoni)
ಕ್ಯಾರೊಲಿನ್ ಪೊಲಾಚೆಕ್: 66 ನೇ ಗ್ರ್ಯಾಮಿ ಅವಾರ್ಡ್‌ ಕಾರ್ಯಕ್ರಮಕ್ಕೆ  ಕ್ಯಾರೊಲಿನ್ ಪೊಲಾಚೆಕ್ ಬೆರಗುಗೊಳಿಸುವ ಕಪ್ಪು ಗೌನ್‌ ತೊಟ್ಟು ಆಗಮಿಸಿದರು. ಈ ಕಪ್ಪು ಗೌನ್‌ನಲ್ಲಿ ಗೋಥಿಕ್‌ ರಾಜಕುಮಾರಿಯಂತೆ ಕಾಣಿಸುತ್ತಿದ್ದರು.  
(8 / 8)
ಕ್ಯಾರೊಲಿನ್ ಪೊಲಾಚೆಕ್: 66 ನೇ ಗ್ರ್ಯಾಮಿ ಅವಾರ್ಡ್‌ ಕಾರ್ಯಕ್ರಮಕ್ಕೆ  ಕ್ಯಾರೊಲಿನ್ ಪೊಲಾಚೆಕ್ ಬೆರಗುಗೊಳಿಸುವ ಕಪ್ಪು ಗೌನ್‌ ತೊಟ್ಟು ಆಗಮಿಸಿದರು. ಈ ಕಪ್ಪು ಗೌನ್‌ನಲ್ಲಿ ಗೋಥಿಕ್‌ ರಾಜಕುಮಾರಿಯಂತೆ ಕಾಣಿಸುತ್ತಿದ್ದರು.  (Getty Images via AFP)

    ಹಂಚಿಕೊಳ್ಳಲು ಲೇಖನಗಳು